ಕರ್ನಾಟಕದ ಯುವಕರಿಗೆ ಸುವರ್ಣಾವಕಾಶ - ಬ್ಯಾಂಕ್ ಆಫ್ ಬರೋಡಾದಲ್ಲಿ 5 ಸಾವಿರ ಉದ್ಯೋಗ!! ಇಲ್ಲಿದೆ ಸಂಪೂರ್ಣ ಮಾಹಿತಿ;

ಬ್ಯಾಂಕಿಂಗ್ ಕ್ಷೇತ್ರದಲ್ಲಿ (Bank Jobs) ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕು, ಒಂದು ಒಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಕಾಯುತ್ತಿರುವ ನಮ್ಮ ಕರ್ನಾಟಕದ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಸೂಪರ್ ಸಿಹಿಸುದ್ದಿ! ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ (Bank of Baroda - BOB) 2026ನೇ ಸಾಲಿನ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026;
ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026;

ಅಪ್ರೆಂಟಿಸ್ ಕಾಯ್ದೆ 1961 ರ ಅಡಿಯಲ್ಲಿ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 5,000 ಅಪ್ರೆಂಟಿಸ್ (Apprentice) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ವಿಶೇಷ ಏನೆಂದರೆ, ನಮ್ಮ ಕರ್ನಾಟಕ ರಾಜ್ಯಕ್ಕೂ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ಮೀಸಲಿಡಲಾಗಿದ್ದು, ಯಾವುದಾದರೂ ಒಂದು ಪದವಿ (Degree) ಮುಗಿಸಿರೋ ಯುವಕರು ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳದೆ ಬಳಸಿಕೊಳ್ಳಬಹುದು. ಈ ನೇಮಕಾತಿಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

BOB ನೇಮಕಾತಿ 2026: ಕಣ್ಣಾಡಿಸಬೇಕಾದ ಪ್ರಮುಖ ಹೈಲೈಟ್ಸ್

ಸಂಸ್ಥೆಯ ಹೆಸರು - ಬ್ಯಾಂಕ್ ಆಫ್ ಬರೋಡಾ (BOB)

ಹುದ್ದೆಯ ಹೆಸರು - ಅಪ್ರೆಂಟಿಸ್ (Apprentice)

ಒಟ್ಟು ಖಾಲಿ ಹುದ್ದೆಗಳು - ದೇಶಾದ್ಯಂತ 5,000 ಹುದ್ದೆಗಳು

ಕರ್ನಾಟಕದಲ್ಲಿರುವ ಹುದ್ದೆಗಳು - 483 ಹುದ್ದೆಗಳು

ಮಾಸಿಕ ಸ್ಟೈಪೆಂಡ್ (ವೇತನ) - ₹15,000/- ಪ್ರತಿ ತಿಂಗಳಿಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 08-ಜೂನ್-2026

ಕರ್ನಾಟಕಕ್ಕೆ ಎಷ್ಟು ಹುದ್ದೆಗಳಿವೆ? ರಾಜ್ಯವಾರು ವಿವರ

ಬ್ಯಾಂಕ್ ಆಫ್ ಬರೋಡಾ ದೇಶದ ವಿವಿಧ ರಾಜ್ಯಗಳಿಗೆ ಬೇರೆ ಬೇರೆ ಸಂಖ್ಯೆಯಲ್ಲಿ ಹುದ್ದೆಗಳನ್ನು ಹಂಚಿಕೆ ಮಾಡಿದೆ. ನಮ್ಮ ಕರ್ನಾಟಕ ರಾಜ್ಯಕ್ಕೆ ಒಟ್ಟು 483 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಅಂದರೆ ನಮ್ಮ ಸ್ಥಳೀಯ ಯುವಕರಿಗೆ ಇಲ್ಲಿ ಸಿಕ್ಕಾಪಟ್ಟೆ ಚಾನ್ಸಸ್ ಇದೆ ಬಾಸ್! ಇನ್ನುಳಿದ ಪ್ರಮುಖ ರಾಜ್ಯಗಳ ವಿವರ ನೋಡುವುದಾದರೆ, ಗುಜರಾತ್‌ನಲ್ಲಿ 960, ಉತ್ತರ ಪ್ರದೇಶದಲ್ಲಿ 764, ಮಹಾರಾಷ್ಟ್ರದಲ್ಲಿ 580, ರಾಜಸ್ಥಾನದಲ್ಲಿ 412 ಮತ್ತು ತಮಿಳುನಾಡಿನಲ್ಲಿ 199 ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ ಮತ್ತು ವಯೋಮಿತಿ ಏನಿರಬೇಕು?

ವಿದ್ಯಾರ್ಹತೆ - ಈ ಹುದ್ದೆಗಳಿಗೆ ಅಪ್ಲೈ ಮಾಡಬೇಕಾದರೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯ ಅಥವಾ ಬೋರ್ಡ್‌ನಿಂದ ಯಾವುದಾದರೂ ಒಂದು ಪದವಿ (Degree / Graduation) ಪಾಸ್ ಮಾಡಿರಬೇಕು.

ವಯೋಮಿತಿ (Age Limit) - 01-05-2026 ರ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗೆ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ 28 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ: ಸರ್ಕಾರದ ನಿಯಮಾವಳಿಗಳ ಪ್ರಕಾರ ರಿಸರ್ವೇಶನ್ ಇರುವ ಅಭ್ಯರ್ಥಿಗಳಿಗೆ ವಯಸ್ಸಿನಲ್ಲಿ ರಿಯಾಯಿತಿ ಇದೆ;

OBC ಅಭ್ಯರ್ಥಿಗಳಿಗೆ - 3 ವರ್ಷಗಳು

SC / ST ಅಭ್ಯರ್ಥಿಗಳಿಗೆ - 5 ವರ್ಷಗಳು

PwBD (ವಿಕಲಚೇತನ) ಅಭ್ಯರ್ಥಿಗಳಿಗೆ - 10 ರಿಂದ 15 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಎಷ್ಟಿರುತ್ತೆ?

ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅಪ್ಲಿಕೇಶನ್ ಫೀಸ್ ಪಾವತಿಸಬೇಕಾಗುತ್ತದೆ:

  • ಸಾಮಾನ್ಯ, EWS, OBC (ಪುರುಷ ಅಭ್ಯರ್ಥಿಗಳಿಗೆ): ₹800/-
  • ಸಾಮಾನ್ಯ, EWS, OBC (ಮಹಿಳಾ ಮತ್ತು ಟ್ರಾನ್ಸ್‌ಜೆಂಡರ್ ಅಭ್ಯರ್ಥಿಗಳಿಗೆ): ₹600/-
  • SC / ST / PwBD ಅಭ್ಯರ್ಥಿಗಳಿಗೆ: ₹200/-

ಸೆಲಕ್ಷನ್ ಪ್ರೊಸೆಸ್ ಹೇಗಿರುತ್ತೆ?

ನಿಮ್ಮನ್ನು ಒಟ್ಟು 3 ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

ಆನ್‌ಲೈನ್ ಪರೀಕ್ಷೆ - ಮೊದಲಿಗೆ 100 ಅಂಕಗಳಿಗೆ ಕಂಪ್ಯೂಟರ್ ಆಧಾರಿತ ಬಹುಆಯ್ಕೆ (MCQ) ಲಿಖಿತ ಪರೀಕ್ಷೆ ನಡೆಯುತ್ತದೆ.

ದಾಖಲಾತಿ ಪರಿಶೀಲನೆ - ಎಕ್ಸಾಮ್‌ನಲ್ಲಿ ಪಾಸ್ ಆದವರನ್ನು ಒರಿಜಿನಲ್ ಡಾಕ್ಯುಮೆಂಟ್ ವೆರಿಫಿಕೇಶನ್‌ಗೆ ಕರೆಯಲಾಗುತ್ತದೆ.

ಸ್ಥಳೀಯ ಭಾಷಾ ಪರೀಕ್ಷೆ - ನೀವು ಕರ್ನಾಟಕಕ್ಕೆ ಅಪ್ಲೈ ಮಾಡುವುದರಿಂದ, ಇಲ್ಲಿನ ಸ್ಥಳೀಯ ಭಾಷೆಯಾದ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಬರುತ್ತದೆಯೇ ಎಂದು ಚೆಕ್ ಮಾಡಲು ಒಂದು ಚಿಕ್ಕ ಭಾಷಾ ಪರೀಕ್ಷೆ ಇರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ನೋಟಿಫಿಕೇಶನ್ ಕಂಪ್ಲೀಟ್ ಆಗಿ ಓದಿ.

  • ಅಪ್ಲೈ ಮಾಡುವ ಮುನ್ನ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಆಕ್ಟಿವ್ ಆಗಿರಲಿ.
  • ನಿಮ್ಮ ಆಧಾರ್ ಕಾರ್ಡ್, ಮಾರ್ಕ್ಸ್ ಕಾರ್ಡ್, ಫೋಟೋ ಮತ್ತು ಸಹಿಯ ಸ್ಕ್ಯಾನ್ ಕಾಪಿಗಳನ್ನು ರೆಡಿ ಇಟ್ಟುಕೊಳ್ಳಿ.
  • ಆನ್‌ಲೈನ್ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ NATS (National Apprenticeship Training Scheme) ಸೆಲೆಕ್ಟ್ ಮಾಡಿಕೊಂಡು ಸ್ಟುಡೆಂಟ್ ಲಾಗಿನ್ ಮೂಲಕ ಲಾಗಿನ್ ಆಗಿ ಫಾರ್ಮ್ ಭರ್ತಿ ಮಾಡಿ.
  • ಕೊನೆಯಲ್ಲಿ ಫೀಸ್ ಕಟ್ಟಿ, ಅಪ್ಲಿಕೇಶನ್ ಸಬ್ಮಿಟ್ ಮಾಡಿ ಒಂದು ಪ್ರಿಂಟ್‌ಔಟ್ ತಗೆದು ಇಟ್ಟುಕೊಳ್ಳಿ.

ನೆನಪಿಡಬೇಕಾದ ದಿನಾಂಕಗಳು - ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಈಗಾಗಲೇ 19-05-2026 ರಿಂದಲೇ ಆರಂಭವಾಗಿದೆ. ಅರ್ಜಿ ಹಾಕಲು ಕೊನೆಯ ದಿನಾಂಕ 08-ಜೂನ್-2026 ಆಗಿದೆ. ಹಾಗಾಗಿ ಲಾಸ್ಟ್ ಡೇಟ್‌ವರೆಗೆ ಕಾಯದೆ ಆಸಕ್ತಿ ಇರೋರು ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಈ ಲಿಂಕ್ ಬಳಸಿ ತಕ್ಷಣವೇ ಅಪ್ಲೈ ಮಾಡಿಬಿಡಿ! 

Latest News