ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಜನರಲ್ಲಿ ಇನ್ವೆಸ್ಟ್‌ಮೆಂಟ್ ಬಗ್ಗೆ ಕ್ರೇಜ್ ಸಖತ್ ಹೆಚ್ಚಾಗಿದೆ. ದೊಡ್ಡ ಸಂಬಳ ಬರುವವರೆಗೆ ಕಾಯದೆ, ಸಣ್ಣ ಮೊತ್ತದಿಂದಲೇ ಭವಿಷ್ಯಕ್ಕಾಗಿ ದೊಡ್ಡ ಸಂಪತ್ತು ನಿರ್ಮಿಸಲು ಎಲ್ಲರೂ ಪ್ಲಾನ್ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಈಗ ಎಸ್‌ಐಪಿ (SIP) ಮತ್ತು ಪಿಪಿಎಫ್ (PPF) ಹೂಡಿಕೆಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.
ಪ್ರತಿ ತಿಂಗಳು ಕೇವಲ ₹2,000 ಎತ್ತಿಟ್ಟರೆ ಸಾಕು, ಲಾಂಗ್ ಟರ್ಮ್‌ನಲ್ಲಿ ಅದು ದೊಡ್ಡ ಮೊತ್ತವಾಗಿ ಹೇಗೆ ನಿಮ್ಮ ಕೈ ಸೇರುತ್ತೆ? ಅಷ್ಟಕ್ಕೂ ಈ ಎಸ್‌ಐಪಿ ಮತ್ತು ಪಿಪಿಎಫ್ ಇವೆರಡರಲ್ಲಿ ನಿಮ್ಮ ಭವಿಷ್ಯಕ್ಕೆ ಯಾವುದು ಬೆಸ್ಟ್? ಇದರ ಅಸಲಿ ಲೆಕ್ಕಾಚಾರ ಇಲ್ಲಿದೆ!
ಮ್ಯೂಚುವಲ್ ಫಂಡ್ ಎಸ್‌ಐಪಿ (SIP):
ನಿಮಗೆ ಮಾರುಕಟ್ಟೆಯ ಏರಿಳಿತ ಎದುರಿಸುವ ಧೈರ್ಯವಿದ್ದು, ಭರ್ಜರಿ ರಿಟರ್ನ್ಸ್ ಬೇಕು ಅಂದರೆ ಎಸ್‌ಐಪಿ (Systematic Investment Plan) ಅತ್ಯಂತ ಸೂಕ್ತ ಆಯ್ಕೆ. ಯುವ ಹೂಡಿಕೆದಾರರಿಗೆ ಇದು ಕಮ್ಮಿ ದುಡ್ಡಿನಲ್ಲಿ ದೊಡ್ಡ ನಿಧಿ ನಿರ್ಮಿಸಿಕೊಡುವ ಅಸ್ತ್ರ.
ನಿಮ್ಮ ಹೂಡಿಕೆ - ಪ್ರತಿ ತಿಂಗಳು ₹2,000 ರಂತೆ 30 ವರ್ಷಗಳ ಕಾಲ ಹೂಡಿಕೆ (ಒಟ್ಟು ಇನ್ವೆಸ್ಟ್‌ಮೆಂಟ್ ಬರೀ ₹7.2 ಲಕ್ಷ).
ಸಿಗುವ ಲಾಭ - ಮಾರುಕಟ್ಟೆಯಲ್ಲಿ ವಾರ್ಷಿಕ ಸರಾಸರಿ 12% ರಿಟರ್ನ್ಸ್ ಸಿಕ್ಕರೂ ಸಹ, 30 ವರ್ಷಗಳ ಕೊನೆಗೆ ನಿಮ್ಮ ಕೈಗೆ ಬರೋಬ್ಬರಿ ₹70 ಲಕ್ಷದಷ್ಟು ಬೃಹತ್ ಮೊತ್ತ ಸಿಗಲಿದೆ!
ಪ್ಲಸ್ ಪಾಯಿಂಟ್ - ಇಲ್ಲಿ ಕಾಂಪೌಂಡಿಂಗ್ ಇಂಟರೆಸ್ಟ್ (ಬಡ್ಡಿಯ ಮೇಲೆ ಬಡ್ಡಿ) ಕೆಲಸ ಮಾಡುವುದರಿಂದ, ನೀವು ಹಾಕಿದ ಅಸಲಿಗಿಂತ ಮಾರುಕಟ್ಟೆಯಿಂದ ಬರುವ ಲಾಭವೇ ಬೆಟ್ಟದಷ್ಟು ದೊಡ್ಡದಾಗಿರುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) - ಶೂನ್ಯ ರಿಸ್ಕ್, ನೂರಕ್ಕೆ ನೂರು ಸೇಫ್!
ನನಗೆ ಮಾರುಕಟ್ಟೆಯ ರಿಸ್ಕ್ ಬಿಲ್ಕುಲ್ ಬೇಡ, ಕಷ್ಟಪಟ್ಟು ದುಡಿದ ದುಡ್ಡು ಗ್ಯಾರಂಟಿಯಾಗಿ ಸುರಕ್ಷಿತವಾಗಿರಬೇಕು ಎನ್ನುವವರಿಗೆ ಸರ್ಕಾರದ ಪಿಪಿಎಫ್ (PPF) ಯೋಜನೆಗಿಂತ ಬೆಸ್ಟ್ ಮತ್ತೊಂದಿಲ್ಲ.
ನಿಮ್ಮ ಹೂಡಿಕೆ - ಪ್ರತಿ ತಿಂಗಳು ₹2,000 ರಂತೆ 30 ವರ್ಷಗಳ ಕಾಲ ಹೂಡಿಕೆ (ಪಿಪಿಎಫ್ ನಿಯಮದ ಪ್ರಕಾರ 15 ವರ್ಷದ ನಂತರ ಮುಂದಿನ ಅವಧಿಗೆ ವಿಸ್ತರಿಸಬಹುದು).
ಸಿಗುವ ಲಾಭ - ಪ್ರಸ್ತುತ ಸರ್ಕಾರದ ಅಧಿಕೃತ ಬಡ್ಡಿದರದ ಲೆಕ್ಕಾಚಾರದ ಪ್ರಕಾರ 30 ವರ್ಷ ಮುಗಿಯುವಾಗ ನಿಮ್ಮ ಕೈಗೆ ₹25 ರಿಂದ ₹30 ಲಕ್ಷದವರೆಗೆ ಫಿಕ್ಸ್ಡ್ ಅಮೌಂಟ್ ಸಿಗುತ್ತದೆ.
ಪ್ಲಸ್ ಪಾಯಿಂಟ್ - ಇದು ಕೇಂದ್ರ ಸರ್ಕಾರದ ಯೋಜನೆಯಾದ್ದರಿಂದ ರಿಸ್ಕ್ ಇರುವುದಿಲ್ಲ. ಜೊತೆಗೆ ಸಂಬಳ ಪಡೆಯುವವರಿಗೆ ಆದಾಯ ತೆರಿಗೆ ವಿನಾಯಿತಿ (Tax Exemption) ಕೂಡ ಸಿಗುತ್ತದೆ.
ಇವೆರಡರಲ್ಲಿ ಸ್ಮಾರ್ಟ್ ಹೂಡಿಕೆದಾರರ ಚಾಯ್ಸ್ ಯಾವುದು?
ಫೈನಾನ್ಷಿಯಲ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಯುವ ವಯಸ್ಸಿನಲ್ಲೇ ಹೆಚ್ಚಿನ ಸಂಪತ್ತು ನಿರ್ಮಿಸಲು ರಿಸ್ಕ್ ತಗೋಬಹುದು ಅನ್ಕೊಂಡ್ರೆ ಎಸ್‌ಐಪಿ ಮಾಡುವುದು ಜಾಣತನ. ಆದರೆ, ಇತ್ತೀಚಿನ ಸ್ಮಾರ್ಟ್ ಇನ್ವೆಸ್ಟರ್ಸ್ ಅಪಾಯ ಮತ್ತು ಲಾಭದ ಸಮತೋಲನ ಕಾಯ್ದುಕೊಳ್ಳಲು (Risk-Return Balance) ಒಂದು ಸೂಪರ್ ಐಡಿಯಾ ಮಾಡುತ್ತಿದ್ದಾರೆ.
ಅವರು ₹2,000 ಹೂಡಿಕೆಯಲ್ಲಿ ₹1,000 ಅನ್ನು ಎಸ್‌ಐಪಿಗೂ ಮತ್ತು ಇನ್ನೊಂದು ₹1,000 ಅನ್ನು ಪಿಪಿಎಫ್‌ಗೂ ಹಾಕಿ ಎರಡೂ ಕಡೆ ಬ್ಯಾಲೆನ್ಸ್ ಸೃಷ್ಟಿಸುತ್ತಿದ್ದಾರೆ! ಸಣ್ಣ ವಯಸ್ಸಿನಲ್ಲೇ ಇಂತಹ ಹವ್ಯಾಸ ರೂಢಿಸಿಕೊಂಡರೆ ಭವಿಷ್ಯದ ಲೈಫ್ ಸಖತ್ ಆರಾಮಾಗಿ ಇರಲಿದೆ.
ವಿಶೇಷ ಸೂಚನೆ - ಈ ಲೇಖನವನ್ನು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ನೀಡಲಾಗಿದೆ. ಯಾವುದೇ ಮ್ಯೂಚುವಲ್ ಫಂಡ್ ಅಥವಾ ಸರ್ಕಾರದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮುನ್ನ ನಿಮ್ಮ ವೈಯಕ್ತಿಕ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ನಿರ್ಧಾರ ಕೈಗೊಳ್ಳಿ. ಯಾವುದೇ ರೀತಿಯ ಲಾಭ ನಷ್ಟಕ್ಕೆ ನಮ್ಮ ವಾಹಿನಿ ಜವಾಬ್ದಾರನಾಗಿರುವುದಿಲ್ಲ!