₹25,000 ವರೆಗೆ ಪ್ರೈಸ್ ಮನಿ: ಪಿಯುಸಿ, ಡಿಗ್ರಿ ಪಾಸ್ ಆದವರಿಗೆ ಸಿಗಲಿದೆ ಈ ಹಣ; ಮೇ 31 ಕೊನೆಯ ದಿನ!! ಅರ್ಜಿ ಸಲ್ಲಿಸೋದು ಹೇಗೆ?

ಬೋರ್ಡ್ ಪರೀಕ್ಷೆಗಳಲ್ಲಿ ಅಥವಾ ಡಿಗ್ರಿಯಲ್ಲಿ ಕಷ್ಟಪಟ್ಟು ಓದಿ, ಕೈತುಂಬಾ ಅಂಕ ಗಳಿಸಿ ಪಾಸ್ ಆಗೋದು ಪ್ರತಿಯೊಬ್ಬ ವಿದ್ಯಾರ್ಥಿಯ ದೊಡ್ಡ ಕನಸು. ಹಗಲಿರುಳು ನಿದ್ದೆಗೆಟ್ಟು ಓದಿ ರಿಸಲ್ಟ್ ಬಂದಾಗ ಸಿಗೋ ಖುಷಿ ಒಂದೆಡೆಯಾದ್ರೆ, ಮುಂದಿನ ಓದಿಗೆ ಬೇಕಾಗೋ ಕಾಲೇಜು ಫೀಸ್, ಬುಕ್ಸ್ ಖರ್ಚುಗಳು ಪೋಷಕರಿಗೆ ಸಣ್ಣ ಮಟ್ಟದ ಟೆನ್ಶನ್ ತರೋದು ಕಾಮನ್. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಫ್ಯಾಮಿಲಿಗಳ ಮಕ್ಕಳಿಗೆ ಹೈಯರ್ ಎಜುಕೇಶನ್‌ಗೆ ಸೇರಲು ದುಡ್ಡು ಹೊಂದಿಸುವುದು ತಲೆನೋವು.

2026ರ ಪ್ರೈಸ್ ಮನಿ ಯೋಜನೆ: ವಿದ್ಯಾರ್ಥಿಗಳಿಗೆ ಬಂಪರ್ ಪ್ರೋತ್ಸಾಹಧನ!
2026ರ ಪ್ರೈಸ್ ಮನಿ ಯೋಜನೆ: ವಿದ್ಯಾರ್ಥಿಗಳಿಗೆ ಬಂಪರ್ ಪ್ರೋತ್ಸಾಹಧನ!

ಇದೇ ಕಾರಣಕ್ಕೆ, ಯಾವುದೇ ಕಾರಣಕ್ಕೂ ಹಣದ ಕೊರತೆಯಿಂದ ವಿದ್ಯಾರ್ಥಿಗಳ ಓದು ನಿಲ್ಲಬಾರದು ಅನ್ನೋ ಒಳ್ಳೆ ಉದ್ದೇಶದಿಂದ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು (Social Welfare Department) 2026ನೇ ಸಾಲಿನ ಭರ್ಜರಿ ಪ್ರೈಸ್ ಮನಿ (Prize Money) ಘೋಷಣೆ ಮಾಡಿದೆ. ಈ ಬಾರಿ ಪ್ರಥಮ ಪ್ರಯತ್ನದಲ್ಲೇ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಡಿಗ್ರಿ ಮುಗಿಸಿದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳಿಗೆ ₹15,000 ದಿಂದ ಗರಿಷ್ಠ ₹25,000 ವರೆಗೆ ಪ್ರೋತ್ಸಾಹಧನ ಸಿಗಲಿದೆ. ಹಾಗಾದ್ರೆ ಇದಕ್ಕೆ ಅಪ್ಲಿಕೇಶನ್ ಹಾಕೋದು ಹೇಗೆ? ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್.

ಪ್ರೈಸ್ ಮನಿ ಯೋಜನೆಯ ಪ್ರಮುಖ ಮುಖ್ಯಾಂಶಗಳು (Highlights);

ಯಾರಿಗೆ ಸಿಗುತ್ತೆ? - ಕೇವಲ ಮೊದಲ ಪ್ರಯತ್ನದಲ್ಲೇ (First Attempt) ಕನಿಷ್ಠ 70% ಗಿಂತ ಹೆಚ್ಚು ಅಂಕ ಗಳಿಸಿ ಪಾಸ್ ಆದ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರ ಈ ಆಫರ್ ಸಿಗಲಿದೆ.

ಕೋರ್ಸ್ ವೈಸ್ ಬಂಪರ್ ಅಮೌಂಟ್ - ಎಸ್‌ಎಸ್‌ಎಲ್‌ಸಿಗೆ ₹15,000, ಪಿಯುಸಿಗೆ ₹20,000 ಹಾಗೂ ಯಾವುದೇ ಪದವಿ (Degree/Engineering) ಪಾಸಾದವರಿಗೆ ₹25,000 ಹಣ ಸಿಗಲಿದೆ.

ಡೆಡ್‌ಲೈನ್ ನೆನಪಿರಲಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 31, 2026 ಕಡೆಯ ದಿನಾಂಕವಾಗಿದೆ. ಕೊನೆ ಕ್ಷಣದ ರಶ್ ತಪ್ಪಿಸಲು ಇಂದೇ ಅಪ್ಲಿಕೇಶನ್ ಹಾಕಿ.

ಅರ್ಜಿ ಸಲ್ಲಿಸಲು ಬೇಕಾಗುವ ಇಂಪಾರ್ಟೆಂಟ್ ದಾಖಲೆಗಳು:

ಸೈಬರ್ ಸೆಂಟರ್‌ಗೆ ಹೋಗುವ ಮುನ್ನ ಈ ಕೆಳಗಿನ ಒರಿಜಿನಲ್ ದಾಖಲೆಗಳನ್ನು ಸ್ಕ್ಯಾನ್ ಮಾಡಿ ರೆಡಿ ಇಟ್ಟುಕೊಳ್ಳಿ:

ಮಾರ್ಕ್ಸ್ ಕಾರ್ಡ್ - ನಿಮ್ಮ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಥವಾ ಡಿಗ್ರಿಯ ಅಸಲಿ ಅಂಕಪಟ್ಟಿ.

ಆಧಾರ್ ಕಾರ್ಡ್ - ವಿದ್ಯಾರ್ಥಿ ಹಾಗೂ ಪೋಷಕರ (ಅಪ್ಪ-ಅಮ್ಮ ಇಬ್ಬರದ್ದೂ) ಆಧಾರ್ ಕಾರ್ಡ್ ಬೇಕು.

ಜಾತಿ ಮತ್ತು ಆದಾಯ ಪ್ರಮಾಣಪತ್ರ - ಆರ್‌.ಡಿ ಸಂಖ್ಯೆ ಸ್ಪಷ್ಟವಾಗಿರುವ ಚಾಲ್ತಿಯಲ್ಲಿರುವ ಕ್ಯಾಸ್ಟ್ ಮತ್ತು ಇನ್‌ಕಮ್ ಸರ್ಟಿಫಿಕೇಟ್.

ಬ್ಯಾಂಕ್ ಪಾಸ್‌ಬುಕ್ - ವಿದ್ಯಾರ್ಥಿ ಹೆಸರಿನಲ್ಲೇ ಇರುವ ಅಕೌಂಟ್ ನಂಬರ್ ಮತ್ತು ಐಎಫ್‌ಎಸ್‌ಸಿ (IFSC) ಕೋಡ್ ಸ್ಪಷ್ಟವಾಗಿ ಕಾಣುವ ಪಾಸ್‌ಬುಕ್ ಮೊದಲ ಪೇಜ್ ಜೆರಾಕ್ಸ್.

ಸ್ಟೂಡೆಂಟ್ ಸಿಗ್ನೇಚರ್ - ವೈಟ್ ಪೇಪರ್ ಮೇಲೆ ಮಾಡಿರೋ ಸಹಿಯ ಸ್ಕ್ಯಾನ್ ಕಾಪಿ.

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಈ ಪ್ರಕ್ರಿಯೆ ಕಂಪ್ಲೀಟ್ ಆನ್‌ಲೈನ್ ಆಗಿದ್ದು, ನೀವು ಸೈಬರ್ ಸೆಂಟರ್‌ಗೆ ಹೋಗದೆ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ ಅಪ್ಲಿಕೇಶನ್ ಹಾಕಬಹುದು:

ಸ್ಟೆಪ್ 1 - ಸಮಾಜ ಕಲ್ಯಾಣ ಇಲಾಖೆಯ ಆಫೀಶಿಯಲ್ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲಿ "Application" ಲಿಂಕ್ ಕ್ಲಿಕ್ ಮಾಡಿ. ನೀವು ಪಿಯುಸಿ ಅಥವಾ ಡಿಗ್ರಿ ಆಗಿದ್ದರೆ 'POSTMATRIC' ಆಪ್ಷನ್ ಸೆಲೆಕ್ಟ್ ಮಾಡಿ.

ಸ್ಟೆಪ್ 2 - 'Validate Aadhaar' ಮೇಲೆ ಕ್ಲಿಕ್ ಮಾಡಿ ನಿಮ್ಮ 12 ಅಂಕಿಯ ಆಧಾರ್ ನಂಬರ್ ಹಾಕಿ. ಆಧಾರ್‌ಗೆ ಲಿಂಕ್ ಇರೋ ಮೊಬೈಲ್‌ಗೆ ಬರುವ ಒಟಿಪಿ (OTP) ಎಂಟರ್ ಮಾಡಿ ಲಾಗಿನ್ ಆಗಿ.

ಸ್ಟೆಪ್ 3 - ಈಗ ಓಪನ್ ಆಗುವ ಫಾರಂನಲ್ಲಿ ನಿಮ್ಮ ಎಜುಕೇಶನ್ ರಿಜಿಸ್ಟರ್ ನಂಬರ್ ಮತ್ತು ಪಾಸ್ ಆದ ವರ್ಷವನ್ನು ಸರಿಯಾಗಿ ತುಂಬಿ.

ಸ್ಟೆಪ್ 4 - ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಎಂಟರ್ ಮಾಡಿ, ಕೇಳಲಾದ ಎಲ್ಲಾ ಡಾಕ್ಯುಮೆಂಟ್ಸ್ ಲಗತ್ತಿಸಿ (Upload).

ಸ್ಟೆಪ್ 5 - ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಒಮ್ಮೆ ಚೆಕ್ ಮಾಡಿಕೊಂಡು "Submit" ಬಟನ್ ಒತ್ತಿ, ಪ್ರಿಂಟ್ ಔಟ್ (Acknowledgement) ತಗೆದುಕೊಳ್ಳಿ.

ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ವಿಷಯಗಳು

ಎಸ್‌ಎಸ್‌ಎಲ್‌ಸಿ ಪಾಸ್ ಆದ ಮಕ್ಕಳಿಗೆ ಶಿಕ್ಷಣ ಇಲಾಖೆಯೇ ನೇರವಾಗಿ ಡೇಟಾ ಕಳುಹಿಸುವುದರಿಂದ ಹೊಸದಾಗಿ ಅರ್ಜಿ ಹಾಕುವ ಅವಶ್ಯಕತೆ ಇರುವುದಿಲ್ಲ. ಆದರೆ ಪಿಯುಸಿ ಮತ್ತು ಡಿಗ್ರಿ ಸ್ಟೂಡೆಂಟ್ಸ್ ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಹಾಕಲೇಬೇಕು. ಆನ್‌ಲೈನ್ ಸಬ್ಮಿಟ್ ಆದ ಮೇಲೆ, ಆ ಪ್ರಿಂಟ್ ಔಟ್ ಜೊತೆ ಎಲ್ಲಾ ಡಾಕ್ಯುಮೆಂಟ್ಸ್ ಜೆರಾಕ್ಸ್ ಹಚ್ಚಿ ನಿಮ್ಮ ತಾಲೂಕಿನ 'ಸಮಾಜ ಕಲ್ಯಾಣ ಇಲಾಖಾ ಕಚೇರಿ'ಗೆ ಖುದ್ದಾಗಿ ಹೋಗಿ ಸಬ್ಮಿಟ್ ಮಾಡಬೇಕು.

ಕೊನೆಯದಾಗಿ ಒಂದು ಕಿವಿಮಾತು, ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಆಧಾರ್ ಲಿಂಕ್ (NPCI / DBT Seeding) ಆಗಿದೆಯಾ ಅನ್ನೋದನ್ನು ಬ್ಯಾಂಕ್‌ಗೆ ಹೋಗಿ ಕನ್ಫರ್ಮ್ ಮಾಡಿಕೊಳ್ಳಿ. ಇಲ್ಲದಿದ್ದರೆ ಅಪ್ಲಿಕೇಶನ್ ಅಪ್ರೂವ್ ಆದರೂ ದುಡ್ಡು ಕೈಗೆ ಸಿಗಲ್ಲ. ಈ ಸ್ಕಾಲರ್‌ಶಿಪ್ ಹಣವು ಮುಂದಿನ ಓದಿಗೆ, ಲ್ಯಾಪ್‌ಟಾಪ್ ಕೊಳ್ಳಲು ಅಥವಾ ಕಾಂಪಿಟೇಟಿವ್ ಎಕ್ಸಾಮ್ ಕೋಚಿಂಗ್ ತಗೊಳ್ಲು ದೊಡ್ಡ ಹೆಲ್ಪ್ ಆಗಲಿದೆ. ಹಾಗಾಗಿ ಲೇಟ್ ಮಾಡದೆ ತಕ್ಷಣವೇ ಅಪ್ಲೈ ಮಾಡಿಬಿಡಿ!  

Latest News