ಪಿಎಫ್ ಖಾತೆದಾರರಿಗೆ EPFO ಸೂಪರ್ ಗಿಫ್ಟ್ - ತಪ್ಪು ಮೆಂಬರ್ ಐಡಿ ಡಿ-ಲಿಂಕ್ ಮಾಡುವುದು ಈಗ ಸಕತ್ ಸುಲಭ!!

ನಮಸ್ಕಾರ ಪಿಎಫ್ ಖಾತೆದಾರರೇ, ನೀವು ಎಲ್ಲಾದರೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಾ? ನಿಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಪಿಎಫ್ ಕಟ್ ಆಗುತ್ತಿದೆಯಾ? ಹಾಗಿದ್ದರೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ನಿಮಗೊಂದು ಭರ್ಜರಿ ಗುಡ್ ನ್ಯೂಸ್ ನೀಡಿದೆ.

ತಪ್ಪು ಮೆಂಬರ್ ಐಡಿ ಡಿ-ಲಿಂಕ್ – ಹಂತ ಹಂತದ ಪ್ರೊಸೆಸ್!
ತಪ್ಪು ಮೆಂಬರ್ ಐಡಿ ಡಿ-ಲಿಂಕ್ – ಹಂತ ಹಂತದ ಪ್ರೊಸೆಸ್!

ಸಾಮಾನ್ಯವಾಗಿ ಉದ್ಯೋಗಿಗಳಿಗೆ ಪಿಎಫ್ ಆಫೀಸ್ ಕೆಲಸ ಎಂದರೆ ಸಾಕು, "ಅಬ್ಬಾ.. ಆಫೀಸ್ ಸುತ್ತಿ ಸುತ್ತಿ ಸಾಕಾಗುತ್ತೆ" ಅನ್ನೋ ಬೇಸರ ಇರುತ್ತಿತ್ತು. ಆದರೆ ಇನ್ಮುಂದೆ ನೀವು ಪಿಎಫ್ ಆಫೀಸ್‌ಗೆ ಅಲೆಯುವ ಅಗತ್ಯವೇ ಇಲ್ಲ! ಚಂದಾದಾರರ ಕೆಲಸವನ್ನು ಮತ್ತಷ್ಟು ಈಸಿ ಮಾಡಲು ಇಪಿಎಫ್‌ಒ ಹೊಸ ಆನ್‌ಲೈನ್ ಅಪ್ಡೇಟ್ ಒಂದನ್ನು ತಂದಿದೆ. ನಿಮ್ಮ ಯುಎಎನ್ (UAN) ಸಂಖ್ಯೆಗೆ ಯಾವುದಾದರೂ ತಪ್ಪು ಮೆಂಬರ್ ಐಡಿ (Member ID) ಲಿಂಕ್ ಆಗಿದ್ದರೆ, ಅದನ್ನು ನೀವೇ ಸ್ವತಃ ಆನ್‌ಲೈನ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಡಿ-ಲಿಂಕ್ (ತೆಗೆದುಹಾಕಬಹುದು) ಮಾಡಬಹುದು.

ಅಸಲಿ ಸಮಸ್ಯೆ ಏನು ಗೊತ್ತಾ?

ಕೆಲವೊಮ್ಮೆ ಕಂಪನಿಗಳು ಅಥವಾ ಮಾಲೀಕರು ಉದ್ಯೋಗಿಗಳ UAN ನಂಬರ್‌ಗೆ ಬೇರೆ ಕಂಪನಿಯ ಐಡಿಯನ್ನೋ ಅಥವಾ ತಪ್ಪು ಮೆಂಬರ್ ಐಡಿಯನ್ನೋ ಲಿಂಕ್ ಮಾಡಿಬಿಡುತ್ತಾರೆ. ನಿಮ್ಮ ಸರ್ವಿಸ್ ಹಿಸ್ಟರಿ (Service History) ಚೆಕ್ ಮಾಡಿದಾಗ, ನೀವು ಕೆಲಸ ಮಾಡದೇ ಇರುವ ಕಂಪನಿಯ ಹೆಸರು ಅಲ್ಲಿ ಕಾಣಿಸಿದರೆ ತಕ್ಷಣ ಅಲರ್ಟ್ ಆಗಿ! ಯಾಕೆಂದರೆ ಈ ರೀತಿ ತಪ್ಪು ಮೆಂಬರ್ ಐಡಿ ಲಿಂಕ್ ಆಗಿದ್ದರೆ, ಮುಂದೆ ನಿಮಗೆ ಪಿಎಫ್ ಹಣವನ್ನು ಡ್ರಾ ಮಾಡುವಾಗ ಅಥವಾ ಒಂದು ಅಕೌಂಟ್‌ನಿಂದ ಮತ್ತೊಂದು ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುವಾಗ ಭಾರಿ ತೊಂದರೆಯಾಗುತ್ತದೆ.

ಈ ಹಿಂದೆ ಪಿಎಫ್ ಜಮೆಯಾಗದ ಐಡಿಗಳನ್ನು ಮಾತ್ರ ಡಿಲಿಟ್ ಮಾಡಬಹುದಿತ್ತು. ಆದರೆ ಈಗ ಹೊಸ ರೂಲ್ಸ್ ಪ್ರಕಾರ, ಆ ತಪ್ಪು ಐಡಿಗೆ ಹಣ ಠೇವಣಿಯಾಗಿದ್ದರೂ ಕೂಡ ಅದನ್ನು ಡಿ-ಲಿಂಕ್ ಮಾಡಲು EPFO ಅವಕಾಶ ಕೊಟ್ಟಿದೆ.

ತಪ್ಪು ಮೆಂಬರ್ ಐಡಿ ತೆಗೆದುಹಾಕುವುದು ಹೇಗೆ? ಹಂತ-ಹಂತದ ಮಾಹಿತಿ:

ಇಪಿಎಫ್‌ಒ ತನ್ನ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಶೇರ್ ಮಾಡಿರುವ ವಿಡಿಯೋ ಪ್ರಕಾರ, ನೀವು ಈ ಕೆಳಗಿನ ಸರಳ ಸ್ಟೆಪ್ಸ್ ಫಾಲೋ ಮಾಡಿ ನಿಮ್ಮ ಐಡಿಯನ್ನು ಡಿ-ಲಿಂಕ್ ಮಾಡಬಹುದು:

ಹಂತ 1 - ಮೊದಲು ಇಪಿಎಫ್‌ಒ ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2 - ನಿಮ್ಮ UAN ನಂಬರ್ ಮತ್ತು ಪಾಸ್‌ವರ್ಡ್ ಹಾಕಿ ಲಾಗಿನ್ ಆಗಿ.

ಹಂತ 3 - ಹೋಮ್ ಪೇಜ್‌ನಲ್ಲಿ ಕಾಣಿಸುವ 'View' ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ಹಂತ 4 - ಅಲ್ಲಿ 'Service History' (ಸೇವಾ ಇತಿಹಾಸ) ವಿಭಾಗಕ್ಕೆ ಹೋಗಿ.

ಹಂತ 5 - ಈಗ ನಿಮ್ಮ UAN ಗೆ ಲಿಂಕ್ ಆಗಿರುವ ಎಲ್ಲಾ ಮೆಂಬರ್ ಐಡಿಗಳು ಸ್ಕ್ರೀನ್ ಮೇಲೆ ಕಾಣಿಸುತ್ತವೆ.

ಹಂತ 6 - ಅದರಲ್ಲಿ ನೀವು ತೆಗೆದುಹಾಕಲು ಬಯಸುವ (ತಪ್ಪಾದ) ಐಡಿಯ ಪಕ್ಕದಲ್ಲಿರುವ 'De-link' ಆಪ್ಷನ್ ಆರಿಸಿ.

ಹಂತ 7 - ನಂತರ 'Get OTP' ಮೇಲೆ ಕ್ಲಿಕ್ ಮಾಡಿ.

ಹಂತ 8 - ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರುವ ಒಟಿಪಿಯನ್ನು ಎಂಟರ್ ಮಾಡಿ ಸಬ್ಮಿಟ್ ಮಾಡಿ.

ಮುಂದೆ ಏನಾಗುತ್ತದೆ? (ವೆರಿಫಿಕೇಶನ್ ಪ್ರೊಸೆಸ್)

ನೀವು ಆನ್‌ಲೈನ್‌ನಲ್ಲಿ ರಿಕ್ವೆಸ್ಟ್ ಕಳುಹಿಸಿದ ತಕ್ಷಣ ಕೆಲಸ ಮುಗಿಯುವುದಿಲ್ಲ. ಅದರ ಪ್ರೊಸೆಸ್ ಹೀಗಿರುತ್ತದೆ:

ಹಂತ 9 - ನಿಮ್ಮ ಡಿ-ಲಿಂಕ್ ವಿನಂತಿಯು ಆ ಮೆಂಬರ್ ಐಡಿ ಕ್ರಿಯೇಟ್ ಮಾಡಿದ ಕಂಪನಿಯ ಮಾಲೀಕರಿಗೆ (Employer) ಹೋಗುತ್ತದೆ.

ಹಂತ 10 - ಕಂಪನಿಯವರು ನಿಮ್ಮ ರಿಕ್ವೆಸ್ಟ್ ಅನ್ನು ಪರಿಶೀಲಿಸಿ ಅಪ್ರೂವ್ ಮಾಡಬೇಕಾಗುತ್ತದೆ.

ಹಂತ 11 - ಆ ತಪ್ಪು ಐಡಿಯಲ್ಲಿ ಕೇವಲ ಎರಡು ಬಾರಿಗಿಂತ ಕಡಿಮೆ ಪಾವತಿ (PF Deposit) ಆಗಿದ್ದರೆ, ಮಾಲೀಕರ ಅಪ್ರೂವಲ್ ಸಿಕ್ಕ ತಕ್ಷಣ ಅದು ಡಿ-ಲಿಂಕ್ ಆಗುತ್ತದೆ.

ಹಂತ 12 - ಒಂದು ವೇಳೆ ಗರಿಷ್ಠ 6 ಬಾರಿ ಹಣ ಜಮೆಯಾಗಿದ್ದರೆ, ಅದನ್ನು ಪರಿಶೀಲನೆಗಾಗಿ EPFO ನ ಪ್ರಾದೇಶಿಕ ಕಚೇರಿಗೆ (Regional Office) ವರ್ಗಾಯಿಸಲಾಗುತ್ತದೆ. ಅಲ್ಲಿಂದ ಕ್ಲಿಯರ್ ಆದ ಮೇಲೆ ನಿಮ್ಮ ಐಡಿ ಡಿ-ಲಿಂಕ್ ಆಗುತ್ತದೆ.

ಪ್ರಮುಖ ಗಮನಿಸಿ - ಒಂದು ವೇಳೆ ನೀವು ಡಿಸೆಂಬರ್ 13, 2016 ಕ್ಕಿಂತ ಮುಂಚಿತವಾಗಿ ಪಿಎಫ್ ಕೊಡುಗೆಯನ್ನು ಪಾವತಿಸಿದ್ದರೆ, ಅಂತಹ ಹಳೆಯ ಐಡಿಗಳನ್ನು ಈ ಪ್ರಕ್ರಿಯೆಯ ಮೂಲಕ ಡಿ-ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ.

EPFO ತಂದಿರುವ ಈ ಹೊಸ ಡಿಜಿಟಲ್ ಸೌಲಭ್ಯದಿಂದಾಗಿ ಲಕ್ಷಾಂತರ ಕಾರ್ಮಿಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ತಡ ಮಾಡಬೇಡಿ, ಇಂದೇ ನಿಮ್ಮ ಪಿಎಫ್ ಅಕೌಂಟ್ ಲಾಗಿನ್ ಮಾಡಿ ಸರ್ವಿಸ್ ಹಿಸ್ಟರಿ ಎಲ್ಲ ಸರಿಯಾಗಿದೆಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ!  

Latest News