ಸೂಪರ್ ಮಾರ್ಕೆಟ್ ಶೆಲ್ಫ್ ನೋಡಿ ಭಾರತೀಯ ಯುವಕನೇ ಶಾಕ್ - ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಬೆಂಡೆಕಾಯಿ ರೇಟ್!!

ನಮ್ಮ ಭಾರತೀಯ ಮನೆಗಳಲ್ಲಿ ದಿನಕ್ಕೊಮ್ಮೆಯಾದರೂ 'ಬೆಂಡೆಕಾಯಿ ಪಲ್ಯ' ಅಥವಾ 'ಭಿಂಡಿ ಮಸಾಲಾ' ಇದ್ದೇ ಇರುತ್ತೆ. ಮಾರ್ಕೆಟ್‌ಗೆ ಹೋದರೆ ಅತಿ ಕಡಿಮೆ ಬೆಲೆಗೆ, ಅಂದ್ರೆ ಕೆಜಿಗೆ 40 ರಿಂದ 60 ರೂಪಾಯಿಗೆ ಆರಾಮಾಗಿ ಸಿಗೋ ತರಕಾರಿ ಇದು. ಆದ್ರೆ ಇದೇ ಬೆಂಡೆಕಾಯಿ ಅಮೆರಿಕದ ಸೂಪರ್ ಮಾರ್ಕೆಟ್‌ನಲ್ಲಿ ಯಾವ ರೇಟ್‌ಗೆ ಮಾರಾಟವಾಗ್ತಿದೆ ಗೊತ್ತಾ? ಅಲ್ಲಿ ಒಂದು ಕೆಜಿ ಬೆಂಡೆಕಾಯಿ ತಗೋಬೇಕಾದ್ರೆ ಬರೋಬ್ಬರಿ 7,200 ರೂಪಾಯಿ ಕೊಡ್ಬೇಕು! ಹೌದು, ನೀವು ಕೇಳುತ್ತಿರೋದು ನಿಜ. ಅಮೆರಿಕದಲ್ಲಿ ಬೆಂಡೆಕಾಯಿಗೆ ಸಿಕ್ಕಿರೋ ಈ ಲುಕ್ ಮತ್ತು ರೇಟ್ ನೋಡಿ ಭಾರತೀಯ ಯುವಕನೊಬ್ಬ ಶಾಕ್ ಆಗಿದ್ದು, ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಕೆಜಿಗೆ 7,200 ರೂಪಾಯಿ | Photo Credit: https://www.instagram.com/ashishahuja.usa/
ಕೆಜಿಗೆ 7,200 ರೂಪಾಯಿ | Photo Credit: https://www.instagram.com/ashishahuja.usa/

ಇನ್‌ಸ್ಟಾಗ್ರಾಮ್ ಕ್ರಿಯೇಟರ್ ಆಶಿಶ್ ಅಹುಜಾ ಎಂಬುವವರು ಅಮೆರಿಕದ ಗ್ರೋಸರಿ ಸ್ಟೋರ್‌ಗೆ ಹೋದಾಗ ಈ ವಿಚಿತ್ರ ಸನ್ನಿವೇಶ ಎದುರಾಗಿದೆ. ಅಲ್ಲಿ ಅವರು ಬೆಂಡೆಕಾಯಿಯ ಪ್ಯಾಕೆಟ್ ಒಂದನ್ನು ನೋಡಿ ಅದರ ಬೆಲೆಯನ್ನು ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿ ವಿಡಿಯೋ ಮಾಡಿದ್ದಾರೆ.

85 ಗ್ರಾಂ ಪ್ಯಾಕೆಟ್‌ಗೆ 600 ರೂಪಾಯಿ

ವಿಡಿಯೋದಲ್ಲಿ ಆಶಿಶ್ ಅವರು ಅಮೆರಿಕದ ಸೂಪರ್‌ ಮಾರ್ಕೆಟ್‌ ಶೆಲ್ಫ್‌ನಲ್ಲಿ ಇಟ್ಟಿದ್ದ ಒಂದು ಸಣ್ಣ ಬಾಕ್ಸ್ ಅನ್ನು ತೋರಿಸುತ್ತಾರೆ. ಅದು ಕರಕುರಲಾಗಿ ಫ್ರೈ ಮಾಡಿದ, ಮಸಾಲೆ ಹಚ್ಚಿದ ಬೆಂಡೆಕಾಯಿ ಸ್ನ್ಯಾಕ್ಸ್ (Crispy-fried okra). ಅದರ ಮೇಲೆ ಹಾಕಿದ್ದ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 6.50 ಡಾಲರ್! ಅಂದ್ರೆ ನಮ್ಮ ಇಂಡಿಯನ್ ಕರೆನ್ಸಿಯಲ್ಲಿ ಸರಿಸುಮಾರು 600 ರೂಪಾಯಿ. ಇಷ್ಟೊಂದು ರೇಟ್ ಇರೋ ಆ ಪ್ಯಾಕೆಟ್‌ನಲ್ಲಿದ್ದ ತೂಕ ಕೇವಲ 85 ಗ್ರಾಂ ಮಾತ್ರ!

ಈ 85 ಗ್ರಾಂಗೆ 600 ರೂಪಾಯಿ ಲೆಕ್ಕಾಚಾರವನ್ನು ಒಂದು ಕೆಜಿಗೆ ಕನ್ವರ್ಟ್ ಮಾಡಿದರೆ, ಅದರ ಬೆಲೆ ಬರೋಬ್ಬರಿ 7,250 ರೂಪಾಯಿ ಆಗುತ್ತದೆ. ಅಮೆರಿಕದಲ್ಲಿ ಸಿಗೋ ಲೇಸ್ (Lays) ದೊಡ್ಡ ಪ್ಯಾಕೆಟ್ ಬೆಲೆ 2.50 ಡಾಲರ್ ಇರುತ್ತೆ. ಆದ್ರೆ ಈ ಬೆಂಡೆಕಾಯಿ ಪ್ಯಾಕೆಟ್‌ಗೆ ಅದಕ್ಕಿಂತ ಡಬಲ್ ರೇಟ್ ಇರೋದನ್ನು ನೋಡಿ ಆಶಿಶ್ ಆಶ್ಚರ್ಯ ಪಟ್ಟಿದ್ದಾರೆ.

'ಪರ್ಸನಾಲಿಟಿ ಟ್ಯಾಕ್ಸ್' ಹಾಕಿದ ಬೆಂಡೆಕಾಯಿ

ಆಶಿಶ್ ಅವರು ತಮ್ಮ ವಿಡಿಯೋ ಕ್ಯಾಪ್ಶನ್‌ನಲ್ಲಿ ತುಂಬಾನೇ ತಮಾಷೆಯಾಗಿ ಬರೆದುಕೊಂಡಿದ್ದಾರೆ. "ನಾವು ಭಾರತದಲ್ಲಿ ಬೆಂಡೆಕಾಯಿಯನ್ನು ದಿನಾಲೂ ತಿನ್ನುವ ಒಂದು ಸಾಮಾನ್ಯ ತರಕಾರಿ ಅನ್ಕೊಳ್ತೀವಿ. ಆದ್ರೆ ಅಮೆರಿಕದವರು ಅದನ್ನು ಫ್ರೈ ಮಾಡಿ, ಮಸಾಲೆ ಹಾಕಿ, ಒಂದು ಸಣ್ಣ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ 'ಪ್ರಿಮಿಯಂ ಸ್ನ್ಯಾಕ್ಸ್' ಅಂತ ಬೋರ್ಡ್ ಹಾಕಿಬಿಟ್ಟಿದ್ದಾರೆ. 85 ಗ್ರಾಂಗೆ 600 ರೂಪಾಯಿ ಅಂತೆ! ಇದು ಲೇಸ್‌ಗಿಂತಲೂ ಕಾಸ್ಲಿ. ಬೆಂಡೆಕಾಯಿ ತನಗೆ ತಾನೇ ಪರ್ಸನಾಲಿಟಿ ಟ್ಯಾಕ್ಸ್ ಹಾಕಿಕೊಂಡಂತಿದೆ. ತಾನು ಇಷ್ಟೊಂದು ರೇಟ್ ಫಿಕ್ಸ್ ಮಾಡ್ಕೋಬಹುದು ಅಂತ ಯಾರೂ ಈ ಬೆಂಡೆಕಾಯಿಗೆ ಮುಂಚೆ ಹೇಳಿಕೊಟ್ಟಿರಲಿಲ್ಲ ಅನಿಸುತ್ತೆ" ಅಂತ ಕಾಲೆಳೆದಿದ್ದಾರೆ.

ಅಮೆರಿಕದಲ್ಲಿ ನಮ್ಮ ದೇಶದ ತರಕಾರಿಗಳಿಗೆ ಇಷ್ಟೊಂದು ಬೆಲೆ ಇರಲು ಮುಖ್ಯ ಕಾರಣ ಅದರ ಪ್ರೆಸೆಂಟೇಶನ್. ಅಲ್ಲಿ ತರಕಾರಿಯನ್ನು ಹಸಿಯಾಗಿ ಮಾರುವ ಬದಲು ಬೇಕ್ ಅಥವಾ ಫ್ರೈ ಮಾಡಿ, ಬ್ರಾಂಡಿಂಗ್ ಮಾಡಿ ಹೈ-ಫೈ ಆಗಿ ಮಾರುತ್ತಾರೆ. ಜೊತೆಗೆ ಅಲ್ಲಿಗೆ ಭಾರತೀಯ ತರಕಾರಿಗಳ ರಫ್ತು ವೆಚ್ಚ ಹೆಚ್ಚಿರುತ್ತದೆ ಮತ್ತು ಡಿಮ್ಯಾಂಡ್ ಕೂಡ ಕಮ್ಮಿ ಇರುವುದರಿಂದ ಬೆಲೆ ಆಕಾಶ ಮುಟ್ಟಿರುತ್ತದೆ.

ನೆಟ್ಟಿಗರ ಕಾಮೆಂಟ್ಸ್ ಭರ್ಜರಿ ಕಾಮಿಡಿ

ಸೋಶಿಯಲ್ ಮೀಡಿಯಾದಲ್ಲಿ 2.4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಒಬ್ಬ ನೆಟ್ಟಿಗ ಬರೆದಿದ್ದಾನೆ: "ಇದು ಅಮೆರಿಕನ್ನರಿಗೆ ದೊಡ್ಡ ಮೊತ್ತ ಅನಿಸಲ್ಲ. ಯಾಕಂದ್ರೆ ಅವರ ಆದಾಯ ಹೆಚ್ಚಿರುತ್ತೆ, ಜೊತೆಗೆ ಇದು ಹೆಲ್ದೀ ಸ್ನ್ಯಾಕ್ಸ್ ಅಲ್ವಾ, ಅದಕ್ಕೆ ಕಾಸು ಕೊಡ್ತಾರೆ."

ಇನ್ನೊಬ್ಬ ಭಾರತೀಯ ಯೂಸರ್ ಕಾಮೆಂಟ್ ಮಾಡಿ: "ಇಷ್ಟೊಂದು ಮಸಾಲೆ ಹಾಕಿದ್ರೂ ನಮ್ಮ ದೇಶದಲ್ಲಿ ಇದಕ್ಕೆ ಮ್ಯಾಕ್ಸಿಮಮ್ ಅಂದ್ರೆ 20 ರೂಪಾಯಿ ಕೊಡಬಹುದು. ಭಾರತದಲ್ಲಿ ಇರೋ ಶ್ರೀಮಂತರು ಕೂಡ ಇಷ್ಟೊಂದು ರೇಟ್ ಕೊಟ್ಟು ಬೆಂಡೆಕಾಯಿ ಕೊಳ್ಳಲ್ಲ" ಅಂತ ರೇಗಿಸಿದ್ದಾರೆ.

Latest News