ಜಾಗತಿಕ ರಾಜಕಾರಣದಲ್ಲಿ ಒಂದು ದೊಡ್ಡ ಬದಲಾವಣೆ ಗಾಳಿ ಬೀಸುತ್ತಿದೆ. ಇಷ್ಟು ದಿನ ಹಾವು-ಮುಂಗೂಸಿಯಂತಿದ್ದ ಅಮೆರಿಕ ಮತ್ತು ಇರಾನ್ ಈಗ ಒಂದೇ ಟೇಬಲ್ ಮೇಲೆ ಕುಳಿತು ಮಾತುಕತೆ ನಡೆಸಲು ಮುಂದಾಗಿವೆ. ವಿಶೇಷ ಅಂದ್ರೆ, ಈ ಶಾಂತಿ ಮಾತುಕತೆ ಅಧಿಕೃತವಾಗಿ ಶುರುವಾಗುವ ಮೊದಲೇ ಇರಾನ್ ದೇಶಕ್ಕೆ ಒಂದು ದೊಡ್ಡ ಗೆಲುವು ಸಿಕ್ಕಿದೆ. ಹೌದು, ಕತಾರ್ ಸೇರಿದಂತೆ ವಿದೇಶಿ ಬ್ಯಾಂಕುಗಳಲ್ಲಿ ಫ್ರೀಜ್ ಆಗಿದ್ದ ಇರಾನ್‌ನ ಸ್ವತ್ತುಗಳನ್ನು (ಆಸ್ತಿ) ಬಿಡುಗಡೆ ಮಾಡಲು ಅಮೆರಿಕ ಒಪ್ಪಿಕೊಂಡಿದೆ.
ಅಮೆರಿಕ ಹೇರಿದ್ದ ನಿರ್ಬಂಧಗಳಿಂದಾಗಿ ಇರಾನ್‌ನ ಕೋಟ್ಯಂತರ ರೂಪಾಯಿ ಹಣ ವಿದೇಶಿ ಬ್ಯಾಂಕುಗಳಲ್ಲಿ ಲಾಕ್ ಆಗಿತ್ತು. ಈಗ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಉಭಯ ದೇಶಗಳ ಸಭೆಯ ಹಿನ್ನೆಲೆಯಲ್ಲಿ, ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಮೆರಿಕ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಬಾಯಿ ಬಿಟ್ಟಿಲ್ಲವಾದರೂ, ಇರಾನ್ ಮಾತ್ರ ಇದನ್ನು ಅಮೆರಿಕದ ಕಡೆಯಿಂದ ಬಂದ ಅತ್ಯಂತ 'ಸಕಾರಾತ್ಮಕ ಮತ್ತು ಗಂಭೀರ ಹೆಜ್ಜೆ' ಎಂದು ಬಣ್ಣಿಸಿದೆ.
ಹಣ ಬಿಡುಗಡೆಯ ಹಿಂದೆ ಒಂದು ಷರತ್ತು ಇದೆ!
ಅಮೆರಿಕ ಸುಮ್ಮ ಸುಮ್ಮನೆ ಹಣ ಬಿಡುಗಡೆ ಮಾಡುತ್ತಿಲ್ಲ. ಇದರ ಹಿಂದೆ ಒಂದು ಪ್ರಮುಖ ಕಾರಣವಿದೆ. 'ಹಾರ್ಮುಜ್ ಜಲಸಂಧಿ' (Strait of Hormuz) ಮೂಲಕ ಸರಕು ಸಾಗಣೆ ಮಾಡುವ ಹಡಗುಗಳಿಗೆ ಯಾವುದೇ ತೊಂದರೆಯಾಗದಂತೆ ಇರಾನ್ ನೋಡಿಕೊಳ್ಳಬೇಕು ಎಂಬುದು ಅಮೆರಿಕದ ಮುಖ್ಯ ಉದ್ದೇಶ. ವಿಶ್ವದ ತೈಲ ಸಾಗಣೆಯಲ್ಲಿ ಈ ಜಲಸಂಧಿ ಬಹಳ ಮುಖ್ಯವಾಗಿದ್ದು, ಇಲ್ಲಿ ಇರಾನ್‌ನ ಪ್ರಭಾವ ಹೆಚ್ಚಿದೆ. ಹೀಗಾಗಿ, ಶಾಂತಿಯುತ ಸಂಚಾರಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.
ಇರಾನ್-ಅಮೆರಿಕ ನಡುವೆ ಶಾಂತಿ ಮಂತ್ರ: ಶನಿವಾರ ಇಸ್ಲಾಮಾಬಾದ್‌ನಲ್ಲಿ ಹೈ-ವೋಲ್ಟೇಜ್ ಮೀಟಿಂಗ್!
ಪಶ್ಚಿಮ ಏಷ್ಯಾದಲ್ಲಿ ಸದಾ ನಡೆಯುತ್ತಿದ್ದ ಕಿತ್ತಾಟಗಳಿಗೆ ಈಗ ಫುಲ್ ಸ್ಟಾಪ್ ಬೀಳುವ ಲಕ್ಷಣಗಳು ಕಾಣಿಸುತ್ತಿವೆ. ಇಷ್ಟು ದಿನ ಒಬ್ಬರನ್ನೊಬ್ಬರು ಕಂಡರೆ ಕೆಂಡವಾಗುತ್ತಿದ್ದ ಅಮೆರಿಕ ಮತ್ತು ಇರಾನ್, ಈಗ ಮನಸ್ತಾಪ ಮರೆತು ಮಾತುಕತೆಗೆ ರೆಡಿಯಾಗಿವೆ. ಇದರ ಭಾಗವಾಗಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಶನಿವಾರ ಒಂದು ಮಹತ್ವದ ಮೀಟಿಂಗ್ ನಡೆಯಲಿದೆ.
ಕದನ ವಿರಾಮವೇ ಮೊದಲ ಮೆಟ್ಟಿಲು
ಈಗಾಗಲೇ ಏಪ್ರಿಲ್ 7 ರಿಂದ ಎರಡು ವಾರಗಳ ಕಾಲ 'ಯುದ್ಧ ಬೇಡ' ಎಂದು ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಈ ಗ್ಯಾಪ್‌ನಲ್ಲೇ ಶಾಂತಿ ಮಾತುಕತೆ ನಡೆಸಿ, ಕಾಯಂ ಆಗಿ ಯುದ್ಧದ ಕಾರ್ಮೋಡಗಳನ್ನು ಚದುರಿಸುವುದು ಇಸ್ಲಾಮಾಬಾದ್ ಸಭೆಯ ಮೇನ್ ಪ್ಲಾನ್ ಆಗಿದೆ.
ಇರಾನ್‌ಗೆ ಮೊದಲೇ ಸಿಕ್ತು ಸಿಹಿ ಸುದ್ದಿ!
ಮಾತುಕತೆ ಶುರುವಾಗುವ ಮೊದಲೇ ಇರಾನ್‌ಗೆ ಒಂದು ದೊಡ್ಡ ಗೆಲುವು ಸಿಕ್ಕಿದೆ. ಅಮೆರಿಕ ಫ್ರೀಜ್ ಮಾಡಿದ್ದ ಇರಾನ್‌ನ ಹಣವನ್ನು ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಈ ಒಂದು ಪಾಸಿಟಿವ್ ನಡೆ ಮಾತುಕತೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ.
ಇಡೀ ಜಗತ್ತಿನ ಕಣ್ಣು ಈ ಸಭೆಯ ಮೇಲೆ
ಒಂದು ವೇಳೆ ಶನಿವಾರದ ಈ 'ಹೈ ವೋಲ್ಟೇಜ್' ಮೀಟಿಂಗ್ ಯಶಸ್ವಿಯಾದರೆ, ಪಶ್ಚಿಮ ಏಷ್ಯಾದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಲಿದೆ. ಇಡೀ ಜಗತ್ತು ಈ ಎರಡು ರಾಷ್ಟ್ರಗಳ ಮುಂದಿನ ನಿರ್ಧಾರ ಏನಾಗಿರಬಹುದು ಎಂದು ಕುತೂಹಲದಿಂದ ಕಾಯುತ್ತಿದೆ.