ಫ್ಲಿಪ್‌ಕಾರ್ಟ್‌ನಲ್ಲಿ ಮೋಟೋ ಆಫರ್ ಧಮಾಕಾ - ಬರೀ 999 ರೂಪಾಯಿಗೆ ಸಿಗಲಿದೆ ಸೂಪರ್ ಪ್ರೀಮಿಯಂ 5G ಫೋನ್!

ಸ್ಮಾರ್ಟ್‌ಫೋನ್ ಪ್ರಿಯರಿಗೆ ಒಂದು ಭರ್ಜರಿ ಸಿಹಿ ಸುದ್ದಿ! ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್ ಆದ ಫ್ಲಿಪ್‌ಕಾರ್ಟ್‌ನಲ್ಲಿ ಮೋಟೋರೋಲಾ ಕಂಪನಿಯ ಬ್ರಾಂಡ್ ನ್ಯೂ ಮೊಬೈಲ್ ಆದ 'Motorola Edge 60 Pro 5G' ಮೇಲೆ ತಲೆತಿರುಗುವಂತಹ ಡಿಸ್ಕೌಂಟ್ ಆಫರ್ ಘೋಷಣೆ ಮಾಡಲಾಗಿದೆ. ಈ ಫೋನ್‌ ಅನ್ನು ಈಗ ಖರೀದಿಸಿದರೆ ಬ್ಯಾಂಕ್ ಆಫರ್‌ಗಳು ಹಾಗೂ ಎಕ್ಸ್‌ಚೇಂಜ್ ಬೋನಸ್ ಸೇರಿ ಅತ್ಯಂತ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು. ಈ ಆಫರ್‌ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

Motorola Edge 60 Pro | Photo Credit: https://www.facebook.com/91mobiles
Motorola Edge 60 Pro | Photo Credit: https://www.facebook.com/91mobiles

ಮೋಟೋರೋಲಾ ಕಂಪನಿಯ 'Edge' ಸರಣಿಯ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಯಾವತ್ತೂ ಭಾರಿ ಡಿಮ್ಯಾಂಡ್ ಇರುತ್ತೆ. ಅದರಲ್ಲೂ ಯುವ ಪೀಳಿಗೆಯಂತೂ ಈ ಸರಣಿಯ ಫೋನ್‌ಗಳ ಲುಕ್ ಮತ್ತು ಫೀಚರ್ಸ್‌ಗೆ ಫುಲ್ ಫಿದಾ ಆಗಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಇ-ಕಾಮರ್ಸ್ ಸಂಸ್ಥೆಗಳು ಈ ಮಾಡೆಲ್ ಮೇಲೆ ಭರ್ಜರಿ ಆಫರ್ ನೀಡುತ್ತಿವೆ. ಕೆಲವು ಮೊಬೈಲ್‌ಗಳ ಮೇಲಂತೂ ನೇರವಾಗಿ ಶೇಕಡಾ 20 ರಷ್ಟು ಫ್ಲಾಟ್ ಡಿಸ್ಕೌಂಟ್ ಕೂಡ ಸಿಗುತ್ತಿದೆ.

ಬರೋಬ್ಬರಿ 29,999 ರೂಪಾಯಿ ಒಳಗೆ ಲಭ್ಯ!

ಮಾರುಕಟ್ಟೆಯಲ್ಲಿ 256 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಈ ಮೋಟೋರೋಲಾ Edge 60 Pro 5G ಫೋನಿನ ಅಸಲಿ ಬೆಲೆ (MRP) 36,999 ರೂಪಾಯಿಗಳು. ಆದರೆ, ಈಗ ಫ್ಲಿಪ್‌ಕಾರ್ಟ್‌ನಲ್ಲಿ ಶೇಕಡಾ 19 ರಷ್ಟು ವಿಶೇಷ ರಿಯಾಯಿತಿ ಇರುವುದರಿಂದ ಈ ಪ್ರೀಮಿಯಂ ಫೋನ್ ನಿಮಗೆ ಕೇವಲ 29,999 ರೂಪಾಯಿ ಒಳಗೆ ಸಿಗಲಿದೆ. ಇಷ್ಟೇ ಅಲ್ಲದೆ ಇದರ ಮೇಲೆ ಇನ್ನು ಹಲವು ಆಫರ್‌ಗಳನ್ನು ನೀಡಲಾಗಿದೆ.

ಬರೀ 999 ರೂಪಾಯಿಗೆ ಸಿಗೋದು ಹೇಗೆ?

ಬೆಲೆ ಕೇಳಿ ಶಾಕ್ ಆಗ್ಬೇಡಿ, ಈ ಫೋನ್‌ ಅನ್ನು ಕೇವಲ 999 ರೂಪಾಯಿ ಒಳಗೆ ನಿಮ್ಮದಾಗಿಸಿಕೊಳ್ಳಲು ಒಂದು ಅದ್ಭುತ ಅವಕಾಶವಿದೆ.

  • ಬ್ಯಾಂಕ್ ಡಿಸ್ಕೌಂಟ್ ಆಫರ್: ನೀವು ಈ ಫೋನ್ ಖರೀದಿಸುವಾಗ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿದರೆ ನಿಮಗೆ ನೇರವಾಗಿ 1,500 ರೂಪಾಯಿ ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗುತ್ತದೆ.

  • ಭರ್ಜರಿ ಎಕ್ಸ್‌ಚೇಂಜ್ ಆಫರ್: ಇದರ ಜೊತೆಗೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿದರೆ ಫ್ಲಿಪ್‌ಕಾರ್ಟ್ ಬರೋಬ್ಬರಿ 29,000 ರೂಪಾಯಿ ವರೆಗೆ ಎಕ್ಸ್‌ಚೇಂಜ್ ಬೋನಸ್ ನೀಡುತ್ತಿದೆ. ನಿಮ್ಮ ಹಳೆಯ ಫೋನ್ ಸೂಪರ್ ಕಂಡಿಷನ್‌ನಲ್ಲಿದ್ದರೆ ಈ ಪೂರ್ಣ ಮೊತ್ತದ ಲಾಭ ನಿಮಗೆ ಸಿಗಲಿದೆ.

ಈ ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಆಫರ್ ಎರಡೂ ಸೇರಿದರೆ, ಈ ಹೊಸ ಸ್ಮಾರ್ಟ್‌ಫೋನ್ ನಿಮಗೆ ಕೇವಲ 999 ರೂಪಾಯಿ ಒಳಗೆ ಕೈಸೇರಲಿದೆ!

ಈ ಫೋನಿನ ಕಿಲ್ಲರ್ ಫೀಚರ್ಸ್ ಇಲ್ಲಿದೆ:

ಬೆಲೆ ಮಾತ್ರವಲ್ಲ, ಈ ಫೋನಿನ ಫೀಚರ್ಸ್ ಕೇಳಿದರೆ ಯಾರಾದರೂ ಫ್ಲಾಟ್ ಆಗ್ಲೇಬೇಕು. ಆ ರೇಂಜ್ ಹೈ-ಎಂಡ್ ಫೀಚರ್ಸ್ ಇವು:

ಡಿಸ್ಪ್ಲೇ: ಇದರಲ್ಲಿ 6.7 ಇಂಚಿನ ಸೂಪರ್ HD+ (1.5K) pOLED 3D ಕರ್ವ್ಡ್ ಡಿಸ್ಪ್ಲೇ ನೀಡಲಾಗಿದೆ. ಇದು 120Hz ರಿಫ್ರೆಶ್ ರೇಟ್ ಹಾಗೂ ಬರೋಬ್ಬರಿ 4500 nits ಪೀಕ್ ಬ್ರೈಟ್‌ನೆಸ್ ಹೊಂದಿದೆ. ಸ್ಕ್ರೀನ್ ಸುರಕ್ಷತೆಗಾಗಿ 'Corning Gorilla Glass 7i' ಪ್ರೊಟೆಕ್ಷನ್ ಕೊಡಲಾಗಿದೆ.

ಪ್ರೊಸೆಸರ್: ಗೇಮಿಂಗ್ ಹಾಗೂ ಹೆವಿ ಮಲ್ಟಿ-ಟಾಸ್ಕಿಂಗ್ ಮಾಡಲು ಅನುಕೂಲವಾಗುವಂತೆ ಅತ್ಯಂತ ಪವರ್‌ಫುಲ್ ಆದ 'MediaTek Dimensity 8350 Extreme' (4nm) ಆಕ್ಟಾ-ಕೋರ್ ಪ್ರೊಸೆಸರ್ ಇದರಲ್ಲಿದೆ.

ಕ್ಯಾಮೆರಾ: ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದ್ದು, ಮುಖ್ಯ ಕ್ಯಾಮೆರಾ OIS ಸಪೋರ್ಟ್ ಇರುವ 50 MP (Sony LYTIA 700C) ಸೆನ್ಸಾರ್‌ನಲ್ಲಿದೆ. ಇದರ ಜೊತೆಗೆ ಮ್ಯಾಕ್ರೋ ಸಪೋರ್ಟ್ ಇರುವ ಮತ್ತೊಂದು 50 MP ನ ಅದ್ಭುತ ಸೆನ್ಸಾರ್ ನೀಡಲಾಗಿದೆ.

ಬ್ಯಾಟರಿ ಹಾಗೂ ಚಾರ್ಜಿಂಗ್: ಇಡೀ ದಿನ ಚಾರ್ಜ್ ನಿಲ್ಲಲು ಇದರಲ್ಲಿ 6000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ಇದೆ. ಇದಕ್ಕೆ ಸಪೋರ್ಟ್ ಮಾಡಲು 90W ಟರ್ಬೊ ಪವರ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಕೂಡ ಇದೆ.

ಇನ್ನು ಸಾಫ್ಟ್‌ವೇರ್ ಬಗ್ಗೆ ಹೇಳಬೇಕೆಂದರೆ, ಇದು ಲೇಟೆಸ್ಟ್ Android 15 (Hello UI) ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ. ಇದರ ಜೊತೆಗೆ 3 ವರ್ಷಗಳ ಆಂಡ್ರಾಯ್ಡ್ ಓಎಸ್ ಅಪ್‌ಗ್ರೇಡ್ಸ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್‌ಗಳನ್ನು ನೀಡುವುದಾಗಿ ಕಂಪನಿ ಪ್ರಕಟಿಸಿದೆ.

ಕಡಿಮೆ ಬಜೆಟ್‌ನಲ್ಲಿ ಸೂಪರ್ ಪ್ರೀಮಿಯಂ ಫೋನ್ ಬಳಸಬೇಕು ಅಂದುಕೊಳ್ಳುವವರಿಗೆ ಇದಕ್ಕಿಂತ ಬೆಸ್ಟ್ ಚಾನ್ಸ್ ಇನ್ನೊಂದಿಲ್ಲ. ಸ್ಟಾಕ್ ಮುಗಿಯುವ ಮುನ್ನವೇ ಫ್ಲಿಪ್‌ಕಾರ್ಟ್ ಆಪ್ ಓಪನ್ ಮಾಡಿ ಒಂದು ಕಣ್ಣಿಡಿ!

Latest News