Monday, Oct 19, 2026
|

ಮೆಲೋಡಿಗೆ ಲೇಟ್ ಆಗಬಾರದು - ಪಿಎಂ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ಭರ್ಜರಿ ಟ್ವೀಟ್ ವಾರ್!!

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವೀಡಿಯೋಗಳು ಹೇಗೆ ವೈರಲ್ ಆಗ್ತಿವೆ ಅಂತ ನೀವೆಲ್ಲಾ ನೋಡಿಯೇ ಇರ್ತೀರಾ. ಆದ್ರೆ, ಇವರಿಬ್ಬರ ಲೇಟೆಸ್ಟ್ ವೀಡಿಯೋ ಒಂದು ಈಗ ದೇಶದ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ! ಹೌದು, ಪ್ರಧಾನಿ ಮೋದಿ ಅವರು ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಫೇಮಸ್ 'ಮೆಲೋಡಿ' ಚಾಕಲೇಟ್ ಗಿಫ್ಟ್ ಕೊಟ್ಟಿರೋ ವೀಡಿಯೋ ಸಖತ್ ಸೌಂಡ್ ಮಾಡ್ತಾ ಇದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಮೋದಿ ವಿರುದ್ಧ ಮುಗಿಬಿದ್ದಿದ್ದಾರೆ.

ಪ್ರಧಾನಿ ಮೋದಿಯವರನ್ನು ‘ಸ್ವಯಂ ಪ್ರಚಾರದ ಇನ್‌ಫ್ಲುಯೆನ್ಸರ್’ ಎಂದ ಸಚಿವ ಖರ್ಗೆ | Photo Credit: https://x.com/PriyankKharge
ಪ್ರಧಾನಿ ಮೋದಿಯವರನ್ನು ‘ಸ್ವಯಂ ಪ್ರಚಾರದ ಇನ್‌ಫ್ಲುಯೆನ್ಸರ್’ ಎಂದ ಸಚಿವ ಖರ್ಗೆ | Photo Credit: https://x.com/PriyankKharge

ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವೀಡಿಯೋವನ್ನು ತಮ್ಮ 'ಎಕ್ಸ್' (ಟ್ವಿಟ್ಟರ್) ಖಾತೆಯಲ್ಲಿ ಶೇರ್ ಮಾಡಿಕೊಂಡು ಪ್ರಧಾನಿ ಮೋದಿ ಅವರ ಕಾಲೆಳೆದಿದ್ದಾರೆ. "ದೇಶದಲ್ಲಿ ಇಂಧನ ಬೆಲೆ ಏರಿಕೆ, ಆರ್ಥಿಕ ಬಿಕ್ಕಟ್ಟುಗಳು ಬೇಕಿದ್ದರೆ ಎಕ್ಕುಟ್ಟಿ ಹೋಗಲಿ, ಆದ್ರೆ ಮೆಲೋನಿ ಅವರಿಗೆ ಮೆಲೋಡಿ ಚಾಕಲೇಟ್ ಕೊಡೋದು ಮಾತ್ರ ತಡವಾಗಬಾರದು!" ಅಂತ ಸಖತ್ ಖಾರವಾಗಿ, ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಏನಿದು ಮೆಲೋಡಿ ಚಾಕಲೇಟ್ ಗಲಾಟೆ? ಪ್ರಿಯಾಂಕ್ ಖರ್ಗೆ ಏನೆಲ್ಲಾ ಹೇಳಿದ್ದಾರೆ? ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

"ದ್ವಿಪಕ್ಷೀಯ ಚರ್ಚೆ ಬಿಟ್ಟು ಚಾಕಲೇಟ್ ಪ್ಲಾನ್ ಮಾಡ್ತಾರೆ!" - ಖರ್ಗೆ ಕಿಡಿ

ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸದ ನಡೆಯನ್ನು ಸಖತ್ ಕಾಮಿಡಿಯಾಗಿ ಲೇವಡಿ ಮಾಡಿರೋ ಪ್ರಿಯಾಂಕ್ ಖರ್ಗೆ, "ದೇಶದ ಇಂಧನ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಹುಡುಕೋ ಕೆಲಸ ಬೇಕಿದ್ರೆ ನಿಧಾನವಾಗಿ ಆಗಲಿ, ಅದಕ್ಕೆ ಟೈಮ್ ಇದೆ. ಆದ್ರೆ ಮೆಲೋನಿ ಅವರಿಗೆ 'ಮೆಲೋಡಿ' ಕೊಡೋದು ಲೇಟ್ ಆಗ್ಬಾರದು! ಇದನ್ನೊಮ್ಮೆ ನೀವೇ ಇಮ್ಯಾಜಿನ್ ಮಾಡಿಕೊಳ್ಳಿ. ಎರಡು ದೇಶಗಳ ನಡುವೆ ಇಷ್ಟೊಂದು ಪ್ರಮುಖ ವಿದೇಶಾಂಗ ನೀತಿಯ ಚರ್ಚೆಗಳು ನಡೀತಿರುವಾಗ, ನಮ್ಮ ಪ್ರಧಾನಿ ಮೋದಿಯವರು ಏನು ಯೋಚನೆ ಮಾಡಿರಬಹುದು?" ಅಂತ ಪ್ರಶ್ನೆ ಮಾಡಿದ್ದಾರೆ.

ವೀಡಿಯೋ ಕಂಟೆಂಟ್‌ಗಾಗಿ ಚಾಕಲೇಟ್!

"ಹೇ.. ನನ್ನ ಆಫೀಶಿಯಲ್ ವಿದೇಶಿ ಪ್ರವಾಸಕ್ಕೆ ಹೋಗುವಾಗ ಒಂದು ಪ್ಯಾಕೆಟ್ 'ಮೆಲೋಡಿ' ಚಾಕಲೇಟ್ ತಗೊಂಡು ಹೋಗ್ತೀನಿ. ಅಲ್ಲಿ ಮೆಲೋನಿಗೆ ಕೊಟ್ಟರೆ ವೀಡಿಯೋ ಮಾಡೋಕೆ ಮಸ್ತ್ ಕಂಟೆಂಟ್ ಸಿಗುತ್ತೆ ಅಂತ ಮೋದಿ ಸಾಹೇಬ್ರು ಪ್ಲಾನ್ ಮಾಡಿರಬೇಕು!" ಅಂತ ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಸಖತ್ ಇಂಟರೆಸ್ಟಿಂಗ್ ಆಗಿ ಕಾಲೆಳೆದಿದ್ದಾರೆ.

"ಮೋದಿ ಒಬ್ಬ ಸೆಲ್ಫ್ ಪ್ರಮೋಷನ್ ಇನ್‌ಫ್ಲುಯೆನ್ಸರ್!"

ಪ್ರಧಾನಿ ಮೋದಿ ಅವರನ್ನ 'ಸ್ವಯಂ ಪ್ರಚಾರದ ಗೀಳಿರುವ ಇನ್‌ಫ್ಲುಯೆನ್ಸರ್' (Self-promoting influencer) ಅಂತ ಕರೆದಿರೋ ಪ್ರಿಯಾಂಕ್ ಖರ್ಗೆ, ಜನರ ಗಮನ ಬೇರೆಡೆ ಸೆಳೆಯಲು ಇಂತಹ ಗಿಮಿಕ್ ಮಾಡಲಾಗ್ತಿದೆ ಅಂದಿದ್ದಾರೆ. ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಸಮಸ್ಯೆಗಳಂತಹ ನೂರಾರು ಜ್ವಲಂತ ಸಮಸ್ಯೆಗಳಿವೆ. ಇವೆಲ್ಲದರಿಂದ ಜನರ ಮೈಂಡ್ ಡೈವರ್ಟ್ ಮಾಡೋಕೆ ಪ್ರಧಾನಿಯವರು ಇಂತಹ 'ಸಿಲ್ಲಿ ರೀಲ್ಸ್' ಮೊರೆ ಹೋಗುತ್ತಿದ್ದಾರೆ ಅಂತ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.

"ಇಂತಹ ಚೀಪ್ ರೀಲ್ಸ್ ಮಾಡಿದ್ರೆ ಜನ ದೇಶದ ನೈಜ ಸಮಸ್ಯೆಗಳನ್ನ ಮರೆತುಬಿಡ್ತಾರೆ ಅಂತ ಅವರು ಅಂದುಕೊಂಡಿದ್ದಾರೆ. ಆದ್ರೆ ಇಲ್ಲಿ ನಿಜವಾದ ಜೋಕ್ ಆಗ್ತಿರೋದು ನಮ್ಮ ದೇಶದ ಜನರ ಮೇಲೆಯೇ," ಅಂತ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ 'ಮೆಲೋಡಿ'ದ್ದೇ ಹವಾ!

ಪ್ರಧಾನಿ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಇಬ್ಬರೂ ಭೇಟಿಯಾದಾಗಲೆಲ್ಲಾ ಇಂಟರ್ನೆಟ್‌ನಲ್ಲಿ ಮೀಮ್ಸ್‌ಗಳ ಪ್ರವಾಹವೇ ಹರಿದುಬರುತ್ತದೆ. ಇಬ್ಬರ ಹೆಸರನ್ನು ಸೇರಿಸಿ ನೆಟ್ಟಿಗರು 'Melodi' (ಮೆಲೋಡಿ) ಅಂತಲೇ ಟ್ರೆಂಡ್ ಮಾಡ್ತಾರೆ. ಇದನ್ನೇ ಮೈಂಡ್‌ನಲ್ಲಿ ಇಟ್ಕೊಂಡು ಮೋದಿ ಅವರು ಮೆಲೋನಿಗೆ ನಿಜವಾದ ಮೆಲೋಡಿ ಚಾಕಲೇಟ್ ಗಿಫ್ಟ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಸದ್ಯ ಈ ವೀಡಿಯೋ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದರೂ, ವಿಪಕ್ಷಗಳು ಮಾತ್ರ "ದೇಶದ ಪ್ರಧಾನಿಯೊಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂತಹ ಸಿಲ್ಲಿ ರೀಲ್ಸ್ ಮಾಡಿಕೊಂಡು ಕೂರೋದು ಸರಿಯಲ್ಲ" ಅಂತ ತೀವ್ರವಾಗಿ ಟೀಕಿಸುತ್ತಿದ್ದಾರೆ.

Comments

Leave a Comment

Latest News