ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈಗಾಗಲೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ ಎಂಬ ವದಂತಿಗಳೂ ಹರಿದಾಡುತ್ತಿವೆ. ವಿಜಯ್ ದೇವರಕೊಂಡ ಮನೆ, ಕುಟುಂಬ ಕಾರ್ಯಕ್ರಮಗಳು ಹಾಗೂ ಪ್ರವಾಸಗಳಲ್ಲಿ ರಶ್ಮಿಕಾ ಜೊತೆಗಿದ್ದ ಫೋಟೋಗಳನ್ನು ಅಭಿಮಾನಿಗಳು ಗಮನಿಸಿದ್ದು, ಇದೇ ತಿಂಗಳ ಅಂತ್ಯಕ್ಕೆ ಮದುವೆ ನಡೆಯಬಹುದು ಎಂಬ ಮಾತುಗಳು ಜೋರಾಗಿದೆ. ಇಂತಹ ಸಂದರ್ಭದಲ್ಲೇ ವಿಜಯ್ ದೇವರಕೊಂಡ ಅವರ ಹಳೆಯ ಫೋಟೋಗಳು ಅಚಾನಕ್ ಲೀಕ್ ಆಗಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋಗಳಲ್ಲಿ ವಿಜಯ್ ದೇವರಕೊಂಡ ತಮ್ಮ ಸಿನಿಮಾ ಜೀವನದ ಆರಂಭದ ದಿನಗಳಲ್ಲಿ ಇದ್ದ ಒಬ್ಬ ಯುವತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳು ರೆಡ್ಡಿಟ್ ಸೇರಿದಂತೆ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದ್ದು, ಮದುವೆ ಸುದ್ದಿ ನಡುವೆ ಮತ್ತೆ ಸದ್ದು ಮಾಡುತ್ತಿವೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ಚರ್ಚೆಗಳು ಜೋರಾಗಿವೆ.
ಈ ಫೋಟೋದಲ್ಲಿರುವ ಯುವತಿ ಯಾರು ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಕೆಲ ವರದಿಗಳ ಪ್ರಕಾರ, ವಿಜಯ್ ದೇವರಕೊಂಡ ಹಿಂದೆ ಬೆಲ್ಜಿಯಂ ಮೂಲದ ಒಬ್ಬ ಮಾಡೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಮಾಡೆಲ್ ಜೊತೆ ವಿಜಯ್ ಆತ್ಮೀಯವಾಗಿದ್ದ ಕೆಲವು ಫೋಟೋಗಳು ಇದೀಗ ಮತ್ತೆ ವೈರಲ್ ಆಗಿವೆ. ಇವರ ಡೇಟಿಂಗ್ ಕೆಲವು ವರ್ಷಗಳ ಕಾಲ ನಡೆದಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ. ಕೋವಿಡ್ ಸಮಯದಲ್ಲೂ ವಿಜಯ್ ದೇವರಕೊಂಡ ಆ ಮಾಡೆಲ್ ಅವರನ್ನು ಭೇಟಿ ಮಾಡಲು ಯೂರೋಪ್‌ಗೆ ತೆರಳಿದ್ದರು ಎಂಬ ವರದಿಗಳು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಅಲ್ಲದೆ, ಆಕೆಯ ಪೋಷಕರು ಹೈದರಾಬಾದ್‌ಗೆ ಬಂದಿದ್ದರು ಎನ್ನುವ ಮಾತುಗಳೂ ಹರಿದಾಡಿದ್ದವು.
ಈ ಬೆಲ್ಜಿಯಂ ಮಾಡೆಲ್ ಹೆಸರು ವರ್ಜಿನಿಯಾ ಎಂದು ಹೇಳಲಾಗುತ್ತಿದೆ. 2016ರಲ್ಲಿ ಬಿಡುಗಡೆಯಾದ ವಿಜಯ್ ದೇವರಕೊಂಡ ಅಭಿನಯದ ‘ಪೆಳ್ಳಿ ಚೂಪುಲು’ ಸಿನಿಮಾದಲ್ಲಿ ಈಕೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ನಂತರ ಅದು ಡೇಟಿಂಗ್‌ಗೆ ತಿರುಗಿತು ಎಂಬ ಊಹಾಪೋಹಗಳಿವೆ. ಆದರೆ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ನಟಿಸಿದ ಸಿನಿಮಾದ ಬಳಿಕ ಈ ಸಂಬಂಧ ಅಂತ್ಯಗೊಂಡಿತು ಎಂಬ ಮಾತುಗಳೂ ಕೇಳಿಬರುತ್ತಿವೆ.
ಆದರೆ, ಈ ಎಲ್ಲಾ ವಿಚಾರಗಳ ಬಗ್ಗೆ ವಿಜಯ್ ದೇವರಕೊಂಡ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಕೆಲ ಅಭಿಮಾನಿಗಳು ಈ ಫೋಟೋಗಳು ಕೇವಲ ಬೆಸ್ಟ್ ಫ್ರೆಂಡ್ಸ್ ಆಗಿದ್ದ ಸಂದರ್ಭದವು ಎಂದು ಸಮರ್ಥಿಸುತ್ತಿದ್ದರೆ, ಇನ್ನೂ ಕೆಲವರು ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ರಶ್ಮಿಕಾ–ವಿಜಯ್ ಮದುವೆ ಸುದ್ದಿಯ ನಡುವೆ ಲೀಕ್ ಆದ ಈ ಹಳೆ ಫೋಟೋಗಳು ಸಿನಿರಂಗದಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಕಾರಣವಾಗಿವೆ.