Apr 21, 2026 Languages : ಕನ್ನಡ | English

ಗಣಿತದ ಲೆಕ್ಕ ಬಿಟ್ಟು ಭರ್ಜರಿ ಸ್ಟೆಪ್ಸ್ ಹಾಕಿದ ಬೆಂಗಳೂರು ಪ್ರೊಫೆಸರ್ - ವೈರಲ್ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು!!

ಸಾಮಾನ್ಯವಾಗಿ ನಮಗೆ ಕಾಲೇಜು ಪ್ರೊಫೆಸರ್ ಅಂದ್ರೆ ನೆನಪಿಗೆ ಬರೋದು ಕೈಯಲ್ಲಿ ಸೀಮೆಸುಣ್ಣ ಅಥವಾ ಮಾರ್ಕರ್ ಹಿಡಿದು ಬೋರ್ಡ್ ಮೇಲೆ ಗಂಭೀರವಾಗಿ ಪಾಠ ಮಾಡೋ ಮುಖಗಳು. ಆದ್ರೆ ಬೆಂಗಳೂರಿನ ಈ ಪ್ರೊಫೆಸರ್ ಮಾಡಿರೋ ಕೆಲಸ ನೋಡಿ ಇಡೀ ಇಂಟರ್ನೆಟ್ ಈಗ ಫುಲ್ ಶಾಕ್ ಆಗಿದೆ. ಹೌದು, ಪಾಠ ಮಾಡೋದ್ರಲ್ಲಿ ಮಾತ್ರವಲ್ಲ, ಡ್ಯಾನ್ಸ್ ಮಾಡೋದ್ರಲ್ಲೂ ನಾನು ಯಾರಿಗಿಂತ ಕಮ್ಮಿ ಇಲ್ಲ ಅಂತ ಇವರು ತೋರಿಸಿಕೊಟ್ಟಿದ್ದಾರೆ.

ಬಿಐಟಿ ಕಾಲೇಜಿನ ‘ಡ್ಯಾನ್ಸಿಂಗ್ ಕ್ವೀನ್; | Photo Credit: https://www.instagram.com/priyadarshinishivaramu/
ಬಿಐಟಿ ಕಾಲೇಜಿನ ‘ಡ್ಯಾನ್ಸಿಂಗ್ ಕ್ವೀನ್; | Photo Credit: https://www.instagram.com/priyadarshinishivaramu/

ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಗಣಿತ ಶಾಸ್ತ್ರದ ಪ್ರೊಫೆಸರ್ ಒಬ್ಬರು ಫ್ಲ್ಯಾಶ್ ಮಾಬ್‌ನಲ್ಲಿ ಮಾಡಿದ ಡ್ಯಾನ್ಸ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅಷ್ಟಕ್ಕೂ ಈ 'ಡ್ಯಾನ್ಸಿಂಗ್ ಕ್ವೀನ್' ಯಾರು? ಅಂತಹದ್ದೇನಿದೆ ಆ ವಿಡಿಯೋದಲ್ಲಿ? ಬನ್ನಿ ಡಿಟೇಲ್ ಆಗಿ ತಿಳ್ಕೊಳ್ಳೋಣ.

ಯಾರೀ ಪ್ರೊಫೆಸರ್? ಫೇಮಸ್ ಆಗಿದ್ದು ಹೇಗೆ?

ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಗಣಿತದ ಪಾಠ ಮಾಡುವ ಪ್ರಿಯದರ್ಶಿನಿ ಶಿವರಾಮು ಅವರು ಇವತ್ತು ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಕಾಲೇಜಿನ ಫ್ಲ್ಯಾಶ್ ಮಾಬ್ ಕಾರ್ಯಕ್ರಮವೊಂದರಲ್ಲಿ ಪ್ರಿಯದರ್ಶಿನಿ ಅವರು ಪ್ರಭುದೇವ ಅವರ ಸೂಪರ್ ಹಿಟ್ ಸಾಂಗ್ ಮುಕ್ಕಾಲ ಮುಕ್ಕಾಬಾಲಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋವನ್ನ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಮತ್ತು ಕಮೆಂಟ್‌ಗಳ ಸುರಿಮಳೆಯೇ ಬಂದಿದೆ.

ವಿದ್ಯಾರ್ಥಿಗಳ ಮಧ್ಯೆ ನಿಂತು ಯಾವುದೇ ಸಂಕೋಚವಿಲ್ಲದೆ, ಪೂರ್ಣ ಎನರ್ಜಿಯೊಂದಿಗೆ ಅವರು ಡ್ಯಾನ್ಸ್ ಮಾಡೋದನ್ನ ನೋಡೋದೇ ಒಂದು ಚಂದ. ಅವರ ಹಿಂದೆ ನಿಂತಿದ್ದ ವಿದ್ಯಾರ್ಥಿಗಳಂತೂ ತಮ್ಮ ಪ್ರೊಫೆಸರ್ ಡ್ಯಾನ್ಸ್ ನೋಡಿ ಫುಲ್ ಖುಷಿಯಾಗಿ ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸಿದ್ದಾರೆ.

ಈ ವಿಡಿಯೋ ನೋಡಿ ಸುಮ್ಮನಿರದ ನೆಟ್ಟಿಗರು ತಮ್ಮದೇ ಆದ ಸ್ಟೈಲ್‌ನಲ್ಲಿ ಕಮೆಂಟ್ ಮಾಡ್ತಿದ್ದಾರೆ. ಪ್ರಿಯದರ್ಶಿನಿ ಅವರ ಎನರ್ಜಿಯನ್ನ ನೋಡಿ ಕೆಲವರು ಇವರನ್ನ "ಆಲ್‌ರೌಂಡರ್ ಪ್ರೊಫೆಸರ್" ಅಂತ ಕರೆದ್ರೆ, ಇನ್ನು ಕೆಲವರು ಅವರ ಡ್ಯಾನ್ಸ್ ಸ್ಟೆಪ್ಸ್‌ಗಳನ್ನ ಮಾರ್ಷಲ್ ಆರ್ಟ್ಸ್‌ಗೆ ಹೋಲಿಸಿದ್ದಾರೆ. ಒಬ್ಬ ನೆಟ್ಟಿಗರಂತೂ, "ಇದು ಡ್ಯಾನ್ಸ್ ಅಲ್ಲ, ಬಾಕ್ಸಿಂಗ್ ವೈಬ್ ಕೊಡ್ತಿದೆ. ಲೆಫ್ಟ್ ಸ್ಟ್ರೈಟ್, ರೈಟ್ ಅಪ್ಪರ್ ಕಟ್ ತರ ಇದೆ ನಿಮ್ಮ ಸ್ಟೆಪ್ಸ್" ಅಂತ ಫನ್ನಿಯಾಗಿ ಬರೆದಿದ್ದಾರೆ. ವಿದ್ಯಾರ್ಥಿಗಳಂತೂ 'ಮೇಡಂ ನೀವು ಯಾವಾಗಲೂ ರಾಕ್ ಮಾಡ್ತೀರಾ, ನಿಮ್ಮ ಎನರ್ಜಿ ನಮಗೂ ಸ್ಫೂರ್ತಿ' ಅಂತ ಹೊಗಳಿದ್ದಾರೆ.

ನಿಜವಾಗಿಯೂ ಪ್ರಿಯದರ್ಶಿನಿ ಅವರು ಹಾಕಿರೋ ಸ್ಟೆಪ್ಸ್‌ನಲ್ಲಿ ಒಂದು ರೀತಿಯ ಕಾನ್ಫಿಡೆನ್ಸ್ ಮತ್ತು ಖುಷಿ ಇದೆ. ಗಣಿತದಂತಹ ಕಷ್ಟದ ವಿಷಯವನ್ನ ಪಾಠ ಮಾಡುವವರು ಇಷ್ಟು ಕೂಲ್ ಆಗಿ ಡ್ಯಾನ್ಸ್ ಮಾಡ್ತಾರೆ ಅಂದ್ರೆ ಅದು ದೊಡ್ಡ ವಿಷಯವೇ ಅಲ್ವಾ?

ಜೀವನ ಅಂದ್ರೆ ಬರೀ ಕೆಲಸ, ಗಂಭೀರತೆ ಅಷ್ಟೇ ಅಲ್ಲ. ಅದರ ಮಧ್ಯೆ ಇಂತಹ ಸಣ್ಣ ಸಣ್ಣ ಖುಷಿಗಳನ್ನ ಕಂಡುಕೊಳ್ಳೋದು ಬಹಳ ಮುಖ್ಯ. ಕೆಲಸದ ಒತ್ತಡದ ನಡುವೆಯೂ ತಮ್ಮ ಹವ್ಯಾಸವನ್ನ ಉಳಿಸಿಕೊಂಡಿರೋ ಪ್ರಿಯದರ್ಶಿನಿ ಅವರ ನಡೆ ನಿಜಕ್ಕೂ ಮೆಚ್ಚುವಂತದ್ದು. ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಇಷ್ಟು ಆಪ್ತವಾಗಿ, ಫ್ರೆಂಡ್ಲಿ ಆಗಿದ್ದಾಗ ಮಾತ್ರ ಕಲಿಯೋದು ಕೂಡ ಒಂದು ಮಜಾ ಕೊಡುತ್ತೆ. ನಿಮ್ಮ ಕಾಲೇಜಿನಲ್ಲೂ ಇಂತಹ ಕೂಲ್ ಪ್ರೊಫೆಸರ್ ಇದ್ದಾರಾ? ಅವರ ಬಗ್ಗೆ ಕಮೆಂಟ್ ಮಾಡಿ ತಿಳಿಸಿ. ಈ ವಿಡಿಯೋವನ್ನ ನಿಮ್ಮ ಕಾಲೇಜ್ ಫ್ರೆಂಡ್ಸ್ ಗ್ರೂಪ್‌ಗೆ ಶೇರ್ ಮಾಡೋದು ಮರಿಬೇಡಿ.

Latest News