CTET 2026 ಪ್ರವೇಶ ಪತ್ರ ಬಿಡುಗಡೆ – ಈಗಲೇ ಡೌನ್‌ಲೋಡ್ ಮಾಡಿಕೊಳ್ಕಿ!!

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಫೆಬ್ರವರಿ 2026ರ CTET ಪರೀಕ್ಷೆಯ ಪ್ರವೇಶ ಪತ್ರವನ್ನು ಫೆಬ್ರವರಿ 5ರಂದು ಬಿಡುಗಡೆ ಮಾಡಿದೆ. ಫೆಬ್ರವರಿ 7 ಮತ್ತು 8 ರಂದು ನಡೆಯಲಿರುವ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್ ಅನ್ನು ಈಗಲೇ ctet.nic.in ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಫೆಬ್ರವರಿ 7 ಮತ್ತು 8ರಂದು CTET ಪರೀಕ್ಷೆ
ಫೆಬ್ರವರಿ 7 ಮತ್ತು 8ರಂದು CTET ಪರೀಕ್ಷೆ

ಪ್ರವೇಶ ಪತ್ರದಲ್ಲಿ ಇರುವ ಮಾಹಿತಿ

  • ಪರೀಕ್ಷಾ ಕೇಂದ್ರದ ವಿಳಾಸ
  • ವರದಿ ಮಾಡುವ ಸಮಯ
  • ಪರೀಕ್ಷೆಯ ವಿವರಗಳು

ಹಿಂದೆ ನೀಡಿದ ಸಿಟಿ ಸ್ಲಿಪ್ ಕೇವಲ ಮಾಹಿತಿ ಮಾತ್ರ, ಅದು ಪರೀಕ್ಷೆಗೆ ಮಾನ್ಯವಲ್ಲ.

ಪರೀಕ್ಷೆಯ ಸ್ಥಳ

CTET ಪರೀಕ್ಷೆಯನ್ನು ದೇಶದಾದ್ಯಂತ 140 ನಗರಗಳಲ್ಲಿ ಆಯೋಜಿಸಲಾಗಿದೆ.

ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವ ವಿಧಾನ

  • ಅಧಿಕೃತ ವೆಬ್‌ಸೈಟ್ ctet.nic.in ಗೆ ಹೋಗಿ.
  • “CTET February 2026 Admit Card” ಲಿಂಕ್ ಕ್ಲಿಕ್ ಮಾಡಿ.
  • ಅರ್ಜಿ ಸಂಖ್ಯೆ, ಜನನ ದಿನಾಂಕ ಮತ್ತು ಕ್ಯಾಪ್ಚಾ ನಮೂದಿಸಿ.
  • ಸಲ್ಲಿಸಿದ ನಂತರ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿ.

ಪರೀಕ್ಷಾ ದಿನದ ನಿಯಮಗಳು

  • ಮುದ್ರಿತ ಹಾಲ್ ಟಿಕೆಟ್ ಕಡ್ಡಾಯ. 
  • ಮೂಲ ಫೋಟೋ ಗುರುತಿನ ಚೀಟಿ ಕಡ್ಡಾಯ.
  • OMR ಶೀಟ್ ಗುರುತಿಸಲು ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನು ಕೊಂಡೊಯ್ಯಬೇಕು.

Latest News