Mar 26, 2026 Languages : ಕನ್ನಡ | English

8ನೇ ವೇತನ ಆಯೋಗದ ಬಿಸಿ ಬಿಸಿ ಅಪ್‌ಡೇಟ್ - ಸಂಬಳ ಏರಿಕೆ ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!!

ಕೇಂದ್ರ ಸರ್ಕಾರಿ ನೌಕರರಾಗಲಿ ಅಥವಾ ಅವರ ಕುಟುಂಬದವರಾಗಲಿ, ಎಲ್ಲರ ಬಾಯಲ್ಲೂ ಈಗ ಒಂದೇ ಮಾತು, 8ನೇ ವೇತನ ಆಯೋಗ (8th Pay Commission) ಯಾವಾಗ ಜಾರಿಯಾಗುತ್ತೆ? ನಮ್ಮ ಸಂಬಳ ಎಷ್ಟು ಹೆಚ್ಚಾಗಬಹುದು? ಅಂತ. ನಿಮಗೂ ಇದೇ ಕುತೂಹಲ ಇದ್ರೆ, ಈ ಲೇಖನ ನಿಮಗಾಗಿಯೇ ಇದೆ. ಇತ್ತೀಚೆಗೆ ಸಂಸತ್ತಿನಲ್ಲಿ ಹಣಕಾಸು ಸಚಿವಾಲಯವು ಈ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳನ್ನ ಹಂಚಿಕೊಂಡಿದೆ. ಅದೆಲ್ಲವನ್ನೂ ವಿವರಿಸ್ತೀನಿ ಕೇಳಿ.

ಸರ್ಕಾರಿ ನೌಕರರಿಗೆ ಸಂಬಳ ಏರಿಕೆ ಯಾವಾಗ?
ಸರ್ಕಾರಿ ನೌಕರರಿಗೆ ಸಂಬಳ ಏರಿಕೆ ಯಾವಾಗ?

ಏನಿದು 8ನೇ ವೇತನ ಆಯೋಗದ ಸಮಾಚಾರ?

ನೋಡಿ, ಹತ್ತು ವರ್ಷಕ್ಕೊಮ್ಮೆ ಸರ್ಕಾರಿ ನೌಕರರ ಸಂಬಳ, ಭತ್ಯೆ ಮತ್ತು ಪೆನ್ಷನ್ ವ್ಯವಸ್ಥೆಯನ್ನ ಬದಲಾಯಿಸೋಕೆ ಸರ್ಕಾರ ಈ ವೇತನ ಆಯೋಗವನ್ನ ರಚಿಸುತ್ತೆ. ಈಗಾಗ್ಲೇ ನವೆಂಬರ್ 2025 ರಲ್ಲೇ ಈ ಆಯೋಗಕ್ಕೆ ಚಾಲನೆ ಸಿಕ್ಕಿದೆ. ಅಂದ್ರೆ, ಕೆಲಸ ಶುರುವಾಗಿದೆ. ಈಗ ದೆಹಲಿಯಲ್ಲಿರೋ ತನ್ನ ಆಫೀಸ್‌ನಲ್ಲಿ ಮೂರು ಜನರ ಎಕ್ಸ್‌ಪರ್ಟ್ ಟೀಮ್ ಕೂತು, ಯಾರಿಗೆ ಎಷ್ಟು ಸಂಬಳ ಹೆಚ್ಚು ಮಾಡಬೇಕು, ಪೆನ್ಷನ್‌ನಲ್ಲಿ ಏನೇನು ಬದಲಾವಣೆ ಮಾಡಬೇಕು ಅಂತ ಪ್ಲಾನ್ ಮಾಡ್ತಿದ್ದಾರೆ.

ಸಂಬಳ ಏರಿಕೆ ಯಾವಾಗ? ಟೈಮ್‌ಲೈನ್ ಇಲ್ಲಿದೆ

ಇದು ಎಲ್ಲರಿಗೂ ಬೇಕಿರೋ ಮುಖ್ಯ ವಿಚಾರ. ಸರ್ಕಾರ ಹೇಳಿರೋ ಪ್ರಕಾರ, ಈ ಆಯೋಗಕ್ಕೆ ರಿಪೋರ್ಟ್ ಸಿದ್ಧಪಡಿಸೋಕೆ 18 ತಿಂಗಳು ಟೈಮ್ ಕೊಡಲಾಗಿದೆ. ಅಂದ್ರೆ, 2025ರ ನವೆಂಬರ್‌ನಲ್ಲಿ ಶುರುವಾದ ಈ ಪ್ರಕ್ರಿಯೆಯ ಫೈನಲ್ ರಿಪೋರ್ಟ್ 2026 ಅಥವಾ 2027ರ ಸುಮಾರಿಗೆ ಕೈ ಸೇರಬಹುದು. ಆದ್ರೆ ಒಂದು ಗುಡ್ ನ್ಯೂಸ್ ಏನಪ್ಪಾ ಅಂದ್ರೆ, ಸಾಮಾನ್ಯವಾಗಿ ಹೊಸ ವೇತನ ಶ್ರೇಣಿ ಜನವರಿ 1, 2026 ರಿಂದಲೇ ಅನ್ವಯವಾಗುವ ಸಾಧ್ಯತೆ ಇದೆ. ಒಂದು ವೇಳೆ ರಿಪೋರ್ಟ್ ಕೊಡೋದು ಸ್ವಲ್ಪ ಲೇಟ್ ಆದ್ರೂ, ಸರ್ಕಾರಿ ನೌಕರರಿಗೆ ಬಾಕಿ ಹಣ ರೂಪದಲ್ಲಿ ಆ ಹಣ ಕೈ ಸೇರುತ್ತೆ. ಲೇಟ್ ಆದ್ರೂ ಲೇಟೆಸ್ಟ್ ಆಗಿ ಜೇಬು ತುಂಬೋದು ಗ್ಯಾರಂಟಿ. 

ಏನೆಲ್ಲಾ ಬದಲಾವಣೆ ಆಗಬಹುದು?

ಈ ಆಯೋಗವು ಕೇವಲ ಸಂಬಳವನ್ನಷ್ಟೇ ಅಲ್ಲ, ಇನ್ನೂ ಮೂರು ಪ್ರಮುಖ ವಿಷಯಗಳ ಮೇಲೆ ಕಣ್ಣಿಟ್ಟಿದೆ

  • ಮೂಲ ವೇತನ (Basic Pay): ಬೆಲೆ ಏರಿಕೆಗೆ ತಕ್ಕಂತೆ ಬೇಸಿಕ್ ಸ್ಯಾಲರಿ ಹೆಚ್ಚಾಗಲಿದೆ.
  • ಭತ್ಯೆಗಳು (Allowances): ಮನೆ ಬಾಡಿಗೆ ಭತ್ಯೆ (HRA), ಪ್ರವಾಸ ಭತ್ಯೆಗಳ ಬಗ್ಗೆ ಹೊಸ ರೂಲ್ಸ್ ಬರಬಹುದು.
  • ಪೆನ್ಷನ್ ವ್ಯವಸ್ಥೆ: ನಿವೃತ್ತ ನೌಕರರ ಪೆನ್ಷನ್ ಬಗ್ಗೆಯೂ ದೊಡ್ಡ ಮಟ್ಟದ ಸುಧಾರಣೆ ಮಾಡೋ ಪ್ಲಾನ್ ಇದೆ.

ನೌಕರರಿಗೂ ಸಿಕ್ಕಿದೆ ಒಂದು ಚಾನ್ಸ್

ಸರ್ಕಾರ ಬರಿ ತನ್ನ ನಿರ್ಧಾರವನ್ನ ಹೇರುತ್ತಿಲ್ಲ, ಬದಲಿಗೆ ನೌಕರರ ಅಭಿಪ್ರಾಯವನ್ನೂ ಕೇಳ್ತಿದೆ. ನಿಮಗೆ ಏನಾದ್ರೂ ಸಲಹೆಗಳಿದ್ರೆ ಅಥವಾ ಸಮಸ್ಯೆಗಳಿದ್ರೆ ಹೇಳೋಕೆ ವಿಂಡೋ ಓಪನ್ ಆಗಿದೆ.

  1. ಪ್ರಶ್ನಾವಳಿ ಉತ್ತರ ಕೊಡೋಕೆ ಲಾಸ್ಟ್ ಡೇಟ್: ಮಾರ್ಚ್ 31, 2026.
  2. ಮನವಿ ಪತ್ರ ಸಲ್ಲಿಸೋಕೆ ಲಾಸ್ಟ್ ಡೇಟ್: ಏಪ್ರಿಲ್ 30, 2026. ನಿಮ್ಮ ಸಂಘ ಸಂಸ್ಥೆಗಳ ಮೂಲಕ ಈ ಅವಕಾಶವನ್ನ ಬಳಸಿಕೊಳ್ಳಬಹುದು.

ಸರ್ಕಾರಕ್ಕೆ ಎಷ್ಟು ಹೊರೆ?

ಸಂಸತ್ತಿನಲ್ಲಿ ಇದೇ ಪ್ರಶ್ನೆ ಕೇಳಲಾಗಿತ್ತು— "ಇಷ್ಟೆಲ್ಲಾ ಸಂಬಳ ಹೆಚ್ಚು ಮಾಡಿದ್ರೆ ಬಜೆಟ್ ಮೇಲೆ ಎಷ್ಟು ಹೊರೆ ಬೀಳುತ್ತೆ?" ಅಂತ. ಅದಕ್ಕೆ ಹಣಕಾಸು ಸಚಿವಾಲಯ, "ಇನ್ನೂ ರಿಪೋರ್ಟ್ ರೆಡಿ ಆಗಿಲ್ಲ, ಸೋ ಈಗಲೇ ಇಷ್ಟೇ ಹಣ ಖರ್ಚಾಗುತ್ತೆ ಅಂತ ಹೇಳೋಕೆ ಬರಲ್ಲ" ಅಂತ ಸಿಂಪಲ್ ಆಗಿ ಆನ್ಸರ್ ಕೊಟ್ಟಿದೆ. ಆದ್ರೆ ಹಳೆ ಇತಿಹಾಸ ನೋಡಿದ್ರೆ, ವೇತನ ಆಯೋಗ ಜಾರಿಯಾದಾಗ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳೋದು ಪಕ್ಕಾ.

ಸದ್ಯಕ್ಕಂತೂ 8ನೇ ವೇತನ ಆಯೋಗ ಫುಲ್ ಆಕ್ಟಿವ್ ಆಗಿದೆ. ಕೆಲಸವಂತೂ ನಡೀತಿದೆ, ಆದ್ರೆ ಕೈಗೆ ಹಣ ಬರೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು. ಬೆಲೆ ಏರಿಕೆ ಗಮನದಲ್ಲಿ ಇಟ್ಟುಕೊಂಡು ಸ್ಯಾಲರಿ ರಿವಿಷನ್ ಮಾಡ್ತಿರೋದ್ರಿಂದ, ನೌಕರರ ಮೊಗದಲ್ಲಿ ಮಂದಹಾಸ ಮೂಡೋದು ಗ್ಯಾರಂಟಿ.

Latest News