ಲಗೇಜ್ ಬ್ಯಾಗ್‌ನಲ್ಲಿ 'ಮಿನಿ ಜೂ' - ಥೈಲ್ಯಾಂಡ್‌ನಿಂದ ಪ್ರಾಣಿ ತಂದ ಲೇಡಿಸ್ ಏರ್ಪೋರ್ಟ್‌ನಲ್ಲಿ ಲಾಕ್!!

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಾಡಿರೋ ಈ ಆಪರೇಷನ್ ಕೇಳಿದ್ರೆ ಅಬ್ಬಾ ಅನ್ಸುತ್ತೆ. ಫಾರಿನ್‌ನಿಂದ ಬರುವಾಗ ಯಾರಾದ್ರೂ ಬಟ್ಟೆ, ಪರ್ಫ್ಯೂಮ್ ತರ್ತಾರೆ. ಆದ್ರೆ ಈ ಇಬ್ಬರು ಮಹಿಳೆಯರು ಮಾತ್ರ ಬ್ಯಾಗ್ ತುಂಬಾ ಆಮೆ, ಹಾವುಗಳನ್ನೇ ತುಂಬಿಕೊಂಡು ಬಂದಿದ್ದಾರೆ! ಇವರ ಈ ಹೈಟೆಕ್ ಕಳ್ಳಸಾಗಾಣೆ ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಹೈಟೆಕ್ ಸ್ಮಗ್ಲಿಂಗ್ ಆಪರೇಷನ್
ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಹೈಟೆಕ್ ಸ್ಮಗ್ಲಿಂಗ್ ಆಪರೇಷನ್

ಬಂಧಿತರು ಯಾರು ಗೊತ್ತಾ?

ಈ ಕಿರಾತಕ ಕೆಲಸಕ್ಕೆ ಕೈಹಾಕಿ ಸಿಕ್ಕಿಬಿದ್ದಿರೋದು ಗುಬ್ಬಿಯ ಲಾವಣ್ಯ ಹಾಗೂ ಬೆಂಗಳೂರಿನ ದಾಸರಹಳ್ಳಿಯ ಭಾಗ್ಯ. ಇಬ್ಬರೂ ಥೈಲ್ಯಾಂಡ್‌ನಿಂದ ಬಂದ ಥಾಯ್ ಏರ್‌ವೇಸ್ (Thai Airways TG-325) ವಿಮಾನದಲ್ಲಿ ಬೆಂಗಳೂರಿಗೆ ಲ್ಯಾಂಡ್ ಆಗಿದ್ರು.

ಅಧಿಕಾರಿಗಳಿಗೆ ಡೌಟ್ ಬಂದಿದ್ದು ಎಲ್ಲಿ?

ವಿಮಾನದಿಂದ ಇಳಿದು ಈ ಮಹಿಳೆಯರು ಆರಾಮಾಗಿ ಬ್ಯಾಗ್ ಎಳೆದುಕೊಂಡು ಬರ್ತಿದ್ರು. ಆದ್ರೆ ಅವರು ಹೋಗ್ತಿದ್ದ ದಾರಿಯುದ್ದಕ್ಕೂ ಸಖತ್ ಕೆಟ್ಟ ವಾಸನೆ ಬರೋಕೆ ಶುರುವಾಯ್ತು. ಅಧಿಕಾರಿಗಳಿಗೆ ಏನೋ ಡೌಟ್ ಬಂದು ಇವರನ್ನ ಸೈಡಿಗೆ ಕರೆದು 'ಬ್ಯಾಗ್ ಓಪನ್ ಮಾಡಿ' ಅಂದಿದ್ದಾರೆ. ಆಗಲೇ ಅಸಲಿ ಕಥೆ ಬಯಲಾಗಿದ್ದು!

ಬ್ಯಾಗ್ ಒಳಗಿತ್ತು ವಿಚಿತ್ರ ಲೋಕ!

ಅಧಿಕಾರಿಗಳು ಸೂಟ್‌ಕೇಸ್ ಬಿಚ್ಚಿದ್ರೆ ಒಳಗಡೆ ಬರೀ ಪ್ರಾಣಿಗಳದ್ದೇ ಕಾರುಬಾರು! ಬಟ್ಟೆಗಳ ನಡುವೆ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಇವರು ಏನೇನು ತಂದಿದ್ರು ನೋಡಿ:

  • ಬಗೆಬಗೆಯ ಅಪರೂಪದ ಆಮೆಗಳು
  • ಬಣ್ಣ ಬಣ್ಣದ ಇಗುವಾನಗಳು (ದೊಡ್ಡ ಹಲ್ಲಿಗಳು)
  • ವಿಷಕಾರಿ ಹಾವುಗಳು ಹಾಗೂ ಪೈಥಾನ್‌ಗಳು
  • ವಿಚಿತ್ರವಾಗಿರೋ ಕಪ್ಪೆಗಳು

ಪಾಪ, ಆ ಮೂಕ ಪ್ರಾಣಿಗಳಿಗೆ ಗಾಳಿ ಕೂಡ ಆಡದ ಹಾಗೆ ಬಾಕ್ಸ್‌ಗಳಲ್ಲಿ ತುರುಕಲಾಗಿತ್ತು. ಇಲ್ಲಿನ ಮಾರ್ಕೆಟ್‌ನಲ್ಲಿ ಈ ಪ್ರಾಣಿಗಳನ್ನ ಲಕ್ಷ ಲಕ್ಷ ರೂಪಾಯಿಗೆ ಮಾರಾಟ ಮಾಡೋಕೆ ಅಂತಲೇ ಇವರು ಇಷ್ಟೆಲ್ಲಾ ರಿಸ್ಕ್ ತಗೊಂಡಿದ್ರು ಎನ್ನಲಾಗಿದೆ.

ಪೊಲೀಸರ ಅತಿಥಿಗಳಾದ ಲಾವಣ್ಯ-ಭಾಗ್ಯ

ಸದ್ಯ ಏರ್ಪೋರ್ಟ್ ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಇವರ ಹಿಂದೆ ಬೇರೆ ಯಾರಾದ್ರೂ ದೊಡ್ಡ ಪ್ಲೇಯರ್ಸ್ ಇದ್ದಾರಾ? ಇಷ್ಟೊಂದು ಪ್ರಾಣಿಗಳನ್ನ ಯಾರಿಗೆ ಸಪ್ಲೈ ಮಾಡೋಕೆ ತಂದಿದ್ರು ಅನ್ನೋದನ್ನ ಪೊಲೀಸ್ರು ಈಗ ಕೆದಕ್ತಿದ್ದಾರೆ.

ಮೂಕ ಪ್ರಾಣಿಗಳನ್ನ ಹೀಗೆ ಹಿಂಸೆ ಮಾಡಿ ಸಾಗಿಸ್ತಿರೋದನ್ನ ನೋಡಿ ಅನಿಮಲ್ ಲವರ್ಸ್ ಫುಲ್ ಗರಂ ಆಗಿದ್ದಾರೆ. ಸದ್ಯ ಆ ಎಲ್ಲಾ ವನ್ಯಜೀವಿಗಳನ್ನ ಸೇಫ್ ಆಗಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.

Latest News