ಪಾಕಿಸ್ತಾನದ ನೆಲದಲ್ಲಿ ಅಡಗಿರೋ ಉಗ್ರರಿಗೆ ಈಗ ನಿದ್ದೆ ಬರ್ತಿಲ್ಲ. ಯಾಕಂದ್ರೆ, ಅಲ್ಲಿ ಒಬ್ಬೊಬ್ಬನೇ ಉಗ್ರ ನಿಗೂಢವಾಗಿ ಹತರಾಗ್ತಿದ್ದಾನೆ. ಈಗ ಈ ಲಿಸ್ಟ್‌ಗೆ ಹೊಸ ಸೇರ್ಪಡೆ ಶೇಖ್ ಯೂಸುಫ್ ಅಫ್ರಿದಿ. ಲಷ್ಕರ್-ಎ-ತೊಯ್ಬಾದ ಪ್ರಮುಖ ಕಮಾಂಡರ್ ಆಗಿದ್ದ ಈತನನ್ನ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಅಫ್ರಿದಿ ಕಥೆ ಮುಗಿದಿದ್ದು ಹೇಗೆ?
ವರದಿಗಳ ಪ್ರಕಾರ, ಅಫ್ರಿದಿ ಮೇಲೆ ಅಟ್ಯಾಕ್ ಮಾಡಿದ ಶೂಟರ್‌ಗಳು ಅಕ್ಷರಶಃ ಪಕ್ಕಾ ಪ್ಲಾನ್ ಮಾಡಿಕೊಂಡೇ ಬಂದಿದ್ರು. ಈತನ ಮೇಲೆ ಹಲವು ರೌಂಡ್ ಗುಂಡು ಹಾರಿಸಿ, ಆತ ತಪ್ಪಿಸಿಕೊಳ್ಳೋಕೆ ಕಿಂಚಿತ್ತೂ ಚಾನ್ಸ್ ಕೊಡದೆ ಅ*ಲ್ಲೇ ಮುಗಿಸಿಬಿಟ್ಟಿದ್ದಾರೆ. ಅಂದಹಾಗೆ, ಈ ಅಫ್ರಿದಿ ಅಮೆರಿಕದಿಂದ ಬ್ಯಾನ್ ಆಗಿರೋ ಲಷ್ಕರ್ ಸಂಘಟನೆಯಲ್ಲಿ ತುಂಬಾನೇ ಪವರ್‌ಫುಲ್ ಆಗಿದ್ದ. ಭಾರತದ ವಿರುದ್ಧ ಸಂಚು ರೂಪಿಸೋಕೆ ಇವನು ಪ್ರಮುಖ ಕೊಂಡಿಯಾಗಿದ್ದ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.
ಯಾರಿದು 'ಅಪರಿಚಿತ ಬಂದೂಕುಧಾರಿಗಳು'?
ಇಡೀ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಗೆ ಈಗ ಇದೇ ದೊಡ್ಡ ತಲೆನೋವು! ಯಾರೋ ಬರ್ತಾರೆ, ಉಗ್ರರನ್ನ ಫಿನಿಷ್ ಮಾಡ್ತಾರೆ, ಅಷ್ಟೇ ಸೈಲೆಂಟ್ ಆಗಿ ಮಾಯವಾಗ್ತಾರೆ. 2023ರಿಂದ ಶುರುವಾದ ಈ 'ಟಾರ್ಗೆಟೆಡ್ ಕಿಲ್ಲಿಂಗ್' ಸರಣಿ ಈಗ 2026ರಲ್ಲಿ ಫುಲ್ ಜೋರಾಗಿದೆ. ಕೇವಲ ಈ ವರ್ಷವೊಂದರಲ್ಲೇ ಲಾಹೋರ್, ಕರಾಚಿ ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ಅಡಗಿದ್ದ ಸುಮಾರು 30ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ.
ಇತ್ತೀಚೆಗೆ ಹತರಾದ ಪ್ರಮುಖ ಕಿರಾತಕರು:
ಅಮೀರ್ ಹಮ್ಜಾ: ಲಷ್ಕರ್ ಸ್ಥಾಪಕ ಸದಸ್ಯ, ಕಳೆದ ತಿಂಗಳು ಲಾಹೋರ್‌ನಲ್ಲಿ ಹ*ತ್ಯೆ.
ತಾಹಿರ್ ಅನ್ವರ್: ಮಸೂದ್ ಅಜರ್‌ನ ಅಣ್ಣ, ನಿಗೂಢ ಸಾ*ವು.
ಕತಲ್ ಸಿಂಧಿ: ರಿಯಾಸಿ ದಾಳಿಯ ಮಾಸ್ಟರ್‌ಮೈಂಡ್, ಝೇಲಂನಲ್ಲಿ ಫಿನಿಷ್.
ಉಗ್ರರ ಬೆನ್ನೆಲುಬು ಮುರಿದಂತಾಗಿದೆ!
ಈ ಹಿಂದೆ ಮುಂಬೈ ದಾಳಿ ಅಥವಾ ರಿಯಾಸಿ ಅಟ್ಯಾಕ್ ಹಿಂದೆ ಇದ್ದ ಸಂಚುಕೋರರಿಗೆ ಪಾಕಿಸ್ತಾನವೇ ಸೇಫ್ ಜಾಗ ಅಂದುಕೊಂಡಿದ್ರು. ಅಲ್ಲಿನ ಸರ್ಕಾರವೇ ಇವರಿಗೆ ರಕ್ಷಣೆ ಕೊಡ್ತಿತ್ತು. ಆದ್ರೆ ಈಗ ಪರಿಸ್ಥಿತಿ ಉಲ್ಟಾ ಹೊಡೆದಿದೆ. ಲಾಹೋರ್ ಅಥವಾ ಕರಾಚಿಯ ಬೀದಿಗಳಲ್ಲಿ ಓಡಾಡೋಕು ಈ ಉಗ್ರರು ಈಗ ಹೆದರ್ತಿದ್ದಾರೆ.
ಲಷ್ಕರ್ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಸಂಘಟನೆಗಳ ಹಿರಿಯ ಕಮಾಂಡರ್‌ಗಳು ಒಬ್ಬೊಬ್ಬರಾಗಿ ಮಣ್ಣು ಮುಕ್ತಾಯಿರೋದ್ರಿಂದ ಆ ಸಂಘಟನೆಗಳೇ ಈಗ ಅನಾಥವಾದಂತಾಗಿವೆ. ಭಾರತದ ಮೇಲೆ ಕಣ್ಣು ಹಾಕೋಕೆ ಸ್ಕೆಚ್ ಹಾಕ್ತಿದ್ದವರಿಗೆ ಈಗ ತಮ್ಮ ಪ್ರಾಣ ಉಳಿಸಿಕೊಳ್ಳೋದೇ ದೊಡ್ಡ ಚಾಲೆಂಜ್ ಆಗಿದೆ.
"ಕೆಟ್ಟದ್ದನ್ನ ಮಾಡಿದ್ರೆ ಅದರ ಫಲ ಅನುಭವಿಸಲೇಬೇಕು" ಅನ್ನೋ ಮಾತಿನಂತೆ, ಅಮಾಯಕರ ರಕ್ತ ಹರಿಸಿದ್ದ ಈ ಉಗ್ರರಿಗೆ ಈಗ ಕಾಲ ಕೂಡಿ ಬಂದಿದೆ. ಪಾಕಿಸ್ತಾನದ ನೆಲದಲ್ಲಿ ಈಗ ಉಗ್ರರಿಗೆ ಮುಕ್ತಿ ಸಿಗ್ತಿದೆ. ಇಷ್ಟೆಲ್ಲಾ ಆಗ್ತಿದ್ರೂ ಆ 'ಅಪರಿಚಿತರು' ಯಾರು ಅನ್ನೋದು ಮಾತ್ರ ಇವತ್ತಿಗೂ ದೊಡ್ಡ ಸಸ್ಪೆನ್ಸ್!