Apr 30, 2026 Languages : ಕನ್ನಡ | English

ನಿಮ್ಮ ಅದೃಷ್ಟ ಬದಲಿಸಬಲ್ಲ ಮೇ ತಿಂಗಳ 5 ಪವಿತ್ರ ದಿನಗಳು - ಮುಖ ಹಬ್ಬಗಳ ಸಂಪೂರ್ಣ ಪಟ್ಟಿ ಇಲ್ಲಿದೆ!!

ಕಾಲಚಕ್ರ ಉರುಳುತ್ತಾ ಈಗ 2026ರ ಮೇ ತಿಂಗಳಿಗೆ ಬಂದಿದ್ದೇವೆ. ಈ ತಿಂಗಳು ಭಕ್ತಾದಿಗಳಿಗೆ ಸಖತ್ ವಿಶೇಷ. ಯಾಕೆಂದರೆ, ಬುದ್ಧ ಪೂರ್ಣಿಮೆಯಿಂದ ಹಿಡಿದು ಶನಿ ಜಯಂತಿಯವರೆಗೆ ಸಾಲು ಸಾಲು ಪವಿತ್ರ ದಿನಗಳು ಈ ತಿಂಗಳಲ್ಲಿವೆ. ಉಪವಾಸ, ಪೂಜೆ, ಪುನಸ್ಕಾರಗಳ ಮೂಲಕ ಮನಸ್ಸಿನ ಶಾಂತಿ ಮತ್ತು ಮನೆಯಲ್ಲಿ ಸಮೃದ್ಧಿ ಪಡೆಯಲು ಇದು ಸಕಾಲ.

2026ರ ಮೇ ತಿಂಗಳ ಹಬ್ಬಗಳ ಹಬ್ಬ | Photo Credit: CANVA
2026ರ ಮೇ ತಿಂಗಳ ಹಬ್ಬಗಳ ಹಬ್ಬ | Photo Credit: CANVA

1. ಬುದ್ಧ ಪೂರ್ಣಿಮಾ – ಮೇ 1, 2026

ಮೇ ತಿಂಗಳ ಮೊದಲ ದಿನವೇ ಶಾಂತಿಯ ದೂತ ಗೌತಮ ಬುದ್ಧನ ಜನ್ಮದಿನ. ಬುದ್ಧನ ಜ್ಞಾನೋದಯ ಮತ್ತು ಮಹಾಪರಿನಿರ್ವಾಣ ಕೂಡ ಇದೇ ದಿನ ನಡೆದಿದ್ದು ಎನ್ನುವುದು ಇದರ ವಿಶೇಷ.

ಪೂಜೆ ಹೇಗೆ?: ಬುದ್ಧನ ಮೂರ್ತಿಗೆ ಹೂವು, ದೀಪ ಅರ್ಪಿಸಿ ಶಾಂತಿಗಾಗಿ ಧ್ಯಾನ ಮಾಡಿ. 'ಬುದ್ಧಂ ಶರಣಂ ಗಚ್ಛಾಮಿ' ಮಂತ್ರ ಪಠಿಸಿ. ಬಡವರಿಗೆ ದಾನ ಮಾಡುವುದು ಈ ದಿನದ ದೊಡ್ಡ ಪುಣ್ಯ.

ಲಾಭ: ಮಾನಸಿಕ ನೆಮ್ಮದಿ ಸಿಗುತ್ತೆ, ಒತ್ತಡ ದೂರವಾಗುತ್ತೆ.

2. ಅಪರ ಏಕಾದಶಿ – ಮೇ 13, 2026

ಮಹಾ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಅಪರ ಏಕಾದಶಿ ಅತ್ಯುತ್ತಮ ದಿನ. ಈ ದಿನ ಉಪವಾಸ ಮಾಡಿದರೆ ಮಾಡಿದ ಪಾಪಗಳೆಲ್ಲಾ ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.

ಪೂಜೆ ಹೇಗೆ?: ಬೆಳಿಗ್ಗೆ ಬೇಗ ಎದ್ದು ವಿಷ್ಣುವಿಗೆ ತುಳಸಿ ಮತ್ತು ಹಣ್ಣುಗಳನ್ನು ಅರ್ಪಿಸಿ ಪೂಜೆ ಮಾಡಿ. 'ಓಂ ನಮೋ ಭಗವತೇ ವಾಸುದೇವಾಯ' ಮಂತ್ರ ಜಪಿಸಿ.

ಲಾಭ: ಕುಟುಂಬದಲ್ಲಿ ಸುಖ-ಸಂತೋಷ ನೆಲೆಸುತ್ತದೆ.

3. ಮಾಸಿಕ ಶಿವರಾತ್ರಿ – ಮೇ 15, 2026

ಶಿವನ ಆರಾಧಕರಿಗೆ ಈ ದಿನ ಹಬ್ಬವಿದ್ದಂತೆ. ಪ್ರತಿ ತಿಂಗಳು ಬಂದರೂ ಮೇ ತಿಂಗಳ ಶಿವರಾತ್ರಿ ಸ್ವಲ್ಪ ಸ್ಪೆಷಲ್.

ಪೂಜೆ ಹೇಗೆ?: ಶಿವಲಿಂಗಕ್ಕೆ ಹಾಲು ಮತ್ತು ಜೇನುತುಪ್ಪದ ಅಭಿಷೇಕ ಮಾಡಿ ಬಿಲ್ವಪತ್ರೆ ಅರ್ಪಿಸಿ. ರಾತ್ರಿ ಜಾಗರಣೆ ಮಾಡಿ ಶಿವನ ಭಜನೆ ಮಾಡುವುದು ತುಂಬಾ ಒಳ್ಳೆಯದು.

ಲಾಭ: ಆರೋಗ್ಯ ಸುಧಾರಿಸುತ್ತದೆ ಮತ್ತು ನೆಗೆಟಿವ್ ಎನರ್ಜಿ ದೂರವಾಗುತ್ತೆ.

4. ಶನಿ ಜಯಂತಿ – ಮೇ 16, 2026

ಸೂರ್ಯಪುತ್ರ ಶನಿದೇವನ ಜನ್ಮದಿನವನ್ನೇ ಶನಿ ಜಯಂತಿ ಎನ್ನಲಾಗುತ್ತದೆ. ಯಾರಿಗೆ ಶನಿ ದೋಷ ಇದೆಯೋ ಅವರಿಗೆ ಈ ದಿನದ ಪೂಜೆ ಬಹಳ ಮುಖ್ಯ.

ಪೂಜೆ ಹೇಗೆ?: ಶನಿ ದೇವನಿಗೆ ಎಳ್ಳೆಣ್ಣೆ ದೀಪ ಹಚ್ಚಿ, ಕಪ್ಪು ಎಳ್ಳು ಅರ್ಪಿಸಿ. ಬಡವರಿಗೆ ಅಥವಾ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ.

ಲಾಭ: ಶನಿ ದೋಷದ ಪ್ರಭಾವ ಕಡಿಮೆಯಾಗುತ್ತದೆ ಮತ್ತು ಕಷ್ಟಗಳಿಂದ ರಕ್ಷಣೆ ಸಿಗುತ್ತದೆ.

5. ಪದ್ಮಿನಿ ಏಕಾದಶಿ – ಮೇ 27, 2026

ಈ ಬಾರಿ ಮೇ ತಿಂಗಳಲ್ಲಿ 'ಅಧಿಕ ಮಾಸ'ದ ವಿಶೇಷ ಏಕಾದಶಿಯಾದ ಪದ್ಮಿನಿ ಏಕಾದಶಿ ಬಂದಿದೆ. ಇದು ಬಹಳ ಅಪರೂಪದ ಮತ್ತು ಪವಿತ್ರ ದಿನ.

ಪೂಜೆ ಹೇಗೆ?: ವಿಷ್ಣುವನ್ನು ಪೂಜಿಸಿ ಪಂಚಾಮೃತ ನೈವೇದ್ಯ ಅರ್ಪಿಸಿ. 'ಶಾಂತಾಕಾರಂ ಭುಜಗಶಯನಂ' ಶ್ಲೋಕ ಪಠಿಸುತ್ತಾ ದಿನವಿಡೀ ಭಕ್ತಿಯಿಂದ ಇರಿ.

ಲಾಭ: ಆಧ್ಯಾತ್ಮಿಕವಾಗಿ ನೀವು ಸದೃಢರಾಗುತ್ತೀರಿ ಮತ್ತು ಮನೆಯಲ್ಲಿ ಆರ್ಥಿಕ ಅಭಿವೃದ್ಧಿಯಾಗುತ್ತದೆ.

ಒಟ್ಟಿನಲ್ಲಿ ಈ ಮೇ ತಿಂಗಳು ಪೂರ್ತಿ ಭಕ್ತಿ ಮತ್ತು ಧಾರ್ಮಿಕ ಆಚರಣೆಗಳಿಗೆ ಮೀಸಲಾಗಿದೆ. ಈ ವಿಶೇಷ ದಿನಗಳಲ್ಲಿ ಸ್ವಲ್ಪ ಸಮಯವನ್ನು ದೇವರ ಪ್ರಾರ್ಥನೆ, ಧ್ಯಾನ ಮತ್ತು ದಾನ ಕಾರ್ಯಗಳಿಗೆ ಮೀಸಲಿಡಿ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವುದರಲ್ಲಿ ಸಂಶಯವಿಲ್ಲ.