ಇವತ್ತಿನ ಫಾಸ್ಟ್ ಯುಗದಲ್ಲಿ ಪ್ರತಿಯೊಬ್ಬರೂ ಸಹ ಅವರ ದೈನಿಂದಿನ ಚಟುವಟಿಕಗಳನ್ನೇ ಮರೆತು ಬಿಟ್ಟಿದ್ದಾರೆ. ಕೆಲವರು ಕೆಲಸ ಕೆಲಸ ಎನ್ನುತ್ತಾ ವ್ಯಾಯಾಮ, ಯೋಗ, ನಿಯಮಿತ ಆಹಾರ, ಕಾಲು ನಡಿಗೆ, ಸರಿಯಾದ ಸಮಯಕ್ಕೆ ಊಟ, ನೀರು, ಎಲ್ಲವನ್ನು ಮರೆತು ಬಿಟ್ಟಿದ್ದಾರೆ. ಮನೆಯ ಜವಾಬ್ದಾರಿ ಹೊತ್ತು ಅವರ ಆರೋಗ್ಯದ ಕಡೆ ಹೆಚ್ಚು ಗಮನವನ್ನೇ ಬಿಟ್ಟು ಬಿಟ್ಟಿದ್ದಾರೆ. ನಿತ್ಯದ ಕೆಲಸ ಒತ್ತಡದ ಜೀವನ ಸಹ ಹೆಚ್ಚು ಆಯಾಸ, ಆರೋಗ್ಯದ ಸ್ಥಿತಿ ಬದಲಾವಣೆಯತ್ತ ದಾಪುಗಾಲಿಟ್ಟರೂ ಯಾರು ಅದನ್ನು ಗಮನಿಸುತ್ತಿಲ್ಲ. ಕೆಲವೊಂದು ಸಾರಿ ನಾವು ಮಾಡುವ ತಪ್ಪುಗಳು, ನಮ್ಮಲ್ಲಿಯ ನಿರ್ಲಕ್ಷ್ಯಗಳು ಹೇಗೆ ನಮ್ಮನ್ನು ಅಳಿವಿನಂಚಿಗೆ ನೂಕುತ್ತವೆ ಎಂದು ಕೆಲವರು ಮಾತ್ರ ಅರ್ಥ ಮಾಡಿಕೊಂಡಿದ್ದಾರೆ. ಆರೋಗ್ಯದ ಸ್ಥಿತಿ ಗತಿ, ನಮ್ಮ ಹೃದಯ ಹೇಗೆ ಕೆಲಸ ನಿರ್ವಹಿಸುತ್ತದೆ ಯಾವ ಅಂಶಗಳ ಹೊಡೆತದಿಂದ ಹೃದಯಘಾತ ಹತ್ತಿರ ಆಗುತ್ತದೆ ಎಲ್ಲವನ್ನು ಈ ಲೇಖನದಲ್ಲಿ ನೋಡೋಣ. ಹಾಗೆ ಯಾವ ಯಾವ ಅಂಶಗಳು ನಮ್ಮ ಹಿಡಿತದಲ್ಲಿ ಇದ್ದರೆ ಯಾವೆಲ್ಲಾ ಅಂಶಗಳನ್ನು ಎಚ್ಚೆತ್ತುಗೊಂಡರೆ ಒಳ್ಳೆಯದು ಎಂದು ಈಗಲೇ ತಿಳಿದುಕೊಳ್ಳಿ.
1. ಅಪಧಮನಿ ಅಡಚಣೆಯ ಅಪಾಯ
ಹೆಚ್ಚಿನ ಸಂದರ್ಭಗಳಲ್ಲಿ, ಹೃದಯಾಘಾತ ಸಂಭವಿಸುವವರೆಗೂ ಅಪಧಮನಿಯ ಅಡಚಣೆ ಪತ್ತೆಯಾಗುವುದಿಲ್ಲ. ಈ ಕಾರಣದಿಂದಾಗಿ ಈ ಸ್ಥಿತಿ ತುಂಬಾ ಅಪಾಯಕಾರಿ. ಆರಂಭಿಕ ಪತ್ತೆ ಅತ್ಯಗತ್ಯವಾದರೂ, ಲಕ್ಷಣಗಳು ತುಂಬಾ ಸರಳವಾಗಿರುವುದರಿಂದ ಜನರು ಅವನ್ನು ನಿರ್ಲಕ್ಷಿಸುತ್ತಾರೆ. ನಮ್ಮ ಹೃದಯವು ದಿನದ 24 ಗಂಟೆಗಳೂ ನಿರಂತರವಾಗಿ ಕೆಲಸ ಮಾಡಿ ಪ್ರತಿಯೊಂದು ಅಂಗಾಂಗಗಳಿಗೆ ರಕ್ತವನ್ನು ಪೂರೈಸುತ್ತದೆ. ಆದರೆ ಒತ್ತಡದ ಜೀವನಶೈಲಿ ಮತ್ತು ಅಸಮರ್ಪಕ ಆಹಾರ ಪದ್ಧತಿಯ ಪರಿಣಾಮವಾಗಿ ಇಂದಿನ ಯುವಕರಲ್ಲಿಯೇ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ.
2. ಬ್ಲಾಕೇಜ್ ಉಂಟಾಗುವ ವಿಧಾನ
ರಕ್ತನಾಳಗಳಲ್ಲಿ ಕೊಬ್ಬಿನಾಂಶ ಶೇಖರಣೆಗೊಂಡಾಗ, ಹೃದಯಕ್ಕೆ ಪೂರೈಕೆ ಆಗುವ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಇದರಿಂದ ಹೃದಯದ ಕಾರ್ಯ ನಿಧಾನವಾಗಿ ಕುಸಿಯುತ್ತದೆ ಮತ್ತು ಕೊನೆಗೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ 50% ಕ್ಕಿಂತ ಹೆಚ್ಚು ಅಡಚಣೆ ಇದ್ದರೂ ಕೂಡ ವ್ಯಕ್ತಿಗೆ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಈ ಕಾರಣದಿಂದ ಜನರು ತಮ್ಮನ್ನು ಸಂಪೂರ್ಣ ಆರೋಗ್ಯವಾಗಿದ್ದಾರೆಂದು ಭಾವಿಸುತ್ತಾರೆ.
3. ನಿರ್ಲಕ್ಷಿಸಲ್ಪಡುವ ಲಕ್ಷಣಗಳು
ಅಪಧಮನಿ ಅಡಚಣೆಯ ಚಿಹ್ನೆಗಳು ತುಂಬಾ ಚಿಕ್ಕದಾಗಿರುತ್ತವೆ. ಉದಾಹರಣೆಗೆ, ಸ್ನಾನ ಮಾಡುವಾಗ, ಬಟ್ಟೆ ಬದಲಾಯಿಸುವಾಗ ಅಥವಾ ಸ್ವಲ್ಪ ದೂರ ನಡೆಯುವಾಗಲೂ ಸುಸ್ತು, ಆಯಾಸ ಕಾಣಿಸಿಕೊಳ್ಳಬಹುದು. ಯಾವುದೇ ಶ್ರಮವಿಲ್ಲದೆ ದೈನಂದಿನ ಕೆಲಸಗಳನ್ನು ಮಾಡುವಾಗಲೂ ದಣಿವು ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಹೃದಯವು ಹೆಚ್ಚು ಶ್ರಮಿಸುವುದರಿಂದ ಶಕ್ತಿಯ ಮಟ್ಟ ಕಡಿಮೆಯಾಗುತ್ತದೆ ಮತ್ತು ವ್ಯಕ್ತಿ ಅವಾಗವಾಗ ದಣಿದ ಅನುಭವವನ್ನು ಹೊಂದುತ್ತಾನೆ.
4. ಎದೆ ನೋವು ಮತ್ತು ಉಸಿರಾಟದ ತೊಂದರೆ
ಅಪಧಮನಿ ಅಡಚಣೆಯ ಪ್ರಮುಖ ಲಕ್ಷಣವೆಂದರೆ ಎದೆ ನೋವು ಅಥವಾ ಅಸ್ವಸ್ಥತೆ. ಇದು ಯಾವಾಗಲೂ ತೀಕ್ಷ್ಣವಾದ ನೋವಾಗಿರಬೇಕಾಗಿಲ್ಲ, ಕೆಲವೊಮ್ಮೆ ಎದೆ ಭಾರವಾಗುವುದು, ಸುಡುವಿಕೆ, ಒತ್ತಡ ಅಥವಾ ಹೊಟ್ಟೆ ಉಬ್ಬುವಿಕೆಯಂತೆ ಕಾಣಬಹುದು. ದೈಹಿಕ ಅಥವಾ ಭಾವನಾತ್ಮಕ ಒತ್ತಡದ ಸಮಯದಲ್ಲಿ ಈ ಅಸ್ವಸ್ಥತೆ ಹೆಚ್ಚಾಗಿ ಕಾಣಿಸುತ್ತದೆ. ಮೆಟ್ಟಿಲು ಹತ್ತುವಾಗ, ಹಾಸಿಗೆಯಲ್ಲಿ ಮಲಗಿದಾಗಲೂ ಉಸಿರಾಟದ ತೊಂದರೆ ಕಂಡುಬಂದರೆ ಅದು ಹೃದಯ ವೈಫಲ್ಯದ ಸಂಕೇತವಾಗಿರಬಹುದು.
5. ಇತರ ಎಚ್ಚರಿಕೆ ಸೂಚನೆಗಳು
ತಲೆತಿರುಗುವಿಕೆ, ಅನಿಯಮಿತ ಹೃದಯ ಬಡಿತ, ಅತಿಯಾಗಿ ಬೆವರುವುದು, ಪಾದಗಳು ಅಥವಾ ಕಾಲುಗಳ ಗಾಯಗಳು ನಿಧಾನವಾಗಿ ಗುಣವಾಗುವುದು, ಇವೆಲ್ಲಾ ಅಪಧಮನಿ ಅಡಚಣೆಯ ಸೂಚನೆಗಳಾಗಿರಬಹುದು. ರಕ್ತನಾಳಗಳು ಮುಚ್ಚಿಹೋದಾಗ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಆಮ್ಲಜನಕ ತಲುಪುವುದಿಲ್ಲ. ಇದರಿಂದ ಅಂಗಾಂಶ ದುರಸ್ತಿ ಪ್ರಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಅಪಧಮನಿ ಅಡಚಣೆ ಆರಂಭಿಕ ಹಂತದಲ್ಲೇ ಪತ್ತೆಯಾಗುವುದು ಅತ್ಯಂತ ಮುಖ್ಯ. ಸಣ್ಣ ಲಕ್ಷಣಗಳನ್ನು ನಿರ್ಲಕ್ಷಿಸದೆ, ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಜೀವ ಉಳಿಸುವ ಪ್ರಮುಖ ಹೆಜ್ಜೆ ಆಗಿರುತ್ತದೆ. ಈ ಮಾಹಿತಿ ಕುರಿತು ಏನೇ ಹೆಜ್ಜೆ ಇಡುವ ಮುನ್ನ ಒಂದು ಬಾರಿ ನಿಮ್ಮ ಆರೋಗ್ಯದ ಸ್ಥಿತಿಯನ್ನು ವೈದ್ಯರ ಬಳಿಯೇ ಪರೀಕ್ಷಿಸಿಕೊಳ್ಳಿ, ಹೃದಯ ಸಂಬಂದಿತ ಆರೋಗ್ಯ ಸಮಸ್ಯೆ ಏನೇ ಇದ್ದರೂ ವೈದ್ಯರ ಬಳಿಯೇ ಸಲಹೆ ಪಡೆದುಕೊಳ್ಳುವುದು ಉತ್ತಮ.
ವಿಶೇಷ ಸೂಚನೆ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ ಲಭ್ಯ. ಇದು ಯಾವುದೇ ರೀತಿಯ ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಇದು ನಮ್ಮ ಸಪ್ತಾಶ್ವ ಇದರ ಸತ್ಯತೆ ಹಾಗೂ ನಿಖರತೆ ಮತ್ತು ಪರಿಣಾಮದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.