ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತ ಮಹಿಳೆಯ 'ಸ್ಮಾರ್ಟ್' ಐಡಿಯಾ - ಆಫೀಸಿನಿಂದ ಮನೆಗೆ ವಾಹನ ಬಿಟ್ಟು ನಡಿಗೆ ಶುರು!!

ಬೆಂಗಳೂರು ಅಂದ್ಮೇಲೆ ಟ್ರಾಫಿಕ್ ಇಲ್ದೆ ಇರೋಕೆ ಸಾಧ್ಯವೇ ಇಲ್ಲ. ಆಫೀಸ್ ಮುಗಿಸಿ ಮನೆಗೆ ಹೋಗೋ ಅಷ್ಟೊತ್ತಿಗೆ ಅರ್ಧ ಜೀವ ಹೋಗಿರುತ್ತೆ. ಟ್ರಾಫಿಕ್‌ನಲ್ಲಿ ಕಾರು-ಬೈಕ್ ಹಾರ್ನ್ ಸದ್ದು ಕೇಳಿ ಕಿವಿಗೂ ರಜೆ ಸಿಗಲ್ಲ. ಈ ಸಂಕಟದಿಂದ ಪಾರಾಗೋಕೆ ಬೆಂಗಳೂರಿನ ಮಹಿಳೆಯೊಬ್ಬರು ಸಖತ್ ಐಡಿಯಾ ಮಾಡಿದ್ದಾರೆ. ಆಫೀಸಿನಿಂದ ಮನೆಗೆ ವಾಹನದಲ್ಲಿ ಹೋಗೋ ಬದಲು, ಖುದ್ದಾಗಿ ನಡೆದುಕೊಂಡೇ ಹೋಗಲು ನಿರ್ಧರಿಸಿದ್ದಾರೆ!

2.7 ಕಿ.ಮೀ ನಡೆದೇ ಸೈ ಎನಿಸಿಕೊಂಡ ಐಟಿ ಸಿಟಿಯ ವಾಕಿಂಗ್ ವುಮನ್
2.7 ಕಿ.ಮೀ ನಡೆದೇ ಸೈ ಎನಿಸಿಕೊಂಡ ಐಟಿ ಸಿಟಿಯ ವಾಕಿಂಗ್ ವುಮನ್

ಏನಿದು 'ವಾಕ್' ಪ್ರಯೋಗ?

ಶಿಲ್ಪಾ (silly_fied) ಎನ್ನುವ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಸಾಹಸಕ್ಕೆ ಕೈ ಹಾಕಿದ್ದು. ಎರಡು ವಾರಗಳ ಕಾಲ ಸತತವಾಗಿ ಆಫೀಸಿನಿಂದ ಮನೆಗೆ ನಡೆದುಕೊಂಡೇ ಹೋಗಿದ್ದಾರೆ. ಗೂಗಲ್ ಮ್ಯಾಪ್ ಪ್ರಕಾರ ಸುಮಾರು 2.7 ಕಿ.ಮೀ ಅಂತರವಿದ್ದು, ಇದಕ್ಕೆ ಸುಮಾರು 38 ನಿಮಿಷಗಳು ಬೇಕಾಗುತ್ತದೆ ಎಂದು ತೋರಿಸಿತ್ತು. ಆದರೆ ರಿಯಲ್ ಆಗಿ ನಡೆಯುವಾಗ ಇನ್ನೂ ಸ್ವಲ್ಪ ಸಮಯವೇ ಬೇಕಾಗುತ್ತಿತ್ತು.

View this post on Instagram

A post shared by Silpa (@silly_fied)

ಏನೇನಾಯ್ತು ಫಲಿತಾಂಶ?

ಎರಡು ವಾರಗಳ ನಡಿಗೆಯ ನಂತರ ಶಿಲ್ಪಾ ಅವರು ತಮ್ಮ ಅನುಭವದ ಪ್ಲಸ್ ಮತ್ತು ಮೈನಸ್ ಪಾಯಿಂಟ್‌ಗಳನ್ನು ಹೀಗೆ ಬಿಚ್ಚಿಟ್ಟಿದ್ದಾರೆ:

ಸಾಧಕ (Positive): ಈಗ ಮೊದಲಿನಗಿಂತ ಹೆಚ್ಚು ಆಕ್ಟಿವ್ ಆಗಿದ್ದಾರೆ. ದೈಹಿಕವಾಗಿ ಹೆಚ್ಚು ಶಕ್ತಿ ಬಂದಿದೆ. ಟ್ರಾಫಿಕ್‌ನಲ್ಲಿ ಸಿಲುಕುವ ಕಿರಿಕಿರಿ ಇಲ್ಲ.

ಬಾಧಕ (Negative): ಇದೇ ಒಂದು ಮಜವಾದ ಸಂಗತಿ! ದಾರಿಯಲ್ಲಿ ಸುಸ್ತಾಗಿ ಎಳನೀರು ಕುಡಿದು ಕುಡಿದು, ಎರಡು ವಾರಕ್ಕೆ ಬರೋಬ್ಬರಿ 840 ರೂಪಾಯಿ ಖರ್ಚು ಮಾಡಿದ್ದಾರೆ! ಅಂದ್ರೆ ಟ್ರಾಫಿಕ್‌ಗೆ ಪೆಟ್ರೋಲ್ ಹಾಕಿಸೋ ಬದಲು, ಎಳನೀರಿಗೆ ದುಡ್ಡು ಖರ್ಚಾಗಿದೆ ಅನ್ನೋದು ಇವರ ತಮಾಷೆಯ ಮಾತು.

ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!

ಈ ವಿಡಿಯೋ ನೋಡಿ ನೆಟ್ಟಿಗರು ಸಖತ್ ಫಿದಾ ಆಗಿದ್ದಾರೆ. "ವೈಟ್‌ಫೀಲ್ಡ್‌ನಂತಹ ಏರಿಯಾಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕುವ ಬದಲು ನಡೆದುಕೊಂಡು ಹೋಗೋದೇ ಬೆಸ್ಟ್" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, "ನಿಮ್ಮ ಧೈರ್ಯಕ್ಕೆ ಭೇಷ್, ನಾನೂ ಟ್ರೈ ಮಾಡ್ತೀನಿ" ಎಂದು ಪ್ರೋತ್ಸಾಹಿಸಿದ್ದಾರೆ.

ಬೆಂಗಳೂರಿನ ಟ್ರಾಫಿಕ್‌ಗೆ ಬೇಸತ್ತ ಜನರಿಗೆ ಇದು ಒಂದು ಹೊಸ ದಾರಿಯನ್ನು ತೋರಿಸಿಕೊಟ್ಟಿದೆ. ಆರೋಗ್ಯವೂ ಮುಖ್ಯ, ಟ್ರಾಫಿಕ್ ಭಯವೂ ಇಲ್ಲ! ಆದ್ರೆ, ಎಳನೀರು ಖರ್ಚು ಒಂದನ್ನು ಮ್ಯಾನೇಜ್ ಮಾಡಿಕೊಂಡರೆ ಆಯ್ತು ಅಷ್ಟೇ!

Latest News