Apr 23, 2026 Languages : ಕನ್ನಡ | English

ರಾಜ್ಯದಲ್ಲಿ ಬಿಯರ್ ಸ್ಟಾಕ್ ಖಾಲಿ? ಹೋದ ವರ್ಷದ ದಾಖಲೆ ಮುರಿದ ಈ ವರ್ಷದ ಬಿಯರ್ ಸೇಲ್ಸ್!!

ರಾಜ್ಯದಲ್ಲಿ ಬಿಸಿಲು ಅಂದ್ರೆ ಸಾಧಾರಣ ಮಾತಲ್ಲ, ಮೈ ಸುಡುವಂತಾ ತಾಪಮಾನಕ್ಕೆ ಜನ ಬೆವತು ಹೋಗಿದ್ದಾರೆ. ಈ ಸುಡುವ ಬೇಸಿಗೆಯಲ್ಲಿ ಬಾಡಿ ಕೂಲ್ ಮಾಡಿಕೊಳ್ಳೋಕೆ ಮದ್ಯಪ್ರಿಯರ ಮೊದಲ ಚಾಯ್ಸ್ ಯಾವುದು ಗೊತ್ತಾ? ಅದುವೇ 'ಚಿಲ್ಡ್ ಬಿಯರ್'. ಸದ್ಯದ ಪರಿಸ್ಥಿತಿ ನೋಡಿದ್ರೆ, ಬಿಸಿಲು ಏರ್ತಾ ಇದ್ದ ಹಾಗೆ ರಾಜ್ಯದಲ್ಲಿ ಬಿಯರ್ ಮಾರಾಟ ಕೂಡ ರಾಕೆಟ್ ವೇಗದಲ್ಲಿ ನುಗ್ಗುತ್ತಿದೆ!

ಕೇವಲ 18 ದಿನಗಳಲ್ಲಿ 28 ಲಕ್ಷ ಕೇಸ್ ಬಿಯರ್ ಖಾಲಿ | Photo Credit: AI
ಕೇವಲ 18 ದಿನಗಳಲ್ಲಿ 28 ಲಕ್ಷ ಕೇಸ್ ಬಿಯರ್ ಖಾಲಿ | Photo Credit: AI

ಶೇ. 30ರಷ್ಟು ಮಾರಾಟ ಏರಿಕೆ!

ಅಬಕಾರಿ ಇಲಾಖೆ ಕೊಟ್ಟಿರೋ ಲೆಕ್ಕಾಚಾರ ಕೇಳಿದ್ರೆ ನೀವು ದಂಗಾಗ್ತೀರಾ. ಹೋದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಬಿಯರ್ ಮಾರಾಟದಲ್ಲಿ ಬರೋಬ್ಬರಿ ಶೇ. 30ರಷ್ಟು ಏರಿಕೆಯಾಗಿದೆ. ಬಿಯರ್ ರೇಟ್ ಸ್ವಲ್ಪ ಜಾಸ್ತಿ ಆಗಿದ್ರೂ ಕೂಡ, ಮದ್ಯಪ್ರಿಯರು ಮಾತ್ರ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪೌಡರ್ ಹಾಕಿದ್ರೂ ಕಮ್ಮಿ ಆಗದ ಸೆಕೆಗೆ, ಒಂದೊಂದು ಬಾಟಲಿ ಬಿಯರ್ ಕುಡಿದು ಮದ್ಯಪ್ರಿಯರು ನಿರಾಳವಾಗುತ್ತಿದ್ದಾರೆ. ನಗರ ಪ್ರದೇಶ ಮಾತ್ರವಲ್ಲದೆ ಹಳ್ಳಿಗಳಲ್ಲೂ ಈಗ ಚಿಲ್ಡ್ ಬಿಯರ್‌ಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

ಹೋದ ವರ್ಷದ ರೆಕಾರ್ಡ್ ಬ್ರೇಕ್!

ಕಳೆದ ವರ್ಷ ಮತ್ತು ಈ ವರ್ಷದ ಮಾರಾಟದ ಡಿಫರೆನ್ಸ್ ನೋಡಿದ್ರೆ ಬಿಯರ್ ಕ್ರೇಜ್ ಎಷ್ಟಿದೆ ಅಂತ ಅರ್ಥ ಆಗುತ್ತೆ. ಏಪ್ರಿಲ್ ಮೊದಲ 18 ದಿನಗಳ ಲೆಕ್ಕಾಚಾರ ಇಲ್ಲಿದೆ ನೋಡಿ:

  • 2025ರಲ್ಲಿ: ಏಪ್ರಿಲ್ 1 ರಿಂದ 18ರವರೆಗೆ ಮಾರಾಟವಾಗಿದ್ದು 21.77 ಲಕ್ಷ ಕೇಸ್ ಬಿಯರ್.

  • 2026ರಲ್ಲಿ: ಇದೇ ಅವಧಿಯಲ್ಲಿ ಬರೋಬ್ಬರಿ 28.35 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ.

  • ಅಂದ್ರೆ ಕೇವಲ 18 ದಿನಗಳಲ್ಲಿ 6.58 ಲಕ್ಷ ಕೇಸ್ ಬಿಯರ್ ಹೆಚ್ಚುವರಿಯಾಗಿ ಸೇಲ್ ಆಗಿದೆ!

ಖಜಾನೆಗೆ ಹರಿದು ಬಂತು ಕೋಟಿ ಕೋಟಿ ಹಣ

ಬಿಯರ್ ಮಾರಾಟ ಹೆಚ್ಚಾದಷ್ಟು ಸರ್ಕಾರಕ್ಕೂ ಲಾಭವೋ ಲಾಭ. ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಈಗ ಆದಾಯದ ಹೊಳೆಯೇ ಹರಿಯುತ್ತಿದೆ.

  • 2025ರ ಏಪ್ರಿಲ್ ಮೊದಲಾರ್ಧದಲ್ಲಿ 463.42 ಕೋಟಿ ರೂ. ಮೊತ್ತದ ಬಿಯರ್ ಮಾರಾಟವಾಗಿತ್ತು.

  • ಆದರೆ 2026ರ ಇದೇ ಅವಧಿಯಲ್ಲಿ ಆ ಮೊತ್ತ 568.59 ಕೋಟಿ ರೂ. ದಾಟಿದೆ!

    ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 105.17 ಕೋಟಿ ರೂಪಾಯಿ ಹೆಚ್ಚಿನ ಆದಾಯ ಬಂದಿದೆ. ಮದ್ಯಪ್ರಿಯರ ಈ 'ಬಿಯರ್ ಪ್ರೇಮ' ಸರ್ಕಾರಕ್ಕೆ ಭರ್ಜರಿ ಲಾಭ ತಂದುಕೊಟ್ಟಿದೆ.


ಬಿಯರ್ ಮಾರಾಟದ ಫಟಾಫಟ್ ಲೆಕ್ಕ:

ವರ್ಷ (ಏಪ್ರಿಲ್ 1-18) ಮಾರಾಟದ ಮೊತ್ತ (ಕೋಟಿಗಳಲ್ಲಿ)
2025 463.42 ಕೋಟಿ ರೂ.
2026 568.59 ಕೋಟಿ ರೂ.
ಒಟ್ಟು ಏರಿಕೆ 105.17 ಕೋಟಿ ರೂ.

ಮಾರ್ಚ್ ತಿಂಗಳು ಮುಗಿಯುತ್ತಿದ್ದಂತೆ ಶುರುವಾದ ಬಿಸಿಲ ಬೇಗೆ ಈಗ ಬಿಯರ್ ಅಂಗಡಿಗಳ ಮುಂದೆ ಕ್ಯೂ ನಿಲ್ಲುವಂತೆ ಮಾಡಿದೆ. ಮದ್ಯಪ್ರಿಯರು ಬೆಲೆ ಏರಿಕೆಯ ಲೆಕ್ಕಾಚಾರ ಪಕ್ಕಕ್ಕಿಟ್ಟು, ಕಿಕ್ ಜೊತೆಗೆ ಕೂಲ್ ಆಗಿರಲು ಬಿಯರ್ ಮೊರೆ ಹೋಗುತ್ತಿದ್ದಾರೆ.