ಕೋರ್ಟ್ ಆವರಣದಲ್ಲೇ ಆರೋಪಿಗೆ ಹಿಗ್ಗಾ ಮುಗ್ಗಾ ಬಾರಿಸಿದ ವಕೀಲರು - 17 ವರ್ಷದ ವಿದ್ಯಾರ್ಥಿನಿ ಪ್ರಕರಣ!!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕೋರ್ಟ್ ಆವರಣದಲ್ಲೇ ಅ*ತ್ಯಾಚಾರ ಆರೋಪಿಗೆ ವಕೀಲರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಹೌದು, 11ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಈ ಕೃತ್ಯ ಎಸಗಿದ ಆರೋಪಿಯನ್ನು ನಿನ್ನೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಜಡ್ಜ್ ಮುಂದೆ ಹಾಜರುಪಡಿಸಿದ ನಂತರ, ಪೊಲೀಸರು ಆರೋಪಿಯನ್ನು ಠಾಣೆಗೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ. ಕೋರ್ಟ್ ಆವರಣದಲ್ಲಿದ್ದ ವಕೀಲರು ಆರೋಪಿಯನ್ನು ಹಿಡಿದು ಧರ್ಮದೇಟು ಕೊಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ಜನರು ಒಂದು ಕ್ಷಣ ಬೆಚ್ಚಿಬಿದ್ದರು.

ಸಮಾಜದಲ್ಲಿ ನ್ಯಾಯದ ಅಗತ್ಯತೆ ಮತ್ತೊಮ್ಮೆ ನೆನಪಿಸಿದ ಪ್ರಕರಣ
ಸಮಾಜದಲ್ಲಿ ನ್ಯಾಯದ ಅಗತ್ಯತೆ ಮತ್ತೊಮ್ಮೆ ನೆನಪಿಸಿದ ಪ್ರಕರಣ

ಮಾಹಿತಿಯ ಪ್ರಕಾರ, ಆರೋಪಿ ವಿದ್ಯಾರ್ಥಿನಿಯನ್ನು ಬಲವಂತವಾಗಿ ತನ್ನ ಕಾರಿನಲ್ಲಿ ಕರೆದೊಯ್ದು ಆಕೆಯ ಮೇಲೆ ಬಲಾತ್ಕಾರ ಎಸಗಿದ್ದಾನೆ. ಅದನ್ನು ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ. ಅಲ್ಲದೇ ಅಪ್ರಾಪ್ತೆಯನ್ನ ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಇದೆ. ಈ ಪ್ರಕರಣ ಗಂಭೀರವಾಗಿರುವುದರಿಂದ ಪೊಲೀಸರು ಆರೋಪಿಯನ್ನು 2 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ತನಿಖೆ ಮುಂದುವರಿಯುತ್ತಿದೆ. ವಿದ್ಯಾರ್ಥಿನಿ ಮತ್ತು ಕುಟುಂಬಕ್ಕೆ ನ್ಯಾಯ ದೊರಕುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಕೋರ್ಟ್ ಆವರಣದಲ್ಲೇ ನಡೆದಿರುವುದರಿಂದ ಜನರಲ್ಲಿ ಆಕ್ರೋಶ ಮೂಡಿದೆ. “ಮಕ್ಕಳ ಮೇಲೆ ಇಂತಹ ಕ್ರೂರ ಕೃತ್ಯಗಳನ್ನು ಮಾಡುವವರಿಗೆ ಕಾನೂನು ಶಿಕ್ಷೆ ದೊರಕಬೇಕು” ಎಂದು ವಕೀಲರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಕುರಿತಾಗಿ ಚರ್ಚೆಗಳು ಜೋರಾಗಿ ಕೇಳಿ ಬರುತ್ತಿವೆ. ಕೆಲವರು ವಕೀಲರ ಕ್ರಮವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಕಾನೂನು ಪ್ರಕ್ರಿಯೆ ಮೂಲಕವೇ ನ್ಯಾಯ ದೊರಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಹೌದು, ಭೋಪಾಲ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಅ*ತ್ಯಾಚಾರ ಎಸಗಿದ ಆರೋಪಿಗೆ ಕೋರ್ಟ್ ಆವರಣದಲ್ಲೇ ವಕೀಲರು ಥಳಿಸಿರುವ ಘಟನೆ, ಸಮಾಜದಲ್ಲಿ ಕಾನೂನು ಮತ್ತು ನ್ಯಾಯದ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ನ್ಯಾಯ ದೊರಕುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿ ಬೆಳೆವಣಿಗೆ ಕಾಣುತ್ತದೆ ಎಂದು ಕಾದು ನೋಡಬೇಕು.  

Latest News