Apr 21, 2026 Languages : ಕನ್ನಡ | English

ಕೊನೆಗೂ ಮೌನ ಮುರಿದ ಅತಿಲೋಕ ಸುಂದರಿ ಆತ್ಮ - ಬಾತ್‌ಟಬ್ ಸಾವಿನ ಹಿಂದಿರೋದು ಆಪ್ತರೇ? ವಿಡಿಯೋ ವೈರಲ್!!

ಭಾರತೀಯ ಚಿತ್ರರಂಗದ 'ಅತಿಲೋಕ ಸುಂದರಿ' ಶ್ರೀದೇವಿ ಅಗಲಿ ವರ್ಷಗಳೇ ಕಳೆದರೂ ಅವರ ಸಾವಿನ ಸುತ್ತಲಿನ ನಿಗೂಢತೆ ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ದುಬೈ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಅವರು ಶ*ವವಾಗಿ ಪತ್ತೆಯಾದ ಸುದ್ದಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ 'ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್' (Paranormal Investigator) ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಶ್ರೀದೇವಿ ಆತ್ಮದ ಜೊತೆ ಮಾತನಾಡಿದೆನೆಂದು ಹೇಳಿದ ಸೌರಭ್ ಪೂನಿಯಾ; | Photo Credit: Sridevi/http://www.cinespot.net https://www.instagram.com/saurabhpooniaofficial/#
ಶ್ರೀದೇವಿ ಆತ್ಮದ ಜೊತೆ ಮಾತನಾಡಿದೆನೆಂದು ಹೇಳಿದ ಸೌರಭ್ ಪೂನಿಯಾ; | Photo Credit: Sridevi/http://www.cinespot.net https://www.instagram.com/saurabhpooniaofficial/#

ಸೌರಭ್ ಪೂನಿಯಾ ಎಂಬ ಈ ತನಿಖಾಧಿಕಾರಿ ನೀಡಿರುವ ಸ್ಫೋಟಕ ಮಾಹಿತಿ ಮತ್ತು ಶ್ರೀದೇವಿ ಅವರ ಜೀವನದ ಕುರಿತಾದ ಒಂದು ಇಂಟರೆಸ್ಟಿಂಗ್ ರಿಪೋರ್ಟ್ ಇಲ್ಲಿದೆ!

ಅತಿಲೋಕ ಸುಂದರಿಯ ಸಿನಿ ಪಯಣ

ಶ್ರೀದೇವಿ ಅಂದ್ರೆ ಕೇವಲ ನಟಿಯಲ್ಲ, ಅದೊಂದು ಅದ್ಭುತ ಶಕ್ತಿ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಇವರು ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಜೊತೆ 'ಭಕ್ತ ಕುಂಬಾರ' ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಂದ ಬಾಲಿವುಡ್‌ವರೆಗೆ 'ಲೇಡಿ ಸೂಪರ್‌ಸ್ಟಾರ್' ಆಗಿ ಬೆಳೆದರು. ಸುಮಾರು 15 ವರ್ಷಗಳ ಬ್ರೇಕ್ ಬಳಿಕ 'ಇಂಗ್ಲಿಷ್ ವಿಂಗ್ಲಿಷ್' ಮೂಲಕ ಕಮ್‌ಬ್ಯಾಕ್ ಮಾಡಿದ್ದ ಅವರು, ತಮ್ಮ ಕೊನೆಯ ಚಿತ್ರ 'ಮಾಮ್' (MOM) ಗಾಗಿ ಮರಣೋತ್ತರ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದರು. ಭಾರತ ಸರ್ಕಾರ ಇವರ ಸಾಧನೆಯನ್ನು ಮೆಚ್ಚಿ 'ಪದ್ಮಶ್ರೀ' ನೀಡಿ ಗೌರವಿಸಿತ್ತು.

ದುಬೈನಲ್ಲಿ ನಡೆದ ಆ ಕರಾಳ ಘಟನೆ ಏನು?

2018ರಲ್ಲಿ ಶ್ರೀದೇವಿ ಅವರು ತಮ್ಮ ಪತಿ ಬೋನಿ ಕಪೂರ್ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಲು ದುಬೈಗೆ ಹೋಗಿದ್ದರು. ಫೆಬ್ರವರಿ 24ರಂದು ಅವರು ಹೋಟೆಲ್ ರೂಮಿನ ಬಾತ್‌ಟಬ್‌ನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾದರು. ಆಗ ಇಡೀ ಜಗತ್ತು ಆಘಾತಕ್ಕೊಳಗಾಯಿತು. ದುಬೈ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ, "ಶ್ರೀದೇವಿ ಅವರು ಪ್ರಜ್ಞೆ ತಪ್ಪಿ ಬಾತ್‌ಟಬ್‌ನಲ್ಲಿ ಬಿದ್ದಿದ್ದಾರೆ ಮತ್ತು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ" ಎಂದು ವರದಿ ನೀಡಿದ್ದರು. ಅಲ್ಲದೆ ಅವರ ದೇಹದಲ್ಲಿ ಅಲ್ಪ ಪ್ರಮಾಣದ ಮದ್ಯದ ಅಂಶವೂ ಪತ್ತೆಯಾಗಿತ್ತು ಎನ್ನಲಾಗಿತ್ತು.

ಸೌರಭ್ ಪೂನಿಯಾ ನೀಡಿದ ಶಾಕಿಂಗ್ ಹೇಳಿಕೆ!

ಈ ಸಾವಿನ ರಹಸ್ಯದ ಬಗ್ಗೆ ಮಾತನಾಡಿರುವ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಸೌರಭ್ ಪೂನಿಯಾ, ತಾನು ಶ್ರೀದೇವಿ ಅವರ ಆತ್ಮವನ್ನು ಮಾತನಾಡಿಸಿರುವುದಾಗಿ ದಕ್ಕಿಸುವ ಹೇಳಿಕೆ ನೀಡಿದ್ದಾರೆ. ಶಲೀನ್ ಶ್ರೋತ್ರಿಯಾ ಅವರೊಂದಿಗಿನ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ:

"ನಾನು ಶ್ರೀದೇವಿ ಅವರ ಆತ್ಮದ ಜೊತೆ ಮಾತನಾಡಲು ಆರಂಭಿಸಿದಾಗ ಮೊದಲು ಏನೂ ಹೇಳಲಿಲ್ಲ. ಆದರೆ ನಾನು ಪದೇ ಪದೇ ಪ್ರಶ್ನೆ ಕೇಳಿದಾಗ, 'ನಿಮ್ಮನ್ನ ಯಾರು ಹೊಡೆದು ಬಾತ್‌ಟಬ್‌ನಲ್ಲಿ ಮುಳುಗಿಸಿದರು?' ಎಂದು ನೇರವಾಗಿ ಕೇಳಿದೆ. ಆಗ ಆ ಆತ್ಮ ಬೋನಿ ಕಪೂರ್ ಎಂದು ಸ್ಪಷ್ಟವಾಗಿ ಹೇಳಿತು." ಎಂದು ಹೇಳಿರುವುದಾಗಿ ಕೇಳಿ ಬಂದಿದೆ. 

ಸೌರಭ್ ಅವರ ಈ ಮಾತು ಈಗ ಎಲ್ಲೆಡೆ ಸಂಚಲನ ಮೂಡಿಸಿದೆ. "ನಾನು ಹೇಳೋದನ್ನ ಜನ ನಂಬದಿರಬಹುದು, ಆದರೆ ನನ್ನ ಬಳಿ ಇದರ ಆಡಿಯೋ ರೆಕಾರ್ಡಿಂಗ್ ಕೂಡ ಇದೆ" ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇದನ್ನ ನಂಬಬಹುದಾ?

ಪ್ಯಾರಾನಾರ್ಮಲ್ ಇನ್ವೆಸ್ಟಿಗೇಷನ್ ಅಥವಾ ಆತ್ಮಗಳ ಜೊತೆ ಮಾತನಾಡುವುದು ವಿಜ್ಞಾನಕ್ಕೆ ಒಳಪಟ್ಟಿದ್ದಲ್ಲ. ಇಂತಹ ಹೇಳಿಕೆಗಳನ್ನು ಸಾಕ್ಷ್ಯ ಎಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಶ್ರೀದೇವಿ ಅವರ ಅಭಿಮಾನಿಗಳು ಇಂದಿಗೂ ಅವರ ಸಾವು ಕೇವಲ ಆಕಸ್ಮಿಕ ಅಲ್ಲ, ಅದರ ಹಿಂದೆ ಯಾವುದೋ ಸಂಚಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಸೌರಭ್ ಅವರ ಈ ವಿಡಿಯೋ ಆ ಅನುಮಾನಗಳಿಗೆ ಮತ್ತೆ ತುಪ್ಪ ಸುರಿದಂತಾಗಿದೆ.

ಒಟ್ಟಿನಲ್ಲಿ ಶ್ರೀದೇವಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಸಾವಿನ ಸುತ್ತಲಿನ ಪ್ರಶ್ನೆಗಳು ಮಾತ್ರ ಇನ್ನೂ ಜೀವಂತವಾಗಿವೆ. ಅತೀ ಸಣ್ಣ ವಯಸ್ಸಿನಲ್ಲೇ ಕೋಟ್ಯಂತರ ಹೃದಯ ಗೆದ್ದ ಈ ಸುಂದರಿಯ ಸಾವು ನಿಜಕ್ಕೂ ಒಂದು ಮಾಸದ ಕಹಿ ನೆನಪು!

Latest News