ಜೀವನದಲ್ಲಿ ನಮಗಿಂತ ಯಾರೋ ಒಬ್ಬರು ಮುಂದೆ ಹೋಗ್ತಿದ್ದಾರೆ ಅಂದಾಗ ಅಥವಾ ಅವರ ಹತ್ತಿರ ಇರೋದು ನಮ್ಮ ಹತ್ತಿರ ಇಲ್ಲ ಅಂದಾಗ ಹೊಟ್ಟೆ ಉರಿ ಅಥವಾ ಅಸೂಯೆ ಪಡೋದು ಮನುಷ್ಯ ಸಹಜ ಗುಣ. ಇವತ್ತಿನ ಕಾಂಪಿಟೇಷನ್ ಇರೋ ಪ್ರಪಂಚದಲ್ಲಿ ಇದು ಕಾಮನ್. ಆದ್ರೆ, ಈ ಅಸೂಯೆಗೆ ನಾವು ಹೇಗೆ ರಿಯಾಕ್ಟ್ ಮಾಡ್ತೀವಿ ಅನ್ನೋದರ ಮೇಲೆ ನಮ್ಮ ಪರ್ಸನಾಲಿಟಿ ಗೊತ್ತಾಗುತ್ತೆ.
ನಮಗೆ ಅಸೂಯೆ ಯಾಕೆ ಆಗುತ್ತೆ ಅಂದ್ರೆ, ನಮ್ಮಲ್ಲಿ ಯಾವುದೋ ಒಂದು ಕೀಳರಿಮೆ ಇರುತ್ತೆ. ನಮಗಿಂತ ಬೇರೆಯವರು ಚೆನ್ನಾಗಿದ್ದಾರೆ ಅಂತ ನಾವೇ ಹೋಲಿಕೆ ಮಾಡ್ಕೊಂಡಾಗ ಈ ಸಂಕಟ ಶುರುವಾಗುತ್ತೆ. ಇದು ಒಂಥರಾ ಸೋಲಿನ ಭಯ ಅಥವಾ ಅಸುರಕ್ಷಿತ ಭಾವನೆ ಅಷ್ಟೇ. ಆದ್ರೆ ಒಂದಂತೂ ನೆನಪಿಡಿ, ಯಾರಾದರೂ ನಿಮ್ಮನ್ನ ನೋಡಿ ಅಸೂಯೆ ಪಡ್ತಿದ್ದಾರೆ ಅಂದ್ರೆ, ನೀವು ಅವರಿಗಿಂತ ಏನೋ ಒಂದು ವಿಷಯದಲ್ಲಿ ಮುಂದೆ ಇದ್ದೀರಾ ಅಂತಾನೇ ಅರ್ಥ.
ಯಾರಾದರೂ ನಿಮ್ಮ ಬಗ್ಗೆ ಅಸೂಯೆ ಪಡ್ತಿದ್ರೆ ಖುಷಿ ಪಡಿ. ಯಾರೋ ನಮ್ಮನ್ನ ನೋಡಿ ಹೊಟ್ಟೆ ಉರ್ಕೊಳ್ತಾರೆ ಅಂತ ನಾವು ಅವರನ್ನ ದ್ವೇಷ ಮಾಡೋ ಅಗತ್ಯ ಇಲ್ಲ. ಯಾಕೆ ಗೊತ್ತಾ? ಅವರು ನಿಮ್ಮ ಸಾಧನೆಯನ್ನ ಗಮನಿಸ್ತಿದ್ದಾರೆ. ಅವರು ತಮ್ಮನ್ನ ನಿಮ್ಮ ಜೊತೆ ಹೋಲಿಕೆ ಮಾಡ್ಕೊಳ್ತಿದ್ದಾರೆ. ನಮಗಿಂತ ಇವರು ಬೆಸ್ಟ್ ಅಂತ ಅವರು ಪರೋಕ್ಷವಾಗಿ ಒಪ್ಪಿಕೊಳ್ತಿದ್ದಾರೆ. ಅವರ ಅಸೂಯೆಯೇ ನಿಮ್ಮ ಸಕ್ಸಸ್‌ಗೆ ಸಿಕ್ಕಿರೋ ಅತಿದೊಡ್ಡ ಸರ್ಟಿಫಿಕೇಟ್. ಅದಕ್ಕೆ ದ್ವೇಷದ ಅವಶ್ಯಕತೆ ಇಲ್ಲ.
ನಾವು ಯಾಕೆ ದ್ವೇಷಿಸಬಾರದು? ಅದು ಅವರ ಸಮಸ್ಯೆ, ನಿಮ್ಮದಲ್ಲ. ಯಾರೋ ಅಸೂಯೆ ಪಡ್ತಾರೆ ಅಂದ್ರೆ ಅದು ಅವರ ಮನಸ್ಥಿತಿಯನ್ನ ತೋರಿಸುತ್ತೆ. ಅದಕ್ಕೆ ನೀವು ರಿಯಾಕ್ಟ್ ಮಾಡಿ ನಿಮ್ಮ ವ್ಯಾಲ್ಯೂ ಕಡಿಮೆ ಮಾಡ್ಕೊಬೇಡಿ. ದ್ವೇಷದಿಂದ ಏನೂ ಸಿಗಲ್ಲ, ನೀವು ಅವರನ್ನ ದ್ವೇಷ ಮಾಡೋಕೆ ಶುರು ಮಾಡಿದ್ರೆ, ನಿಮ್ಮ ಮನಸ್ಸಿನ ಶಾಂತಿ ಹಾಳಾಗುತ್ತೆ. ಅನಾವಶ್ಯಕ ನೆಗಟಿವ್ ಎನರ್ಜಿ ನಿಮ್ಮ ಲೈಫ್‌ಗೆ ಬರುತ್ತೆ. ಸಹಾನುಭೂತಿ ತೋರಿಸಿ, ಅವರ ಬಗ್ಗೆ ದ್ವೇಷ ಮಾಡುವ ಬದಲು ಕನಿಕರ ತೋರಿಸಿ. ನಿಮ್ಮ ಸಾಧನೆಯನ್ನ ನೋಡಿ ಸಂಕಟ ಪಡ್ತಿರೋ ಅವರ ಮನಸ್ಥಿತಿ ಎಷ್ಟು ಪಾಪ ಅಲ್ವಾ? ನೀವು ಶಾಂತವಾಗಿದ್ರೆ ನಿಮ್ಮ ವ್ಯಕ್ತಿತ್ವ ಇನ್ನು ಬೆಳೆಯುತ್ತೆ.
ನೆಗೆಟಿವ್ ಅಸೂಯೆಯನ್ನ ಪಾಸಿಟಿವ್ ಶಕ್ತಿಯನ್ನಾಗಿ ಬದಲಿಸಿ. ಅಸೂಯೆ ಅನ್ನೋದು ಕೇವಲ ಹೊಟ್ಟೆ ಉರಿಯಾಗಿ ಉಳಿಯಬಾರದು. ಅದನ್ನ ಒಂದು ಇನ್ಸ್ಪಿರೇಷನ್ ಆಗಿ ತಗೋಬೇಕು. ಅದಕ್ಕಾಗಿ ಹೀಗೆ ಮಾಡಬೇಡಿ, ಬೇರೆಯವರ ಜೊತೆ ಹೋಲಿಕೆ ಮಾಡ್ಕೋಬೇಡಿ, ಮನಸ್ಸಿನಲ್ಲಿ ಕಹಿ ಇಟ್ಕೋಬೇಡಿ. ಬೇರೆಯವರಿಂದ ಕಲಿಯಿರಿ, ದಿನದಿನಕ್ಕೂ ಬೆಳೆಯಿರಿ, ಪಾಸಿಟಿವ್ ಆಗಿ ಯೋಚಿಸಿ.
ನಮ್ಮ ಜೀವನದ ದಾರಿ ಬೇರೆ, ಇನ್ನೊಬ್ಬರ ಜೀವನದ ದಾರಿ ಬೇರೆ. ಎಲ್ಲವನ್ನೂ ಹೋಲಿಕೆ ಮಾಡ್ತಾ ಹೋದ್ರೆ ನೆಮ್ಮದಿ ಇರಲ್ಲ. ನಮ್ಮ ಮೇಲಿನ ನಂಬಿಕೆ ನಮಗೆ ಇರಲಿ. ಯಾರೋ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ ಅಥವಾ ಅಸೂಯೆ ಪಡ್ತಾರೆ ಅಂತ ನಿಮ್ಮ ಹಾದಿ ಬದಲಿಸಬೇಡಿ. ನಿಮ್ಮ ಗಮನ ಕೇವಲ ನಿಮ್ಮ ಗುರಿಯ ಮೇಲೆ ಇರಲಿ.
ಅಸೂಯೆ ಅನ್ನೋದು ನಿಮ್ಮ ಸೋಲಲ್ಲ, ಅದು ನೀವು ಸರಿಯಾದ ದಾರಿಯಲ್ಲಿ ಹೋಗ್ತಿದ್ದೀರಾ ಅನ್ನೋದರ ಸಂಕೇತ. ನೀವು ಸಕ್ಸಸ್ ಆದಾಗ ಜನ ಅಸೂಯೆ ಪಡೋದು ಕಾಮನ್. ಆ ಅಸೂಯೆಯನ್ನ ನಾವು ಎಷ್ಟರ ಮಟ್ಟಿಗೆ "ಗ್ರೇಸ್" ಆಗಿ ಹ್ಯಾಂಡಲ್ ಮಾಡ್ತೀವಿ ಅನ್ನೋದೇ ಮುಖ್ಯ. ಯಶಸ್ಸು ಅಂದ್ರೆ ಬರೀ ಹಣ ಗಳಿಸೋದಲ್ಲ, ಎಲ್ಲವನ್ನೂ ಸಮತೋಲನದಿಂದ ನಿಭಾಯಿಸೋದು. ಹಾಗಾಗಿ ಇನ್ಮುಂದೆ ಯಾರಾದ್ರೂ ನಿಮ್ಮನ್ನ ನೋಡಿ ಅಸೂಯೆ ಪಟ್ಟರೆ, ಅವರಿಗೆ ದ್ವೇಷ ತೋರಿಸುವ ಬದಲು ಒಂದು ಸ್ಮೈಲ್ ಕೊಡಿ. ನೀವು ಗ್ರೇಟ್ ಅಂತ ನೀವೇ ಸಾಬೀತು ಮಾಡಿದಂತೆ ಆಗುತ್ತದೆ.