ಬೆಂಗಳೂರಿಗರೇ ಅಲರ್ಟ್.. ವೀಕೆಂಡ್‌ನಲ್ಲಿ ಹೊರಗಡೆ ಹೋಗೋ ಮುನ್ನ ಹುಷಾರ್ - ಸಿಟಿಗೆ ಬಿದ್ದಿದೆ ‘ಆರೆಂಜ್ ಅಲರ್ಟ್’!!

ವೀಕೆಂಡ್ ಮೂಡ್‌ನಲ್ಲಿ ಹಾಯಾಗಿ ಹೊರಗಡೆ ಸುತ್ತಾಡಲು ಪ್ಲಾನ್ ಮಾಡ್ತಿರೋ ಬೆಂಗಳೂರಿಗರಿಗೆ ಹವಾಮಾನ ಇಲಾಖೆ ಒಂದು ಪ್ರಮುಖ ಎಚ್ಚರಿಕೆಯನ್ನು ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದ ಎಫೆಕ್ಟ್‌ನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಇಂದು ಸಂಜೆಯಿಂದಲೇ ಹವಾಮಾನ ಫುಲ್ ಚೇಂಜ್ ಆಗಲಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ !

ವೀಕೆಂಡ್‌ನಲ್ಲಿ ಭೀಕರ ಮಳೆ ಎಚ್ಚರಿಕೆ ;
ವೀಕೆಂಡ್‌ನಲ್ಲಿ ಭೀಕರ ಮಳೆ ಎಚ್ಚರಿಕೆ ;

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಲೇಟೆಸ್ಟ್ ರಿಪೋರ್ಟ್ ಪ್ರಕಾರ, ಕರುನಾಡಿನಲ್ಲಿ ಮುಂದಿನ 4 ದಿನಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಜೋರು ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರಿಗೆ ‘ಆರೆಂಜ್ ಅಲರ್ಟ್’ (Orange Alert) ಘೋಷಣೆ ಮಾಡಲಾಗಿದೆ. ಇಂದಿನಿಂದ (ಮೇ 16) ಆರಂಭಿಸಿ ಮೇ 19ರ ವರೆಗೆ ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿರಲಿದೆ. ಸಂಜೆ ಟೈಮ್‌ನಲ್ಲಿ ಹೊರಗಡೆ ಶಾಪಿಂಗ್ ಅಥವಾ ರೈಡ್ ಹೋಗುವ ಮುನ್ನ ಛತ್ರಿ, ರೇನ್‌ಕೋಟ್ ರೆಡಿ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.

ಬೆಂಗಳೂರಲ್ಲಿ 3 ದಿನ ಬಿರುಗಾಳಿ ಮಳೆ ಫಿಕ್ಸ್!

ಕಳೆದೊಂದು ವಾರದಿಂದ ಬೆಂಗಳೂರಿನ ಹಲವೆಡೆ ಆಗಾಗ ತುಂತುರು ಮಳೆಯಾಗಿ ವಾತಾವರಣ ಕೊಂಚ ಕೂಲ್ ಆಗಿತ್ತು. ಆದರೆ ಈಗ ವಾಯುಭಾರ ಕುಸಿತ ತೀವ್ರಗೊಂಡಿರುವುದರಿಂದ ಇಂದು ಸಂಜೆಯಿಂದ ಬೆಂಗಳೂರಿನಲ್ಲಿ ಗುಡುಗು ಮತ್ತು ಮಿಂಚಿನ ಸೌಂಡ್ ಜೋರಾಗಲಿದೆ. ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಒಳನಾಡು ಮತ್ತು ಕರಾವಳಿ ಭಾಗದಲ್ಲೂ ವರುಣನ ಅಬ್ಬರ ಹೆಚ್ಚಿರಲಿದೆ. ಮಳೆ ಬರುವಾಗ ಗಂಟೆಗೆ ಬರೋಬ್ಬರಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಸಖತ್ ಬಿರುಗಾಳಿ ಬೀಸಲಿದ್ದು, ಸಾರ್ವಜನಿಕರು ರಸ್ತೆ ಬದಿಯ ಮರಗಳು ಮತ್ತು ವಿದ್ಯುತ್ ಕಂಬಗಳ ಕೆಳಗೆ ನಿಲ್ಲದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ಉತ್ತರ ಮತ್ತು ದಕ್ಷಿಣ ಒಳನಾಡಿನ ಕಥೆ ಏನು?

ಉತ್ತರ ಒಳನಾಡು ಕರ್ನಾಟಕ - ಉತ್ತರ ಕರ್ನಾಟಕ ಭಾಗದ ಜನರಿಗೆ ಹವಾಮಾನ ಇಲಾಖೆ ಆಲಿಕಲ್ಲು ಮಳೆಯ (Hailstorm) ಮುನ್ಸೂಚನೆ ಕೊಟ್ಟಿದೆ. ಇಂದಿನಿಂದ ಮೇ 18ರ ವರೆಗೆ ಗಂಟೆಗೆ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಆದರೆ ಮುಂದಿನ 5 ದಿನಗಳವರೆಗೆ ಇಲ್ಲಿನ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ.

ದಕ್ಷಿಣ ಒಳನಾಡು ಕರ್ನಾಟಕ - ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಬಿರುಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಮೇ 17 ರಿಂದ 19 ರ ವರೆಗೆ ಒಂದೆರಡು ಕಡೆಗಳಲ್ಲಿ ಭಾರೀ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು.

ಎಲ್ಲೆಲ್ಲಿ ಬಿದ್ದಿದೆ ಯೆಲ್ಲೋ ಅಲರ್ಟ್?

ಬೆಂಗಳೂರಿಗೆ ಆರೆಂಜ್ ಅಲರ್ಟ್ ಇದ್ದರೆ, ರಾಜ್ಯದ ಉಳಿದ ಬಹುತೇಕ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯನಗರ, ಹಾವೇರಿ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಗದಗ, ಬಳ್ಳಾರಿ, ದಾವಣಗೆರೆ, ಬಾಗಲಕೋಟೆ, ಕೊಪ್ಪಳ, ಧಾರವಾಡ, ಯಾದಗಿರಿ, ರಾಯಚೂರು, ಚಿತ್ರದುರ್ಗ, ಹಾಸನ, ತುಮಕೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭರ್ಜರಿ ಮಳೆಯಾಗಲಿದೆ.

ಮೇ 26ಕ್ಕೆ ಮುಂಗಾರು ಎಂಟ್ರಿ!

ಮಳೆಗಾಗಿ ಕಾಯುತ್ತಿರುವ ಜನರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಈ ವರ್ಷದ ನೈಋತ್ಯ ಮಾನ್ಸೂನ್ (ಮುಂಗಾರು ಮಳೆ) ಮೇ 26 ರಂದೇ ಕೇರಳಕ್ಕೆ ಪ್ರವೇಶಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳ ಭಾಗದಲ್ಲಿ ಮುಂಗಾರು ಮುನ್ನಡೆಯಲು ವಾತಾವರಣ ಫುಲ್ ಅನುಕೂಲಕರವಾಗಿದೆ. ಕೇರಳಕ್ಕೆ ಮಾನ್ಸೂನ್ ಎಂಟ್ರಿ ಕೊಡುತ್ತಿದ್ದಂತೆ ನಮ್ಮ ಕರ್ನಾಟಕದಲ್ಲೂ ಮಳೆಯ ಪ್ರಮಾಣ ಇನ್ನು ದುಪ್ಪಟ್ಟಾಗಲಿದೆ. ಸದ್ಯಕ್ಕಂತೂ ವೀಕೆಂಡ್ ಎಂಜಾಯ್ ಮಾಡೋ ಪ್ಲಾನ್‌ನಲ್ಲಿದ್ದ ಹೈಟೆಕ್ ಸಿಟಿ ಮಂದಿ ಮಳೆಯಿಂದ ಬಚಾವಾಗಲು ಅಲರ್ಟ್ ಆಗಿರಬೇಕಾಗಿದೆ.

ರಾಜ್ಯದ ಹವಾಮಾನ ವರದಿ, ಇಂದಿನ ಪ್ರಮುಖ ಸುದ್ದಿಗಳು, ಸಿನಿಮಾ ಅಪ್ಡೇಟ್ಸ್, ರಾಜಕೀಯ ಮತ್ತು ಕ್ರೀಡಾ ಲೋಕದ ಕಂಪ್ಲೀಟ್ ನ್ಯೂಸ್ ಅಪ್ಡೇಟ್ಸ್‌ಗಳನ್ನು ಅತ್ಯಂತ ವೇಗವಾಗಿ ಕನ್ನಡದಲ್ಲೇ ಪಡೆಯಲು ಇಂದೇ ನಮ್ಮ SAPTHASHWA TV ಚಾನೆಲ್ ಅನ್ನು ಫಾಲೋ ಮಾಡಿ ಮತ್ತು ವೀಕ್ಷಿಸುತ್ತಿರಿ! 

Latest News

Related News