Mar 14, 2026 Languages : ಕನ್ನಡ | English

ಹೆಣ್ಣಿರಲಿ, ಗಂಡಿರಲಿ ಹಾರ್ಮೋನ್ ಸಮಸ್ಯೆ ಕಾಡಬಹುದು - ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ 5 ಕೆಲಸಗಳನ್ನು ಪಾಲಿಸಿ!!

ನಮ್ಮ ದೇಹದಲ್ಲಿ ಹಾರ್ಮೋನುಗಳು ಎಂಬ ಪುಟ್ಟ ರಾಸಾಯನಿಕಗಳು ಇರುತ್ತವೆ. ಇವು ನಮ್ಮ ದೇಹದ "ಸಂದೇಶ ವಾಹಕಗಳು". ಅಂದರೆ, ನಮಗೆ ಯಾವಾಗ ಹಸಿವಾಗಬೇಕು, ಯಾವಾಗ ನಿದ್ರೆ ಬರಬೇಕು ಮತ್ತು ನಮ್ಮ ಮನಸ್ಥಿತಿ ಹೇಗಿರಬೇಕು ಎಂಬುದನ್ನೆಲ್ಲಾ ಇವುಗಳೇ ನಿರ್ಧರಿಸುತ್ತವೆ. ರಕ್ತದಲ್ಲಿ ಈ ಹಾರ್ಮೋನುಗಳ ಪ್ರಮಾಣ ಸರಿಯಾಗಿದ್ದರೆ ಮಾತ್ರ ನಮ್ಮ ದೇಹ ಆರೋಗ್ಯವಾಗಿರುತ್ತದೆ. ಒಂದು ವೇಳೆ ಇವುಗಳ ಪ್ರಮಾಣ ಸ್ವಲ್ಪ ಹೆಚ್ಚಾದರೂ ಅಥವಾ ಕಡಿಮೆಯಾದರೂ ಅದನ್ನು ಹಾರ್ಮೋನಲ್ ಅಸಮತೋಲನ ಎನ್ನಲಾಗುತ್ತದೆ.

ಹಾರ್ಮೋನಲ್ ಅಸಮತೋಲನ – ಕಾರಣಗಳು ಮತ್ತು ಪರಿಹಾರಗಳು!!
ಹಾರ್ಮೋನಲ್ ಅಸಮತೋಲನ – ಕಾರಣಗಳು ಮತ್ತು ಪರಿಹಾರಗಳು!!

ಹಾರ್ಮೋನುಗಳ ವ್ಯತ್ಯಾಸಕ್ಕೆ ಕಾರಣಗಳೇನು?

ನಮ್ಮ ಜೀವನದಲ್ಲಿ ನಾವು ಮಾಡುವ ಕೆಲವು ತಪ್ಪುಗಳು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತವೆ

  • ಅತಿಯಾದ ಒತ್ತಡ: ನಾವು ಯಾವಾಗಲೂ ಟೆನ್ಷನ್ ಅಥವಾ ಒತ್ತಡದಲ್ಲಿದ್ದರೆ ದೇಹದಲ್ಲಿ ಕೆಟ್ಟ ಹಾರ್ಮೋನುಗಳು ಹೆಚ್ಚಾಗುತ್ತವೆ.
  • ಜಂಕ್ ಫುಡ್: ಅತಿಯಾದ ಸಕ್ಕರೆ, ಎಣ್ಣೆ ಪದಾರ್ಥ ಮತ್ತು ಬೇಕರಿ ತಿಂಡಿಗಳನ್ನು ತಿನ್ನುವುದರಿಂದ ಹಾರ್ಮೋನುಗಳು ಏರುಪೇರಾಗುತ್ತವೆ.
  • ನಿದ್ರೆಯ ಕೊರತೆ: ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ದೇಹದ ವ್ಯವಸ್ಥೆ ಕೆಡುತ್ತದೆ.
  • ವ್ಯಾಯಾಮ ಇಲ್ಲದಿರುವುದು: ದಿನವಿಡೀ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಸಹ ಇದಕ್ಕೆ ಕಾರಣ.

ಹಾರ್ಮೋನುಗಳು ಬದಲಾದಾಗ ಕಂಡುಬರುವ ಲಕ್ಷಣಗಳು

ನಿಮ್ಮ ದೇಹದಲ್ಲಿ ಹಾರ್ಮೋನುಗಳ ಸಮಸ್ಯೆ ಇದ್ದರೆ ಈ ಕೆಳಗಿನ ಬದಲಾವಣೆಗಳು ಕಾಣಿಸಿಕೊಳ್ಳಬಹುದು

  • ಸುಸ್ತು - ಎಷ್ಟೇ ನಿದ್ರೆ ಮಾಡಿದರೂ ಯಾವಾಗಲೂ ಸುಸ್ತಾದಂತೆ ಅನಿಸುವುದು.
  • ತೂಕ ಹೆಚ್ಚಾಗುವುದು - ಸರಿಯಾಗಿ ಊಟ ಮಾಡಿದರೂ ಇದ್ದಕ್ಕಿದ್ದಂತೆ ತೂಕ ಜಾಸ್ತಿಯಾಗುವುದು.
  • ಸಿಟ್ಟು ಅಥವಾ ಬೇಸರ - ಸಣ್ಣ ವಿಷಯಕ್ಕೂ ಅತಿಯಾದ ಕೋಪ ಬರುವುದು ಅಥವಾ ಕಾರಣವಿಲ್ಲದೆ ಬೇಸರವಾಗುವುದು.
  • ಮುಖದ ಮೇಲೆ ಮೊಡವೆ - ಮುಖದ ಮೇಲೆ ಅತಿಯಾಗಿ ಮೊಡವೆಗಳು ಬರುವುದು ಮತ್ತು ಕೂದಲು ಉದುರುವುದು.
  • ಮು*ಟ್ಟಿನ ಸಮಸ್ಯೆ - ಮಹಿಳೆಯರಲ್ಲಿ ತಿಂಗಳ ಮು*ಟ್ಟು ಸರಿಯಾದ ಸಮಯಕ್ಕೆ ಆಗದಿರುವುದು.

ಹಾರ್ಮೋನುಗಳನ್ನ ಸರಿಪಡಿಸಿಕೊಳ್ಳುವುದು ಹೇಗೆ?

ಹಾರ್ಮೋನುಗಳನ್ನು ನೈಸರ್ಗಿಕವಾಗಿ ಸಮತೋಲನಕ್ಕೆ ತರಲು ಈ ಸರಳ ಹಂತಗಳನ್ನು ಅನುಸರಿಸಿ

  1. ಒಳ್ಳೆಯ ಊಟ ಮಾಡಿ - ಹಸಿರು ತರಕಾರಿ, ಹಣ್ಣುಗಳು ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ಹೆಚ್ಚಾಗಿ ಸೇವಿಸಿ. ಸಕ್ಕರೆ ಮತ್ತು ಎಣ್ಣೆ ಪದಾರ್ಥಗಳನ್ನ ಆದಷ್ಟು ಕಡಿಮೆ ಮಾಡಿ.
  2. ಚೆನ್ನಾಗಿ ನಿದ್ರೆ ಮಾಡಿ- ಪ್ರತಿದಿನ ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ.
  3. ದಿನವೂ ವ್ಯಾಯಾಮ ಮಾಡಿ - ಕನಿಷ್ಠ 30 ನಿಮಿಷಗಳ ನಡಿಗೆ ಅಥವಾ ಯೋಗ ಮಾಡುವುದರಿಂದ ಹಾರ್ಮೋನುಗಳು ಸರಿಯಾದ ಮಟ್ಟಕ್ಕೆ ಬರುತ್ತವೆ.
  4. ನೀರು ಕುಡಿಯಿರಿ: ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯುವುದರಿಂದ ದೇಹದ ಕಸ ಹೊರಹೋಗುತ್ತದೆ.

ಹಾರ್ಮೋನುಗಳ ಸಮಸ್ಯೆ ಎನ್ನುವುದು ದೊಡ್ಡ ಕಾಯಿಲೆಯಲ್ಲ. ನಮ್ಮ ತಿನ್ನುವ ಕ್ರಮ ಮತ್ತು ಜೀವನಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಂಡರೆ ಇದನ್ನು ಸುಲಭವಾಗಿ ಗುಣಪಡಿಸಬಹುದು. ಒಂದು ವೇಳೆ ಸಮಸ್ಯೆ ಜಾಸ್ತಿ ಇದ್ದರೆ ಒಮ್ಮೆ ವೈದ್ಯರನ್ನು ಕಂಡು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.