ನಾವು ದಿನಾ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸ ಅಂದ್ರೆ ಮನೆ ಗುಡಿಸುವುದು. ಇದೇನೋ ಬರಿ ಕಸ ತೆಗೆಯುವ ಕೆಲಸ ಅಂತ ನಾವು ಅಂದುಕೊಂಡಿರ್ತೀವಿ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ನಾವು ಮನೆ ಗುಡಿಸುವ ರೀತಿ ಮತ್ತು ಸಮಯ ನಮ್ಮ ಜೀವನದ ಆರ್ಥಿಕ ಪರಿಸ್ಥಿತಿ ಹಾಗೂ ಮನೆಯ ನೆಮ್ಮದಿಯ ಮೇಲೆ ನೇರ ಪರಿಣಾಮ ಬೀರುತ್ತೆ ಅಂದ್ರೆ ನೀವು ನಂಬಲೇಬೇಕು.
ಪೊರಕೆಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸಂಕೇತ ಅಂತ ಕರೆಯಲಾಗುತ್ತದೆ. ಹಾಗಾಗಿ, ಮನೆಯನ್ನು ಸ್ವಚ್ಛ ಮಾಡುವಾಗ ನಾವು ಈ ಕೆಳಗಿನ ಕೆಲವು ಸಿಂಪಲ್ ವಾಸ್ತು ನಿಯಮಗಳನ್ನು ಪಾಲಿಸಿದ್ರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವುದರಲ್ಲಿ ಸಂಶಯವೇ ಇಲ್ಲ.
ವಾಸ್ತು ಪ್ರಕಾರ, ಸೂರ್ಯೋದಯದ ನಂತರ ಅಂದ್ರೆ ಬೆಳಿಗ್ಗೆ ಬೇಗನೆ ಮನೆಯನ್ನು ಗುಡಿಸಿ ಅಚ್ಚುಕಟ್ಟು ಮಾಡುವುದು ಅತ್ಯಂತ ಶ್ರೇಷ್ಠ. ಹೀಗೆ ಮಾಡೋದ್ರಿಂದ ರಾತ್ರಿಯಿಡೀ ಸಂಗ್ರಹವಾದ ನಕಾರಾತ್ಮಕ ಶಕ್ತಿ ಹೊರಹೋಗಿ ಮನೆ ಫ್ರೆಶ್ ಆಗಿ ಇರುತ್ತೆ.
ನೆನಪಿಡಿ, ಸೂರ್ಯಾಸ್ತದ ನಂತರ ಅಂದ್ರೆ ಸಂಜೆ ಅಥವಾ ರಾತ್ರಿ ಹೊತ್ತು ಮನೆ ಗುಡಿಸೋದು ಅಶುಭ ಎಂದು ಶಾಸ್ತ್ರ ಹೇಳುತ್ತೆ. ಸಂಜೆ ಹೊತ್ತು ಮನೆ ಗುಡಿಸಿದ್ರೆ ಆರ್ಥಿಕ ಸಂಕಷ್ಟಗಳು ಎದುರಾಗಬಹುದು ಮತ್ತು ಮನೆಯಲ್ಲಿರುವ ಐಶ್ವರ್ಯ ಹೊರಗೆ ಹೋಗುತ್ತೆ ಎಂಬ ನಂಬಿಕೆ ಇದೆ. ಅನಿವಾರ್ಯ ಕಾರಣಕ್ಕೆ ಗುಡಿಸಿದ್ರೂ ಕಸವನ್ನು ಹೊರಗೆ ಹಾಕಬೇಡಿ.
ಪೊರಕೆಯನ್ನು ಎಲ್ಲಿ ಇಡಬೇಕು?
ಮನೆ ಕ್ಲೀನ್ ಮಾಡಿದ ಮೇಲೆ ಪೊರಕೆಯನ್ನು ಹೇಗೆಂದ ಹಾಗೆ ಬಿಸಾಡಬೇಡಿ.
ಕಣ್ಣಿಗೆ ಕಾಣದಂತೆ ಇಡಿ - ಪೊರಕೆಯನ್ನು ಮನೆಯ ಮುಖ್ಯ ಬಾಗಿಲಿನ ಬಳಿ ಅಥವಾ ಎಲ್ಲರಿಗೂ ಕಾಣುವ ಕಡೆ ಇಡಬಾರದು. ಇದರಿಂದ ಮನೆಯಲ್ಲಿ ಜಗಳಗಳು ಹೆಚ್ಚಾಗಬಹುದು.
ನೈಋತ್ಯ ದಿಕ್ಕು ಬೆಸ್ಟ್ - ವಾಸ್ತು ಪ್ರಕಾರ, ಪೊರಕೆಯನ್ನು ಯಾವಾಗಲೂ ಮನೆಯ ನೈಋತ್ಯ (South-West) ದಿಕ್ಕಿನಲ್ಲಿ ಕಣ್ಣಿಗೆ ಕಾಣದ ಹಾಗೆ ಇಡಬೇಕು. ಇದು ಮನೆಗೆ ಸಮೃದ್ಧಿ ತರುತ್ತದೆ.
ಮನೆಯ ಮೇನ್ ಗೇಟ್ ಅಥವಾ ಮುಖ್ಯ ಬಾಗಿಲು ಅನ್ನೋದು ದೇವತೆಗಳು ಪ್ರವೇಶಿಸುವ ದ್ವಾರ. ಆದರೆ ಕೆಲವರು ಮನೆ ಗುಡಿಸಿ ಕಸವನ್ನು ಬಾಗಿಲ ಪಕ್ಕದಲ್ಲೇ ರಾಶಿ ಹಾಕ್ತಾರೆ. ಇದು ಮನೆಗೆ ಬರುವ ಅದೃಷ್ಟಕ್ಕೆ ತಡೆಯೊಡ್ಡಿದಂತೆ! ಗುಡಿಸಿದ ತಕ್ಷಣ ಕಸವನ್ನೆಲ್ಲಾ ಡಸ್ಟ್‌ಬಿನ್‌ಗೆ ಹಾಕಿ ವಿಲೇವಾರಿ ಮಾಡುವುದು ಆರ್ಥಿಕ ಅಭಿವೃದ್ಧಿಗೆ ಬಹಳ ಒಳ್ಳೆಯದು.
ನೆಲ ಒರೆಸಿದ ನಂತರ ಆ ಒದ್ದೆ ಬಟ್ಟೆ ಅಥವಾ ಮಾಪ್‌ಗಳನ್ನು ಮನೆಯ ಮೂಲೆಯಲ್ಲಿ ಹಾಗೆಯೇ ಬಿಡುವ ಅಭ್ಯಾಸ ನಿಮಗಿದ್ರೆ ಇಂದೇ ಬದಲಿಸಿಕೊಳ್ಳಿ. ಒದ್ದೆಯಾದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ. ಕೆಲಸ ಮುಗಿದ ತಕ್ಷಣ ಆ ಬಟ್ಟೆಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಲು ಹಾಕಬೇಕು. ಇದರಿಂದ ಮನೆಯಲ್ಲಿ ತೇವಾಂಶ ಮತ್ತು ಕೆಟ್ಟ ವಾಸನೆ ಎರಡೂ ಇರಲ್ಲ.
ವಾರದ ದಿನಗಳ ಬಗ್ಗೆ ಗಮನವಿರಲಿ
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಮಹತ್ವ ಇದೆ.
ಗುರುವಾರ - ಈ ದಿನ ಮನೆಯನ್ನು ಅತಿಯಾಗಿ ಶುಚಿಗೊಳಿಸುವುದು ಅಥವಾ ನೆಲ ಒರೆಸುವುದನ್ನು ಆದಷ್ಟು ಅವಾಯ್ಡ್ ಮಾಡಿ. ಯಾಕಂದ್ರೆ ಗುರುವಾರ ಸಮೃದ್ಧಿಯ ದಿನವಾಗಿರೋದ್ರಿಂದ ಈ ದಿನ ಸ್ವಚ್ಛತೆಗೆ ಅತಿಯಾದ ಆದ್ಯತೆ ಬೇಡ ಎನ್ನಲಾಗುತ್ತದೆ.
ಶುಕ್ರವಾರ - ಈ ದಿನ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ತುಂಬಾ ವಿಶೇಷ. ಇದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸಿ, ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ.
ನೋಡಿದ್ರಲ್ಲ, ಮನೆ ಗುಡಿಸುವುದು ಸಣ್ಣ ಕೆಲಸ ಅನಿಸಿದ್ರೂ ಅದರಲ್ಲಿ ಎಷ್ಟೊಂದು ವಿಷಯಗಳಿವೆ ಅಲ್ವಾ? ಇಂದಿನಿಂದಲೇ ಈ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ನೋಡಿ, ನಿಮ್ಮ ಮನೆಯಲ್ಲಿ ಧನಾತ್ಮಕ ಬದಲಾವಣೆಗಳಾಗುವುದು ಗ್ಯಾರಂಟಿ!