Mar 17, 2026 Languages : ಕನ್ನಡ | English

ಸಿದ್ಧಾರೂಢ ಮಠದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪೂಜೆ - ಆಶೀರ್ವಾದ ಪಡೆದ ಕ್ಷಣ !!

ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್  ರಾಜ್ ಕುಮಾರ್ ಅವರು  ಭೇಟಿ ನೀಡಿದರು. ಮಠದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿದ್ಧಾರೂಢರ ದರ್ಶನ ಪಡೆಯುವ ಮೂಲಕ ಅಶ್ವಿನಿ ಅವರು ಆಶೀರ್ವಾದ ಪಡೆದರು. ಹೌದು ರಾಜ್ ಕುಮಾರ್  ಕುಟುಂಬವು ಸಿದ್ಧಾರೂಢರ ಭಕ್ತರಾಗಿದ್ದು, ಈ ಮಠದೊಂದಿಗೆ ಅವರ ನಂಟು ದೀರ್ಘಕಾಲದಿಂದ ಇದೆ. ನಟ ಪುನೀತ್ ಅವರು ಕೂಡ ಸಿದ್ಧಾರೂಢರ ಭಕ್ತರಾಗಿದ್ದು, ಹಲವು ಬಾರಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈಗ ಅಶ್ವಿನಿ ಅವರ ಭೇಟಿ, ಕುಟುಂಬದ ಆಧ್ಯಾತ್ಮಿಕ ನಂಟನ್ನು ಮತ್ತೊಮ್ಮೆ ನೆನಪಿಗೆ ತಂದಿದೆ ಎನ್ನಬಹುದು. 

ರಾಜಕುಮಾರ ಕುಟುಂಬದ ಭಕ್ತಿ ನಂಟು – ಸಿದ್ಧಾರೂಢ ಮಠದಲ್ಲಿ ಅಶ್ವಿನಿ ದರ್ಶನ
ರಾಜಕುಮಾರ ಕುಟುಂಬದ ಭಕ್ತಿ ನಂಟು – ಸಿದ್ಧಾರೂಢ ಮಠದಲ್ಲಿ ಅಶ್ವಿನಿ ದರ್ಶನ

ಹೌದು ಮಠದ ಪುರೋಹಿತರು ಅಶ್ವಿನಿ ಅವರಿಗೆ ವಿಶೇಷ ಪೂಜೆ ನೆರವೇರಿಸಿದರು. ಪೂಜೆ ಬಳಿಕ ಅವರು ಮಠದ ಆವರಣವನ್ನು ಸುತ್ತಿ, ಸಿದ್ಧಾರೂಢರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಠದ ಭಕ್ತರು ಹಾಗೂ ಸ್ಥಳೀಯರು ಅಶ್ವಿನಿಯವರನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಭೇಟಿ ಭಕ್ತರಲ್ಲಿ ಭಾವನಾತ್ಮಕ ಕ್ಷಣಗಳನ್ನು ಮೂಡಿಸಿತು. “ರಾಜಕುಮಾರ ಕುಟುಂಬವು ಸದಾ ಸಿದ್ಧಾರೂಢರ ಆಶೀರ್ವಾದವನ್ನು ಪಡೆಯುತ್ತಾ ಬಂದಿದೆ. ಪುನೀತ್  ರಾಜ್ ಕುಮಾರ್ ಅವರಿಗೂ ಈ ಮಠದೊಂದಿಗೆ ವಿಶೇಷ ನಂಟು ಇತ್ತು. ಈಗ ಅಶ್ವಿನಿ ಅವರ ಭೇಟಿ ಆ ನಂಟನ್ನು ಮುಂದುವರಿಸಿದ್ದಾರೆ” ಎಂದು ಭಕ್ತರು ಅಭಿಪ್ರಾಯಪಟ್ಟರು.

ಸಿದ್ಧಾರೂಢ ಮಠವು ಹುಬ್ಬಳ್ಳಿಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಇಲ್ಲಿ ದರ್ಶನ ಪಡೆಯಲು ಬರುತ್ತಾರೆ. ಮಠದ ಆಧ್ಯಾತ್ಮಿಕ ವಾತಾವರಣವು ಭಕ್ತರಲ್ಲಿ ಶಾಂತಿ ಮತ್ತು ಭಕ್ತಿ ಭಾವನೆಗಳನ್ನು ಮೂಡಿಸುತ್ತದೆ. ಅಶ್ವಿನಿ ಅವರ ಭೇಟಿ ಈ ಮಠದ ಮಹತ್ವವನ್ನು ಮತ್ತಷ್ಟು ಹಿರಿಮೆಗೆತ್ತಿಸಿದೆ. ಹೌದು ನಟ ಪುನೀತ್ ಅವರ ನೆನಪುಗಳು ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿವೆ. ಅವರ ಕುಟುಂಬದವರು ಧಾರ್ಮಿಕ ನಂಟನ್ನು ಮುಂದುವರಿಸುತ್ತಿರುವುದು ಅಭಿಮಾನಿಗಳಿಗೆ ಸಂತೋಷ ತಂದಿದೆ. “ಪುನೀತ್ ಆತ್ಮೀಯತೆ, ಸರಳತೆ, ಭಕ್ತಿ ಈ ಎಲ್ಲಾ ಗುಣಗಳು ಅವರನ್ನು ಜನಮನದಲ್ಲಿ ಶಾಶ್ವತವಾಗಿ ಉಳಿಸಿವೆ. 

ಹೌದು ಅಶ್ವಿನಿ ಅವರ ಭೇಟಿ ಆ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದೆ” ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅತ್ತ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಅಶ್ವಿನಿ ಪುನೀತ್  ರಾಜ್ ಕುಮಾರ್ ಅವರ ಭೇಟಿ ನೀಡಿದ ಘಟನೆ,  ರಾಜ್ ಕುಮಾರ್ ಅವರ ಕುಟುಂಬದ ಆಧ್ಯಾತ್ಮಿಕ ನಂಟನ್ನು ನೆನಪಿಗೆ ತಂದು, ಭಕ್ತರಲ್ಲಿ ಭಾವನಾತ್ಮಕ ಕ್ಷಣಗಳನ್ನು ಮೂಡಿಸಿದೆ ಎನ್ನಬಹುದು.  

Latest News