Feb 16, 2026 Languages : ಕನ್ನಡ | English

ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ CPIಗೆ ASI ಧಮ್ಕಿ – FIR ದಾಖಲು

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಒಂದು ಘಟನೆ ಇದೀಗ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಹೊಳಲ್ಕೆರೆ ಪೊಲೀಸ್ ಠಾಣೆಯ ASI ಹನುಮಂತಪ್ಪ, ತನ್ನ ಸಹಚರರಾದ ಚಿದಾನಂದ, ಮೋಹನ್ ಕುಮಾರ್ ಹಾಗೂ ಗುರುಸ್ವಾಮಿಯೊಂದಿಗೆ CPI ಬಾಲಚಂದ್ರ ನಾಯ್ಕ್ ಎದುರು ನುಗ್ಗಿ ಧಮ್ಕಿ ನೀಡಿದ ಘಟನೆ ದಾಖಲಾಗಿದೆ.

ಚಿತ್ರದುರ್ಗ ಎಕ್ಸಕ್ಲೂಸಿವ್ – CPI ಬಾಲಚಂದ್ರ ನಾಯ್ಕ್ ವಿರುದ್ಧ ASI ಧಮ್ಕಿ ಪ್ರಕರಣ
ಚಿತ್ರದುರ್ಗ ಎಕ್ಸಕ್ಲೂಸಿವ್ – CPI ಬಾಲಚಂದ್ರ ನಾಯ್ಕ್ ವಿರುದ್ಧ ASI ಧಮ್ಕಿ ಪ್ರಕರಣ

ಪೊಲೀಸ್ ಠಾಣೆಯೊಳಗೆ CPI ಮುಂದೆ ಮೇಜು ಕುಟ್ಟಿ, ಧಿಕ್ಕಾರ ಕೂಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹನುಮಂತಪ್ಪನ ನಡೆ ಅಧಿಕಾರಿಗಳಲ್ಲಿ ಆಕ್ರೋಶ ಮೂಡಿಸಿದೆ. “ಸಿವಿಲ್ ಡಿಸ್ಪೂಟ್ ಇದ್ದಾಗ ಹೇಗೆ ವಿಚಾರಣೆಗೆ ಕರೆಸಿದ್ರಿ? ನ್ಯಾಯಾಲಯದಲ್ಲಿ ವ್ಯಾಜ್ಯ ಇದ್ದಾಗ ಹೇಗೆ ವಿಚಾರಣೆ ಮಾಡ್ತೀರಿ?” ಎಂದು ಕಾಗದ ಎಸೆದು CPI ಎದುರು ಆಕ್ರೋಶ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ.

ಈ ಘಟನೆಗೆ ಮೂಲವಾದದ್ದು ಅಯ್ಯನಹಳ್ಳಿ ಗ್ರಾಮದ ರಿ.ಸರ್ವೆ ನಂ 109/2ರಲ್ಲಿ 3 ಎಕರೆ 11 ಗುಂಟ ಜಮೀನು. ಸಹೋದರರ ನಡುವೆ ಆಸ್ತಿ ವ್ಯಾಜ್ಯ ನ್ಯಾಯಾಲಯದಲ್ಲೇ ವಿಚಾರಣೆಯಲ್ಲಿರುವಾಗ, ಮೀನಾಕ್ಷಮ್ಮ ಅವರು ಮೋಹನ್ ಕುಮಾರ ರಾಜಪ್ಪ ವಿರುದ್ಧ ಅಕ್ರಮ ಮಣ್ಣು ಹಾಕಿದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ CPI ವಿಚಾರಣೆ ನಡೆಸುತ್ತಿದ್ದ ವೇಳೆ, ಹನುಮಂತಪ್ಪ ಹಾಗೂ ಸಹಚರರು ಠಾಣೆಗೆ ನುಗ್ಗಿ CPIಗೆ ಧಮ್ಕಿ ನೀಡಿದರೆಂದು ಆರೋಪಿಸಲಾಗಿದೆ.

ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, CPI ಎದುರು ಆಕ್ರೋಶ ವ್ಯಕ್ತಪಡಿಸಿದ ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ FIR ದಾಖಲಾಗಿದೆ. ಹನುಮಂತಪ್ಪ, ರಾಜಪ್ಪ, ಗುರುಸ್ವಾಮಿ ಹಾಗೂ ಚಿದಾನಂದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆ, ಪೊಲೀಸ್ ಇಲಾಖೆಯೊಳಗೆ ಶಿಸ್ತಿನ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಧಮ್ಕಿ ನೀಡುವುದು ಕಾನೂನುಬಾಹಿರವಾಗಿದ್ದು, ಸಾರ್ವಜನಿಕ ನಂಬಿಕೆಗೆ ಧಕ್ಕೆಯಾಗಿದೆ. ಸ್ಥಳೀಯರು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, “ಪೊಲೀಸ್ ಇಲಾಖೆಯೊಳಗೆ ಇಂತಹ ಘಟನೆಗಳು ನಡೆಯಬಾರದು. ಕಾನೂನು ಎಲ್ಲರಿಗೂ ಸಮಾನ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ಜಮೀನು ವ್ಯಾಜ್ಯದಿಂದ ಆರಂಭವಾದ ಈ ಘಟನೆ, ಪೊಲೀಸ್ ಠಾಣೆಯೊಳಗೆ CPIಗೆ ಧಮ್ಕಿ ನೀಡುವ ಮಟ್ಟಿಗೆ ತಲುಪಿರುವುದು ಕಾನೂನು ವ್ಯವಸ್ಥೆಯ ಗಂಭೀರತೆಗೆ ಬೆಳಕು ಚೆಲ್ಲುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವಿಷಯವನ್ನು ಠಾಣೆಯಲ್ಲಿ ಬಲಾತ್ಕಾರವಾಗಿ ತಡೆಹಿಡಿಯಲು ಪ್ರಯತ್ನಿಸುವುದು, ಕಾನೂನುಬಾಹಿರ ನಡೆ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ. 

Latest News