ಟಿವಿ ದುನಿಯಾದ ಅತ್ಯಂತ ಫೇಮಸ್ ಹಾಗೂ ಕ್ಯೂಟ್ ಕಪಲ್ಸ್ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿರುವ ಜೋಡಿ ಎಂದರೆ ಅದು ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ. ಇವರಿಬ್ಬರ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ‘ತೇಜ್ರಾನ್’ (TejRan) ಅಂತಾನೇ ಕರೆಯುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಮಗಿಂತ 9 ವರ್ಷ ದೊಡ್ಡವರಾಗಿರುವ ಬಾಯ್‌ಫ್ರೆಂಡ್ ಕರಣ್ ಜೊತೆ ನಟಿ ತೇಜಸ್ವಿ ಪೂಲ್‌ನಲ್ಲಿ ಕ್ಲಿಕ್ ಮಾಡಿಕೊಂಡಿರುವ ರೊಮ್ಯಾಂಟಿಕ್ ವಿಡಿಯೋ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮಾರಿಷಸ್ ಟ್ರಿಪ್ ವಿಡಿಯೋ ವೈರಲ್ - ನೆಟ್ಟಿಗರ ಆಕ್ರೋಶ!
ಇಷ್ಟಕ್ಕೂ ಆಗಿದ್ದೇನಪ್ಪಾ ಅಂದರೆ, ನಟಿ ತೇಜಸ್ವಿ ಪ್ರಕಾಶ್ ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಮಾರಿಷಸ್ ಪ್ರವಾಸದ ಹೊಸ ವ್ಲಾಗ್ ಒಂದನ್ನು ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋದಲ್ಲಿ ತೇಜಸ್ವಿ ಮತ್ತು ಕರಣ್ ಕುಂದ್ರಾ ಪೂಲ್‌ನಲ್ಲಿ ಜಲಕ್ರೀಡೆ ಆಡುತ್ತಾ, ಸಖತ್ ರೋಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿರುವುದು ಕಂಡುಬಂದಿದೆ. ಇವರಿಬ್ಬರ ಅತಿಯಾದ ಆಪ್ತತೆ ಹಾಗೂ ಪೂಲ್ ಒಳಗಿನ ಕೆಲವು ರೋಮ್ಯಾಂಟಿಕ್ ದೃಶ್ಯಗಳು ಇಂಟರ್ನೆಟ್ ಬಳಕೆದಾರರಿಗೆ ಅಷ್ಟಾಗಿ ಇಷ್ಟವಾಗಿಲ್ಲ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಸೆಕ್ಷನ್‌ನಲ್ಲಿ ಇವರಿಬ್ಬರ ಕ್ಲಾಸ್ ತಗೋಳೋಕೆ ಶುರು ಮಾಡಿದ್ದಾರೆ. "ಸೋಶಿಯಲ್ ಮೀಡಿಯಾದಲ್ಲಿ ಇಷ್ಟೊಂದು ಓಪನ್ ಆಗಿ ರೋಮ್ಯಾನ್ಸ್ ಮಾಡೋದು ಸರಿನಾ? ನಿಮಗೇನಾದರೂ ನಾಚಿಕೆ ಇದೆಯಾ?" ಅಂತ ಜನರು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ನೆಗೆಟಿವ್ ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ.
ಸಾರ್ವಜನಿಕ ವೇದಿಕೆಯಲ್ಲಿ ರೋಮ್ಯಾನ್ಸ್ ಎಷ್ಟು ಸರಿ?
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ತಮ್ಮ ಪರ್ಸನಲ್ ಲೈಫ್ ಹಾಗೂ ಪ್ರವಾಸದ ವಿಡಿಯೋಗಳನ್ನು ಹಂಚಿಕೊಳ್ಳುವುದು ಇತ್ತೀಚೆಗೆ ಕಾಮನ್ ಆಗಿಬಿಟ್ಟಿದೆ. ಆದರೆ, ಇಷ್ಟೊಂದು ಓಪನ್ ಆಗಿ ಸಾರ್ವಜನಿಕ ವೇದಿಕೆಯಲ್ಲಿ ಪ್ರೀತಿ ತೋರ್ಪಡಿಸುವುದು ಎಷ್ಟು ಸರಿ ಎಂಬ ದೊಡ್ಡ ಪ್ರಶ್ನೆ ಈಗ ಸೃಷ್ಟಿಯಾಗಿದೆ!
ಒಂದು ಕಡೆ ಇವರ ಫ್ಯಾನ್ಸ್ 'ಇದು ಅವರ ವೈಯಕ್ತಿಕ ಜೀವನ, ಅವರ ಇಷ್ಟ' ಎಂದು ಸಪೋರ್ಟ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಸಾಮಾನ್ಯ ಜನರು ಮಾತ್ರ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾವನ್ನು ಕೇವಲ ದೊಡ್ಡವರಷ್ಟೇ ಅಲ್ಲ, ಲಕ್ಷಾಂತರ ಜನ ಅಪ್ರಾಪ್ತ ವಯಸ್ಸಿನ ಮಕ್ಕಳು ಹಾಗೂ ಯುವಜನತೆ ಕೂಡ ನೋಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳು ಇಂತಹ ವಿಡಿಯೋಗಳನ್ನು ಶೇರ್ ಮಾಡುವುದರಿಂದ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಯಾವ ರೀತಿಯ ಸಂದೇಶ ರವಾನೆಯಾಗುತ್ತದೆ ಎಂಬ ಕಳಕಳಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ!
ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಇಬ್ಬರಿಗೂ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾರೆ! ಸಿನಿಮಾ ಅಥವಾ ಟಿವಿ ತಾರೆಯರನ್ನು ಜನರು ತಮ್ಮ ರೋಲ್ ಮಾಡೆಲ್ ಎಂದು ಭಾವಿಸುತ್ತಾರೆ. ಹಾಗಾಗಿ, ಸಾರ್ವಜನಿಕವಾಗಿ ಏನು ತೋರಿಸಬೇಕು ಮತ್ತು ಏನನ್ನು ಖಾಸಗಿಯಾಗಿ ಇಡಬೇಕು ಎಂಬ ಕನಿಷ್ಠ ಜವಾಬ್ದಾರಿ ಸೆಲೆಬ್ರಿಟಿಗಳಿಗೆ ಇರಬೇಕು ಎಂಬುದು ಬಹುತೇಕರ ಅಭಿಪ್ರಾಯ. ವೀವ್ಸ್ ಹಾಗೂ ಲೈಕ್ಸ್ ಹಪಾಹಪಿಗೆ ಬಿದ್ದು ಇಂತಹ ವಿಡಿಯೋಗಳನ್ನು ಅಪ್ಲೋಡ್ ಮಾಡುವುದು ತಪ್ಪು ಎಂಬ ಮಾತುಗಳು ಕೇಳಿಬರುತ್ತಿವೆ.