ಮನೆಯಲ್ಲಿ ಜಿರಳೆಗಳದ್ದೇ ಸಾಮ್ರಾಜ್ಯನಾ? Cockroach ಓಡಿಸೋದು ಹೇಗೆ? ಕಾಕ್ರೋಚ್ ಮುಕ್ತ ಮನೆಗಾಗಿ ಈ ಟ್ರಿಕ್ ಫಾಲೋ ಮಾಡಿ!

ಮನೆಯಲ್ಲಿ ಎಷ್ಟೇ ಕ್ಲೀನ್ ಆಗಿ ಇಟ್ಟರೂ ಈ ಜಿರಳೆಗಳು (Cockroaches) ಎಲ್ಲಿಂದ ಬರುತ್ತವೋ ಗೊತ್ತಾಗಲ್ಲ. ಅಡುಗೆಮನೆ, ಬಾತ್‌ರೂಮ್, ಕಪಾಟು ಅಂತ ಪ್ರತಿ ಮೂಲೆಯಲ್ಲೂ 'ನಂದೇ ಸಾಮ್ರಾಜ್ಯ' ಅನ್ನೋ ತರ ಓಡಾಡಿಕೊಂಡಿರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಅಂತ ಜೋಕ್ಸ್ ಓಡಾಡುತ್ತಿರಬಹುದು, ಆದರೆ ನಿಜವಾಗಿಯೂ ಮನೆಯಲ್ಲಿ ಇವುಗಳ ಕಾಟ ಜಾಸ್ತಿಯಾದರೆ ಯಜಮಾನರಿಗೆ ತಲೆನೋವು ಬರೋದು ಗ್ಯಾರಂಟಿ.

ಜಿರಳೆಗಳನ್ನು ಓಡಿಸಲು ಇಲ್ಲಿವೆ 5 ಬೆಸ್ಟ್ ಮನೆಮದ್ದುಗಳು;
ಜಿರಳೆಗಳನ್ನು ಓಡಿಸಲು ಇಲ್ಲಿವೆ 5 ಬೆಸ್ಟ್ ಮನೆಮದ್ದುಗಳು;

ನಿಮ್ಮ ಮನೆಯನ್ನು ಜಿರಳೆ ಮುಕ್ತ ಮಾಡಲು ಕೆಮಿಕಲ್ ಸ್ಪ್ರೇಗಳೇ ಬೇಕಾಗಿಲ್ಲ, ಕಿಚನ್‌ನಲ್ಲಿರೋ ವಸ್ತುಗಳನ್ನು ಬಳಸಿಕೊಂಡೇ ಇವುಗಳಿಗೆ ಬ್ರೇಕ್ ಹಾಕಬಹುದು. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಈಜಿ ಟಿಪ್ಸ್.

1. ಪುದೀನಾ ಮತ್ತು ಟೀ ಟ್ರೀ ಆಯಿಲ್ ಮ್ಯಾಜಿಕ್

ಜಿರಳೆಗಳಿಗೆ ಕೆಲವು ಸ್ಟ್ರಾಂಗ್ ವಾಸನೆಗಳನ್ನು ತಡೆದುಕೊಳ್ಳಲು ಆಗಲ್ಲ. ಅಂತಹ ವಾಸನೆ ಮೂಗಿಗೆ ಬಿದ್ದರೆ ಸಾಕು, ಅವುಗಳಿಗೆ ಉಸಿರಾಡಲು ಕಷ್ಟವಾಗಿ ಜಾಗ ಖಾಲಿ ಮಾಡುತ್ತವೆ. ಪುದೀನಾ ಎಣ್ಣೆ (Mint oil) ಮತ್ತು ಟೀ ಟ್ರೀ ಎಣ್ಣೆ (Tea Tree oil) ಇದಕ್ಕೆ ಬೆಸ್ಟ್ ಆಪ್ಷನ್. ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ತಗೊಂಡು, ಅದಕ್ಕೆ ಸ್ವಲ್ಪ ಪುದೀನಾ ಎಣ್ಣೆ ಮಿಕ್ಸ್ ಮಾಡಿ. ಬಾತ್‌ರೂಮ್ ಮೂಲೆಗಳು, ಬಾಗಿಲ ಸಂದಿ ಮತ್ತು ಸಿಂಕ್ ಕೆಳಗೆ ಸ್ಪ್ರೇ ಮಾಡಿ. ಇದರಿಂದ ಮನೆಗೂ ಒಳ್ಳೆ ಪರಿಮಳ ಬರುತ್ತೆ, ಜಿರಳೆಗಳೂ ಓಡಿ ಹೋಗುತ್ತವೆ. ಟೀ ಟ್ರೀ ಆಯಿಲ್ ಇನ್ಫೆಕ್ಷನ್ ತಡೆಯೋಕು ಹೆಲ್ಪ್ ಆಗುತ್ತೆ.

2. ಕಾಫಿ ಪುಡಿಯ ಖೆಡ್ಡಾ!

ಕಾಫಿಯಲ್ಲಿರೋ ಕೆಫೀನ್ ಅಂಶ ಜಿರಳೆಗಳ ನರಮಂಡಲಕ್ಕೆ ಹಾನಿ ಮಾಡುತ್ತದೆ. ಒಂದು ಗಾಜಿನ ಜಾರ್ ತಗೊಂಡು ಅದರಲ್ಲಿ ಅರ್ಧದಷ್ಟು ನೀರು ತುಂಬಿಸಿ, ಸ್ವಲ್ಪ ಸ್ಟ್ರಾಂಗ್ ಆದ ಕಾಫಿ ಪುಡಿ ಹಾಕಿ ಇಡಿ. ಕಾಫಿಯ ಘಮಕ್ಕೆ ಅಟ್ರಾಕ್ಟ್ ಆಗುವ ಜಿರಳೆಗಳು ಜಾರ್ ಹತ್ತಿರ ಬರುತ್ತವೆ. ನೀರು ಕುಡಿಯಲು ಹೋದಾಗ ಒಳಗೆ ಬಿದ್ದು, ಹೊರಗೆ ಬರಲಾಗದೆ ಅಲ್ಲೇ ಸಾಯುತ್ತವೆ. ಜಿರಳೆಗಳು ಜಾಸ್ತಿ ಇರೋ ಕಡೆ ಈ ಜಾರ್ ಇಟ್ಟರೆ ಸಾಕು.

3. ಅಡುಗೆ ಸೋಡಾ ಮತ್ತು ಸಕ್ಕರೆ ಕಾಂಬಿನೇಷನ್

ಜಿರಳೆಗಳನ್ನು ಪಕ್ಕಾ ಪ್ಲಾನ್ ಮಾಡಿ ಮುಗಿಸಲು ಅಡುಗೆ ಸೋಡಾ ಮತ್ತು ಸಕ್ಕರೆ ಸಖತ್ ವರ್ಕ್ ಆಗುತ್ತೆ. ಒಂದು ಸಣ್ಣ ಬಟ್ಟಲಿನಲ್ಲಿ ಒಂದು ಚಮಚ ಅಡುಗೆ ಸೋಡಾ ಮತ್ತು ಒಂದು ಚಮಚ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೌಡರ್ ಅನ್ನು ಜಿರಳೆ ಓಡಾಡೋ ಕಡೆ ಸಣ್ಣ ಪೇಪರ್ ಮೇಲೋ ಅಥವಾ ತಟ್ಟೆಯಲ್ಲೋ ಹಾಕಿ ಇಡಿ. ಸಕ್ಕರೆಯ ಸಿಹಿಗೆ ಆಸೆ ಬಿದ್ದು ಬರುವ ಜಿರಳೆಗಳು ಅದರ ಜೊತೆ ಅಡುಗೆ ಸೋಡಾವನ್ನೂ ತಿನ್ನುತ್ತವೆ. ಸೋಡಾ ಹೊಟ್ಟೆ ಸೇರಿದಾಗ ಗ್ಯಾಸ್ ಉತ್ಪತ್ತಿ ಆಗುತ್ತೆ. ಜಿರಳೆಗಳಿಗೆ ಗ್ಯಾಸ್ ಹೊರಹಾಕುವ ಶಕ್ತಿ ಇಲ್ಲದ ಕಾರಣ, ಹೊಟ್ಟೆ ಉಬ್ಬಿ ಅವು ಸತ್ತುಹೋಗುತ್ತವೆ.

ಈ ಸಣ್ಣ ಸಣ್ಣ ತಪ್ಪುಗಳನ್ನು ಮಾಡಬೇಡಿ:

ಲೈಟ್ ಆನ್ ಇರಲಿ: ಜಿರಳೆಗಳಿಗೆ ಕತ್ತಲೆ ಅಂದ್ರೆ ಫುಲ್ ಇಷ್ಟ. ಅದಕ್ಕೆ ರಾತ್ರಿ ಬಾತ್‌ರೂಮ್‌ನಲ್ಲಿ ಒಂದು ಸಣ್ಣ ಝೀರೋ ವ್ಯಾಟ್ ಬಲ್ಬ್ ಆನ್ ಇಡಿ. ಬೆಳಕಿದ್ದರೆ ಅವು ಹೊರಗೆ ಬರಲು ಹೆದರುತ್ತವೆ.

ಸಿಲಿಕಾ ಜೆಲ್ ಪ್ಯಾಕೆಟ್ಸ್: ನೀವು ಹೊಸ ಶೂ ಅಥವಾ ಬ್ಯಾಗ್ ಕೊಂಡಾಗ ಅದರೊಳಗೆ ಸಣ್ಣ ಸಿಲಿಕಾ ಜೆಲ್ ಪ್ಯಾಕೆಟ್‌ಗಳು ಸಿಗುತ್ತವಲ್ಲ, ಅವುಗಳನ್ನು ಬಿಸಾಡಬೇಡಿ. ಬಾತ್‌ರೂಮ್ ಕಪಾಟುಗಳು ಅಥವಾ ಸಿಂಕ್ ಹತ್ತಿರ ಇಟ್ಟರೆ ತೇವಾಂಶ ಇರಲ್ಲ.

ನೆಲ ಒಣಗಿರಲಿ: ಕಿಚನ್ ಮತ್ತು ಬಾತ್‌ರೂಮ್ ದೀರ್ಘಕಾಲ ತೇವವಾಗಿ ಇರಬಾರದು. ನಲ್ಲಿಗಳು ಸೋರುತ್ತಿದ್ದರೆ ತಕ್ಷಣ ರಿಪೇರಿ ಮಾಡಿ. ಗೋಡೆ ಅಥವಾ ಟೈಲ್ಸ್ ಮಧ್ಯೆ ಗ್ಯಾಪ್ ಇದ್ದರೆ ವೈಟ್ ಸಿಮೆಂಟ್ ಹಾಕಿ ಮುಚ್ಚಿಬಿಡಿ.

ಬಿಸಿನೀರಿನ ಟ್ರಿಕ್: ವಾರಕ್ಕೊಮ್ಮೆ ಒಳಚರಂಡಿ ಪೈಪ್‌ಗಳಿಗೆ ಚೆನ್ನಾಗಿ ಕಾದ ಬಿಸಿನೀರನ್ನು ಸುರಿಯಿರಿ. ಇದರಿಂದ ಪೈಪ್ ಒಳಗೆ ಜಿರಳೆಗಳು ಇಟ್ಟಿರೋ ಮೊಟ್ಟೆಗಳೆಲ್ಲ ನಾಶವಾಗುತ್ತವೆ. ಕಸದ ತೊಟ್ಟಿಯನ್ನು ಯಾವಾಗಲೂ ಮುಚ್ಚಿಡಿ.

ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಮನೆ ಫುಲ್ ಕ್ಲೀನ್ ಆಗಿ, ಜಿರಳೆ ಮುಕ್ತವಾಗೋದ್ರಲ್ಲಿ ಡೌಟೇ ಇಲ್ಲ! 

Latest News