Apr 26, 2026 Languages : ಕನ್ನಡ | English

ಪಟ್ಟಣದಲ್ಲಿ ನೀವು ಎಷ್ಟೇ ಕೋಟಿ ಕೊಟ್ಟರೂ ಒಂದು ಈರುಳ್ಳಿ ಸಿಗಲ್ಲ - ಇದರ ಹಿಂದಿರೋ ರಹಸ್ಯ ಇಲ್ಲಿದೆ ನೋಡಿ!!

ಭಾರತ ಅಂದ್ರೆನೇ ಹಾಗೆ, ನೂರು ಕಿಲೋಮೀಟರ್ ದಾಟಿದ್ರೆ ಸಾಕು ಭಾಷೆ ಬದಲಾಗುತ್ತೆ, ಊಟದ ರುಚಿ ಬದಲಾಗುತ್ತೆ. ಆದ್ರೆ ಇಡೀ ಭಾರತದ ಅಡುಗೆಮನೆಯಲ್ಲಿ ಕಾಮನ್ ಆಗಿ ಕಾಣೋ ಒಂದು ಪದಾರ್ಥ ಅಂದ್ರೆ ಅದು ಈರುಳ್ಳಿ. ಸಾಂಬಾರ್ ಇರಲಿ, ಪಲ್ಯ ಇರಲಿ ಅಥವಾ ಸಖತ್ ಮಸಾಲಾ ಬಿರಿಯಾನಿ ಇರಲಿ—ಈರುಳ್ಳಿ ಇಲ್ಲದೆ ಅಡುಗೆಯನ್ನ ಕಲ್ಪಿಸಿಕೊಳ್ಳೋಕು ಆಗಲ್ಲ.

ಭಾರತದ ಈ ಸುಂದರ ತಾಣದಲ್ಲಿ ಈರುಳ್ಳಿ ಕಂಪ್ಲೀಟ್ ಬ್ಯಾನ್
ಭಾರತದ ಈ ಸುಂದರ ತಾಣದಲ್ಲಿ ಈರುಳ್ಳಿ ಕಂಪ್ಲೀಟ್ ಬ್ಯಾನ್

ಆದ್ರೆ, ಭಾರತದ ಒಂದು ಸುಂದರ ಪಟ್ಟಣದಲ್ಲಿ ಮಾತ್ರ ನೀವು ಎಷ್ಟೇ ಹುಡುಕಿದ್ರೂ ಒಂದು ಈರುಳ್ಳಿ ಕೂಡ ಸಿಗಲ್ಲ! ಹೌದು, ಇದು ಸುಳ್ಳಲ್ಲ. ಜಮ್ಮು ಮತ್ತು ಕಾಶ್ಮೀರದ ಒಂದು ಫೇಮಸ್ ಪಟ್ಟಣದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನ ಕಂಪ್ಲೀಟ್ ಆಗಿ ಬ್ಯಾನ್ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕತ್ರಾ (Katra) ಎಂಬ ಪಟ್ಟಣವೇ ಈ ಅಚ್ಚರಿಯ ತಾಣ. ಈ ಹೆಸರನ್ನು ನೀವು ಕೇಳಿರಬಹುದು, ಇದು ವಿಶ್ವಪ್ರಸಿದ್ಧ ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುವ ಭಕ್ತರ ಪ್ರವೇಶ ದ್ವಾರ. ಕತ್ರಾದಿಂದಲೇ ವೈಷ್ಣೋದೇವಿಯ ಬೆಟ್ಟ ಹತ್ತಲು ಶುರು ಮಾಡಬೇಕು. ಈ ಇಡೀ ಪಟ್ಟಣವನ್ನು ಅತ್ಯಂತ ಪವಿತ್ರ ಕ್ಷೇತ್ರವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಕೃಷಿ ಮಾಡೋ ಹಾಗಿಲ್ಲ, ಮಾರಾಟ ಮಾಡೋ ಹಾಗಿಲ್ಲ ಮತ್ತು ಅಡುಗೆಯಲ್ಲಿ ಬಳಸೋ ಹಾಗೆಯೇ ಇಲ್ಲ!

ನೀವು ಕತ್ರಾದಲ್ಲಿರೋ ಯಾವುದೇ ಹೋಟೆಲ್ ಅಥವಾ ರಸ್ತೆ ಬದಿಯ ಡಾಬಾಕ್ಕೆ ಹೋಗಿ ನೋಡಿ, ಅಲ್ಲಿ ಈರುಳ್ಳಿ-ಬೆಳ್ಳುಳ್ಳಿ ಮಿಶ್ರಿತ ಆಹಾರ ಸಿಗೋದೇ ಇಲ್ಲ. ಇದರ ಹಿಂದೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

ನಮ್ಮ ಪುರಾಣಗಳ ಪ್ರಕಾರ ಆಹಾರವನ್ನ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ:

ಸಾತ್ವಿಕ ಆಹಾರ: ಇದು ಮನಸ್ಸನ್ನು ಶಾಂತವಾಗಿಡುತ್ತೆ.

ರಾಜಸಿಕ ಆಹಾರ: ಇದು ಶಕ್ತಿ ಕೊಡುತ್ತೆ.

ತಾಮಸಿಕ ಆಹಾರ: ಇದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರುತ್ತವೆ.

ತಾಮಸಿಕ ಆಹಾರ ಸೇವನೆಯಿಂದ ಮನಸ್ಸಿನಲ್ಲಿ ಅಸ್ಥಿರತೆ, ಕೋಪ ಮತ್ತು ಆಲಸ್ಯ ಹೆಚ್ಚಾಗುತ್ತೆ ಎಂಬ ನಂಬಿಕೆ ಇದೆ. ವೈಷ್ಣೋದೇವಿ ದರ್ಶನಕ್ಕೆ ಬರುವ ಭಕ್ತರ ಮನಸ್ಸು ಪವಿತ್ರವಾಗಿರಲಿ ಮತ್ತು ಅವರ ಭಕ್ತಿಗೆ ಯಾವುದೇ ಭಂಗ ಬಾರದಿರಲಿ ಎಂಬ ಉದ್ದೇಶದಿಂದ ಇಲ್ಲಿ ಕೇವಲ ಸಾತ್ವಿಕ ಆಹಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಈರುಳ್ಳಿ ಇಲ್ಲದಿದ್ರೂ ಅಡುಗೆ ಸಖತ್ ರುಚಿ
ನಮಗೆಲ್ಲಾ ಒಂದು ಡೌಟ್ ಇರುತ್ತೆ—"ಈರುಳ್ಳಿ ಹಾಕಿಲ್ಲ ಅಂದ್ರೆ ಅಡುಗೆ ರುಚಿ ಕೊಡುತ್ತಾ?" ಅಂತ. ಆದ್ರೆ ಕತ್ರಾ ಪಟ್ಟಣದ ಹೋಟೆಲ್‌ಗಳಲ್ಲಿ ಸಿಗೋ ಊಟ ಸವಿದರೆ ನಿಮ್ಮ ಆ ಸಂಶಯ ಮಾಯವಾಗುತ್ತೆ. ಇಲ್ಲಿನ ಅಡುಗೆಗಳು ಎಷ್ಟು ರುಚಿಕರವಾಗಿರುತ್ತೆ ಅಂದ್ರೆ, ಈರುಳ್ಳಿ ಇಲ್ಲ ಅನ್ನೋದು ನಿಮಗೆ ನೆನಪೇ ಇರಲ್ಲ! ಆರೋಗ್ಯಕ್ಕೂ ಇದು ತುಂಬಾನೇ ಒಳ್ಳೆಯದು. ಸ್ಥಳೀಯರು ಇದನ್ನು ಕೇವಲ ಒಂದು ಸರ್ಕಾರಿ ರೂಲ್ಸ್ ಅಂತ ಅಂದುಕೊಳ್ಳಲ್ಲ, ಬದಲಿಗೆ ತಾಯಿಯ ಮೇಲಿರೋ ಭಕ್ತಿಯಿಂದ ತುಂಬಾ ಶ್ರದ್ಧೆಯಿಂದ ಈ ಸಂಪ್ರದಾಯ ಪಾಲಿಸ್ತಾರೆ.

ನಾವೂ ಕಲಿಯಬೇಕಿರೋದು ಇದೆ!

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರೋ ಈ ಸಂಪ್ರದಾಯ ಕತ್ರಾದ ಪಾವಿತ್ರ್ಯತೆಯನ್ನು ಕಾಪಾಡುತ್ತಿದೆ. ಆಧುನಿಕ ಜಗತ್ತಿನಲ್ಲೂ ಒಂದು ಇಡೀ ಪಟ್ಟಣ ಹೀಗೆ ತನ್ನ ಸಂಪ್ರದಾಯಕ್ಕೆ ಅಂಟಿಕೊಂಡಿರೋದು ನಿಜಕ್ಕೂ ಗ್ರೇಟ್ ಅಲ್ವಾ?

ನೀವೇನಾದ್ರೂ ವೈಷ್ಣೋದೇವಿ ದರ್ಶನಕ್ಕೆ ಪ್ಲಾನ್ ಮಾಡ್ತಾ ಇದ್ರೆ, ಕತ್ರಾದಲ್ಲಿ ಈರುಳ್ಳಿ ಇಲ್ಲದ ಸ್ಪೆಷಲ್ ಅಡುಗೆಯನ್ನ ಸವಿಯೋದನ್ನ ಮರೆಯಬೇಡಿ. ಇದು ನಿಮ್ಮ ಮನಸ್ಸಿಗೆ ಮಾತ್ರವಲ್ಲ, ಹೊಟ್ಟೆಗೂ ಒಂತರಾ ಡಿಫರೆಂಟ್ ಅನುಭವ ನೀಡೋದಂತೂ ಗ್ಯಾರಂಟಿ!

Latest News