ಬ್ಯಾಂಕಿನಲ್ಲಿ ಕೆಲಸ ಮಾಡುವ ನೌಕರರಿಗೆ ಮುಂಬರುವ ತಿಂಗಳು ಡಿಸೆಂಬರ್ ನಲ್ಲಿ ಭರ್ಜರಿ ರಜಾ ದಿನಗಳು ಸಿಗಲಿವೆ. ಬ್ಯಾಂಕಿನಲ್ಲಿ ಕಾರ್ಯ ನಿರ್ವಹಣೆ ಮಾಡುವ ಕೆಲಸಗಾರರಿಗೆ ಇದೊಂದು ತರಹದ ಖುಷಿ ಸುದ್ದಿ ಆದರೆ, ಬ್ಯಾಂಕಿಗೆ ವಿಸಿಟ್ ಮಾಡುವ ಮುನ್ನ ಈ ರಜಾ ದಿನಗಳ ಒಮ್ಮೆ ಪರೀಕ್ಷಿಸಿ ಭೇಟಿ ನೀಡುವುದು ಗ್ರಾಹಕರಿಗೆ ಉತ್ತಮವಾಗಿದೆ. ಡಿಸೆಂಬರ್ 2025ರಲ್ಲಿ ಭಾರತದಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 18 ದಿನ ರಜೆಗಳು ನಿಗದಿಯಾಗಿವೆ. ಈ ರಜೆಗಳು ರಾಷ್ಟ್ರ ಮಟ್ಟದ ಹಬ್ಬಗಳು, ಪ್ರಾದೇಶಿಕ ಆಚರಣೆಗಳು ಹಾಗೂ ವಾರಾಂತ್ಯಗಳ (ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ) ಕಾರಣದಿಂದಾಗಿವೆ. ಗ್ರಾಹಕರು ತಮ್ಮ ಹಣಕಾಸು ವ್ಯವಹಾರಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಈ ಪಟ್ಟಿ ಸಹಾಯಕವಾಗಲಿದೆ ಒಮ್ಮೆ ಖಚಿತ ಮಾಡಿಕೊಳ್ಳಿ.