Mar 6, 2026 Languages : ಕನ್ನಡ | English

ಬ್ರ್ಯಾಂಡ್ ಬೆಂಗಳೂರು 2.0 - ಸುರಂಗ ರಸ್ತೆ, 2ನೇ ಏರ್‌ಪೋರ್ಟ್ ಮತ್ತು ಬೃಹತ್ ಕ್ರಿಕೆಟ್ ಸ್ಟೇಡಿಯಂ!!

2026-27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದ 'ವಾಸಯೋಗ್ಯ ನಗರ'ವನ್ನಾಗಿ ಪರಿವರ್ತಿಸುವ ಗುರಿಯೊಂದಿಗೆ ಬೃಹತ್ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿದೆ.

ಆನೇಕಲ್‌ನಲ್ಲಿ ನಿರ್ಮಾಣವಾಗಲಿದೆ ದೇಶದ ಅತಿದೊಡ್ಡ ಕ್ರೀಡಾ ಗ್ರಾಮ
ಆನೇಕಲ್‌ನಲ್ಲಿ ನಿರ್ಮಾಣವಾಗಲಿದೆ ದೇಶದ ಅತಿದೊಡ್ಡ ಕ್ರೀಡಾ ಗ್ರಾಮ

1. ಟ್ರಾಫಿಕ್‌ಗೆ ಬ್ರೇಕ್: 40,000 ಕೋಟಿ ರೂ. ಮೊತ್ತದ ಟನಲ್ ರಸ್ತೆ (Tunnel Road)

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು 40 ಕಿ.ಮೀ ಉದ್ದದ ಟನಲ್ ರಸ್ತೆಯನ್ನು BOOT ಮಾದರಿಯಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ.

ಉತ್ತರ-ದಕ್ಷಿಣ ಕಾರಿಡಾರ್: ಮೊದಲ ಹಂತದಲ್ಲಿ 17,780 ಕೋಟಿ ರೂ. ವೆಚ್ಚದಲ್ಲಿ 17 ಕಿ.ಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರ್‌ಗೆ ಟೆಂಡರ್ ಕರೆಯಲಾಗಿದೆ.

ಹೆಬ್ಬಾಳ-ಮೇಖ್ರಿ ಸರ್ಕಲ್: ಈ ಮಾರ್ಗದಲ್ಲಿ ಸುರಂಗ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ 2,250 ಕೋಟಿ ರೂ. ಮೀಸಲಿಡಲಾಗಿದೆ.

2. ಮೂಲಸೌಕರ್ಯ ಮತ್ತು ಆಡಳಿತ ಸುಧಾರಣೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಪಾರದರ್ಶಕ ಆಡಳಿತಕ್ಕಾಗಿ ಈ ಹೊಸ ಪ್ರಾಧಿಕಾರ ಸ್ಥಾಪನೆ.

ಅನುದಾನ: 'ಬ್ರ್ಯಾಂಡ್ ಬೆಂಗಳೂರು' ಪರಿಕಲ್ಪನೆಗಾಗಿ 7,000 ಕೋಟಿ ರೂ.ಗಳ ಬೃಹತ್ ಅನುದಾನ ಮುಂದುವರಿಕೆ.

ವೈಟ್ ಟಾಪಿಂಗ್: ಮುಂದಿನ 3 ವರ್ಷಗಳಲ್ಲಿ 3,000 ಕೋಟಿ ರೂ. ವೆಚ್ಚದಲ್ಲಿ 450 ಕಿ.ಮೀ ರಸ್ತೆಗಳಿಗೆ ವೈಟ್ ಟಾಪಿಂಗ್.

ಜಂಕ್ಷನ್ ಅಭಿವೃದ್ಧಿ: 175 ಜಂಕ್ಷನ್‌ಗಳ ಆಧುನೀಕರಣ, 500 ಕಿ.ಮೀ ಪಾದಚಾರಿ ಮಾರ್ಗಗಳ ಮೇಲ್ದರ್ಜೆಗೇರಿಸುವಿಕೆ ಹಾಗೂ 100 ಸ್ಕೈವಾಕ್‌ಗಳ ನಿರ್ಮಾಣ.

3. ನೀರು ಪೂರೈಕೆ ಮತ್ತು ಇತರ ಯೋಜನೆಗಳು

ಕಾವೇರಿ 6ನೇ ಹಂತ: 6,939 ಕೋಟಿ ರೂ. ವೆಚ್ಚದಲ್ಲಿ 1.40 ಕೋಟಿ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ.

ಬೆಂಗಳೂರು ಬಿಸಿನೆಸ್ ಕಾರಿಡಾರ್: ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗಿನ 73 ಕಿ.ಮೀ ಕಾರಿಡಾರ್ ನಿರ್ಮಾಣ ಕಾಮಗಾರಿ ಚುರುಕುಗೊಳಿಸಲಾಗಿದೆ.

ವಿಮಾನ ನಿಲ್ದಾಣ: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಸಲಾಗುವುದು.

4. ಕ್ರೀಡೆ ಮತ್ತು ಪುನರ್ವಸತಿ

ಕ್ರಿಕೆಟ್ ಕ್ರೀಡಾಂಗಣ: ಆನೇಕಲ್ ತಾಲೂಕಿನಲ್ಲಿ 80,000 ಆಸನ ಸಾಮರ್ಥ್ಯದ ‘ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮ’ ನಿರ್ಮಾಣ.

ಚಿರತೆ ಪುನರ್ವಸತಿ: ಬನ್ನೇರುಘಟ್ಟದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಚಿರತೆಗಳಿಗಾಗಿ ವಿಶೇಷ ಪುನರ್ವಸತಿ ಕೇಂದ್ರ.

5. ರಾಜ್ಯದ ಇತರೆ ನಗರಾಭಿವೃದ್ಧಿ

ನಗರೋತ್ಥಾನ 4ನೇ ಹಂತ: ರಾಜ್ಯದಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ 3,885 ಕೋಟಿ ರೂ. ಮೀಸಲು.

ಹೊಸ ಪಾಲಿಕೆಗಳು: ರಾಯಚೂರು, ಬೀದರ್ ಮತ್ತು ಹಾಸನ ಮಹಾನಗರ ಪಾಲಿಕೆಗಳಿಗೆ ತಲಾ 200 ಕೋಟಿ ರೂ. ಅನುದಾನ ನೀಡಲಾಗುವುದು.

ಈ ಬಜೆಟ್‌ನಲ್ಲಿ ರಸ್ತೆ, ಸಂಚಾರ ಸುಧಾರಣೆ, ಕುಡಿಯುವ ನೀರು ಮತ್ತು ಕ್ರೀಡಾ ಮೂಲಸೌಕರ್ಯಗಳಿಗೆ ಆದ್ಯತೆ ನೀಡುವುದರ ಮೂಲಕ ಬೆಂಗಳೂರನ್ನು ವಿಶ್ವಮಟ್ಟದ ನಗರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ.

Latest News