ಮುಂದಿನ 2 ವರ್ಷಗಳಲ್ಲಿ ಚಿನ್ನ–ಬೆಳ್ಳಿ ಅಲ್ಲ, ಈ ಲೋಹದ ಬೆಲೆ ಡಬಲ್ - ICRA ಸ್ಫೋಟಕ ವರದಿ

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಭಾರೀ ಏರಿಕೆ ಕಂಡು ಹೂಡಿಕೆದಾರರಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಸ್ವಲ್ಪ ಮಟ್ಟಿನ ಇಳಿಕೆ ಕಂಡರೂ, ದುಬಾರಿ ಬೆಲೆ ಮುಂದುವರಿದಿದೆ. ಆದರೆ ಇದೀಗ ICRA (ಇನ್ವೆಸ್ಟ್‌ಮೆಂಟ್ ಇನ್ಫರ್ಮೇಶನ್ ಅಂಡ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಆಫ್ ಇಂಡಿಯಾ) ಬಿಡುಗಡೆ ಮಾಡಿದ ವರದಿ, ಚಿನ್ನ–ಬೆಳ್ಳಿಗಿಂತಲೂ ಹೆಚ್ಚು ಲಾಭದಾಯಕ ಲೋಹವಾಗಿ ತಾಮ್ರವನ್ನು ಗುರುತಿಸಿದೆ.

ಹೂಡಿಕೆದಾರರಿಗೆ ಹೊಸ ಆಯ್ಕೆ
ಹೂಡಿಕೆದಾರರಿಗೆ ಹೊಸ ಆಯ್ಕೆ

ICRA ವರದಿ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ತಾಮ್ರದ ಬೇಡಿಕೆ ದುಪ್ಪಟ್ಟಾಗುವ ಸಾಧ್ಯತೆ ಇದೆ. 2026ರ ಆರಂಭದಲ್ಲೇ ತಾಮ್ರದ ಬೆಲೆ 2025ರ ಹೋಲಿಕೆಗೆ ಶೇ.40ರಷ್ಟು ಏರಿಕೆಯಾಗಿ ಟನ್‌ಗೆ ₹11.77 ಲಕ್ಷ ತಲುಪಿದೆ. 2026ರ ಅಂತ್ಯದ ವೇಳೆಗೆ ಈ ಬೆಲೆ ಶೇ.40 ರಿಂದ 50ರಷ್ಟು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಪೂರೈಕೆಗೆ ಹೋಲಿಸಿದರೆ ಬೇಡಿಕೆ ಹೆಚ್ಚಾಗುತ್ತಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಭಾರತದಲ್ಲಿ ವೇಗವಾಗಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ, ನಗರೀಕರಣ, ಗ್ರೀನ್ ಎನರ್ಜಿ ಯೋಜನೆಗಳು, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ವಾಹನಗಳು, ಸ್ಮಾರ್ಟ್ ಸಿಟಿ ಯೋಜನೆ, ರೈಲ್ವೇ ವಿದ್ಯುದ್ದೀಕರಣ ಹಾಗೂ ರಕ್ಷಣಾ ವಲಯ ಎಲ್ಲ ಇವುಗಳಿಂದ ತಾಮ್ರದ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ ದೇಶೀಯ ಉತ್ಪಾದನೆ ಬೇಡಿಕೆಗೆ ಸಾಲದೆ, ಶುದ್ಧೀಕರಿಸಿದ ತಾಮ್ರವನ್ನು ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಈ ಕೊರತೆಯನ್ನು ನೀಗಿಸಲು ಸರ್ಕಾರ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುತ್ತಿದ್ದು, ಹೊಸ ಸ್ಮೆಲ್ಟರ್ ಘಟಕಗಳ ಸ್ಥಾಪನೆಗೆ ಹೂಡಿಕೆ ಮಾಡಲಾಗಿದೆ. ಇದರಲ್ಲಿ ಅದಾನಿ ಗ್ರೂಪ್‌ನ ತಾಮ್ರ ಸ್ಮೆಲ್ಟರ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ. ಹೀಗಾಗಿ ಹೂಡಿಕೆ ದೃಷ್ಟಿಯಿಂದ ತಾಮ್ರ ಮುಂದಿನ ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಹೊಳೆಯಲಿದೆ ಎಂದು ICRA ವರದಿ ಸ್ಪಷ್ಟಪಡಿಸಿದೆ.

Latest News