ಮುಂದಿನ ಹಂತದ ಶಿಕ್ಷಣ ಕಲಿಯೋಕೆ ದುಡ್ಡಿಲ್ವಾ? ಈ ಯೋಜನೆ ಅಪ್ಲೈ ಮಾಡಿ 10 ಲಕ್ಷ ಸಿಗುತ್ತೆ!

ಸರಕಾರದಿಂದ ಸಾಕಷ್ಟು ಸೌಲಭ್ಯಗಳು ಹೊರಬರುತ್ತಲೇ ಇರುತ್ತವೆ. ಹೆಚ್ಚು ಸಾರ್ವಜನಿಕರ ಹಿತದೃಷ್ಟಿಯ ಯೋಜನೆಗಳು ಕಾರ್ಯ ರೂಪಕ್ಕೆ ಬರುವ ವಿಚಾರ ಎಲ್ಲರಿಗೂ ಗೊತ್ತು. ಇದೀಗ ಮಕ್ಕಳ ವಿದ್ಯಾಭ್ಯಾಸದ ಕುರಿತು ಉನ್ನತ ಶಿಕ್ಷಣಕ್ಕೆ ಬೇಕಾದ ಹಣಕಾಸಿನ ತೊಂದರೆ ಕೆಲವರಿಗೆ ಆಗುತ್ತಲಿರುತ್ತದೆ. ಅಂತಹವರು ಈ ಮಾಹಿತಿ ಪೂರ್ತಿ ಓದಿ. ಉನ್ನತ  ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಅಡಚಣೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಅಡಮಾನ ರಹಿತವಾಗಿ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ಪಡೆಯಲು ಅವಕಾಶ ಹೊಂದಿದ್ದಾರೆ. ಮೆರಿಟ್ ಆಧಾರಿತ ಸೀಟು ಪಡೆದವರು ತಮ್ಮ ಕನಸುಗಳನ್ನು ನನಸಾಗಿಸಲು ಈ ಯೋಜನೆ ಪ್ರಮುಖ ನೆರವಾಗುತ್ತಿದೆ. 

PM Vidyalakshmi Scheme
PM Vidyalakshmi Scheme

ಉನ್ನತ ಶಿಕ್ಷಣದ ಕನಸು ನನಸಾಗಲು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ಪ್ರಮುಖ ಅವಕಾಶವಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. 

ಯೋಜನೆಯ ಪ್ರಮುಖ ಲಕ್ಷಣಗಳು

  • ವಿದ್ಯಾರ್ಥಿಗಳಿಗೆ ಅಡಮಾನ ರಹಿತವಾಗಿ 10 ಲಕ್ಷ ರೂ.ವರೆಗೆ ಶಿಕ್ಷಣ ಸಾಲ ಲಭ್ಯ.
  • ಮೆರಿಟ್ ಆಧಾರಿತ ಸೀಟು ಪಡೆದವರಿಗೆ ಮಾತ್ರ ಅವಕಾಶ; ಮ್ಯಾನೇಜ್ಮೆಂಟ್ ಕೋಟಾ ಅರ್ಹರಲ್ಲ.
  • ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶ.

ಸಾಲದ ವಿವರಗಳು ಮತ್ತು ಬಡ್ಡಿದರ

  • ಗರಿಷ್ಠ ಸಾಲ ಮೊತ್ತ: 10 ಲಕ್ಷ ರೂ.
  • ಬಡ್ಡಿದರ: ಬ್ಯಾಂಕಿನ IBLR + 0.5%
  • ವಿಶೇಷ ರಿಯಾಯಿತಿ: ವಾರ್ಷಿಕ ಆದಾಯ 8 ಲಕ್ಷ ರೂ. ಒಳಗಿನ ಕುಟುಂಬಗಳಿಗೆ 3% ಹೆಚ್ಚುವರಿ ಬಡ್ಡಿ ರಿಯಾಯಿತಿ.
  • ಪೂರ್ಣ ಬಡ್ಡಿ ವಿನಾಯಿತಿ: 4.5 ಲಕ್ಷ ರೂ. ಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಿಗೆ ಸೇರಿದರೆ ಸಂಪೂರ್ಣ ಬಡ್ಡಿ ವಿನಾಯಿತಿ.

ಅರ್ಹತೆ

  • ಸರ್ಕಾರ ಮಾನ್ಯತೆ ನೀಡಿರುವ 800 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಕೋರ್ಸುಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು.
  • ಮೆರಿಟ್ ಆಧಾರದಲ್ಲಿ ಸೀಟು ಪಡೆದವರು ಮಾತ್ರ.
  • ಓದಿನಲ್ಲಿ ಹಿಂದುಳಿಯದ ವಿದ್ಯಾರ್ಥಿಗಳು.

ಸಾಲ ಮರುಪಾವತಿ ಅವಧಿ

  • ಓದು ಮುಗಿದ ನಂತರ 1 ವರ್ಷದವರೆಗೆ ಮೊರಾಟೋರಿಯಂ ಅವಧಿ.
  • ನಂತರ ವಿದ್ಯಾರ್ಥಿಗಳಿಗೆ 15 ವರ್ಷಗಳ ಕಾಲಾವಕಾಶದಲ್ಲಿ ಸಾಲ ಮರುಪಾವತಿ ಮಾಡಲು ಅವಕಾಶ.

ಅರ್ಜಿ ಸಲ್ಲಿಸುವ ವಿಧಾನ

  • ಅಧಿಕೃತ ವೆಬ್ಸೈಟ್ pmvidyalaxmi.co.in ಗೆ ಭೇಟಿ ನೀಡಿ.
  • ‘ವಿದ್ಯಾರ್ಥಿ’ ವರ್ಗದಲ್ಲಿ ನೋಂದಣಿ ಮಾಡಿ.
  • ಲಾಗಿನ್ ಆದ ನಂತರ Apply for Education Loan ಆಯ್ಕೆ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಈ ಯೋಜನೆಯು ದೇಶದ ಭವಿಷ್ಯ ಕಟ್ಟುವ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ನೀಡುವ ಉದ್ದೇಶ ಹೊಂದಿದೆ. ಶಿಕ್ಷಣಕ್ಕಾಗಿ ಹಣಕಾಸು ಸಹಾಯ ಬೇಕಾದವರು ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು.

Latest News