ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ನಡೆದಿದ್ದ ಮಂಜು–ಲೀಲಾ–ಸಂತು ಟ್ರಯಾಂಗಲ್ ಲವ್ ಸ್ಟೋರಿ ಹಲವು ತಿರುವುಗಳನ್ನು ಕಂಡು ಕೊನೆಗೆ ಸುಖಾಂತ್ಯ ಕಂಡಿದೆ. ಪತಿ ಮಂಜು ಮತ್ತು ಮೂವರು ಮಕ್ಕಳನ್ನು ಬಿಟ್ಟು ಲವರ್ ಸಂತು ಜೊತೆ ಹೋದ ಲೀಲಾ, ಈ ಕಥೆಯ ಕೇಂದ್ರಬಿಂದುವಾಗಿದ್ದರು. ಲೀಲಾ ಸಂತು ಮನೆಗೆ ತೆರಳಿ ಅಲ್ಲಿ ವಾಸವಿದ್ದು, ಮಂಜು ಕಣ್ಣೀರು ಹಾಕುವ ಪರಿಸ್ಥಿತಿ ಎದುರಿಸಬೇಕಾಯಿತು. ಲೀಲಾ ಸಂತುನನ್ನು ಬಿಟ್ಟು ಬರೋದಿಲ್ಲ ಎಂದು ಪಟ್ಟು ಹಿಡಿದಾಗ, ಮಂಜು ರೊಚ್ಚಿಗೆದ್ದು ಸಂತು ಮತ್ತು ಲೀಲಾ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿದರು. ಈ ಪ್ರಕರಣ ಸಂಬಂಧ ಮಂಜು ಜೈಲು ಸೇರಿದರು.
ಮೂವರು ಮಕ್ಕಳು ಲೀಲಾ ಜೊತೆ ಸಂತು ಮನೆಯಲ್ಲಿ ಇದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಮಂಜು ಬಸವನಪುರದಲ್ಲಿ ಮನೆ ಖಾಲಿ ಮಾಡಿ, ಬನ್ನೇರುಘಟ್ಟ ಸಮೀಪದ ಜಲ್ಲಿಮಿಷನ್ ಪ್ರದೇಶಕ್ಕೆ ಸ್ಥಳಾಂತರವಾದರು. ಅಲ್ಲಿ ಲೀಲಾ ಬಳಿ ಇದ್ದ ದೊಡ್ಡ ಮಗನನ್ನು ಕರೆದುಕೊಂಡು ಹೋಗಿ, ಹೊಸ ಜೀವನ ಆರಂಭಿಸಿದರು. ಮಂಜು ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಲೀಲಾ ಮೇಲಿನ ವಿರಹ ವೇದನೆ ವ್ಯಕ್ತಪಡಿಸಿದರು. ಲೀಲಾ–ಸಂತು ಜೋಡಿಗೆ ಟಕ್ಕರ್ ನೀಡುವಂತೆ ರೀಲ್ಸ್ ಮಾಡಿ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಹೊಸ ಆಟೋ ಖರೀದಿ ಮಾಡಿ ಮಗನ ಜೊತೆ ಜೀವನ ನಡೆಸುತ್ತಾ, ಮತ್ತೊಂದು ವಿಡಿಯೋ ಮೂಲಕ ಲೀಲಾ–ಸಂತು ಮೇಲೆ ಆರೋಪ ಮಾಡಿದರು.
ಮಂಜು ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಎಂದು ವಿಡಿಯೋ ಮೂಲಕ ಆರೋಪ ಮಾಡಿ, "ನನ್ನ ಇಬ್ಬರು ಮಕ್ಕಳನ್ನು ನನಗೆ ಕೊಡಿಸಿ" ಎಂದು ಮನವಿ ಮಾಡಿದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಜನರಲ್ಲಿ ಕುತೂಹಲ ಮೂಡಿಸಿತು. ಇದಾದ ಬಳಿಕ ಲೀಲಾ ಮೂವರು ಮಕ್ಕಳೊಂದಿಗೆ ಮಂಜು ಮನೆ ಸೇರಿದರು. ಕುಟುಂಬ ಮತ್ತೆ ಒಂದಾಗಿ, ಟ್ರಯಾಂಗಲ್ ಲವ್ ಸ್ಟೋರಿ ಕೊನೆಗೆ ಸುಖಾಂತ್ಯ ಕಂಡಿತು. ಮಂಜು–ಲೀಲಾ–ಸಂತು ನಡುವಿನ ಈ ಕಥೆ ಹಲವಾರು ತಿರುವುಗಳನ್ನು ಕಂಡರೂ, ಕೊನೆಯಲ್ಲಿ ಕುಟುಂಬದ ಒಗ್ಗಟ್ಟೇ ಜಯ ಸಾಧಿಸಿತು.