May 5, 2026 Languages : ಕನ್ನಡ | English

ನೈತಿಕವಲ್ಲದ ಸಂಬಂಧಕ್ಕೆ ಬೆಲೆ ತೆತ್ತ ಮಹಿಳಾ ಗೆಸ್ಟ್ ಲೆಕ್ಚರ್ - ಅದೊಂದು ಕೆಲಸಕ್ಕೆ ಬೇಡ ಎಂದಿದ್ದೆ ಈ ಅನಾಹುತಕ್ಕೆ ದಾರಿಯಾಯ್ತ?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದ ಆ ನಿರ್ಜನ ಪ್ರದೇಶದಲ್ಲಿ ಅಂದು ಕಂಡ ದೃಶ್ಯ ಎಂತಹವರನ್ನೂ ಬೆಚ್ಚಿಬೀಳಿಸುವಂತಿತ್ತು. ರಸ್ತೆ ಬದಿಯಲ್ಲಿ ಕಾರೊಂದು ಪೂರ್ತಿ ಸುಟ್ಟು ಭಸ್ಮವಾಗಿತ್ತು. ಅದರೊಳಗೆ ಸುಟ್ಟು ಕರಕಲಾಗಿದ್ದ ಶ*ವವೊಂದು ಪತ್ತೆಯಾಗಿತ್ತು. ಇದು ಸುಮ್ಮನೆ ನಡೆದ ಅಪಘಾತವೋ ಅಥವಾ ಯಾವುದಾದರೂ ದೊಡ್ಡ ಸಂಚೋ? ಎಂಬ ಪ್ರಶ್ನೆ ಪೊಲೀಸರ ಮುಂದಿತ್ತು.

ಸೋಶಿಯಲ್ ಮೀಡಿಯಾ ಸ್ನೇಹದ ಬೆಲೆ – ಸರೋಜಾ ಕೊಲೆ!!
ಸೋಶಿಯಲ್ ಮೀಡಿಯಾ ಸ್ನೇಹದ ಬೆಲೆ – ಸರೋಜಾ ಕೊಲೆ!!

ಆದರೆ, ಕೇವಲ ಒಂದು ಮಾಂಗಲ್ಯ ಸರ ಮತ್ತು ಕಾಲು ಚೈನು ಈ ಕಗ್ಗಂಟನ್ನು ಬಿಡಿಸಲು ದಾರಿಯಾಯಿತು!

ತನಿಖೆ ಆರಂಭಿಸಿದ್ದೇ ರೋಚಕ!

ಬೆಂಗಳೂರು ಗ್ರಾಮಾಂತರ ಎಸ್ಪಿ ಎಂ.ವಿ. ಚಂದ್ರಕಾಂತ್ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತನಿಖೆಗಿಳಿದಾಗ ಸಿಕ್ಕಿದ್ದು ಶಾಕಿಂಗ್ ಮಾಹಿತಿ. ಸುಟ್ಟ ಮೃತದೇಹ ದೇವನಹಳ್ಳಿಯ ಖಾಸಗಿ ಕಾಲೇಜಿನ ಗೆಸ್ಟ್ ಲೆಕ್ಚರರ್ ಸರೋಜಾ (40) ಅವರದ್ದು ಎಂದು ತಿಳಿದುಬಂದಿತು. ಇನ್ನು ಸಿಸಿಟಿವಿ ದೃಶ್ಯಗಳನ್ನು ಕೆದಕಿದಾಗ, ಆ ಕಾರನ್ನು ಚಲಾಯಿಸಿಕೊಂಡು ಬಂದಿದ್ದು ಮಾರಸಂದ್ರ ಮಂಜುನಾಥ್ ಎಂಬುವವರ ಕಾರು ಎಂಬುದು ಪತ್ತೆಯಾಯಿತು. ಆದರೆ ಆ ಕಾರಿನಲ್ಲಿ ಇದ್ದಿದ್ದು ರಾಮಾಂಜಿ (45) ಎಂಬ ಆರೋಪಿ!

ಸೋಶಿಯಲ್ ಮೀಡಿಯಾ ಸ್ನೇಹ ತಂದ ಸಂಚಕಾರ

ಸರೋಜಾ ಮತ್ತು ರಾಮಾಂಜಿ ಕಳೆದೊಂದು ವರ್ಷದಿಂದ ಸೋಶಿಯಲ್ ಮೀಡಿಯಾ ಮೂಲಕ ಪರಿಚಿತರಾಗಿದ್ದರು. ಪತಿಯಿಂದ ದೂರವಿದ್ದ ಸರೋಜಾ ಅವರೊಂದಿಗೆ ರಾಮಾಂಜಿ ಅ*ಕ್ರಮ ಸಂಬಂಧ ಹೊಂದಿದ್ದ. ಆದರೆ ಈ ಸ್ನೇಹದ ಹಿಂದೆ ಮರಣಶಾಸನವೊಂದು ಸಿದ್ಧವಾಗುತ್ತಿದೆ ಎಂದು ಸರೋಜಾ ಊಹಿಸಿರಲಿಲ್ಲ. ರಾಮಾಂಜಿ ಮದುವೆಗೆ ಒತ್ತಾಯಿಸಿದಾಗ ಸರೋಜಾ ನಿರಾಕರಿಸಿದ್ದರು. ಇದೇ ವಿಚಾರವಾಗಿ ದ್ವೇಷ ಸಾಧಿಸಿದ ರಾಮಾಂಜಿ, ಈಕೆಯನ್ನು ಮುಗಿಸಲು ಮಾಸ್ಟರ್ ಪ್ಲಾನ್ ಮಾಡಿದ್ದ.

ಪ್ರೀ-ಪ್ಲಾನ್ ಕೊ*ಲೆ ಮತ್ತು ಆರೋಪಿಯ ಅಂತ್ಯ

ಲಾಂಗ್ ಡ್ರೈವ್ ಹೋಗೋಣ ಎಂದು ನಂಬಿಸಿ ಸರೋಜಾ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದ ರಾಮಾಂಜಿ, ಅಲ್ಲಿ ಆಕೆಯನ್ನು ಕೊ*ಲೆ ಮಾಡಿದ್ದಾನೆ. ಸಾಕ್ಷ್ಯ ಸಿಗಬಾರದು ಎಂಬ ಕಾರಣಕ್ಕೆ ಕಾರಿನ ಸಮೇತ ಶ*ವಕ್ಕೆ ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದ.

ಪೊಲೀಸರು ತನ್ನನ್ನು ಬೆನ್ನಟ್ಟುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ, ಇತ್ತ ಬಿಡದಿ ಬಳಿ ರೈಲಿಗೆ ತಲೆಕೊಟ್ಟು ರಾಮಾಂಜಿ ಕೂಡ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಕೊ*ಲೆ ಮಾಡಿದವನು ಕಂಬಿ ಎಣಿಸುವ ಮೊದಲೇ ಸಾವಿಗೆ ಶರಣಾಗಿದ್ದು ಈ ಪ್ರಕರಣಕ್ಕೆ ವಿಚಿತ್ರ ಅಂತ್ಯ ನೀಡಿದೆ.

ಪರಿಚಯವಿಲ್ಲದ ವ್ಯಕ್ತಿಗಳ ಜೊತೆ ಸೋಶಿಯಲ್ ಮೀಡಿಯಾ ಸ್ನೇಹ ಬೆಳೆಸುವ ಮುನ್ನ ಎಚ್ಚರವಿರಲಿ. ಒಂದು ಸಣ್ಣ ತಪ್ಪು ನಿರ್ಧಾರ ನಿಮ್ಮ ಪ್ರಾಣಕ್ಕೆ ಸಂಚಕಾರ ತರಬಹುದು. ಭಾವನೆಗಳಿಗಿಂತ ವಿವೇಚನೆಗೆ ಹೆಚ್ಚು ಬೆಲೆ ಕೊಡಿ. ಕ್ರೈಂ ಲೋಕದ ಇಂತಹ ಮತ್ತಷ್ಟು ಅಪ್‌ಡೇಟ್ಸ್‌ಗಳಿಗಾಗಿ ನೋಡ್ತಾ ಇರಿ ನಮ್ಮ ಸಪ್ತಾಶ್ವ ಟಿವಿ.  

Latest News