ರಷ್ಯಾ ಮತ್ತು ಬ್ರಿಟನ್ ನಡುವಿನ ಕೋಲ್ಡ್ ವಾರ್ ಈಗ 30,000 ಅಡಿ ಎತ್ತರದ ಆಕಾಶದಲ್ಲಿ ಸಖತ್ ಡೆಂಜರಸ್ ಟರ್ನ್ ತಗೊಂಡಿದೆ! ಹೌದು, ಯುದ್ಧ ಭೂಮಿಯಲ್ಲಿ ಒಂದು ಗುಂಡು ಕೂಡ ಹಾರಿಸದೆ, ರಷ್ಯಾದ ಸೇನೆ ಬ್ರಿಟನ್‌ಗೆ ಒಂದು ಖಡಕ್ ಮತ್ತು ನಡುಕ ಹುಟ್ಟಿಸುವಂತಹ ಮೆಸೇಜ್ ಕೊಟ್ಟಿದೆ. ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ (Defence Secretary) ಜಾನ್ ಹಿಲಿ ಪ್ರಯಾಣಿಸುತ್ತಿದ್ದ ವಿಮಾನದ ಮೇಲೆಯೇ ರಷ್ಯಾ ಭೀಕರ ‘ಎಲೆಕ್ಟ್ರಾನಿಕ್ ವಾರ್ ಫೇರ್ ಅಟ್ಯಾಕ್’ (Electronic Warfare Attack) ಮಾಡಿದೆ ಎನ್ನಲಾಗಿ ಕೇಳಿಬಂದಿದೆ.
ರಷ್ಯಾದ ಗಡಿಯ ಹತ್ತಿರ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಹಾರಾಡುತ್ತಿದ್ದ ಬ್ರಿಟನ್ ಮಿಲಿಟರಿ ವಿಮಾನದ ಜಿಪಿಎಸ್ (GPS) ಮತ್ತು ಇಂಟರ್ನೆಟ್ ಸಿಗ್ನಲ್ ಅನ್ನು ರಷ್ಯಾ ಬರೋಬ್ಬರಿ 3 ಗಂಟೆಗಳ ಕಾಲ ಕಂಪ್ಲೀಟ್ ಆಗಿ ಜಾಮ್ ಮಾಡಿದೆ. ಈ ಹೈ-ಡ್ರಾಮಾ ಮತ್ತು ಆಕಾಶದಲ್ಲಿ ನಡೆದ ಆ ಇಂಟ್ರೆಸ್ಟಿಂಗ್ ಘಟನೆಯ ಫುಲ್ ರಿಪೋರ್ಟ್ ಇಲ್ಲಿದೆ ನೋಡಿ.
30,000 ಅಡಿ ಎತ್ತರದಲ್ಲಿ ಏನಾಯ್ತು?
ಬ್ರಿಟನ್‌ನ ಡಿಫೆನ್ಸ್ ಸೆಕ್ರೆಟರಿ ಜಾನ್ ಹಿಲಿ ಅವರು ಎಸ್ಟೋನಿಯಾದಲ್ಲಿ ನ್ಯಾಟೋ (NATO) ಪಡೆಯ ಪೂರ್ವ ವಲಯದಲ್ಲಿ ನಿಯೋಜನೆಗೊಂಡಿರುವ ಬ್ರಿಟನ್ ಸೈನಿಕರನ್ನು ಭೇಟಿ ಮಾಡಿ, ವಾಪಸ್ ಯುನೈಟೆಡ್ ಕಿಂಗ್‌ಡಮ್‌ಗೆ (UK) ರಾಯಲ್ ಏರ್ ಫೋರ್ಸ್‌ನ (RAF) ವಿಐಪಿ ಮಿಲಿಟರಿ ಜೆಟ್‌ನಲ್ಲಿ ಮರಳುತ್ತಿದ್ದರು. ಅವರ ಜೊತೆ ಅಧಿಕಾರಿಗಳು ಮತ್ತು ಪತ್ರಕರ್ತರ ದೊಡ್ಡ ತಂಡವೇ ಇತ್ತು.
ಅವರು ಪ್ರಯಾಣಿಸುತ್ತಿದ್ದ ‘ಡಸ್ಸಾಲ್ಟ್ ಫಾಲ್ಕನ್ 900LX’ ವಿಮಾನ ರಷ್ಯಾ ಗಡಿಯ ಹತ್ತಿರ ಬರುತ್ತಿದ್ದಂತೆ, ಹೈಟೆಕ್ ಎಲೆಕ್ಟ್ರಾನಿಕ್ ದಾಳಿ ನಡೆದಿದೆ ಎನ್ನಲಾಗಿ ಕೇಳಿಬಂದಿದೆ.. ಇಡೀ ವಿಮಾನದ ಸ್ಯಾಟಲೈಟ್ ಕನೆಕ್ಟಿವಿಟಿ ಕಟ್ ಆಗಿ, ಪ್ರೈಮರಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಸಂಪೂರ್ಣ ಡೆಡ್ ಆಯ್ತು. ವಿಮಾನದೊಳಗಿನ ಕಮ್ಯುನಿಕೇಶನ್ ನೆಟ್‌ವರ್ಕ್ ಕೂಡ ಕಟ್ ಆಗಿದ್ದರಿಂದ, ರಕ್ಷಣಾ ಕಾರ್ಯದರ್ಶಿ ಮತ್ತು ಜರ್ನಲಿಸ್ಟ್‌ಗಳು ಬರೋಬ್ಬರಿ ಮೂರು ಗಂಟೆಗಳ ಕಾಲ ಇಂಟರ್ನೆಟ್ ಅಥವಾ ಫೋನ್ ಸಂಪರ್ಕವಿಲ್ಲದೆ ಆಕಾಶದಲ್ಲೇ ಸಿಕ್ಕಿಹಾಕಿಕೊಂಡಿದ್ದರು!
ಪೈಲಟ್‌ಗಳ ಸಮಯಪ್ರಜ್ಞೆಯಿಂದ ಬದುಕುಳಿದ ವಿಐಪಿಗಳು!
ಆಕಾಶದ ಮಧ್ಯದಲ್ಲಿ ಇಷ್ಟೊಂದು ದೊಡ್ಡ ಎಮರ್ಜೆನ್ಸಿ ಎದುರಾದರೂ, ಬ್ರಿಟನ್ ರಾಯಲ್ ಏರ್ ಫೋರ್ಸ್‌ನ ಜಾಣ ಪೈಲಟ್‌ಗಳು ಧೃತಿಗೆಡಲಿಲ್ಲ. ಜಿಪಿಎಸ್ ಇಲ್ಲದೆ ವಿಮಾನ ಎಲ್ಲಿದೆ ಅಂತ ತಿಳಿಯುವುದೇ ಕಷ್ಟವಾಗಿದ್ದ ಆ ಸಂದರ್ಭದಲ್ಲಿ, ಪೈಲಟ್‌ಗಳು ತಮ್ಮ ಹಳೇ ಶೈಲಿಯ ‘ಸಾಂಪ್ರದಾಯಿಕ ಬ್ಯಾಕಪ್ ನೆವಿಗೇಷನ್ ಸಿಸ್ಟಮ್’ (Manual Backup Navigation) ಬಳಸಿ, ಅದ್ಭುತವಾಗಿ ವಿಮಾನವನ್ನು ಹ್ಯಾಂಡಲ್ ಮಾಡಿದರು. ಕೊನೆಗೂ ಎಲ್ಲರನ್ನೂ ಸುರಕ್ಷಿತವಾಗಿ ಬ್ರಿಟನ್ ಭೂಮಿಗೆ ತಂದು ತಲುಪಿಸುವಲ್ಲಿ ಪೈಲಟ್‌ಗಳು ಸಕ್ಸಸ್ ಆದರು.
ಟಾರ್ಗೆಟ್ ಬ್ರಿಟನ್ ಮಂತ್ರಿಯೇ ಆಗಿದ್ದರೇ?
ಸದ್ಯ ಬ್ರಿಟನ್ ರಕ್ಷಣಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಭಾರಿ ತನಿಖೆ ನಡೆಸುತ್ತಿದ್ದಾರೆ. ರಷ್ಯಾ ಬೇಕಂತಲೇ ಬ್ರಿಟನ್ ಮಂತ್ರಿಯ ವಿಮಾನವನ್ನೇ ಟ್ರ್ಯಾಕ್ ಮಾಡಿ ಈ ದಾಳಿ ಮಾಡಿದೆಯೇ? ಅಥವಾ ಬಾಲ್ಟಿಕ್ ವಲಯದಲ್ಲಿರುವ ರಷ್ಯಾ ಮಿಲಿಟರಿ ನೆಲೆಗಳು ಸೃಷ್ಟಿಸಿರುವ ಸಾಮಾನ್ಯ ‘ಎಲೆಕ್ಟ್ರಾನಿಕ್ ಜಾಮಿಂಗ್ ಜೋನ್’ ಒಳಗೆ ಈ ವಿಮಾನ ಸಿಲುಕಿಕೊಂಡಿತ್ತೇ? ಅನ್ನೋದರ ತನಿಖೆ ನಡೆಯುತ್ತಿದೆ.
ವಿಶೇಷ ಅಂದ್ರೆ, ಬ್ರಿಟನ್ ಡಿಫೆನ್ಸ್ ಸೆಕ್ರೆಟರಿ ವಿಮಾನಕ್ಕೆ ರಷ್ಯಾ ಈ ತರಹ ಮಾಡಿರೋದು ಇದೇ ಮೊದಲಲ್ಲ! 2024 ರ ಮಾರ್ಚ್ ತಿಂಗಳಲ್ಲೂ ಅಂದಿನ ಬ್ರಿಟನ್ ರಕ್ಷಣಾ ಕಾರ್ಯದರ್ಶಿಯ ವಿಮಾನವನ್ನು ರಷ್ಯಾ 30 ನಿಮಿಷಗಳ ಕಾಲ ಜಿಪಿಎಸ್ ಬ್ಲ್ಯಾಕ್‌ಔಟ್ ಮಾಡಿ ಕಾಡಿತ್ತು. ಆದರೆ ಈ ಬಾರಿಯ 3 ಗಂಟೆಗಳ ದಾಳಿ ಮಾತ್ರ ಇತಿಹಾಸದಲ್ಲೇ ಅತ್ಯಂತ ಲಾಂಗ್ ಮತ್ತು ಅಗ್ರೆಸ್ಸಿವ್ ಆಗಿತ್ತು.
ಬ್ರಿಟನ್ ಯಾರಿಗೂ ಹೆದರಲ್ಲ: ಜಾನ್ ಹಿಲಿ ವಾರ್ನಿಂಗ್!
ಈ ಭೀಕರ ಆಕಾಶ ದಾಳಿಯಿಂದ ಪಾರಾಗಿ ಸುರಕ್ಷಿತವಾಗಿ ಲ್ಯಾಂಡ್ ಆದ ಬ್ರಿಟನ್ ರಕ್ಷಣಾ ಕಾರ್ಯದರ್ಶಿ ಜಾನ್ ಹಿಲಿ ರಷ್ಯಾಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ. "ಇಂತಹ ಕಠಿಣ ಪರಿಸ್ಥಿತಿಯಲ್ಲೂ ಅದ್ಭುತ ಧೈರ್ಯ ಮತ್ತು ವೃತ್ತಿಪರತೆ ತೋರಿ ನಮ್ಮನ್ನು ರಕ್ಷಿಸಿದ ಆರ್‌ಎಎಫ್ (RAF) ಕ್ರೂಗೆ ನಾನು ಸಲ್ಯೂಟ್ ಹೊಡೆಯುತ್ತೇನೆ. ರಷ್ಯಾ ಇಂತಹ ಚೀಪ್ ಟ್ರಿಕ್ಸ್‌ಗಳ ಮೂಲಕ ನಮ್ಮನ್ನು ಹೆದರಿಸಬಹುದು ಅಂದುಕೊಂಡಿದ್ದರೆ ಅದು ತಪ್ಪು. ನ್ಯಾಟೋ ಒಕ್ಕೂಟ ಮತ್ತು ನಮ್ಮ ದೇಶದ ಹಿತಾಸಕ್ತಿ ಕಾಯುವ ಬ್ರಿಟನ್‌ನ ಸಂಕಲ್ಪವನ್ನು ರಷ್ಯಾದ ಈ ಯಾವುದೇ ಹರಕತ್ತುಗಳು ಒಂದು ರತಿಯಷ್ಟೂ ಕಮ್ಮಿ ಮಾಡಲು ಸಾಧ್ಯವಿಲ್ಲ" ಎಂದು ಗುಡುಗಿದ್ದಾರೆ.
ಇತ್ತೀಚಿನ ವಾರಗಳಲ್ಲಿ ರಷ್ಯಾ ಆಕಾಶದಲ್ಲಿ ಇಂತಹ ಹಲವು ಸಾಹಸಗಳಿಗೆ ಕೈಹಾಕುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕಪ್ಪು ಸಮುದ್ರದ (Black Sea) ಮೇಲೆ ಹಾರುತ್ತಿದ್ದ ಬ್ರಿಟನ್‌ನ ಗೂಢಚಾರ ವಿಮಾನದ ತೀರಾ ಹತ್ತಿರ ರಷ್ಯಾದ ಎಸ್‌ಯು-35 (Su-35) ಫೈಟರ್ ಜೆಟ್ ಬಂದಿತ್ತು. ಇದರಿಂದ ಬ್ರಿಟನ್ ವಿಮಾನದ ಆಟೋಮ್ಯಾಟಿಕ್ ಎಮರ್ಜೆನ್ಸಿ ಸಿಸ್ಟಮ್ ಆನ್ ಆಗಿ, ಆಟೋಪೈಲಟ್ ಆಫ್ ಆಗುವ ಪರಿಸ್ಥಿತಿ ಬಂದಿತ್ತು. ಒಟ್ಟಿನಲ್ಲಿ ಉಕ್ರೇನ್ ಯುದ್ಧದ ಬೆನ್ನಲ್ಲೇ ಈಗ ರಷ್ಯಾ ಮತ್ತು ಬ್ರಿಟನ್ ನಡುವಿನ ಆಕಾಶ ಯುದ್ಧ ಜಗತ್ತಿನಲ್ಲಿ ಹೊಸ ಆತಂಕ ಸೃಷ್ಟಿಸಿದೆ!