ರಾಜ್ಯದಲ್ಲಿ ಲವ್ ಜಿಹಾದ್ ಆರೋಪಗಳು ದಿನಕ್ಕೊಂದು ಕಡೆ ಕೇಳಿಬರುತ್ತಲೇ ಇವೆ. ಹುಬ್ಬಳ್ಳಿಯ ಘಟನೆ ಮಾಸುವ ಮುನ್ನವೇ ಈಗ ರಾಜಧಾನಿ ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕನ ಮಾತಿಗೆ ಒಪ್ಪದಿದ್ದಕ್ಕೆ, ನಟಿಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಲಾಗಿದೆ.
ಸಂತ್ರಸ್ತ ಯುವತಿ ವೃತ್ತಿಯಲ್ಲಿ ಮಾಡೆಲ್ ಮತ್ತು ನಟಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗಲೇ ಇವರಿಗೆ ಜುಹೇಬ್ ಎಂಬಾತನ ಪರಿಚಯವಾಗಿತ್ತು. ಆರಂಭದಲ್ಲಿ ಕೆಲಸದ ವಿಷಯಕ್ಕೆ ಶುರುವಾದ ಪರಿಚಯ ನಂತರ ಸ್ನೇಹಕ್ಕೆ ತಿರುಗಿತ್ತು. ಆದರೆ, ಕಳೆದ ವರ್ಷದಿಂದ ಜುಹೇಬ್ ಅಸಲಿ ಬಣ್ಣ ಬಯಲಾಗಿದೆ. ಆಕೆ ತನ್ನನ್ನು ಮದುವೆಯಾಗಲೇಬೇಕು ಎಂದು ಆತ ಪೀಡಿಸಲು ಶುರು ಮಾಡಿದ್ದ ಎನ್ನಲಾಗಿದೆ.
ಯುವತಿ ಆತನ ಮದುವೆ ಪ್ರಸ್ತಾಪವನ್ನು ಕಡ್ಡಿ ಮುರಿದಂತೆ ತಿರಸ್ಕರಿಸಿದ್ದರು. ಇದರಿಂದ ಕೆರಳಿದ ಜುಹೇಬ್, "ನೀನು ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ" ಎಂದು ಬೆದರಿಕೆ ಹಾಕುತ್ತಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.
Shocking incident in Frazer Town Bengaluru.
— Karnataka Portfolio (@karnatakaportf) April 15, 2026
Source - Samvada channel#bengaluru #bangalore #frazertown @BlrCityPolice @blrcitytraffic @CPBlr @Jointcptraffic @alokkumar6994 @DgpKarnataka @KarnatakaCops @Lolita_TNIE @ChristinMP_ pic.twitter.com/YMwLfW7ap7
ರಕ್ತಸಿಕ್ತವಾಗಿ ವಿಡಿಯೋ ಮಾಡಿದ ನಟಿ
ಇತ್ತೀಚೆಗೆ ಫ್ರೇಜರ್ ಟೌನ್‌ನಲ್ಲಿ ಯುವತಿ ಇದ್ದಾಗ ಅಲ್ಲಿಗೆ ಬಂದ ಆರೋಪಿ ಜುಹೇಬ್, ಆಕೆಯ ಮೇಲೆ ಮನಬಂದಂತೆ ಅಟ್ಯಾಕ್ ಮಾಡಿದ್ದಾನೆ. ಮುಖ ಮತ್ತು ತಲೆಯ ಹಿಂಭಾಗಕ್ಕೆ ಬಲವಾಗಿ ಗುದ್ದಿದ್ದರಿಂದ ಯುವತಿಗೆ ಗಂಭೀರ ಗಾಯಗಳಾಗಿವೆ. ಈ ಘಟನೆಯ ನಂತರ ಯುವತಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತನ್ನ ರಕ್ತಸಿಕ್ತ ಮುಖ ಮತ್ತು ಗಾಯಗಳನ್ನು ತೋರಿಸುತ್ತಾ ತನಗಾದ ಅನ್ಯಾಯವನ್ನು ವಿವರಿಸಿದ್ದಾರೆ. ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಾಟ್ಸಾಪ್‌ನಲ್ಲಿ ಕೊಲೆ ಬೆದರಿಕೆ
ಬರಿ ಹಲ್ಲೆ ಮಾತ್ರವಲ್ಲದೆ, ಜುಹೇಬ್ ತನ್ನ ವಾಟ್ಸಾಪ್ ಸ್ಟೇಟಸ್ ಹಾಗೂ ಮೆಸೇಜ್‌ಗಳಲ್ಲಿ ಅತ್ಯಂತ ಅಹಂಕಾರದ ಮಾತುಗಳನ್ನು ಆಡಿದ್ದಾನೆ ಎನ್ನಲಾಗಿದೆ. "ನಾನು ಆಕೆಯನ್ನು ಸಾಯಿಸುತ್ತೇನೆ", "ಆಕೆ ಸಾಯಲೇಬೇಕು" ಎಂಬ ಅರ್ಥದ ಸಂದೇಶಗಳನ್ನು ಕಳುಹಿಸಿದ್ದಾನೆ. ಅಷ್ಟೇ ಅಲ್ಲದೆ, "ನನಗೆ ಹುಡುಗಿಯರ ಕೊರತೆಯಿಲ್ಲ, ಹಣದ ಪವರ್ ಇದೆ" ಎಂದು ಸೊಕ್ಕಿನಿಂದ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯಿಂದ ಎದೆಗುಂದದ ಯುವತಿ ತಕ್ಷಣವೇ ಫ್ರೇಜರ್ ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಆರೋಪಿ ಜುಹೇಬ್‌ನನ್ನು ಈಗಾಗಲೇ ಬಂಧಿಸಿದ್ದಾರೆ.
ರಾಜ್ಯದಲ್ಲಿ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಮತಾಂತರಕ್ಕೆ ಅಥವಾ ಮದುವೆಗೆ ಒತ್ತಾಯಿಸುವ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗಲಿ ಎಂಬ ಅಭಿಯಾನಗಳು ಶುರುವಾಗಿವೆ.