Feb 16, 2026 Languages : ಕನ್ನಡ | English

ರಾತ್ರೋ ರಾತ್ರಿ ಎರಡು ಮಧ್ಯದಂಗಡಿಗಳಿಗೆ ನುಗ್ಗಿದ ಕಳ್ಳರು - ಸಿಸಿ ಕ್ಯಾಮರಾದಲ್ಲಿ ಬಯಲು!!

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ತಡರಾತ್ರಿ ನಡೆದ ಕಳ್ಳತನ ಘಟನೆ ಸ್ಥಳೀಯರಲ್ಲಿ ಆತಂಕವನ್ನು ಉಂಟುಮಾಡಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಐಶ್ವರ್ಯ ಮತ್ತು ಶಕ್ತಿ ವೈನ್ಸ್ ಎಂಬ ಎರಡು ಲಿಕ್ಕರ್ ಅಂಗಡಿಗಳಲ್ಲಿ ಖದೀಮರ ಗ್ಯಾಂಗ್‌ ಶಟರ್ ಮುರಿದು ಕೃತ್ಯ ಎಸಗಿದೆ.

ಶಟರ್ ಮುರಿದು ಕೃತ್ಯ ಎಸಗಿದ ನಾಲ್ವರು ಖದೀಮರು
ಶಟರ್ ಮುರಿದು ಕೃತ್ಯ ಎಸಗಿದ ನಾಲ್ವರು ಖದೀಮರು

ನಾಲ್ವರು ಖದೀಮರು ಸೇರಿ ಈ ಕಳ್ಳತನ ನಡೆಸಿದ್ದು, ಅಂಗಡಿಗಳಲ್ಲಿದ್ದ ಮಧ್ಯದ ಬಾಟಲಿಗಳು ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳರ ಚಲನವಲನ ಪಕ್ಕದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆ ಸಿಕ್ಕಿದ್ದು, ಪೊಲೀಸರು ತನಿಖೆಗೆ ಪ್ರಮುಖ ಸುಳಿವು ದೊರೆತಿದೆ. ಘಟನೆ ನಡೆದ ಸಮಯದಲ್ಲಿ ಪಟ್ಟಣದ ಜನರು ನಿದ್ರೆಯಲ್ಲಿದ್ದರಿಂದ ಯಾರಿಗೂ ಈ ಕೃತ್ಯದ ಬಗ್ಗೆ ತಿಳಿಯಲಿಲ್ಲ. ಬೆಳಿಗ್ಗೆ ಅಂಗಡಿ ಮಾಲೀಕರು ಶಟರ್ ಮುರಿದು ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಚಿಂಚೋಳಿ ಠಾಣೆಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಚಿಂಚೋಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳತನದ ಪ್ರಮಾಣ, ಕಳೆದುಹೋದ ಬಾಟಲಿಗಳು ಮತ್ತು ನಗದು ಹಣದ ವಿವರಗಳನ್ನು ದಾಖಲಿಸಿ, ಪ್ರಕರಣವನ್ನು ದಾಖಲಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಪ್ರಯತ್ನ ಆರಂಭಿಸಿದ್ದಾರೆ. ಈ ಘಟನೆ ಪಟ್ಟಣದ ವ್ಯಾಪಾರಿಗಳಲ್ಲಿ ಆತಂಕವನ್ನು ಉಂಟುಮಾಡಿದ್ದು, ಭದ್ರತೆ ಹೆಚ್ಚಿಸಲು ಬೇಡಿಕೆ ವ್ಯಕ್ತವಾಗಿದೆ. ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ, ಸಿಸಿ ಕ್ಯಾಮರಾ ಮತ್ತು ಅಲಾರಂ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.

ಒಟ್ಟಾರೆ, ಚಿಂಚೋಳಿಯಲ್ಲಿ ನಡೆದ ಈ ಕಳ್ಳತನ ಪ್ರಕರಣವು ಪಟ್ಟಣದ ಜನರಲ್ಲಿ ಭಯ ಹುಟ್ಟಿಸಿದ್ದು, ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. 

Latest News