ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಹಿಂದೂ ಸಮಾಜೋತ್ಸವ - ವಿಡಿಯೋ ವೈರಲ್

ಕೋಲಾರದ ವೇಮಗಲ್ ಪಟ್ಟಣದಲ್ಲಿ ನಡೆದ ಹಿಂದೂ ಸಮಾಜೋತ್ಸವವು ಧಾರ್ಮಿಕ ಭಾವೈಕ್ಯತೆಯ ಅದ್ಭುತ ಉದಾಹರಣೆಯಾಗಿ ಪರಿಣಮಿಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಶೋಭಾಯಾತ್ರೆಗೆ ಮುಸ್ಲಿಂ ಬಾಂಧವರು ಅದ್ದೂರಿ ಸ್ವಾಗತ ಕೋರಿದರು. ಪುಷ್ಪಾರ್ಚನೆ ಮೂಲಕ ಶೋಭಾಯಾತ್ರೆಗೆ ಗೌರವ ಸಲ್ಲಿಸಿದ ಅವರು, ಸಿಹಿ ನೀರು ನೀಡಿ ಭಾವೈಕ್ಯತೆಯ ಸಂದೇಶವನ್ನು ಮತ್ತೊಮ್ಮೆ ಮೆರೆದರು.

ಕೋಲಾರದಲ್ಲಿ ಧಾರ್ಮಿಕ ಭಾವೈಕ್ಯತೆಯ ಮಾದರಿ – ಹಿಂದೂ-ಮುಸ್ಲಿಂ ಒಗ್ಗಟ್ಟು
ಕೋಲಾರದಲ್ಲಿ ಧಾರ್ಮಿಕ ಭಾವೈಕ್ಯತೆಯ ಮಾದರಿ – ಹಿಂದೂ-ಮುಸ್ಲಿಂ ಒಗ್ಗಟ್ಟು

ಈ ಸಮಾಜೋತ್ಸವದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ಒಗ್ಗಟ್ಟು ಸ್ಪಷ್ಟವಾಗಿ ಗೋಚರಿಸಿತು. ಹಿಂದೂ ಸಮಾಜದ ಮೆರವಣಿಗೆಗೆ ಮುಸ್ಲಿಂ ಬಾಂಧವರು ನೀಡಿದ ಆತ್ಮೀಯ ಸ್ವಾಗತವು ಜನಮನಗಳನ್ನು ಸ್ಪರ್ಶಿಸಿತು ಎಂದೆನ್ನಬಹದು. ಧಾರ್ಮಿಕ ಭಿನ್ನತೆಗಳನ್ನು ಮೀರಿ, ಒಗ್ಗಟ್ಟಿನ ಸಂಕೇತವಾಗಿ ಈ ಕಾರ್ಯಕ್ರಮವು ನಾಡಿನ ಜನತೆಗೆ ಮಾದರಿಯಾಯಿತು.

ವೇಮಗಲ್ ಪಟ್ಟಣವು ಹಿಂದಿನಿಂದಲೂ ಹಿಂದೂ-ಮುಸ್ಲಿಂ ಭಾವೈಕ್ಯತೆಯ ನೆಲೆಯಾಗಿದೆ. ಇಲ್ಲಿ ಕರಗ ಮಹೋತ್ಸವ, ಉರುಸ್, ಗಣೇಶ ಮಹೋತ್ಸವ, ಈದ್ ಮಿಲಾದ್ ಸೇರಿದಂತೆ ಹಲವು ಹಬ್ಬಗಳನ್ನು ಎರಡೂ ಸಮುದಾಯಗಳು ಸೇರಿ ಆಚರಿಸುತ್ತಿವೆ. ಹಬ್ಬಗಳ ಸಂದರ್ಭದಲ್ಲಿ ಬೇಧ-ಭಾವವಿಲ್ಲದೆ, ಅಣ್ಣ-ತಮ್ಮಂದಿರಂತೆ ಪರಸ್ಪರ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಈ ಪಟ್ಟಣದ ವಿಶೇಷತೆ. 

View this post on Instagram

A post shared by Saptashwa TV Kannada (@saptashwatv)

ಇಂದಿನ ಹಿಂದೂ ಸಮಾಜೋತ್ಸವದಲ್ಲೂ ಇದೇ ಪರಂಪರೆ ಮುಂದುವರಿಯಿತು. ಭಕ್ತರ ಜಯಘೋಷ, ಮಂಗಳವಾದ್ಯಗಳ ಸದ್ದು, ಶೋಭಾಯಾತ್ರೆಯ ವೈಭವದ ನಡುವೆ ಮುಸ್ಲಿಂ ಸಮುದಾಯದ ಆತ್ಮೀಯತೆ ಎಲ್ಲರ ಮನಸ್ಸನ್ನು ಗೆದ್ದಿತು. ಧಾರ್ಮಿಕ ಹಬ್ಬವನ್ನು ಆಚರಿಸುವಾಗ ಪರಸ್ಪರ ಗೌರವ, ಸಹಕಾರ ಮತ್ತು ಸ್ನೇಹದ ಬಾಂಧವ್ಯವೇ ಸಮಾಜದ ಶಕ್ತಿ ಎಂಬುದನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಸಾಬೀತುಪಡಿಸಿತು. ವೇಮಗಲ್ ಪಟ್ಟಣದ ಹಿಂದೂ ಸಮಾಜೋತ್ಸವವು ಧಾರ್ಮಿಕ ಭಾವೈಕ್ಯತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವದ ಸಂಕೇತವಾಗಿ ಪರಿಣಮಿಸಿದೆ. ಹಿಂದೂ-ಮುಸ್ಲಿಂ ಸಮುದಾಯಗಳ ಒಗ್ಗಟ್ಟಿನ ಈ ದೃಶ್ಯವು ನಾಡಿನ ಜನತೆಗೆ ಶಾಂತಿ, ಸ್ನೇಹ ಮತ್ತು ಸಹಕಾರದ ಸಂದೇಶವನ್ನು ನೀಡಿದೆ. 

Latest News

Related News