Dec 13, 2025 Languages : ಕನ್ನಡ | English

ಬೆಂಗಳೂರಿನಲ್ಲಿಇರೋರು ಈಗಲೇ ಈ ೬ ಸಹಾಯವಾಣಿ ಸಂಖ್ಯೆ ನೆನಪಲ್ಲಿಟ್ಟುಕೊಳ್ಳಿ!!

ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರ ರಕ್ಷಣೆಗೆ ಸಂಬಂಧಿಸಿದಂತೆ ಹೊಸ ಕ್ರಮಗಳನ್ನು ಕೈಗೊಂಡಿದ್ದಾರೆ. ಮಹಿಳೆಯರ ಸುರಕ್ಷತೆ, ಮಾದಕವಸ್ತು ನಿಯಂತ್ರಣ, ಸೈಬರ್ ಅಪರಾಧ ತಡೆ ಹಾಗೂ ಸಂಚಾರ ವ್ಯವಸ್ಥೆ ಸುಧಾರಣೆ ಕುರಿತು ಅರಿವು ಮೂಡಿಸಲು, ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಇರೋರು ಈಗಲೇ ಈ ೬ ಸಹಾಯವಾಣಿ ಸಂಖ್ಯೆ ನೆನಪಲ್ಲಿಟ್ಟುಕೊಳ್ಳಿ!! | Photo Credit: AI Image
ಬೆಂಗಳೂರಿನಲ್ಲಿಇರೋರು ಈಗಲೇ ಈ ೬ ಸಹಾಯವಾಣಿ ಸಂಖ್ಯೆ ನೆನಪಲ್ಲಿಟ್ಟುಕೊಳ್ಳಿ!! | Photo Credit: AI Image

ಮಹಿಳಾ ಸುರಕ್ಷತಾ ಕ್ರಮಗಳು

ಮಹಿಳೆಯರ ಸುರಕ್ಷತೆಯ ಭಾಗವಾಗಿ 1090 ಮಹಿಳಾ ಸಹಾಯವಾಣಿ, 112 ತುರ್ತು ಸಹಾಯವಾಣಿ, ಹೊಯ್ಸಳ ವಾಹನಗಳ ಗಸ್ತು, ಸೇಫ್ಟಿ ಐಲ್ಯಾಂಡ್‌ಗಳು, KSP ಆಪ್ ಹಾಗೂ ಚನ್ನಮ್ಮ ಪಡೆಗಳ ಮೂಲಕ ತ್ವರಿತ ನೆರವು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಮಹಿಳೆಯರು ಯಾವುದೇ ಸಂದರ್ಭದಲ್ಲೂ ಸುರಕ್ಷಿತವಾಗಿ ಸಂಪರ್ಕ ಸಾಧಿಸಬಹುದು.

ಮಾದಕವಸ್ತು ನಿಯಂತ್ರಣ

ಮಾದಕವಸ್ತುಗಳ ವಿರುದ್ಧ ಸಮರವನ್ನು ಮುಂದುವರೆಸಿರುವ ಬೆಂಗಳೂರು ಪೊಲೀಸರು, Drug Free Karnataka ಆಪ್ ಹಾಗೂ 1933 ಟೋಲ್ ಫ್ರೀ ನಂಬರ್ ಮೂಲಕ ದೂರು ಸಲ್ಲಿಸಲು ಅವಕಾಶ ನೀಡಿದ್ದಾರೆ. ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಮಾದಕವಸ್ತು ನಿಯಂತ್ರಣ ಸಮಿತಿಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಸಂಚಾರ ನಿರ್ವಹಣೆ 

ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಹಾಗೂ ಅಪಘಾತ ತಡೆಗಾಗಿ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ. Astram ಆಪ್ ಹಾಗೂ ಸಂಚಾರ ಪೊಲೀಸ್‌ಗಳ ಸಾಮಾಜಿಕ ಜಾಲತಾಣಗಳ ಮೂಲಕ ನಿಯಮ ಉಲ್ಲಂಘನೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. “ಗೋಲ್ಡನ್ ಅವರ್” ನಿಯಮ ಪಾಲನೆಗೆ ವಿಶೇಷ ಒತ್ತು ನೀಡಲಾಗಿದೆ.

ಸೈಬರ್ ಅಪರಾಧ ತಡೆ

ಸೈಬರ್ ಕ್ರೈಂ ಘಟಕವು ಆನ್‌ಲೈನ್ ವಂಚನೆ, ಹಣಕಾಸಿನ ಅವ್ಯವಹಾರ ಹಾಗೂ ಡಿಜಿಟಲ್ ಅಪರಾಧಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುತ್ತಿದೆ. 1930 ಸೈಬರ್ ಸಹಾಯವಾಣಿ, ಆನ್‌ಲೈನ್ ದೂರು ಪೋರ್ಟ್‌ಲ್‌ಗಳು ಹಾಗೂ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳ ಮೂಲಕ ಸಾರ್ವಜನಿಕರು ದೂರು ಸಲ್ಲಿಸಬಹುದು. ಮಹಿಳೆ-ಮಕ್ಕಳ ಮೇಲಿನ ಸೈಬರ್ ಕಿರುಕುಳ ತಡೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಾರ್ವಜನಿಕರಿಗೆ ಸಹಾಯವಾಣಿ ಸಂಖ್ಯೆಗಳು

  • 112: ತುರ್ತು ಸಹಾಯವಾಣಿ
  • 1930: ಸೈಬರ್ ವಂಚನೆ ಸಹಾಯವಾಣಿ
  • 1933: ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ (MANAS)
  • 1908: ಮಾದಕವಸ್ತು ನಿಯಂತ್ರಣ ಸಹಾಯವಾಣಿ
  • 14490: ರಾಷ್ಟ್ರೀಯ ಮಹಿಳಾ ಸಹಾಯವಾಣಿ
  • 1098: ಮಕ್ಕಳ ಸಹಾಯವಾಣಿ

ಬೆಂಗಳೂರು ನಗರ ಪೊಲೀಸರು ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ಬದ್ಧರಾಗಿದ್ದಾರೆ. ನಾಗರಿಕರು ಈ ವ್ಯವಸ್ಥೆಗಳನ್ನು ಸದುಪಯೋಗಪಡಿಸಿಕೊಂಡು ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಸಹಕರಿಸಬೇಕೆಂದು ಪೊಲೀಸರು ಕೋರಿದ್ದಾರೆ.

Latest News