Mar 7, 2026 Languages : ಕನ್ನಡ | English

ಹುಡುಗನ ಲವ್ ಮಾಡೋ ಪ್ರತಿಯೊಬ್ಬ ಹುಡುಗಿ ತಿಳಿದುಕೊಳ್ಳುವ ವಿಷಯ - ಒಬ್ಬ ಆದರ್ಶ ತಂದೆ ಅಂದ್ರೆ ಹೀಗಿರಬೇಕು!!

ನಮ್ಮ ಸಮಾಜದಲ್ಲಿ ಇಂದಿಗೂ ಪ್ರೀತಿ ಹಾಗೂ ಈ ಮದುವೆ ವಿಷಯ ಬಂದಾಗ ಜಾತಿ, ಹಣ ಮತ್ತು ಸಮಾಜದ ಭಯವೇ ದೊಡ್ಡ ಗೋಡೆಯಾಗಿ ನಿಲ್ಲುತ್ತದೆ. ಆದರೆ, ದೃಷ್ಟಿ ಸಿಂಧಿ ಅವರ ಜೀವನದಲ್ಲಿ ನಡೆದ ಈ ಘಟನೆ, ಪೋಷಕರು ಮನಸ್ಸು ಮಾಡಿದರೆ ಮಕ್ಕಳ ಜೀವನ ಎಷ್ಟು ಸುಂದರವಾಗಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ನೋಡಿ. 

ಮಗಳ ಪ್ರೀತಿಗೆ ಬೆಂಬಲಿಸಿದ ತಂದೆ – ಎಲ್ಲರಿಗೂ ಮಾದರಿ!!
ಮಗಳ ಪ್ರೀತಿಗೆ ಬೆಂಬಲಿಸಿದ ತಂದೆ – ಎಲ್ಲರಿಗೂ ಮಾದರಿ!!

ದೃಷ್ಟಿ ಸಿಂಧಿ ಕಳೆದ 11 ವರ್ಷಗಳಿಂದ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದರು. ಅಷ್ಟು ವರ್ಷ ಕಾಲದ ಪ್ರೀತಿಯ ನಂತರ, ಒಂದು ದಿನ ಅವರು ತನ್ನ ಪೋಷಕರಿಗೆ ಈ ವಿಷಯವನ್ನು ತಿಳಿಸಲೇಬೇಕು ಎಂದು ನಿರ್ಧರಿಸಿದರು. ಆದರೆ, ಒಳಗೊಳಗೆ ಅವರಿಗೆ  ಹೆಚ್ಚು ಭಯವಿತ್ತು. ತಂದೆ ಏನು ಹೇಳುತ್ತಾರೋ ಎಂಬ ಆತಂಕದಲ್ಲಿ ನಡುಗುವ ದನಿಯಲ್ಲೇ ಅವರು ಹೇಳಿದರು, 'ಪಪ್ಪಾ, ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಆದರೆ ಆತ ನಮ್ಮ ಜಾತಿಯವನಲ್ಲ' ಎಂದು.

ಸಾಮಾನ್ಯವಾಗಿ ಇಂತಹ ಮಾತು ಕೇಳಿದ ತಕ್ಷಣ ಅನೇಕ ತಂದೆಯರು ಕೋಪಗೊಳ್ಳುತ್ತಾರೆ. ಆದರೆ ದೃಷ್ಟಿ ಅವರ ತಂದೆ ಅತ್ಯಂತ ಸರಳ ಶಾಂತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 'ಮಗಳೇ, ನೀನು ಪ್ರೀತಿಸುತ್ತಿರುವ ಹುಡುಗ ಯಾವ ಜಾತಿಯವನು ಎಂಬುದು ನನಗೆ ಮುಖ್ಯವಲ್ಲ. ಈ ಸಮಾಜ ಏನು ಹೇಳುತ್ತದೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಸಂತೋಷವೇ ಮುಖ್ಯ,' ಎಂದರು. ಈ ಮಾತುಗಳು ದೃಷ್ಟಿಯ ಅರ್ಧದಷ್ಟು ಆತಂಕ ಕಡಿಮೆ ಮಾಡಿತು ಎಂದು ಹೇಳಬಹುದು. 

ತಂದೆಯ ಬೆಂಬಲ ಕಂಡು ದೃಷ್ಟಿ ಮತ್ತೊಂದು ವಿಷಯವನ್ನು ಬಿಚ್ಚಿಟ್ಟರು. "ಪಪ್ಪಾ, ಆತ ಈಗ ಸದ್ಯಕ್ಕೆ ಅಷ್ಟೊಂದು ಹಣ ಸಂಪಾದನೆ ಮಾಡುತ್ತಿಲ್ಲ," ಎಂದರು. ಅದಕ್ಕೆ ಅವರ ತಂದೆ ಕಿರುನಗೆಯೊಂದಿಗೆ ಹೇಳಿದರು, "ಮಗಳೇ, ಹಣದಿಂದಲೇ ಸಂಬಂಧಗಳು ನಡೆಯುವುದಿಲ್ಲ. ಸಂಸಾರದಲ್ಲಿ ಕೆಲವೊಮ್ಮೆ ಗಂಡ ಹೆಚ್ಚು ಸಂಪಾದಿಸಬಹುದು, ಕೆಲವೊಮ್ಮೆ ಹೆಂಡತಿ ಹೆಚ್ಚು ಗಳಿಸಬಹುದು. ಆದರೆ ಮುಖ್ಯವಾಗಿ ಬೇಕಿರುವುದು ಒಬ್ಬರಿಗೊಬ್ಬರು ನೀಡುವ ಬೆಂಬಲ ಮತ್ತು ನಂಬಿಕೆ," ಎಂದು ತಿಳಿ ಹೇಳಿದರು.

ಮಗಳಿಗೆ ಧೈರ್ಯ ತುಂಬಲು ತಂದೆ ತಮ್ಮ ಸ್ವಂತ ಜೀವನದ ಕಥೆಯನ್ನೇ ಹಂಚಿಕೊಂಡರು. ತಾನು ಕೂಡ ಆ ಕಾಲದಲ್ಲಿ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿದ್ದಾಗಿ ಹೇಳಿದರು. ಆರಂಭದಲ್ಲಿ ತಾವು ಕೂಡ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರೂ, ಇಬ್ಬರೂ ಜೊತೆಯಾಗಿ ನಿಂತಿದ್ದರಿಂದ ಇಂದು ಎಲ್ಲವೂ ಚೆನ್ನಾಗಿದೆ ಎಂದು ವಿವರಿಸಿದರು. ತಮ್ಮ ಮಗಳಿಗೂ ಅಂತಹದ್ದೇ ಸುಂದರ ಜೀವನ ಸಿಗಲಿ ಎಂಬುದು ಅವರ ಹಾರೈಕೆಯಾಗಿತ್ತು.

ದೃಷ್ಟಿ ಸಿಂಧಿ ಅವರ ತಂದೆಯಂತಹ ಪೋಷಕರು ನಿಜವಾಗಿಯೂ ಗೌರವಕ್ಕೆ ಅರ್ಹ ವ್ಯಕ್ತಿ. ಮಗಳ ಪ್ರೀತಿಯನ್ನು ಗೌರವಿಸಿ, ಆಕೆಯ ಭವಿಷ್ಯದ ಬಗ್ಗೆ ನಂಬಿಕೆ ಇಟ್ಟ ಇವರ ಯೋಚನೆ ತುಂಬಾ ಅದ್ಭುತವಾದುದು. ಸಮಾಜದ ಕಟ್ಟುಪಾಡುಗಳಿಗಿಂತ ಮಕ್ಕಳ ನೆಮ್ಮದಿಯೇ ದೊಡ್ಡದು ಎಂದು ಭಾವಿಸುವ ಇಂತಹ ತಂದೆ ಪ್ರತಿಯೊಬ್ಬರಿಗೂ ಸಿಗಲಿ ಎಂಬುದೇ ಎಲ್ಲರ ಆಶಯ.