ಬಿಡದಿ ಟೌನ್‌ಶಿಪ್ ಯೋಜನೆಗೆ ಶೇ.80 ರಷ್ಟು ರೈತರ ಒಪ್ಪಿಗೆ - ಜೂನ್‌ನಿಂದ ಪರಿಹಾರ ಹಣ ಬಿಡುಗಡೆ!!

ರಾಮನಗರ ಜಿಲ್ಲೆಯ ಬಿಡದಿ ಹತ್ತಿರ ನಿರ್ಮಾಣ ಮಾಡಲು ಪ್ಲಾನ್ ಮಾಡಿರೋ ‘ಗ್ರೇಟರ್ ಬೆಂಗಳೂರು ಟೌನ್‌ಶಿಪ್’ ಯೋಜನೆಗೆ ಇದ್ದ ದೊಡ್ಡ ತಲೆನೋವೊಂದು ಈಗ ನಿವಾರಣೆಯಾಗಿದೆ. ಹೌದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HDK) ಅವರ ತೀವ್ರ ವಿರೋಧದ ನಡುವೆಯೂ, ಈ ಯೋಜನೆಗೆ ಬಿಡದಿ ಭಾಗದ ಬಹುತೇಕ ರೈತರು ಒಪ್ಪಿಗೆ ಸೂಚಿಸಿದ್ದಾರೆ!

ಬಿಡದಿ ಟೌನ್‌ಶಿಪ್ ಯೋಜನೆಗೆ ಇದ್ದ ಬಿಗ್ ತಲೆನೋವು ಕ್ಲಿಯರ್
ಬಿಡದಿ ಟೌನ್‌ಶಿಪ್ ಯೋಜನೆಗೆ ಇದ್ದ ಬಿಗ್ ತಲೆನೋವು ಕ್ಲಿಯರ್

ಖುದ್ದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ (DK Shivakumar) ಅವರೇ ಬುಧವಾರ ಈ ಬಿಗ್ ನ್ಯೂಸ್ ಅನೌನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, "ಜೂನ್ 1 ರಿಂದಲೇ ರೈತರ ಅಕೌಂಟ್‌ಗೆ ಭೂಮಿಯ ಪರಿಹಾರದ ದುಡ್ಡು ಬಿಡುಗಡೆ ಮಾಡ್ತೀವಿ" ಅಂತ ಡೆಡ್‌ಲೈನ್ ಕೂಡ ಫಿಕ್ಸ್ ಮಾಡಿದ್ದಾರೆ.

ಶೇ. 80 ರಷ್ಟು ರೈತರು ಓಕೆ ಅಂದ್ರು: ಡಿಕೆಶಿ ಮಹತ್ವದ ಮೀಟಿಂಗ್!

ಬಿಡದಿ ಟೌನ್‌ಶಿಪ್ ಯೋಜನೆಗೆ ಜಮೀನು ನೀಡಬೇಕಾದ ರೈತರ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬುಧವಾರ ಒಂದು ಹೈವೋಲ್ಟೇಜ್ ಮೀಟಿಂಗ್ ನಡೆಸಿದರು. ಈ ಸಭೆಯಲ್ಲಿ ಸರ್ಕಾರ ಕೊಡಲಿರುವ ಪರಿಹಾರದ ಪ್ಯಾಕೇಜ್ ಮತ್ತು ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ರೈತರಿಗೆ ಕಂಪ್ಲೀಟ್ ಆಗಿ ವಿವರಣೆ ನೀಡಲಾಯಿತು.

ಮೀಟಿಂಗ್ ಮುಗಿದ ಮೇಲೆ ಭರ್ಜರಿ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ, "ನಮ್ಮ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರೈತರು ಇವತ್ತಿನ ಸಭೆಗೆ ಬಂದಿದ್ದರು. ನಾನು ಆಲ್ರೆಡಿ ಘೋಷಣೆ ಮಾಡಿರೋ ಪರಿಹಾರದ ಮೊತ್ತಕ್ಕೆ ಹೆಚ್ಚು ಕಡಿಮೆ ಶೇ. 80 ರಷ್ಟು ರೈತರು ಒಪ್ಪಿಗೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ‘ನಮಗೆ ಇನ್ನು ತಡ ಮಾಡಬೇಡಿ, ಆದಷ್ಟು ಬೇಗ ಪರಿಹಾರದ ದುಡ್ಡನ್ನ ಬಿಡುಗಡೆ ಮಾಡಿ’ ಅಂತ ರೈತರೇ ನಮ್ಮನ್ನು ಒತ್ತಾಯ ಮಾಡ್ತಿದ್ದಾರೆ," ಎಂದು ಖುಷಿಯಿಂದ ಹೆಳಿದ್ದಾರೆ.

ಜೂನ್ ಮೊದಲ ವಾರದಿಂದಲೇ ದುಡ್ಡು ಜಮಾ!

ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡಲು ಸರ್ಕಾರ ಈಗ ಬುಲೆಟ್ ವೇಗದಲ್ಲಿ ರೆಡಿಯಾಗಿದೆ. ಜೂನ್ 30ರೊಳಗೆ ಭೂಸ್ವಾಧೀನಕ್ಕೆ ಸಂಬಂಧಿಸಿದ ಎಲ್ಲಾ ಕಾನೂನಾತ್ಮಕ ಅಧಿಸೂಚನೆಗಳನ್ನು (Notifications) ಕಂಪ್ಲೀಟ್ ಮಾಡುವುದು ಸರ್ಕಾರದ ಟಾರ್ಗೆಟ್ ಆಗಿದೆ.

ಡಿಕೆಶಿ ಕೊಟ್ಟ ಟೈಮ್ ಲೈನ್ ಹೀಗಿದೆ:

"ಇನ್ನೇನು ಮೂರೇ ದಿನಗಳಲ್ಲಿ ಗ್ರಾಮವಾರು ಅಂತಿಮ ಅಧಿಸೂಚನೆಗಳನ್ನು (Final Notifications) ಹೊರಡಿಸಲಾಗುವುದು. ಅದಾದ ತಕ್ಷಣ, ಅಂದರೆ ಜೂನ್ 1 ರಿಂದಲೇ (ಜೂನ್ ಮೊದಲ ವಾರ) ಜಮೀನು ಕೊಟ್ಟ ಎಲ್ಲಾ ರೈತರಿಗೆ ಲೈನ್ ಬಿಫೋರ್ ಆಗಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತೇವೆ. ಹಳ್ಳಿಗಳನ್ನ ವಿಭಾಗ ಮಾಡಿ ಪ್ರತ್ಯೇಕ ಹಂತಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ."

"ಇದು ನನ್ನ ಯೋಜನೆಯಲ್ಲ, ಕುಮಾರಸ್ವಾಮಿ ಅವರದ್ದೇ ಕೂಸು!"

ಈ ಯೋಜನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಿಕೆಶಿ ತಮ್ಮದೇ ಶೈಲಿಯಲ್ಲಿ ಕೌಂಟರ್ ಕೊಟ್ಟಿದ್ದಾರೆ.

"ಸ್ವಾಮಿ, ಈ ಬಿಡದಿ ಟೌನ್‌ಶಿಪ್ ಯೋಜನೆ ನನ್ನ ತಲೆಯಲ್ಲಿ ಬಂದಿದ್ದಲ್ಲ! ಕುಮಾರಸ್ವಾಮಿ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಈ ಯೋಜನೆ ಹುಟ್ಟಿಕೊಂಡಿದ್ದು. ಅವರ ಕಾಲದಲ್ಲೇ ಬಿಡದಿ ಟೌನ್‌ಶಿಪ್ ಬಗ್ಗೆ ಪ್ರಸ್ತಾಪ ಇಟ್ಟು, ಈ ಪ್ರಾಜೆಕ್ಟ್ ಅನ್ನು 'ಡಿಎಲ್‌ಎಫ್' (DLF) ಕಂಪನಿಗೆ ನೀಡಲಾಗಿತ್ತು. ಆದರೆ ಆಮೇಲೆ ಡಿಎಲ್‌ಎಫ್ ಕಂಪನಿಯವರು ಇದು ನಮಗೆ ವರ್ಕೌಟ್ ಆಗಲ್ಲ ಅಂತ ಹಿಂದೆ ಸರಿದರು. ಹಾಗಾಗಿ, ಕುಮಾರಸ್ವಾಮಿ ಅವರೇ ಶುರು ಮಾಡಿದ ಯೋಜನೆಯನ್ನು ನಾನು ಮುಂದುವರಿಸುತ್ತಿದ್ದೇನೆ ಅಷ್ಟೇ," ಎಂದು ತಿರುಗೇಟು ನೀಡಿದ್ದಾರೆ.

ಅಷ್ಟಕ್ಕೇ ನಿಲ್ಲಿಸದ ಡಿಸಿಎಂ, "ಈ ಯೋಜನೆ ಬಗ್ಗೆ ಜೆಡಿಎಸ್ ನಾಯಕರಿಗೆ ಏನಾದರೂ ಡೌಟ್ ಇದ್ದರೆ, ಅವರು ಆಯ್ಕೆ ಮಾಡುವ ಯಾವುದೇ ಸ್ಥಳ ಮತ್ತು ಯಾವುದೇ ಸಮಯದಲ್ಲಿ ನಾನು ಅವರ ಜೊತೆ ಪಬ್ಲಿಕ್ ಆಗಿ ಓಪನ್ ಚರ್ಚೆ (Public Debate) ಮಾಡಲು ಸಿದ್ಧನಿದ್ದೇನೆ," ಅಂತ ಎಚ್‌ಡಿಕೆಗೆ ಖಡಕ್ ಸವಾಲು ಹಾಕಿದ್ದಾರೆ.

ರೈತರ ಡಿಮ್ಯಾಂಡ್: ದುಡ್ಡಿನ ಜೊತೆ ಸೈಟೂ ಬೇಕು!

ಇತ್ತ ಸರ್ಕಾರ ಪರಿಹಾರ ಕೊಡಲು ಮುಂದಾಗಿದ್ದರೆ, ಅತ್ತ ರೈತರು ಕೂಡ ಸರ್ಕಾರದ ಮುಂದೆ ಒಂದು ಇಂಟರೆಸ್ಟಿಂಗ್ ಡಿಮ್ಯಾಂಡ್ ಇಟ್ಟಿದ್ದಾರೆ. "ನಾವು ನಮ್ಮ ಇಡೀ ಜಮೀನನ್ನು ಸರ್ಕಾರಕ್ಕೆ ಕೊಡ್ತಾ ಇದ್ದೀವಿ. ಬರೀ ಹಣ ಕೊಟ್ಟರೆ ಸಾಲದು, ಮುಂದೆ ಈ ಜಾಗ ಡೆವಲಪ್ ಆದಮೇಲೆ ಆ ಟೌನ್‌ಶಿಪ್ ಒಳಗಡೆ ನಮಗೆ ತಲಾ 30*40 ಸೈಟ್‌ಗಳನ್ನು ಮಂಜೂರು ಮಾಡಬೇಕು. ಕನಿಷ್ಠ ಕೆಲವು ಸೈಟ್‌ಗಳನ್ನಾದರೂ ನಮಗೆ ವಾಪಸ್ ಕೊಟ್ಟರೆ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯ ಭದ್ರವಾಗುತ್ತದೆ," ಎಂದು ರೈತರು ವಿನಂತಿಸಿದ್ದಾರೆ.

ಆದರೆ, ರೈತರ ಈ ಸೈಟ್ ಡಿಮ್ಯಾಂಡ್‌ಗೆ ತಕ್ಷಣವೇ ಓಕೆ ಅನ್ನದ ಡಿಸಿಎಂ ಡಿ.ಕೆ. ಶಿವಕುಮಾರ್, "ನಿಮ್ಮ ಬೇಡಿಕೆ ನ್ಯಾಯಯುತವಾಗಿದೆ, ಈ ಬಗ್ಗೆ ಸರ್ಕಾರ ಖಂಡಿತ ಯೋಚನೆ ಮಾಡುತ್ತದೆ," ಎಂದು ಸದ್ಯಕ್ಕೆ ಭರವಸೆ ನೀಡಿ ಕಳುಹಿಸಿದ್ದಾರೆ.

Latest News

Related News