Apr 2, 2026 Languages : ಕನ್ನಡ | English

ಮಗಳ ಮದುವೆ ಬಗ್ಗೆ ಚಿಂತೆ ಬಿಡಿ! 21 ವರ್ಷಕ್ಕೆ 40 ಲಕ್ಷ ಕೊಡ್ತಾರೆ ಇವರು!!

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಪ್ರತಿಯೊಂದರ ಬೆಲೆಯೂ ಹಾಗು ಮಕ್ಕಳ ಪೋಷಣಗೆ ಅವರ ಶಿಕ್ಷಣದ ಖರ್ಚು ಪ್ರತಿಯೊಂದು ಸಹ ಬೆಲೆ ಏರಿಕೆ ನಡುವೆ ಹಂತ ಹಂತವಾಗಿ ಕಷ್ಟ ಆಗುತ್ತಿದೆ. ಮಗಳ ಉತ್ತಮ ಶಿಕ್ಷಣ ಅಥವಾ ಉತ್ತಮ ಕುಟುಂಬದಲ್ಲಿ ವಿವಾಹ ಮಾಡಿಸುವುದು ನಿಜ ಇವತ್ತಿನ ದಿನಗಳಲ್ಲಿ ಬಹಳ ಕಷ್ಟವಾಗಿದೆ. ಅವರ ಓದಿನ ಖರ್ಚು, ಅವರನ್ನು ಬೆಳೆಸುವ ಖರ್ಚು ಮನೆಯ ಜವಾಬ್ದಾರಿ ಎಲ್ಲವನ್ನು ತೂಗಿಸುವುದು ನಿಜ ಇವತ್ತಿಗೆ ಕಷ್ಟವೇ ಆಗಿದೆ. ಎಷ್ಟು ದುಡಿದರೂ ಈ ಮಿಡಲ್ ಕ್ಲಾಸ್ ಜನರು ಹಾಗೆ ತೀರಾ ಬಡವರು, ಪ್ರತಿದಿನ ದುಡಿದರೆ ಮಾತ್ರ ಜೀವನ ಸಾಗುತ್ತದೆ ಅನ್ನೋರು ಇವತ್ತಿನ ಫಾಸ್ಟ್ ಯುಗದಲ್ಲಿ ದುಡ್ಡೇ ಎಲ್ಲಾ ಅನ್ನುವ ಹಂತದಲ್ಲಿ ಸಾಕಷ್ಟು ಒದ್ದಾಡುತ್ತಿದ್ದಾರೆ. ಆದರೆ ಈಗ ಚಿಂತೆ ಬೇಡ. ಸರ್ಕಾರವು ನಿಮ್ಮ ಮಗಳ ಭವಿಷ್ಯವನ್ನು ಭದ್ರಗೊಳಿಸುವ ಅದ್ಭುತ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯ ಮೂಲಕ ನೀವು ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತಗೊಳಿಸಬಹುದು. ಅದು ಹೇಗೆ ಅಂತೀರಾ ಈ ವಿಷಯ ತಿಳಿದುಕೊಳ್ಳಿ. 

ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ

ಮಗಳ ಉತ್ತಮ ಶಿಕ್ಷಣ ಮತ್ತು ವಿವಾಹದ ಬಗ್ಗೆ ತಲೆಕೆಡಿಸಿಕೊಳ್ಳುವ ಪೋಷಕರಿಗೆ SSY ಯೋಜನೆ ಆಶಾದಾಯಕ ಪರಿಹಾರವಾಗಿದೆ. ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ದರವಿಳಿವಿನಿಂದಾಗಿ ಶಿಕ್ಷಣ ಅಥವಾ ವಿವಾಹದ ಖರ್ಚು ಭಾರವಾಗುತ್ತಿದೆ. ಆದರೆ SSY ಯೋಜನೆಯ ಮೂಲಕ ಮಗಳ ಭವಿಷ್ಯವನ್ನು ಸುಲಭವಾಗಿ ಭದ್ರಗೊಳಿಸಬಹುದು.

SSY ಯೋಜನೆ ಎಂದರೆ ಏನು?

SSY ಎಂದರೆ ಸುಕನ್ಯಾ ಸಮೃದ್ಧಿ ಯೋಜನೆ. ಇದು ಮಗಳ ಭವಿಷ್ಯಕ್ಕಾಗಿ ಸರ್ಕಾರದ ಭದ್ರ ಯೋಜನೆಯಾಗಿದೆ. ಈ ಯೋಜನೆಯ ವಿಶೇಷತೆ ಎಂದರೆ ನೀವು ಹೂಡಿಕೆಗೆ ಮಾಡಿದ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಯಾವುದೇ ರೀತಿಯ ಅಪಾಯವಿಲ್ಲ. ಜೊತೆಗೆ ಉತ್ತಮ ಬಡ್ಡಿದರದ ಲಾಭವೂ ಸಿಗುತ್ತದೆ. ಈ ಯೋಜನೆಯ ಮೂಲಕ ₹70 ಲಕ್ಷದವರೆಗೆ ನಿಧಿ ನಿರ್ಮಾಣ ಸಾಧ್ಯ ಆಗಿರಲಿದೆ ಎನ್ನುತ್ತದೆ ಈ ನೂತನ ಯೋಜನೆ . 

SSY ಯೋಜನೆಯ ವಿವರಗಳು

ಈ ಯೋಜನೆಯಡಿ 10 ವರ್ಷ ವಯಸ್ಸಿನೊಳಗಿನ ಮಗಳ ಹೆಸರಿನಲ್ಲಿ ವಿಶೇಷ ಉಳಿತಾಯ ಖಾತೆ ತೆರೆಯಲಾಗುತ್ತದೆ. ವರ್ಷಕ್ಕೆ ಕನಿಷ್ಠ ₹250 ಹೂಡಿಕೆ ಮಾಡಬಹುದು. ಖಾತೆ ತೆರೆಯಲಾದ ದಿನದಿಂದ 15 ವರ್ಷಗಳ ಕಾಲ ಹಣ ಹಾಕಬೇಕು. ಖಾತೆ 21ನೇ ವಯಸ್ಸಿನಲ್ಲಿ ಮ್ಯಾಚುರಾಗುತ್ತದೆ. ಮಗಳು 21ರೊಳಗೆ ವಿವಾಹವಾದರೆ ಖಾತೆ ಮುಚ್ಚಲಾಗುತ್ತದೆ.

ಯೋಜನೆಗೆ ಅರ್ಹತೆ ಯಾರು?

ಈ ಯೋಜನೆಯ ಲಾಭವನ್ನು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗಳು ಮಾತ್ರ ಪಡೆಯಬಹುದು. ಒಂದು ಮಗಳ ಹೆಸರಿನಲ್ಲಿ ಒಂದು ಖಾತೆ ಮಾತ್ರ ತೆರೆಯಬಹುದು. ಒಂದು ಕುಟುಂಬದಲ್ಲಿ ಎರಡು ಮಗಳು ಇದ್ದರೆ ಎರಡು ಖಾತೆ ತೆರೆಯಬಹುದು. ಜೋಡಾ ಮಕ್ಕಳ ಅಥವಾ ತ್ರಿಶಿಶುಗಳ ಸಂದರ್ಭದಲ್ಲಿಯೂ ವಿಶೇಷ ಅನುಮತಿ ಇದೆ. ವರ್ಷಕ್ಕೆ ₹250 ಹೂಡಿಕೆ ಮಾಡಲೇಬೇಕು. ಇಲ್ಲದಿದ್ದರೆ ಖಾತೆ ಡೀಫಾಲ್ಟ್ ಆಗುತ್ತದೆ. ದಂಡದೊಂದಿಗೆ 15 ವರ್ಷಗಳೊಳಗೆ ಪುನಶ್ಚೇತನ ಮಾಡಬಹುದು. ಖಾತೆಯನ್ನು ಪೋಷಕರು ಅಥವಾ ಕಾನೂನು ಪಾಲಕರು ಮಾತ್ರ ನಿರ್ವಹಿಸಬಹುದು.

₹41.25 ಲಕ್ಷ ಲಾಭ ಪಡೆಯುವ ವಿಧಾನ

ನಿಮ್ಮ ಮಗಳು ಈಗ 5 ವರ್ಷದವಳಾಗಿದ್ದರೆ, ವರ್ಷಕ್ಕೆ ₹1.5 ಲಕ್ಷ ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ₹22.50 ಲಕ್ಷ ಹೂಡಿಕೆ ಆಗುತ್ತದೆ. ಪ್ರಸ್ತುತ 8.2% ಬಡ್ಡಿದರದಂತೆ, 20ನೇ ವಯಸ್ಸಿನಲ್ಲಿ ₹41.25 ಲಕ್ಷ ಖಾತೆಯಲ್ಲಿ ಇರಬಹುದು. ಇದರಲ್ಲಿ ₹18.75 ಲಕ್ಷ ಬಡ್ಡಿ ಲಾಭವಾಗುತ್ತದೆ. ದೀರ್ಘಾವಧಿಯ ಸಂಯುಕ್ತ ಬಡ್ಡಿದರ ಈ ಯೋಜನೆಯನ್ನು ಇನ್ನಷ್ಟು ಲಾಭದಾಯಕವಾಗಿಸುತ್ತದೆ.

SSY ಯೋಜನೆಯು ಅತ್ಯುತ್ತಮ ಯಾಕೆ?

SSY ಯೋಜನೆಯು ಸರ್ಕಾರದ ನಿಯಂತ್ರಣದಲ್ಲಿರುವುದರಿಂದ ಸಂಪೂರ್ಣ ಸುರಕ್ಷಿತವಾಗಿದೆ. ಜೊತೆಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ₹1.5 ಲಕ್ಷದ ತೆರಿಗೆ ವಿನಾಯಿತಿ ಸಿಗುತ್ತದೆ. ಮ್ಯಾಚುರಿಟಿ ಮೊತ್ತ ಮತ್ತು ಬಡ್ಡಿ ಎರಡೂ ತೆರಿಗೆ ಮುಕ್ತವಾಗಿವೆ. ಈ ಯೋಜನೆಯು ಮಗಳ ಉನ್ನತ ಶಿಕ್ಷಣ, ವೃತ್ತಿ ಅಥವಾ ವಿವಾಹಕ್ಕಾಗಿ ಬಲವಾದ ಆರ್ಥಿಕ ನೆಲೆ ನಿರ್ಮಿಸಲು ಸಹಾಯ ಆಗುತ್ತದೆ.

Latest News