ತಂತ್ರಜ್ಞಾನದ ಲೋಕದಲ್ಲಿ ಪ್ರತಿ ದಶಕಕ್ಕೊಮ್ಮೆ ಅಂತಹದ್ದೊಂದು ಬದಲಾವಣೆ ಆಗುತ್ತೆ, ಅದು ಇಡೀ ಜಗತ್ತನ್ನೇ ಅಚ್ಚರಿಗೊಳಿಸುತ್ತೆ. ಈಗ ಹುವಾವೇ (Huawei) ಕಂಪನಿ ಮಾಡಿರೋ ಕೆಲಸ ಕೂಡ ಅಕ್ಷರಶಃ ಹಾಗೆಯೇ ಇದೆ. ನಾವೆಲ್ಲಾ ಇಲ್ಲಿಯವರೆಗೆ ಕೀಬೋರ್ಡ್ ಇರೋ ಲ್ಯಾಪ್‌ಟಾಪ್‌ಗಳನ್ನೇ ನೋಡಿದ್ದೀವಿ. ಆದ್ರೆ ಹುವಾವೇ ಈಗ 'ಮೇಟ್‌ಬುಕ್ ಫೋಲ್ಡ್' (MateBook Fold) ಎಂಬ ವಿಚಿತ್ರ ಮತ್ತು ಅದ್ಭುತ ಸಾಧನವನ್ನು ಲಾಂಚ್ ಮಾಡಿದೆ. ಇದರ ವಿಶೇಷತೆ ಅಂದ್ರೆ, ಇದರಲ್ಲಿ ಟೈಪ್ ಮಾಡೋಕೆ ಬಟನ್ ಇರುವ ಕೀಬೋರ್ಡ್ ಇಲ್ಲ. ಏನಿದು ಹೊಸ ಮ್ಯಾಜಿಕ್?
ದಶಕಗಳಿಂದ ನಾವು ಕಂಪ್ಯೂಟರ್ ಅಂದ್ರೆ ಟೈಪಿಂಗ್ ಮಾಡೋ ಸಾಧನ ಅಂತಲೇ ಅನ್ಕೊಂಡಿದ್ದೀವಿ. ಆದ್ರೆ ಹುವಾವೇ ಈಗ ಹೊಸ ಪ್ರಶ್ನೆಯನ್ನ ಎತ್ತಿದೆ; "ಒಂದು ವೇಳೆ ಕೀಬೋರ್ಡ್ ಇಲ್ಲದಿದ್ರೆ ಲ್ಯಾಪ್‌ಟಾಪ್ ಹೇಗಿರುತ್ತೆ?". ಅದರ ಫಲಿತಾಂಶವೇ ಈ ಮೇಟ್‌ಬುಕ್ ಫೋಲ್ಡ್. ಇದು ಬರೋಬ್ಬರಿ 18.3 ಇಂಚಿನ ಬೃಹತ್ OLED ಸ್ಕ್ರೀನ್ ಹೊಂದಿದೆ. ನೀವು ಇದನ್ನ ಪುಸ್ತಕದಂತೆ ಮಡಚಬಹುದು, ಆಗ ಇದು ಕೇವಲ 13 ಇಂಚಿನ ಪುಟ್ಟ ಸಾಧನವಾಗಿ ಬದಲಾಗುತ್ತೆ.
ಬಟನ್ ಇರೋ ಕೀಬೋರ್ಡ್ ಇಲ್ಲದಿದ್ರೆ ಕೆಲಸ ಮಾಡೋದು ಹೇಗೆ ಅನ್ನೋ ಡೌಟ್ ನಿಮಗೆ ಬರಬಹುದು. ಇಲ್ಲಿ ನಮಗೆ ಸ್ಕ್ರೀನ್ ಮೇಲೆಯೇ ಬರುವ 'ವರ್ಚುವಲ್ ಕೀಬೋರ್ಡ್' ನೀಡಲಾಗಿದೆ. ಇದರ ಜೊತೆಗೆ ಟಚ್, ಎಐ (AI) ಮತ್ತು ವಾಯ್ಸ್ ಕಮಾಂಡ್ ಮೂಲಕ ನಾವು ಹೆಚ್ಚಿನ ಕೆಲಸ ಮಾಡಬಹುದು. ನಿಮಗೆ ಬೇಕಿದ್ರೆ ಹೊರಗಿನಿಂದ ಬ್ಲೂಟೂತ್ ಕೀಬೋರ್ಡ್ ಕನೆಕ್ಟ್ ಮಾಡೋ ಆಪ್ಷನ್ ಕೂಡ ಇದೆ. ಇದು ಕೇವಲ ಒಂದು ಪ್ರಾಡಕ್ಟ್ ಅಷ್ಟೇ ಅಲ್ಲ, ಕಂಪ್ಯೂಟರ್‌ಗಳ ಭವಿಷ್ಯದ ದಿಕ್ಸೂಚಿ ಎನ್ನಲಾಗ್ತಿದೆ.
ಪವರ್‌ಫುಲ್ ಫೀಚರ್ಸ್ ಮತ್ತು ಸ್ಟೈಲಿಶ್ ಲುಕ್
ನೋಡೋಕೆ ಇದು ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್ ಎರಡರ ಮಿಶ್ರಣದಂತಿದೆ. ಇದರ ಫೀಚರ್ಸ್ ಕೂಡ ಅಷ್ಟೇ ಬಲಿಷ್ಠವಾಗಿವೆ
- ಡಿಸ್‌ಪ್ಲೇ: 3.3K ರೆಸಲ್ಯೂಶನ್‌ನ ಮಿನುಗುವ OLED ಸ್ಕ್ರೀನ್, 1600 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ.
- ಪ್ರೊಸೆಸರ್: ಹುವಾವೇ ಕಂಪನಿಯ ಲೇಟೆಸ್ಟ್ Kirin X90 ಚಿಪ್ ಮತ್ತು ಬರೋಬ್ಬರಿ 32GB RAM ಇದೆ.
- ಸ್ಟೋರೇಜ್: 1TB ಇಂದ 2TB ವರೆಗೆ ಎಸ್‌ಎಸ್‌ಡಿ (SSD) ನೀಡಲಾಗಿದೆ.
- ತೂಕ: ಇಷ್ಟೆಲ್ಲಾ ಫೀಚರ್ಸ್ ಇದ್ದರೂ ಇದರ ತೂಕ ಬರೀ 1.16 ಕೆಜಿ ಮಾತ್ರ! ಅಂದ್ರೆ ಫುಲ್ ಸ್ಲಿಮ್ ಮತ್ತು ಲೈಟ್ ವೇಟ್.
ಹುವಾವೇ ಇದನ್ನ ಇನ್ನೂ ಲ್ಯಾಪ್‌ಟಾಪ್ ಅಂತಲೇ ಕರೆಯುತ್ತಿದೆ. ಆದ್ರೆ ಇದು ನಿಜಕ್ಕೂ ಲ್ಯಾಪ್‌ಟಾಪ್‌ಗಳ ಹಳೆಯ ವ್ಯಾಖ್ಯಾನವನ್ನೇ ಬದಲಿಸ್ತಿದೆ. ಯಾವಾಗ ಕೀಬೋರ್ಡ್ ಇಲ್ಲದೆಯೂ ಕಂಪ್ಯೂಟರ್ ಬಳಸಬಹುದು ಅನ್ನೋದು ಶುರುವಾಗುತ್ತೋ, ಆಗ ಇಡೀ ಡಿಜಿಟಲ್ ಲೋಕವೇ ಬದಲಾಗುತ್ತೆ. ಇದು ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಗೋ 'ಅಡಾಪ್ಟಿವ್ ಸ್ಕ್ರೀನ್'ಗಳ ಯುಗ.
ಇದು ಕೇವಲ ಒಂದು ಹೊಸ ಲ್ಯಾಪ್‌ಟಾಪ್ ಬಿಡುಗಡೆ ಅಲ್ಲ, ಬದಲಾಗಿ ಕೀಬೋರ್ಡ್ ಯುಗ ಮುಗಿಯುತ್ತಿದೆ ಅನ್ನೋ ದೊಡ್ಡ ಸಂಕೇತ. ಮೊದಲು ಮೊಬೈಲ್‌ಗಳಲ್ಲಿ ಬಟನ್ ಹೋಗಿ ಟಚ್ ಸ್ಕ್ರೀನ್ ಬಂದಾಗ ಜನ ಕಷ್ಟ ಅನ್ಕೊಂಡಿದ್ರು, ಆದ್ರೆ ಈಗ ಅದೇ ನಮಗೆ ಅಭ್ಯಾಸವಾಗಿದೆ. ಲ್ಯಾಪ್‌ಟಾಪ್ ಲೋಕದಲ್ಲೂ ಅಂತಹದ್ದೇ ಕ್ರಾಂತಿ ಈಗ ಶುರುವಾಗಿದೆ.
ನಿಮಗೇನನ್ಸುತ್ತೆ? ಕೀಬೋರ್ಡ್ ಇಲ್ಲದ ಈ 18 ಇಂಚಿನ ಲ್ಯಾಪ್‌ಟಾಪ್ ಸಕ್ಸಸ್ ಆಗುತ್ತಾ? ಟೈಪಿಂಗ್ ಮಾಡೋಕೆ ಬಟನ್ ಇಲ್ದೇ ಹೋದ್ರೆ ನಿಮಗೆ ಕಷ್ಟ ಆಗುತ್ತಾ? ನಿಮ್ಮ ಅನಿಸಿಕೆಯನ್ನ ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ.
🚨BREAKING: Huawei just launched an 18-inch laptop that folds down to 13 inches.
— Future Stacked (@FutureStacked) April 14, 2026
It’s called the MateBook Fold. And it has no built-in keyboard.
Not a gimmick. A signal.
For decades, computers were designed around typing. Huawei just asked what happens when the keyboard is no… pic.twitter.com/lTtal8F041
ಒಂದು ನೋಟದಲ್ಲಿ ಮೇಟ್‌ಬುಕ್ ಫೋಲ್ಡ್:
- ಸ್ಕ್ರೀನ್: 18.3 ಇಂಚು (13 ಇಂಚಿಗೆ ಕುಗ್ಗಿಸಬಹುದು)
- ಚಿಪ್‌ಸೆಟ್: Kirin X90, 32GB RAM
- OS: HarmonyOS 5, Wi-Fi 7
- ತೂಕ: 1.16 ಕೆಜಿ (7.3mm ದಪ್ಪ)