Apr 11, 2026 Languages : ಕನ್ನಡ | English

ಬೆಂಗಳೂರಿನಲ್ಲಿ ಮನೆ ಮಾಡೋರಿಗೆ BDA ಬಂಪರ್ ಆಫರ್ - ಡಿಮ್ಯಾಂಡ್ ಇರೋ ಏರಿಯಾಗಳಲ್ಲೇ ಸಿಗಲಿದೆ 4,000 ಫ್ಲಾಟ್‌ಗಳು!!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಸ್ವಂತ ಮನೆ ಇರಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದರೆ ಇತ್ತೀಚಿನ ದಿನಗಳಲ್ಲಿ ಸೈಟ್ ಅಥವಾ ಫ್ಲಾಟ್ ರೇಟ್ ಕೇಳಿದ್ರೆ ಸಾಕು, ಸಾಮಾನ್ಯ ಜನರಿಗೆ ಹಾರ್ಟ್ ಅಟ್ಯಾಕ್ ಆಗೋವಷ್ಟು ಭಯ ಆಗುತ್ತೆ! ಇಂತಹ ಟೈಮಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮನೆ ಮಾಡಬೇಕು ಅನ್ನೋರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

ಈ ವರ್ಷವೇ ನಿಮ್ಮ ಗೃಹಪ್ರವೇಶದ ಕನಸು ನನಸು
ಈ ವರ್ಷವೇ ನಿಮ್ಮ ಗೃಹಪ್ರವೇಶದ ಕನಸು ನನಸು

ಬೆಂಗಳೂರಿನ ಡಿಮ್ಯಾಂಡ್ ಇರೋ ಏರಿಯಾಗಳಲ್ಲೇ ಬಿಡಿಎ ಈಗ ಬರೋಬ್ಬರಿ 4,000 ಫ್ಲಾಟ್‌ಗಳನ್ನು ಮಾರಾಟ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಬಿಡಿಎ ಇಂದ 4,000 ಫ್ಲಾಟ್‌ಗಳ ಗಿಫ್ಟ್!

ಹೌದು, ಬಿಡಿಎ ಈಗ ನಗರದ ಆರು ಪ್ರಮುಖ ಲೇಔಟ್‌ಗಳಲ್ಲಿ ಸುಮಾರು 3,200 ಕೋಟಿ ರೂಪಾಯಿ ಮೌಲ್ಯದ ಬೃಹತ್ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಫ್ಲಾಟ್‌ಗಳ ನಿರ್ಮಾಣ ಕೆಲಸ ಈಗ ಫುಲ್ ಜೋರಾಗಿ ನಡೀತಿದೆ. ಈ ವರ್ಷದ ಅಂತ್ಯದ ವೇಳೆಗೆ ಬಹುತೇಕ ಕಾಮಗಾರಿ ಮುಗಿಯಲಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಇವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡೋದು ಬಿಡಿಎ ಪ್ಲಾನ್ ಆಗಿದೆ.

ಎಲ್ಲೆಲ್ಲಿ ಸಿಗಲಿವೆ ಈ ಫ್ಲಾಟ್‌ಗಳು?

  • ಬೆಂಗಳೂರಿನಲ್ಲಿ ಈಗ ಎಲ್ಲೆಲ್ಲಿ ಫುಲ್ ಡಿಮ್ಯಾಂಡ್ ಇದೆಯೋ ಅಂತಹ ಜಾಗಗಳಲ್ಲೇ ಬಿಡಿಎ ಅಪಾರ್ಟ್‌ಮೆಂಟ್‌ಗಳು ಬರ್ತಿವೆ:
  • ಎಲೆಕ್ಟ್ರಾನಿಕ್ಸ್ ಸಿಟಿ: ಐಟಿ ಉದ್ಯೋಗಿಗಳಿಗೆ ಇದು ಹೇಳಿ ಮಾಡಿಸಿದ ಜಾಗ.
  • ಕೊನದಾಸಪುರ: ಇಲ್ಲಿ ಅತಿ ದೊಡ್ಡ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ.
  • ಕಾಳತಮ್ಮನಹಳ್ಳಿ ಮತ್ತು ಕೆಂಚನಪುರ: ಇಲ್ಲಿಯೂ ಕೂಡ ಹೈಟೆಕ್ ಫ್ಲಾಟ್‌ಗಳು ರೆಡಿಯಾಗುತ್ತಿವೆ.

ವಿಶೇಷ ಅಂದ್ರೆ, ಇಲ್ಲಿ ಬರೀ ಸಣ್ಣ ಮನೆಗಳಷ್ಟೇ ಅಲ್ಲ; ಬ್ಯಾಚುಲರ್ಸ್ ಇಂದ ಹಿಡಿದು ದೊಡ್ಡ ಜಾಯಿಂಟ್ ಫ್ಯಾಮಿಲಿವರೆಗೂ ಎಲ್ಲರಿಗೂ ಆಪ್ಷನ್ಸ್ ಇದೆ. ನಿಮ್ಮ ಬಜೆಟ್ ಮತ್ತು ಅವಶ್ಯಕತೆಗೆ ತಕ್ಕಂತೆ 1 BHK, 2 BHK, 3 BHK ಮತ್ತು ಲಕ್ಸುರಿ 4 BHK ಫ್ಲಾಟ್‌ಗಳನ್ನು ನೀವು ಆರಿಸಿಕೊಳ್ಳಬಹುದು.

ಕೊನದಾಸಪುರದಲ್ಲಿ ಮೆಗಾ ಪ್ರಾಜೆಕ್ಟ್

ಕೊನದಾಸಪುರದಲ್ಲಿ ನಡೆಯುತ್ತಿರುವ ಪ್ರಾಜೆಕ್ಟ್ ಸ್ವಲ್ಪ ಸ್ಪೆಷಲ್ ಆಗಿದೆ. ಇಲ್ಲಿ ಮೊದಲ ಹಂತದಲ್ಲೇ 1,928 ಫ್ಲಾಟ್‌ಗಳು ನಿರ್ಮಾಣವಾಗುತ್ತಿವೆ. ಇದರಲ್ಲಿ 480 ಮನೆಗಳು 2BHK ಆಗಿದ್ದರೆ, ಬರೋಬ್ಬರಿ 1,448 ಮನೆಗಳು 3BHK ಆಗಿವೆ. ಅಂದ್ರೆ ದೊಡ್ಡ ಲೇಔಟ್‌ನಲ್ಲಿ ಸಕಲ ಸೌಲಭ್ಯಗಳೊಂದಿಗೆ ವಾಸ ಮಾಡಬೇಕು ಅನ್ನೋರಿಗೆ ಇದು ಬೆಸ್ಟ್ ಚಾಯ್ಸ್.

ಬಿಡಿಎ ಫ್ಲಾಟ್‌ಗಳೇ ಯಾಕೆ ಬೆಸ್ಟ್?

ಖಾಸಗಿ ಬಿಲ್ಡರ್‌ಗಳ ಹತ್ತಿರ ಹೋಗಿ ಸೈಟ್ ಅಥವಾ ಫ್ಲಾಟ್ ತಗೊಂಡಾಗ ತುಂಬಾ ಜನಕ್ಕೆ ಒಂದು ಭಯ ಇರುತ್ತೆ. "ಇದು ಎ-ಖಾತಾನಾ? ಬಿ-ಖಾತಾನಾ? ಲೀಗಲ್ ಆಗಿ ಏನಾದ್ರೂ ಪ್ರಾಬ್ಲಮ್ ಇದೆಯಾ?" ಅನ್ನೋ ಟೆನ್ಷನ್ ಇದ್ದೇ ಇರುತ್ತೆ. ಆದರೆ ಬಿಡಿಎ ಇಂದ ಮನೆ ತಗೊಂಡ್ರೆ ಆ ಚಿಂತೆ ಇಲ್ಲ:

ಪಕ್ಕಾ ಎ-ಖಾತಾ: ಬಿಡಿಎ ಆಸ್ತಿ ಅಂದ್ರೆ ನೂರಕ್ಕೆ ನೂರು ಸೇಫ್. ಯಾವುದೇ ಕಾನೂನು ಕಿರಿಕಿರಿ ಇರಲ್ಲ.

ಬ್ಯಾಂಕ್ ಲೋನ್ ಈಸಿ: ಬಿಡಿಎ ಫ್ಲಾಟ್ ಅಂದ ತಕ್ಷಣ ಎಲ್ಲಾ ನ್ಯಾಷನಲೈಸ್ಡ್ ಬ್ಯಾಂಕ್‌ಗಳು ಈಸಿಯಾಗಿ ಲೋನ್ ಕೊಡುತ್ತವೆ.

ಕಡಿಮೆ ಬೆಲೆ: ಪ್ರೈವೇಟ್ ಬಿಲ್ಡರ್‌ಗಳ ರೇಟಿಗೆ ಹೋಲಿಸಿದರೆ ಬಿಡಿಎ ಫ್ಲಾಟ್‌ಗಳು ಸ್ವಲ್ಪ ಕೈಗೆಟುಕುವ ದರದಲ್ಲಿರುತ್ತವೆ.

ಭರವಸೆ: ಸರ್ಕಾರಿ ಸಂಸ್ಥೆ ಆಗಿರೋದ್ರಿಂದ ಮೋಸ ಹೋಗುವ ಭಯ ಇರಲ್ಲ.

ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಬೇಕು ಅನ್ನೋರು ಈ ಬಿಡಿಎ ಫ್ಲಾಟ್‌ಗಳ ಮೇಲೆ ಒಂದು ಕಣ್ಣಿಟ್ಟಿರಿ. ಸರಿಯಾದ ಟೈಮ್ ನೋಡಿ ಅಪ್ಲಿಕೇಶನ್ ಹಾಕಿದ್ರೆ, ಈ ವರ್ಷ ನಿಮ್ಮ 'ಗೃಹಪ್ರವೇಶ'ದ ಕನಸು ನನಸಾಗಬಹುದು!