ಜಮೀನು ಕಳೆದುಕೊಂಡ ರೈತರಿಗೆ ಕೇಂದ್ರ ಸರ್ಕಾರ ಒಂದು ದೊಡ್ಡ ಸಿಹಿ ಸುದ್ದಿ ಕೊಟ್ಟಿದೆ. ಹೌದು, ರಾಷ್ಟ್ರೀಯ ಹೆದ್ದಾರಿ (National Highway) ಯೋಜನೆಗಳಿಗಾಗಿ ಸರ್ಕಾರ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ಅದಕ್ಕೆ ಸಿಗುವ ಪರಿಹಾರದ ಹಣದ ಮೇಲೆ ಇನ್ಮೇಲೆ ಒಂದು ರೂಪಾಯಿ ಕೂಡ ತೆರಿಗೆ (Income Tax) ಕಟ್ಟುವ ಅಗತ್ಯವಿಲ್ಲ
ಈ ಹೊಸ ನಿಯಮ ಏಪ್ರಿಲ್ 1, 2026 ರಿಂದಲೇ ಜಾರಿಗೆ ಬಂದಿದೆ. ಅಸಲಿಗೆ ಈ ಬದಲಾವಣೆ ಏನು? ಇದರಿಂದ ರೈತರಿಗೆ ಆಗುವ ಲಾಭಗಳೇನು? ಇಲ್ಲಿದೆ ಫುಲ್ ಡಿಟೇಲ್ಸ್.
ಟಿಡಿಎಸ್ (TDS) ಕಟ್ ಆಗಲ್ಲ, ಫುಲ್ ದುಡ್ಡು ನಿಮ್ಮ ಕೈಗೆ!
ಇಲ್ಲಿಯವರೆಗೆ ಹೆದ್ದಾರಿ ಪ್ರಾಧಿಕಾರಗಳು ರೈತರಿಗೆ ಪರಿಹಾರ ನೀಡುವಾಗ ಅದರಲ್ಲಿ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಕಟ್ ಮಾಡುತ್ತಿದ್ದರು. ಇದರಿಂದ ರೈತರಿಗೆ ಬರಬೇಕಿದ್ದ ಪೂರ್ತಿ ಹಣ ಸಿಗದೆ ನಷ್ಟವಾಗುತ್ತಿತ್ತು. ಕಟ್ ಆದ ಹಣವನ್ನು ವಾಪಸ್ ಪಡೆಯಲು (Refund) ರೈತರು ಆದಾಯ ತೆರಿಗೆ ಕಚೇರಿಗಳಿಗೆ ಅಲೆಯಬೇಕಿತ್ತು, ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು.
ಆದರೆ ಈಗ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಡಕ್ ಆದೇಶ ನೀಡಿದೆ. "ಯಾವುದೇ ಕಾರಣಕ್ಕೂ ಪರಿಹಾರದ ಮೊತ್ತದಲ್ಲಿ ಟಿಡಿಎಸ್ ಕಟ್ ಮಾಡುವಂತಿಲ್ಲ, ಪೂರ್ತಿ ಮೊತ್ತವನ್ನು ರೈತರ ಕೈಗೆ ನೀಡಬೇಕು" ಎಂದು ಎಲ್ಲಾ ಹೆದ್ದಾರಿ ಪ್ರಾಧಿಕಾರಗಳಿಗೆ ಸೂಚನೆ ಕೊಟ್ಟಿದೆ.
ಯಾವೆಲ್ಲಾ ಜಮೀನಿಗೆ ಇದು ಅನ್ವಯ?
ಇದು ಕೇವಲ ಕೃಷಿ ಭೂಮಿಗೆ ಮಾತ್ರವಲ್ಲ
- ಕೃಷಿ ಜಮೀನು
- ನಗರ ಪ್ರದೇಶದ ಭೂಮಿ
- ವಾಣಿಜ್ಯ ಉದ್ದೇಶದ ಭೂಮಿ
ಹೀಗೆ ಯಾವುದೇ ವರ್ಗದ ಜಮೀನನ್ನು ಸರ್ಕಾರ ರಸ್ತೆಗಾಗಿ ಪಡೆದರೂ, ಅದಕ್ಕೆ ಸಿಗುವ ಪರಿಹಾರದ ಮೇಲೆ ತೆರಿಗೆ ವಿನಾಯಿತಿ ಸಿಗಲಿದೆ. RFCTLARR ಕಾಯ್ದೆ 2013ರ ಅಡಿಯಲ್ಲಿ ಸ್ವಾಧೀನಪಡಿಸಿಕೊಳ್ಳುವ ಎಲ್ಲಾ ಭೂಮಿಗಳಿಗೂ ಈ ನಿಯಮ ಅನ್ವಯಿಸುತ್ತದೆ.
ಒಂದು ಪ್ರಮುಖ ಎಚ್ಚರಿಕೆ!
ಇಲ್ಲಿ ನೀವು ಗಮನಿಸಬೇಕಾದ ಒಂದು ವಿಷಯವಿದೆ. ನೀವೇ ಸ್ವತಃ ಹೋಗಿ ಸರ್ಕಾರಕ್ಕೆ ಅಥವಾ ಖಾಸಗಿಯಾಗಿ ನಿಮ್ಮ ಜಮೀನನ್ನು ಖುದ್ದಾಗಿ ಮಾರಾಟ ಮಾಡಿದರೆ (Private Sale) ಈ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಸರ್ಕಾರವೇ ಬಲವಂತವಾಗಿ ಅಥವಾ ಯೋಜನೆಯ ಉದ್ದೇಶಕ್ಕಾಗಿ ಜಮೀನನ್ನು ಸ್ವಾಧೀನಪಡಿಸಿಕೊಂಡರೆ (Compulsory Acquisition) ಮಾತ್ರ ಈ ಆಫರ್ ಅನ್ವಯವಾಗುತ್ತದೆ.
ಈ ನಿರ್ಧಾರದ ಹಿಂದಿನ ಉದ್ದೇಶವೇನು?
2025-26ನೇ ಹಣಕಾಸು ವರ್ಷದಲ್ಲಿ ದೇಶಾದ್ಯಂತ ಸುಮಾರು 10,000 ಹೆಕ್ಟೇರ್‌ಗೂ ಅಧಿಕ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಸುಮಾರು ₹20,000 ಕೋಟಿ ಪರಿಹಾರವನ್ನು ಸರ್ಕಾರ ಹಂಚುತ್ತಿದೆ. ಈ ಬೃಹತ್ ಮೊತ್ತವು ರೈತರಿಗೆ ಯಾವುದೇ ಕಡಿತವಿಲ್ಲದೆ ತಲುಪಬೇಕು ಮತ್ತು ದೇಶದ ಮೂಲಸೌಕರ್ಯ ಕೆಲಸಗಳು ವೇಗವಾಗಿ ನಡೆಯಬೇಕು ಅನ್ನೋದೇ ಸರ್ಕಾರದ ಪ್ಲಾನ್.
ಒಟ್ಟಿನಲ್ಲಿ, ಜಮೀನು ಕಳೆದುಕೊಂಡ ನೋವಿನಲ್ಲಿದ್ದ ರೈತರಿಗೆ ಇದೊಂದು ದೊಡ್ಡ ಆರ್ಥಿಕ ಭದ್ರತೆ ನೀಡುವ ಐತಿಹಾಸಿಕ ಹೆಜ್ಜೆ. ತೆರಿಗೆ ಹೆಸರಲ್ಲಿ ಕಚೇರಿಗಳಿಗೆ ಅಲೆದಾಡುತ್ತಿದ್ದ ದಿನಗಳು ಈಗ ಮುಗಿದಿವೆ!