Mar 28, 2026 Languages : ಕನ್ನಡ | English

ಮೋದಿ-ಟ್ರಂಪ್ ಫೋನ್ ಕರೆಯಲ್ಲಿ ಎಲಾನ್ ಮಸ್ಕ್ ಪ್ರತ್ಯಕ್ಷ - ಜಾಗತಿಕ ರಾಜಕೀಯದಲ್ಲಿ ಶುರುವಾಯ್ತು ಹೊಸ ಸಂಚಲನ!!

ಸದ್ಯಕ್ಕೆ ಇಡೀ ಪ್ರಪಂಚದ ಕಣ್ಣು ಇರೋದು ಮಧ್ಯಪ್ರಾಚ್ಯದ (West Asia) ಯುದ್ಧದ ಮೇಲೆ. ಈ ಬೆನ್ನಲ್ಲೇ ಈಗ ಒಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್ ಮಾಡಿ ಯುದ್ಧದ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೆ ಇಲ್ಲಿ ಅಸಲಿ ಟ್ವಿಸ್ಟ್ ಇರೋದು ಬೇರೆಲ್ಲೋ - ಈ ಇಬ್ಬರು ಮಹಾನ್ ನಾಯಕರ ಪರ್ಸನಲ್ ಮಾತುಕತೆಯ ನಡುವೆ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಕೂಡ ಹಾಜರಿದ್ದರಂತೆ!

ಜಾಗತಿಕ ನಾಯಕರ ನಿರ್ಧಾರಗಳನ್ನ ಇನ್ನು ಮುಂದೆ ಟೆಕ್ ದಿಗ್ಗಜರೇ ಡಿಸೈಡ್ ಮಾಡ್ತಾರಾ
ಜಾಗತಿಕ ನಾಯಕರ ನಿರ್ಧಾರಗಳನ್ನ ಇನ್ನು ಮುಂದೆ ಟೆಕ್ ದಿಗ್ಗಜರೇ ಡಿಸೈಡ್ ಮಾಡ್ತಾರಾ

ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರೋ ಈ ವಿಷಯ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 28ರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಜೋರಾದ ಮೇಲೆ ಮೋದಿ ಮತ್ತು ಟ್ರಂಪ್ ನಡುವೆ ನಡೆದ ಮೊದಲ ಅಧಿಕೃತ ಮಾತುಕತೆ ಇದಾಗಿದೆ.

ಸಾಮಾನ್ಯವಾಗಿ ಇಬ್ಬರು ದೇಶದ ಮುಖ್ಯಸ್ಥರು ಫೋನ್‌ನಲ್ಲಿ ಮಾತನಾಡೋವಾಗ ಅದು ತುಂಬಾ ಸೀಕ್ರೆಟ್ ಆಗಿರುತ್ತೆ. ಅಲ್ಲಿ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಜಾಗ ಇರೋದಿಲ್ಲ. ಆದರೆ ಈ ಬಾರಿ ಟ್ರಂಪ್ ಜೊತೆ ಎಲಾನ್ ಮಸ್ಕ್ ಕೂಡ ಇದ್ದದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಮಸ್ಕ್ ಕೇವಲ ಅಲ್ಲಿ ಕೂತು ಮಾತು ಕೇಳಿಸಿಕೊಂಡರಾ ಅಥವಾ ಅವರೂ ಏನಾದರೂ ಮಾತನಾಡಿದರಾ ಅನ್ನೋದು ಇನ್ನು ಸಸ್ಪೆನ್ಸ್ ಆಗಿದೆ.

ಕೆಲವರು ಇದು 'ಪ್ರೊಟೊಕಾಲ್' ಉಲ್ಲಂಘನೆ ಅಂತೆಲ್ಲಾ ಹೇಳ್ತಿದ್ದಾರೆ. ಅಂದ್ರೆ, ದೇಶಗಳ ನಡುವಿನ ಸೂಕ್ಷ್ಮ ವಿಚಾರಗಳಲ್ಲಿ ಈ ರೀತಿ ಬ್ಯುಸಿನೆಸ್ ಮ್ಯಾನ್‌ಗಳು ಇರೋದು ಎಷ್ಟು ಸರಿ? ಅನ್ನೋದು ಈಗಿನ ಪ್ರಶ್ನೆ.

  • ಎಲಾನ್ ಮಸ್ಕ್ ಅಂದ್ರೆ ಬರೀ ಟೆಸ್ಲಾ ಅಥವಾ ಸ್ಪೇಸ್‌ಎಕ್ಸ್ ಮಾಲೀಕ ಅಷ್ಟೇ ಅಲ್ಲ, ಜಾಗತಿಕ ರಾಜಕೀಯದಲ್ಲೂ ಅವರ ಕೈವಾಡ ದೊಡ್ಡದಿದೆ.
  • ಹಿಂದೆ ಉಕ್ರೇನ್ ಯುದ್ಧ ನಡೆದಾಗ ತಮ್ಮ 'ಸ್ಟಾರ್‌ಲಿಂಕ್' ಇಂಟರ್ನೆಟ್ ಮೂಲಕ ದೊಡ್ಡ ಮಟ್ಟದ ಸಹಾಯ ಮಾಡಿದ್ದರು.

ಈಗ ಮಧ್ಯಪ್ರಾಚ್ಯದ ಗಲಾಟೆಯಲ್ಲೂ ಅವರ ಹೆಸರು ಕೇಳಿಬರ್ತಿರೋದು ನೋಡಿದ್ರೆ, ಟೆಕ್ನಾಲಜಿ ದಿಗ್ಗಜರ ಪ್ರಭಾವ ರಾಜಕೀಯದ ಮೇಲೆ ಎಷ್ಟಿದೆ ಅನ್ನೋದು ಅರ್ಥವಾಗುತ್ತೆ.

ವೈಟ್ ಹೌಸ್‌ನ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಮಾತುಕತೆಯನ್ನ "ಫಲಪ್ರದ" ಅಂತ ಕರೆದಿದ್ದಾರೆ. ಮೋದಿ ಮತ್ತು ಟ್ರಂಪ್ ನಡುವೆ ಒಳ್ಳೆ ಫ್ರೆಂಡ್‌ಶಿಪ್ ಇದೆ, ಹಾಗಾಗಿ ಈ ಸಂಭಾಷಣೆ ತುಂಬಾ ಪಾಸಿಟಿವ್ ಆಗಿತ್ತು ಅಂತ ಹೇಳಿದ್ದಾರೆ. ಆದರೆ ಎಲಾನ್ ಮಸ್ಕ್ ಅಲ್ಲಿ ಇದ್ದ ವಿಷಯದ ಬಗ್ಗೆ ಮಾತ್ರ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ!

ಮತ್ತೊಂದು ಕಡೆ, ಕಳೆದ ವರ್ಷ ಟ್ರಂಪ್ ಮತ್ತು ಮಸ್ಕ್ ನಡುವೆ ಸ್ವಲ್ಪ ಕಿತ್ತಾಟ ನಡೆದಿತ್ತು. ಆದರೆ ಈಗ ಇವರಿಬ್ಬರು ಫೋನ್ ಕಾಲ್‌ನಲ್ಲಿ ಒಟ್ಟಿಗೆ ಇರೋದನ್ನ ನೋಡಿದ್ರೆ, ಅವರಿಬ್ಬರ ದೋಸ್ತಿ ಮತ್ತೆ ಕುದುರಿದೆ ಅಂತ ಕಾಣುತ್ತೆ.

ಮುಂದಿನ ದಿನಗಳಲ್ಲಿ ಜಾಗತಿಕ ರಾಜಕೀಯ ನಿರ್ಧಾರಗಳನ್ನ ಬರೀ ನಾಯಕರು ಮಾತ್ರವಲ್ಲ, ಈ ತರಹದ ಟೆಕ್ ದೈತ್ಯರು ಕೂಡ ಡಿಸೈಡ್ ಮಾಡ್ತಾರಾ ಅನ್ನೋ ಕುತೂಹಲ ಶುರುವಾಗಿದೆ. ನಿಮ್ಮ ಪ್ರಕಾರ ಇಬ್ಬರು ದೇಶದ ನಾಯಕರ ನಡುವೆ ಮಸ್ಕ್ ಇರೋದು ಸರಿನಾ?