ತಮಿಳುನಾಡು ರಾಜಕೀಯದಲ್ಲಿ ಈಗ 'ದಳಪತಿ' ವಿಜಯ್ ಅವರದ್ದೇ ಸದ್ದು. 2026ರ ವಿಧಾನಸಭಾ ಚುನಾವಣೆಗೆ ಇನ್ನೆರಡು ದಿನ ಬಾಕಿ ಇರುವಾಗಲೇ ವಿಜಯ್ ಅವರ ಪಕ್ಷ 'ತಮಿಳಗ ವೆಟ್ರಿ ಕಳಗಂ' (TVK) ಪ್ರಚಾರ ಮಾಡುವ ಶೈಲಿಯಿಂದ ಎಲ್ಲರ ಗಮನ ಸೆಳೆಯುತ್ತಿದೆ. ಪೋಸ್ಟರ್, ಬ್ಯಾನರ್ ಕಾಲ ಮುಗಿದು ಈಗ 'ರೋಬೋಟ್'ಗಳು ಮತ ಕೇಳಲು ಶುರು ಮಾಡಿವೆ.
ಕೊಯಮತ್ತೂರಿನಲ್ಲಿ ರೋಬೋಟ್ ಆರ್ಭಟ
ಕೊಯಮತ್ತೂರು ದಕ್ಷಿಣದ ಅಭ್ಯರ್ಥಿ ಸೆಂಥಿಲ್ ಕುಮಾರ್ ಪರವಾಗಿ ಟಿವಿಕೆ ಶಾಲು ಧರಿಸಿದ ರೋಬೋಟ್ ಒಂದು ರಸ್ತೆಗೆ ಇಳಿದಿದೆ. ಇದು ಕೇವಲ ನಿಂತು ನೋಡೋದಷ್ಟೇ ಅಲ್ಲ, ಜನರತ್ತ ಕೈಬೀಸುತ್ತಾ, ಶೇಕ್ ಹ್ಯಾಂಡ್ ಕೊಡುತ್ತಾ ಮತ ಕೇಳುತ್ತಿದೆ. ಇದನ್ನು ಕಂಡ ಮತದಾರರು ಫುಲ್ ಫಿದಾ ಆಗಿದ್ದು, ರೋಬೋಟ್ ಜೊತೆ ಸೆಲ್ಫಿ ತಗೊಳ್ಳಲು ಮುಗಿಬೀಳುತ್ತಿದ್ದಾರೆ.
एक्टर Vijay की पार्टी TVK का प्रचार रोबोट कर रहा है
— Romita Tiwari (@romita_tiwari) April 20, 2026
वीडियो Tamil Nadu के Coimbatore का है pic.twitter.com/GZWVBE8nRu
ಹೈಟೆಕ್ ಐಡಿಯಾಗಳು ಒಂದಲ್ಲ, ಎರಡಲ್ಲ
ವಿಜಯ್ ಅವರ ಟಿವಿಕೆ ಅಭ್ಯರ್ಥಿಗಳು ಒಬ್ಬರಿಗಿಂತ ಒಬ್ಬರು ಡಿಫರೆಂಟ್ ಆಗಿ ಪ್ರಚಾರ ಮಾಡುತ್ತಿದ್ದಾರೆ:
ಹೋಲೋಗ್ರಾಮ್ ಟೆಕ್: ಕುಂಭಕೋಣಂ ಅಭ್ಯರ್ಥಿ ಎಐ (AI) ಮತ್ತು ಹೋಲೋಗ್ರಾಮ್ ಬಳಸಿ ವಿಜಯ್ ಅವರನ್ನೇ ಮತದಾರರ ಮುಂದೆ ತಂದಿಟ್ಟಿದ್ದಾರೆ.
ಕಾರ್ಡ್‌ಬೋರ್ಡ್ ಕಟ್-ಔಟ್: ತಿರುವೆರುಂಬೂರು ಅಭ್ಯರ್ಥಿ ವಿಜಯ್ ಅವರ ಕಾರ್ಡ್‌ಬೋರ್ಡ್ ಬಳಸಿಕೊಂಡು ಫೋಟೋ ಶೂಟ್ ಮೂಲಕ ಪ್ರಚಾರ ನಡೆಸಿದ್ದಾರೆ.
ಡ್ಯುಪ್ಲಿಕೇಟ್ ವಿಜಯ್: ಕೊಳತ್ತೂರಿನಲ್ಲಿ ವಿಜಯ್ ಅವರಂತೆ ಕಾಣುವ ವ್ಯಕ್ತಿ ಮನೆಮನೆಗೆ ಭೇಟಿ ನೀಡಿ ವೈರಲ್ ಆಗಿದ್ದಾರೆ.
ವಿರೋಧ ಪಕ್ಷಗಳ ಟೀಕೆಗೆ ವಿಜಯ್ ಟಾಂಗ್
ವಿಜಯ್ ಅವರು ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡ್ತಿಲ್ಲ ಎಂದು ವಿರೋಧ ಪಕ್ಷಗಳು ಲೇವಡಿ ಮಾಡಿದ್ದವು. ಅದಕ್ಕೆ ಖಡಕ್ ಉತ್ತರ ಕೊಟ್ಟಿರೋ ವಿಜಯ್, "ಪೊಲೀಸರು ನಮ್ಮ ಇವೆಂಟ್‌ಗಳಿಗೆ ಅನುಮತಿ ನೀಡಲು ತಡ ಮಾಡುತ್ತಿದ್ದಾರೆ. ಆದರೂ ನಾವು ಹಳೆಯ ಪದ್ಧತಿಗೆ ಅಂಟಿಕೊಂಡಿಲ್ಲ. ತಂತ್ರಜ್ಞಾನದ ಮೂಲಕ ನಮ್ಮ ಪಕ್ಷ ತಮಿಳುನಾಡಿನ ಮನೆಮನೆ ತಲುಪಿದೆ" ಎಂದಿದ್ದಾರೆ.
ನಟ 'ಜೈ' ಸಾಥ್
ಇಷ್ಟೆಲ್ಲಾ ಹೈಟೆಕ್ ಪ್ರಚಾರದ ನಡುವೆ, ಕಾಲಿವುಡ್ ನಟ ಜೈ ಅವರು ಫೀಲ್ಡ್‌ಗೆ ಇಳಿದು ವಿಜಯ್ ಪರವಾಗಿ ಭರ್ಜರಿ ಕ್ಯಾಂಪೇನ್ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಚೈತನ್ಯ ತುಂಬಿದೆ. ವೈಯಕ್ತಿಕವಾಗಿ ಡಿವೋರ್ಸ್ ವಿಚಾರಗಳಂತಹ ಒತ್ತಡದ ನಡುವೆಯೂ ವಿಜಯ್ ಅವರು ಏಪ್ರಿಲ್ 23ರ ಮತದಾನಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.