ಕಾರು ಮಾಲೀಕರು ರಸ್ತೆ ಸಾರಿಗೆ ಕುರಿತಾಗಿ ಬರುವ ಹೊಸ ಹೊಸ ಷರತ್ತುಗಳನ್ನು ಹಾಗೆ ಹೊಸದಾಗಿ ಆಯೋಜಿಸಿದ ನಿಯಮಗಳನ್ನು ಪಾಲಿಸಬೇಕಾಗಿರುತ್ತದೆ. ಕಾರ್ ವಾಹನ ಚಲಾಯಿಸುವವರಿಗೂ ಸಹ ಕೆಲವು ನಿರ್ಬಂಧ ಇವೆ. ಚಾಲಿತ ನಿಯಮಗಳು ಇವೆ. ಅವುಗಳನ್ನು ಅವರು ಪಾಲಿಸಬೇಕು. ಟ್ರಾಫಿಕ್, ಟೋಲ್, ರೋಡ್ ಟ್ಯಾಕ್ಸ್ ಹೀಗೆ ಸಾಕಷ್ಟು ನಿಯಮಗಳ ಪಾಲಿಸುವುದು ಅಷ್ಟೇ ಅಲ್ಲದೆ ಹಣದ ಪಾವತಿ ವಿಚಾರ ಅವರಿಗೆ ಗೊತ್ತಿರಬೇಕು. ಜೊತೆಗೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡ ತಪ್ಪಿದಲ್ಲ. ಹೀಗಿರುವಾಗ ಕಾರ್ ಮಾಲೀಕರು ಬಳಸುವ ಫಾಸ್ಟ್ ಟ್ಯಾಗ್ ಕುರಿತಾಗಿ ಹೊಸ ನಿಯಮವೊಂದು ಹೊರಬಿದ್ದಿದೆ. ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು ಮತ್ತು ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದು ದಂಡಕ್ಕೆ ಕಾರಣವಾಗಬಹುದು ಮತ್ತು ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೊಸ ನಿಯಮಗಳಂತೆ FASTag, UPI ಪಾವತಿ, ವೇಗ ಮಿತಿ, ಸೀಟ್ ಬೆಲ್ಟ್ ಬಳಕೆ, ಮತ್ತು ಮೊಬೈಲ್ ಬಳಕೆಯ ನಿಯಂತ್ರಣಗಳನ್ನು ಪಾಲಿಸುವುದು ಕಾನೂನುಬದ್ಧ ಮತ್ತು ಸುರಕ್ಷಿತ ಪ್ರಯಾಣಕ್ಕೆ ಸಹಾಯಕ. ಮೇಲಿಂದ ಬರುವ ಸೂಚನೆಗಳನ್ನು ಅನುಸರಿಸುವ ಮೂಲಕ ವಾಹನದ ಮಾಲೀಕರು ತಮ್ಮದಲ್ಲದೆ ಇತರರ ಜೀವಕ್ಕೂ ಗೌರವ ತೋರಿಸುತ್ತಾರೆ.
2025ರ ಹೊಸ FASTag ನಿಯಮಗಳು ಹೀಗಿವೆ ನೋಡಿ
2025ರ ನವೆಂಬರ್ 15ರಿಂದ ಭಾರತದಲ್ಲಿ ಹೊಸ FASTag ನಿಯಮ ಜಾರಿಗೆ ಬರಲಿದೆ. ಈ ನಿಯಮಗಳು ಕೆಲವರನ್ನು ಆಶ್ಚರ್ಯ ಪಡಿಸಿದರೆ ಇನ್ನೂ ಕೆಲವರು ಇದು ಒಳ್ಳೆಯದು ಅಂತಿದ್ದಾರೆ. ಅಸಲಿಗೆ ಆ ನಿಯಮಗಳು ಏನು? ಎಂಬುದಾಗಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಾರ, ಈ ನಿಯಮವು ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೂಪುಗೊಂಡಿದೆ ಎಂದು ಕೇಳಿ ಬಂದಿದೆ. ಹೊಸ ನಿಯಮದ ಪ್ರಕಾರ, FASTag ಅಸಕ್ರಿಯವಾಗಿದ್ದರೆ ಅಥವಾ ಬ್ಯಾಲೆನ್ಸ್ ಕಡಿಮೆಯಿದ್ದರೆ, ಟೋಲ್ ಪಾವತಿಗೆ ನಗದು ಬಳಸಿದರೆ ದ್ವಿಗುಣ ಶುಲ್ಕ ವಿಧಿಸಲಾಗುತ್ತದೆ. ಆದರೆ UPI ಅಥವಾ ಇತರ ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸಿದರೆ ಮಾತ್ರ ನೀವು ಮಾಡುವ ಪಾವತಿ ಹಣ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತಿದೆ. UPI ಅಥವಾ ಡಿಜಿಟಲ್ ಪಾವತಿ ಮಾಡಿದರೆ ಕೇವಲ 25% ಹೆಚ್ಚುವರಿ ಶುಲ್ಕ ಮಾತ್ರ ವಿಧಿಸಲಾಗುತ್ತದಂತೆ. ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಮಾಡುವ ವಾಹನ ಮಾಲೀಕರು ₹100 ಟೋಲ್‌ಗಾಗಿ ₹200 ಪಾವತಿಸಬೇಕಾಗುತ್ತದೆ. ಇದು ದಂಡದಂತೆ ಕಾರ್ಯನಿರ್ವಹಿಸುತ್ತದೆ. ಸರ್ಕಾರ ಈ ಕ್ರಮವನ್ನು ನಗದು ವ್ಯವಹಾರಗಳನ್ನು ಕಡಿಮೆ ಮಾಡಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಈ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ವಾಹನಗಳ ಸಂಚಾರ ವೇಗವಾಗುತ್ತದೆ ಮತ್ತು ಸಾಲುಗಳಲ್ಲಿ ನಿಲ್ಲುವ ಅವಶ್ಯಕತೆ ಕಡಿಮೆಯಾಗುತ್ತದೆ.
UPI ಅಥವಾ ಇತರ ಡಿಜಿಟಲ್ ಮಾಧ್ಯಮಗಳ ಮೂಲಕ ಪಾವತಿ ಮಾಡಿದರೆ ₹100 ಟೋಲ್‌ಗಾಗಿ ₹125 ಮಾತ್ರ ಪಾವತಿಸಬೇಕಾಗುತ್ತದೆ. ಇದು ನಗದು ಪಾವತಿಗಿಂತ ಕಡಿಮೆ ಮತ್ತು ವೇಗವಾಗಿ ನಡೆಯುವ ಪ್ರಕ್ರಿಯೆ. ಈ ಮೂಲಕ ಪ್ರಯಾಣಿಕರು ಸಮಯ ಮತ್ತು ಹಣ ಎರಡನ್ನೂ ಉಳಿಸಬಹುದು. ಜೊತೆಗೆ, FASTag ರೀಚಾರ್ಜ್ ಆಗದಿದ್ದರೂ UPI ಮೂಲಕ ಪಾವತಿ ಮಾಡುವ ಅವಕಾಶ ಇರುವುದರಿಂದ ದ್ವಿಗುಣ ದಂಡ ತಪ್ಪಿಸಬಹುದು. ಈ ಹೊಸ ನಿಯಮದಿಂದಾಗಿ ವಾಹನ ಮಾಲೀಕರು ತಮ್ಮ FASTag ಖಾತೆಗಳನ್ನು ಮುಂಚಿತವಾಗಿ ರೀಚಾರ್ಜ್ ಮಾಡಿಕೊಳ್ಳುವುದು ಅತ್ಯಗತ್ಯ ಹಾಗೂ ಅವಶ್ಯಕ.
ಸರ್ಕಾರದ ಉದ್ದೇಶವೆಂದರೆ ಟೋಲ್ ಸಂಗ್ರಹವನ್ನು ಸುಗಮಗೊಳಿಸಿ, ವಾಹನಗಳ ಸಂಚಾರವನ್ನು ವೇಗಗೊಳಿಸುವುದು. ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಈ ಕ್ರಮವು “ಡಿಜಿಟಲ್ ಇಂಡಿಯಾ” ಅಭಿಯಾನಕ್ಕೆ ಸಹಕಾರಿಯಾಗಲಿದೆ. ಒಟ್ಟಿನಲ್ಲಿ, 2025ರ ಹೊಸ FASTag ನಿಯಮವು ನಗದು ಪಾವತಿಯನ್ನು ದುಬಾರಿಯಾಗಿಸಿ, ಡಿಜಿಟಲ್ ಪಾವತಿಗೆ ಪ್ರೋತ್ಸಾಹ ನೀಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ, ಸರ್ಕಾರಕ್ಕೆ ಸುಧಾರಿತ ವ್ಯವಸ್ಥೆ ಮತ್ತು ದೇಶಕ್ಕೆ ತಾಂತ್ರಿಕ ಪ್ರಗತಿಯನ್ನು ಒದಗಿಸುತ್ತದೆ ಎಂದು ಕೇಳಿ ಬಂದಿದೆ. ನೀವು ಒಂದು ಕಾರು ಹೊಂದಿದ್ದು ಈ ಫಾಸ್ಟಾಗ್ ನ ಹೊಸ ನಿಯಮ ಕುರಿತಾಗಿ ಏನು ಹೇಳಲು ಬಯಸುತ್ತೀರಿ ಎಂದು ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ.