ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ನಡೆದಿದ್ದ ಮಂಜು–ಲೀಲಾ–ಸಂತು ಟ್ರಯಾಂಗಲ್ ಲವ್ ಸ್ಟೋರಿ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಯಿತು. ಪತಿ, ಪತ್ನಿ ಮತ್ತು ಲವರ್ ನಡುವಿನ ಸಂಬಂಧದ ಏರುಪೇರುಗಳು, ಕುಟುಂಬದ ಭವಿಷ್ಯ ಮತ್ತು ಮಕ್ಕಳ ಬದುಕು ಇವೆಲ್ಲವೂ ಇದರಲ್ಲಿ ಕಂಡು ಬಂದಿವೆ. ಲೀಲಾ ತನ್ನ ಪತಿ ಮಂಜು ಮತ್ತು ಮೂವರು ಮಕ್ಕಳನ್ನು ಬಿಟ್ಟು ಸಂತು ಜೊತೆ ವಾಸಿಸಲು ಹೋಗಿದ್ದಳು. ಸಂತು ಮನೆಯಲ್ಲಿಯೇ ವಾಸವಿದ್ದ ಲೀಲಾ, “ಸಂತುನನ್ನು ಬಿಟ್ಟು ಬರೋದಿಲ್ಲ” ಎಂದು ಪಟ್ಟು ಹಿಡಿದಳು. ಇದರಿಂದ ಮಂಜು ಮನಸ್ಸಿಗೆ ದೊಡ್ಡ ನೋವು ತಗುಲಿತು.
ಪತ್ನಿ ಲೀಲಾಳಿಗಾಗಿ ಕಣ್ಣೀರು ಹಾಕಿದ ಮಂಜು, ಕೊನೆಗೆ ರೊಚ್ಚಿಗೆದ್ದು ಸಂತು–ಲೀಲಾ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ. ಪ್ರಕರಣ ಸಂಬಂಧ ಮಂಜು ಜೈಲು ಸೇರಬೇಕಾಯಿತು. ಈ ಅವಧಿಯಲ್ಲಿ ಮೂವರು ಮಕ್ಕಳು ಲೀಲಾ–ಸಂತು ಜೊತೆಗಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಮಂಜು ಬಸವನಪುರದ ಮನೆಯನ್ನು ಖಾಲಿ ಮಾಡಿ ಜಲ್ಲಿಮಿಷನ್ ಪ್ರದೇಶಕ್ಕೆ ಸ್ಥಳಾಂತರವಾಯಿತು. ಲೀಲಾ ಬಳಿ ಇದ್ದ ದೊಡ್ಡ ಮಗನನ್ನು ಕರೆದುಕೊಂಡು ಹೋಗಿ, ಹೊಸ ಆಟೋ ಖರೀದಿ ಮಾಡಿ ಮಗನ ಜೊತೆ ಜೀವನ ನಡೆಸಲು ಆರಂಭಿಸಿದ. ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಲೀಲಾ ಮೇಲಿನ ವಿರಹ ವೇದನೆ ವ್ಯಕ್ತಪಡಿಸಿದ ಮಂಜು, ಲೀಲಾ–ಸಂತುಗೆ ಟಕ್ಕರ್ ಕೊಡಲು ವಿಡಿಯೋಗಳನ್ನು ಮಾಡುತ್ತಿದ್ದ.
ಮತ್ತೊಂದು ವಿಡಿಯೋದಲ್ಲಿ, ಲೀಲಾ–ಸಂತು ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ಆರೋಪ ಮಾಡಿದ ಮಂಜು, “ನನ್ನ ಇಬ್ಬರು ಮಕ್ಕಳನ್ನು ನನಗೆ ಕೊಡಿಸಿ” ಎಂದು ಮನವಿ ಮಾಡಿದ್ದ. ಈ ಹಂತದಲ್ಲಿ ಕುಟುಂಬದ ಭವಿಷ್ಯ ಕುರಿತು ಚರ್ಚೆಗಳು ಹೆಚ್ಚಾದವು. ಕೊನೆಗೆ, ಮೂವರು ಮಕ್ಕಳೊಂದಿಗೆ ಲೀಲಾ ಮಂಜುವಿನ ಮನೆ ಸೇರಿ, ಕುಟುಂಬ ಮತ್ತೆ ಒಂದಾಯಿತು. ಈ ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ ಕಂಡಿತು.
ಈ ಎಲ್ಲ ಘಟನೆಗಳ ನಂತರ, ಮಂಜು ತನ್ನ ಪತ್ನಿ ಲೀಲಾಳಿಗೆ ಐಸ್ ಕ್ರೀಂ ತಿನ್ನಿಸುವ ಮೂಲಕ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ. “ಬಾರೇ ನಾವು ಹೋಗೋಣ” ಎಂದು ಕೈ ಹಿಡಿದು ಕರೆದುಕೊಂಡು ಹೋದ ಮಂಜು, ಲೀಲಾಳಿಗೆ ಅವಳಿಗೆ ಇಷ್ಟವಾದ ಫ್ಲೇವರ್‌ನ್ನು ತಿನ್ನಿಸಿದ. ಈ ಸಣ್ಣ ಕ್ಷಣ ಅವರಿಬ್ಬರ ಸಂಬಂಧವನ್ನು ಮತ್ತಷ್ಟು ಗಾಢಗೊಳಿಸಿತು. ಇವರಿಬ್ಬರು ಒಂದಾಗಿದ್ದಕ್ಕೆ ನಿಮ್ಮ ಅನಿಸ್ಕೆ ಏನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು